ವಿಷಯಕ್ಕೆ ಹೋಗು

ಬೇಗೂರು ಅಮ್ಮಣ್ಣಮ್ಮನ ಐತಿಹ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಭಾರತ ದೇಶದ ಕರ್ನಾಟಕದಲ್ಲಿನ ಬೆಂಗಳೂರು ನಗರದ ಒಂದು ನಗರವೇ ಬೇಗೂರು ಇದಕ್ಕೆ ಮತ್ತೊಂದು ಹಳೆಯ ಹೆಸರು "ನಿಂಗಾಪುರ". ಇದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿದೆ. ಇದು ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಗಂಗ ರಾಜವಂಶದ ನಂತರ ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ಎಂದು ಹೇಳಲಾಗುತ್ತದೆ. ಸರಿ ಸುಮಾರು ಸಾವಿರದ ನೂರ ರಿಂದ ಸಾವಿರದ ಐನೂರು ವರ್ಷಗಳ ಹಿಂದಿನ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿವೆ.K. R. ಮಾರ್ಕೆಟ್, ಕೆಂಪೇ ಗೌಡ ಬಸ್ ನಿಲ್ದಾಣ ,ಶಿವಾಜಿನಗರ ದಿಂದ ನೇರ ಬಸ್ ಸೌಲಭ್ಯವಿದೆ

ಬೇಗೂರು ಅಮ್ಮಣ್ಣಮ್ಮನ ಐತಿಷ್ಯ
Native name
ಕನ್ನಡ:ಬೇಗೂರು
ಬೇಗೂರು ಅಮ್ಮಣ್ಣಮ್ಮನ ಐತಿಷ್ಯ

ಇತಿಹಾಸ

[ಬದಲಾಯಿಸಿ]

ಸ್ಥಳೀಯವಾಗಿ ಹೇಳಲ್ಪಡುವ ಜಾನಪದ ಕತೆ ಆಧುನಿಕ ಬೇಗೂರಿನ ಚರಿತೆಗೆ ಕನ್ನಡಿ ಹಿಡಿದಂತಿದೆ. ಈ ಊರಿನಲ್ಲಿ ಬಾಹ್ಮಣರ ಮನೆಗಳು ಇಲ್ಲವೆನ್ನುವ ಸಂಗತಿಇದೆ, ಇದಕ್ಕೆ ಕಾರಣ ಒಬ್ಬ ಬಾಲವಿಧವೆಯ ಶಾಪ ಎಂದು ಹೇಳಲಾಗುತ್ತದೆ. ಬೇಗೂರಿನ ಅಗ್ರಹಾರದಲ್ಲಿ ನೆಲೆಸಿದ್ದ ಕಾಳಂಭಟ್ಟ ಎಂಬ ಬ್ರಾಹ್ಮಣ ಕುಟುಂಬದಲ್ಲಿ ಅಮೃತ ಎಂಬ ಮಗಳು ತು೦ಬಾ ಸುಂದರಿಯೂ ಹಾಗೂ ಚಾಣಾಕ್ಷ ಆಗಿದ್ದಳು. ಇವಳು ಬಾಲಕಿಯಾಗಿದ್ದಾಗಲೇ ಅಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದಳು. ಓದು ಬಲ್ಲವಳಾಗಿದ್ದಳು. ಬೆಳೆದಂತೆ ಮನೆಯಲ್ಲಿ ಇವಳ ತಂದೆ ಮಗಳ ಇಚ್ಛೆಗೆ ವಿರುದ್ಧವಾಗಿ ಅದೇ ಗ್ರಾಮದಲ್ಲಿದ್ದ ವೇದಪಾಠ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕನಿಗೆ ಕೊಟ್ಟು ಮದುವೆ ಮಾಡುತ್ತಾರೆ, ಅಮೃತಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾದ ತನ್ನ ಪತಿಯನ್ನು ಒಪ್ಪುವುದಿಲ್ಲ. ತನ್ನ ದಿವ್ಯಶಕ್ತಿಯಿಂದ ಪತಿಯನ್ನು ಭಯಗೊಳಿಸಿ ತನ್ನಂತೆ ಆಗಲು ಕಾಶಿಗೆ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರುವಂತೆ ಪತಿಗೆ ಹೇಳುತ್ತಾಳೆ. ಅದರಂತೆ ಪತಿರಾಯ ಕಾಶಿಗೆ ಕಾಲ್ನಡಿಗೆಯಲ್ಲಿ ತೆರಳಿದ. ಆದರೆ ಕಾಶಿಯಲ್ಲಿ ಆಕಸ್ಮಿಕವೊಂದು ಸಂಭವಿಸಿ ಅವನು ಜೀವ ಕಳೆದುಕೊಳ್ಳುತ್ತಾನೆ. ಈ ಸುದ್ದಿ ತಿಳಿದ ಅಮೃತಾಳ ತಂದೆ-ತಾಯಿಯವರು ಸಂಪ್ರದಾಯದಂತೆ ಅಮೃತಳಿಗೆ ವಿಧವೆ ಪಟ್ಟಕಟ್ಟಿ ಕೇಶಮುಂಡನ ಮಾಡಿಸಲು ಮುಂದಾಗುತ್ತಾರೆ. ಆದರೆ ಇದಕ್ಕೆ ಅಮೃತಾ ಒಪ್ಪುವುದಿಲ್ಲ. ಇಡೀ ಅಗ್ರಹಾರದ ಬ್ರಾಹ್ಮಣ ಸಮುದಾಯದವರು ಒಂದಾಗಿ ಅಮೃತಾಳಿಗೆ ತಿಳಿಹೇಳುತ್ತಾರೆ. ಆದರೆ ಅಮೃತ. ಇದನ್ನು ನಿರಾಕರಿಸುತ್ತಾಳೆ,ಅಗ್ರಹಾರದವರು ಶೃಂಗೇರಿ ಮಠಕ್ಕೆ ದೂರು ನೀಡುತ್ತಾರೆ. ಶೃಂಗೇರಿ ಮಠದಿಂದ ತಿಳಿಹೇಳಲು ಬಂದ ಅಧಿಕಾರಿಗಳಿಗೆ ಗೊಡ್ಡು ಕಂದಾಚಾರ: ಬಿಟ್ಟು ಸ್ತ್ರೀ ವಿಮೋಚನೆ ಕುರಿತು ಅಮೃತ ಅವರಿಗೆ ತಿಳಿ ಹೇಳುತ್ತಾಳೆ. ಅಧಿಕಾರಿಗಳು ಬೇಸರಗೊಂಡು ಮರಳುತ್ತಾರೆ. ನಂತರ ಶೃಂಗೇರಿಯ ಜಗದ್ಗುರುಗಳು ಬೇಗೂರಿಗೆ ಆಗಮಿಸಿ ಅಮೃತಾಳನ್ನು ಸಂತೈಯಿಸಿ ಸಾಂಪ್ರದಾಯಿಕ ಆಚರಣೆಗಳನ್ನು ಒಪ್ಪಬೇಕೆಂದು ಆದೇಶಿಸುತ್ತಾರೆ, ಆದರೂ ಅವರು ಅಮೃತಾಳಿಗೆ ತಿಳಿ ಹೇಳುವುದು ಅಸಾಧ್ಯವಾದ ಕಾರ್ಯವಾಗುತ್ತದೆ. ಅಗ್ರಹಾರದ ಜನರು ಅಮೃತಾಳ ತಂದೆ-ತಾಯಿಯವರಿಗೆ ಬಹಿಷ್ಕಾರ ಹಾಕುತ್ತಾರೆ. ಅಮೃತಾಳ ತಂದೆ-ತಾಯಿಗಳು ಮೈಸೂರಿಗೆ ಹೋಗಿ ನೆಲೆಸುತ್ತಾರೆ, ಆದರೆ ಅಮೃತಾ ಬೇಗೂರಿನಲ್ಲಿಯೇ ಉಳಿದು ಅಲ್ಲಿಯ ದೇವಸ್ಥಾನದಲ್ಲಿ ವಾಸ ಮಾಡುತ್ತಾಳೆ, ಕಾಲ ಕಳೆದಂತೆ ಅಮೃತಾಳ ಆಧ್ಯಾತ್ಮ ಮತ್ತು ಪವಾಡಗಳು ಜನಸಾಮಾನ್ಯರಲ್ಲಿ ಇವಳ ಬಗ್ಗೆ ಗೌರವ ಮೂಡಿಸಲು ಪ್ರಾರಂಭಿಸುತ್ತದೆ. ರೋಗಿಗಳಿಗೆ ಮತ್ತು ಮಕ್ಕಳಿಗೆ ಔಷಧಿಯನ್ನು ಕೊಟ್ಟು ಗುಣಪಡಿಸುವುದು. ನೊಂದವರನ್ನು ಸಂತೈಸಿ ಧೈರ್ಯ ತುಂಬುವುದು ಮುಂತಾದ ಕಾರ್ಯಗಳನ್ನು ಮಾಡತೊಡಗುತ್ತಾಳೆ, ಇದರಿಂದ ಅಮೃತಾ ಜನಸಾಮಾನ್ಯರಲ್ಲಿ ಅಮ್ಮಣ್ಣಮ್ಮ ಎಂದು ಹೆಸರುವಾಸಿಯಾಗ ತೊಡಗಿದಳು. ಆದರೆ ಅಗ್ರಹಾರದ ಜನರು ಅಮೃತಾಳನ್ನು ಕಡೆಗಣಿಸಿ ಹೊರಹಾಕಿ ಅವಮಾನಿಸಿದ್ದರು. ಒಂದು ದಿನ ಅಮೃತಾ ತಾನು ಜೀವಸಮಾಧಿಯಾಗಲು ಇಚ್ಛಿಸಿದಳು. ಆದರಂತೆ ಎಲ್ಲಾ ತಯಾರದ ನಂತರ ಜೀವ ಸಮಾಧಿಯಾಗುವ ಮುನ್ನತನಗೆ ಕಿರುಕುಳ ನೀಡಿದ ಯಾವ ಬ್ರಾಹ್ಮಣರು ಊರಿನಲ್ಲಿ ಉಳಿಯಕೂಡದೆಂದು ಶಾಪ ನೀಡುತ್ತಾಳೆ, ದೈವಾಧೀನಳದ ಅಮ್ಮಣ್ಣಮ್ಮನ ಶಾಪದಿಂದಾಗಿ ಊರಿನ ಬ್ರಾಹ್ಮಣರು ಕಷ್ಟಕಾರ್ಪಣ್ಯಗಳಿಗೆ ತುತ್ತಾದರು, ಕಡೆಗೆ ಇಡೀ ಗ್ರಾಮದಲ್ಲಿ ಒಬ್ಬರೂ ಬ್ರಾಹ್ಮಣರು ಇಲ್ಲದಂತಾಯಿತು. ಕೆಲವು ವರ್ಷಗಳ ನಂತರ ಊರಿನಲ್ಲಿದ್ದ ಪಟೇಲ ಕೃಷ್ಣಪ್ಪ ಎಂಬುವರಿಗೆ ಕನಸಿನಲ್ಲಿ ಅಮೃತಾ ಅಥವಾ ಅಮ್ಮಣ್ಣಮ್ಮ ಕಾಣಿಸಿಕೊಂಡು ತನ್ನದೊಂದು ಮೂರ್ತಿಯನ್ನು ಮಾಡಿಸಬೇಕೆಂದು ಸೂಚಿಸುತ್ತಾಳೆ. ಆದರಂತೆ ಪಟೇಲರು ಮೂರು ಆಡಿ ಎತ್ತರದ ಯೋಗಿನಿ ಮೂರ್ತಿಯನ್ನು ಕತ್ತಿಸಿ ಊರಿನ ದೇವಾಲಯದಲ್ಲಿ ಅದನ್ನು ಪ್ರತಿಷ್ಠಾಪಿಸಿದರು. ಅಮ್ಮಣ್ಣಮ್ಮ ಸಮಾಧಿಯಾದ ಜಾಗವನ್ನು ಗದ್ದುಗೆ ಎಂದು ಕರೆಯುತ್ತಾರೆ. ಇದನ್ನು ಅಮ್ಮಣ್ಣಮ್ಮನ ಆಶ್ರಮವೆಂದು ಕರೆಯುತ್ತಾರೆ. ಇಲ್ಲಿ ರಾಜರಾಜೇಶ್ವರಿ ದೇವಾಲಯವನ್ನು ಸಹ ಕಟ್ಟಲಾಗಿದೆ. ಪ್ರತಿ ಹುಣ್ಣಿಮೆಯ ದಿನದಂದು ಅಮಣ್ಣಮ್ಮನನ್ನು ಊರಿನ ಜನರು ಪೂಜಿಸುತ್ತಾರೆ. ಸುಮಾರು 200 ವರ್ಷಗಳ ಹಿಂದಿನ ಐತಿಹ್ಯ ಇದಾಗಿದೆ. ಕ್ರಿ.ಶ. 1800ರ ಅವಧಿಯಲ್ಲಿ ಅಂದಿನ ಸಾಮಾಜಿಕ ಪಿಡುಗು ಮತ್ತು ಮಹಿಳೆಯ ಹೋರಾಟಗಳನ್ನು ಈ ಐತಿಹ್ಯವು ನಿರೂಪಿಸುತ್ತದೆ.

ಹಿನ್ನಲೆ

[ಬದಲಾಯಿಸಿ]

ಬೆಂಗಳೂರು ಪರಿಸರದ ಪ್ರಾಚೀನ ಊರುಗಳಲ್ಲಿ ಬೇಗೂರು ಪ್ರಮುಖವಾದುದು. ಗಂಗರ ಕಾಲದಲ್ಲಿ ಒಂದು ಆಡಳಿತ ವಿಭಾಗವಾಗಿ ಪ್ರವರ್ಧಮಾನಕ್ಕೆ ಬ೦ದ ಬೇಗೂರು ಶೌರ್ಯ ಮತ್ತು ತ್ಯಾಗಕ್ಕೆ ಹೆಸರಾಗಿತ್ತು. ಅಲ್ಲದೆ, ಆರಂಭಿಕ ದೇವಾಲಯಗಳ ವಾಸ್ತುಶಿಲ್ಲದಹಿನ್ನೆಲೆಯಿಂದಲೂ ಮುಖ್ಯ ನೆಲೆ. ಆದ್ದರಿಂದ 9ನೇ ಶತಮಾನದಿಂದ 19ನೇ ಶತಮಾನದವರೆಗೂ ಸುಮಾರು ಒಂದು ಸಹಸ್ರಮಾನಗಳ ಕಾಲ ತನ್ನದೆಯಾದ ಸಾಂಸ್ಕೃತಿಕ ಮತ್ತು ರಾಜಕೀಯ ಅನನ್ಯತೆಯನ್ನು ಹೊಂದಿದ್ದ ಊರು, ಬೆಂಗಳೂರು ಪರಿಸರದಲ್ಲಿ ಬರುವ ಮತ್ತಾವ ಊರು ಕೂಡ ಈ ಪರಿಯ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಮಹತ್ವಗಳನ್ನು ಹೊಂದಿಲ್ಲದಿರುವುದು ವಿಶೇಷವಾಗಿದೆ. ಈ ಕಾರಣದಿಂದ 19ನೇ ಶತಮಾನದ ಉತ್ತರಾರ್ಧದಿಂದ ಹಿಡಿದು ಇವತ್ತಿನವರೆಗೂ ಅನೇಕ ವಿದ್ವಾಂಸರು ಬೇಗೂರನ್ನು ಮತ್ತೆ ಮತ್ತೆ ಅಧ್ಯಯನಕ್ಕೆ ಒಳಪಡಿಸುತ್ತಲೇ ಬರುತ್ತಿದ್ದಾರೆ.[]

ಉಲ್ಲೇಖ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಅರುಣಿ, ಎಸ್‌.ಕೆ. ಬೆಂಗಳೂರು ಪರಂಪರೆ (2019 ed.). p. 310. ISBN 978 -81-930814-3-3.