ವಿಷಯಕ್ಕೆ ಹೋಗು

ಬೈಲಂಗಡಿ ಚಂದ್ರನಾಥ ಸ್ವಾಮಿ ಬಸದಿ, ಪಡುಪಣಂಬೂರು, ಹಳೆಯಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೈಲಂಗಡಿ ಚಂದ್ರನಾಥ ಸ್ವಾಮಿ ಬಸದಿಯು ಮಂಗಳೂರು ತಾಲೂಕು ಪಡುಪಣಂಬೂರು ಗ್ರಾಮದಲ್ಲಿದೆ.

ಇತಿಹಾಸ

[ಬದಲಾಯಿಸಿ]

ಈ ಬಸದಿಯನ್ನು ಸುಮಾರು ೨೫೦ ವರ್ಷಗಳ ಹಿಂದೆ ಕಟ್ಟಿರಬಹುದು ಆಗಿ ಊಹಿಸಬಹುದಾಗಿದೆ. ಇದರ ಇತಿಹಾಸದ ಬಗ್ಗೆ ಯಾವುದೇ ಶಿಲಾಶಾಸನವಾಗಲಿ, ಲೇಖನವಾಗಲಿ ಕಂಡುಬರುವುದಿಲ್ಲ.

ಬಸದಿಯ ವಿನ್ಯಾಸ

[ಬದಲಾಯಿಸಿ]

ಬಸದಿಗೆ ಮೇಗಿನ ನೆಲೆ ಇದೆ. ಆದರೆ ದೇವರ ಮೂರ್ತಿಗಳನ್ನು ಕೆಳಗೆ ಗರ್ಭಗುಡಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಭಗವಾನ್ ವರ್ಧಮಾನ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಮೂರ್ತಿಗಳಿವೆ. ಬ್ರಹ್ಮದೇವರ ಮೂರ್ತಿಯಿಲ್ಲ. ದ್ವಾರಪಾಲಕರ ಚಿತ್ರಗಳಿವೆ. ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪದಲ್ಲಿ ಜಯಗಂಟೆ ಹಾಗೂ ಜಾಗಟೆಗಳನ್ನು ತೂಗುಹಾಕಲಾಗಿದೆ. ತೀರ್ಥಂಕರ ಹೋಗುವಾಗ ಸಿಗುವ ಮಂಟಪವನ್ನು ಸಂಕ್ರಮಣವೆಂದು ಕರೆಯುತ್ತಾರೆ. ಗಂಧಕುಟಿಯು ಈ ತೀರ್ಥಂಕರ ಮಂಟಪದಲ್ಲೇ ಇದೆ. ಇದರ ಬಳಿಯಲ್ಲಿ ಶ್ರುತ ಮೂರ್ತಿಯಿದೆ.

ಪೂಜಾ ವಿಧಿವಿಧಾನ ಹಾಗೂ ಹಬ್ಬಗಳ ಆಚರಣೆ

[ಬದಲಾಯಿಸಿ]

ಮಾತೆ ಪದ್ಮಾವತಿ ಅಮ್ಮನವರಿಗೆ ದಿನವೂ ಪೂಜೆ ನಡೆಯುತ್ತದೆ. ದೇವಿಗೆ ಸೀರೆ ಉಡಿಸಿ ಬಳೆಗಳನ್ನು ಹಾಕಿ, ಅಲಂಕರಿಸಿ ಪೂಜೆ ಮಾಡಲಾಗುತ್ತದೆ ಭಗವಾನ್‌ ಚಂದ್ರನಾಥ ಸ್ವಾಮಿಯ ಮೂರ್ತಿ ಕಪ್ಪುಶಿಲೆ ಎತ್ತರ ೫ ಅಡಿ ಆಸನ ಭಂಗಿಯಲ್ಲಿದೆ. ಮಕರ ತೋರಣದ ಪ್ರಭಾವಳಿ ಇದೆ. ದಿನವೂ ಕ್ಷೀರಾಭಿಷೇಕ ಪೂಜೆ ಮಾಡಲಾಗುತ್ತದೆ. ದಿನದಲ್ಲಿ ಮೂರು ಹೊತ್ತು ಪೂಜೆ ನಡೆಯುತ್ತದೆ. ನವರಾತ್ರಿ, ಮೂಲ ಶ್ರಾವಣ, ದೀಪಾವಳಿ, ಯುಗಾದಿ ಇವುಗಳು ಆಚರಿಸಲ್ಪಡುವ ಹಬ್ಬಗಳು. ಕಲ್ಲಿನಿಂದ ಮಾಡಿದ ಪ್ರಾಕಾರ ಗೋಡೆಯಿದೆ. []

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. pp. ೨೭೨.

ಬೈಲಂಗಡಿ ಚಂದ್ರನಾಥ ಸ್ವಾಮಿ ಬಸದಿ, ಪಡುಪಣಂಬೂರು, ಹಳೆಯಂಗಡಿ ಬೈಲಂಗಡಿ ಚಂದ್ರನಾಥ ಸ್ವಾಮಿ ಬಸದಿಯು ಮಂಗಳೂರು ತಾಲೂಕು ಪಡುಪಣಂಬೂರು ಗ್ರಾಮದಲ್ಲಿದೆ.