ಬೆಳೆ ಶೇಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೂಳೆ ಜಮೀನು

ಎರಡು ಪ್ರಕಾರಗಳ ಕೃಷಿ ಬೆಳೆ ಶೇಷಗಳಿವೆ. ಜಮೀನು ಶೇಷಗಳು ಬೆಳೆಯನ್ನು ಕೊಯ್ಲು ಮಾಡಿದ ನಂತರ ಕೃಷಿ ಜಮೀನು ಅಥವಾ ಹಣ್ಣುತೋಟದಲ್ಲಿ ಉಳಿದುಕೊಂಡ ವಸ್ತುಗಳು. ಈ ಶೇಷಗಳಲ್ಲಿ ಕಾಂಡಗಳು ಹಾಗೂ ಕೂಳೆ, ಎಲೆಗಳು, ಮತ್ತು ಬೀಜಕೋಶಗಳು ಸೇರಿವೆ. ಶೇಷವನ್ನು ನೆಲದೊಳಗೆ ನೇರವಾಗಿ ಉಳಬಹುದು, ಅಥವಾ ಮೊದಲು ಸುಡಬಹುದು. ಜಮೀನು ಶೇಷಗಳ ಉತ್ತಮ ನಿರ್ವಹಣೆಯು ನೀರಾವರಿಯ ಫಲಕಾರಿತ್ವವನ್ನು ಹೆಚ್ಚಿಸಬಲ್ಲದು ಮತ್ತು ಕ್ಷರಣವನ್ನು ನಿಯಂತ್ರಿಸಬಲ್ಲದು. ಸಂಸ್ಕರಣಾ ಶೇಷಗಳು ಎಂದರೆ ಬೆಳೆಯನ್ನು ಉಪಯುಕ್ತ ಸಂಪನ್ಮೂಲವಾಗಿ ಸಂಸ್ಕರಿಸಿದ ನಂತರ ಉಳಿದುಕೊಳ್ಳುವ ವಸ್ತುಗಳು. ಈ ಶೇಷಗಳಲ್ಲಿ ಹೊಟ್ಟು, ಬೀಜಗಳು, ಬಗಸೆ, ಕಾಕಂಬಿ ಮತ್ತು ಬೇರುಗಳು ಸೇರಿವೆ. ಇವನ್ನು ಜಾನುವಾರುಗಳ ಮೇವು ಮತ್ತು ಮಣ್ಣಿನ ಪೂರಕ ವಸ್ತು, ರಸಗೊಬ್ಬರಗಳಾಗಿ ಮತ್ತು ಉತ್ಪಾದನೆಯಲ್ಲಿ ಬಳಸಬಹುದು. ಹೆಚ್ಚಿನ ಪ್ರಮಾಣದಲ್ಲಿರುವ ಕಾರ್ಬೊಹೈಡ್ರೇಟುಗಳ ಕಾರಣ, ಬೆಳೆ ಶೇಷಗಳನ್ನು ಜೈವಿಕ ಇಂಧನಗಳನ್ನು ಉತ್ಪಾದಿಸಲು ಸೂಕ್ತವಾದ ಕಚ್ಚಾ ವಸ್ತುವೆಂದು ಪರಿಗಣಿಸಬಹುದು.

"https://kn.wikipedia.org/w/index.php?title=ಬೆಳೆ_ಶೇಷ&oldid=891090" ಇಂದ ಪಡೆಯಲ್ಪಟ್ಟಿದೆ