ಬೋಂಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೋಂಡಾ
ಆಲೂಗಡ್ಡೆ ಬೋಂಡಾ
ಮೂಲ
ಮೂಲ ಸ್ಥಳದಕ್ಷಿಣ ಭಾರತ
ಪ್ರಾಂತ್ಯ ಅಥವಾ ರಾಜ್ಯಆಂಧ್ರ ಪ್ರದೇಶ, ಕರ್ಣಾಟಕ, ಕೇರಳ, ತಮಿಳುನಾಡು, ತೆಲಂಗಾಣ
ವಿವರಗಳು
ಬಡಿಸುವಾಗ ಬೇಕಾದ ಉಷ್ಣತೆಬಿಸಿ
ಮುಖ್ಯ ಘಟಕಾಂಶ(ಗಳು)ಕಡಲೇ ಹಿಟ್ಟು , ಅಳೂಗಡ್ಡೆ (ಇನ್ನಿತರೇ ತರಕಾರಿಗಳು)
ಬೋಂಡಾ ಸೂಪ್, ಬಿಸಿಯಾದ ಬೇಳೆ ದಾಲ್ ಜೊತೆಗೆ

ಬೋಂಡಾ ಭಾರತದ ಒಂದು ವಿಶಿಷ್ಟ ತಿಂಡಿ. ಇದು ಭಾರತದ ವಿವಿಧ ಜಾಗಗಳಲ್ಲಿ ಕಾರ ಮತ್ತು ಸಿಹಿಯ ರುಚಿ ಉಳ್ಳದಾಗಿರುತ್ತದೆ.

ಇತಿಹಾಸ[ಬದಲಾಯಿಸಿ]

೧೨ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಸೊಮೇಶ್ವರ೩ ಎಂಬುವವರು ಬೊಂಡ ತಯಾರಿಸುವ ವಿದಾನವನ್ನು ಸಂಸ್ಕೃತದ ನಿಘಂಟಾದ ಮಾನಸೊಲ್ಲಸ ಎಂಬುವುದರಲ್ಲಿ ನಮೂದಿಸಿದ್ದಾರೆ.

ತಯಾರಿಸುವ ವಿಧಾನ[ಬದಲಾಯಿಸಿ]

ಕಾರ ಬೋಂಡಾ ಮಾಡಲು ಮೊದಲಿಗೆ ಆಲೂಗೆಡ್ಡೆ ಪಲ್ಯವನ್ನುಮಾಡಿಕೊಂಡು ನಂತರ ಕಡಲೆ ಹಿಟ್ಟಿಗೆ ನೀರು,ಉಪ್ಪು ಮತ್ತು ಮಸಾಲೆ ಹಾಕಿ ದೋಸೆಹಿಟ್ಟಿನ ಹದದಲ್ಲಿ ಕಲೆಸಿಕೊಳ್ಳಬೇಕು ನಂತರ ಮೊದಲೆ ಮಾಡಿಟ್ಟುಕೊಂಡಿರುವ ಆಲೂಗೆಡ್ಡೆ ಪಲ್ಯದ ಉಂಡೆಗಳನ್ನು ಕಲಸಿದ ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಬೇಯಿಸಬೇಕು. ಕೇರಳದವರು ಮಾಡುವ ಸಿಹಿಬೋಂಡಾವನ್ನು ಸುಗಿಯಾನ್ ಎಂದು ಕರೆಯುತ್ತಾರೆ. ಭಾರತದ ಇನ್ನಿತರೆ ಜಾಗಗಳಲ್ಲಿ ಬೋಂಡಾವು ಉಪ್ಪು ಹುಳಿ ಕಾರವನ್ನು ಹೊಂದಿರುತ್ತದೆ. ಕೇರಳದ ಕೆಲವೆಡೆ ಆಲೂಗೆಡ್ಡೆಯ ಬದಲು ಮರಗೆಣಸು ಅಥವ ಸಿಹಿಗೆಣಸು, ಬೇಯಿಸಿರುವ ಮೊಟ್ಟೆ, ಮಸಾಲೆ, ಚಿಕ್ಕ ಚಿಕ್ಕ ತುಂಡು ಮಾಡಿರುವ ಮಾಂಸ, ಇನ್ನಿತರ ಪದಾರ್ಥಗಳುಳ್ಳ ಪಲ್ಯವನ್ನು ಹೊಂದಿರುತ್ತದೆ. ತರಕಾರಿ ಬೊಂಡವು ಉಡುಪಿಯಲ್ಲಿ ಒಂದು ವಿಶಿಷ್ಟವಾದ ತಿಂಡಿಯಾಗಿದೆ(ತಿನಿಸು). ಉಡುಪಿಯಲ್ಲಿ ತರಕಾರಿ ಬೊಂಡವನ್ನು ಮಾಡಲು ಹಸಿರುಬಟಾಣಿ, ಕ್ಯಾರೇಟ್, ಕೊತ್ತಂಬರಿ ಸೊಪ್ಪು ಮತ್ತು ಹುರಳಿಕಾಯ ಪಲ್ಯವನ್ನು ಬಳಸುತ್ತಾರೆ. ಕರ್ನಾಟಕದ ಜಿಲ್ಲೆಯಾದ ಮಂಗಳೂರಿನಲ್ಲಿ ಮಾಡುವ ಬೋಂಡಾವು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಮಂಗಳೂರಿನಲ್ಲಿ ಬೋಂಡಾವನ್ನು ಮಾಡಲು ಮೈದವನ್ನು ಉಪಯೋಗಿಸುತ್ತಾರೆ.

"https://kn.wikipedia.org/w/index.php?title=ಬೋಂಡಾ&oldid=1153764" ಇಂದ ಪಡೆಯಲ್ಪಟ್ಟಿದೆ