ಬೆಳಗಾವಿ ಗಡಿ ವಿವಾದ
೧೯೫೬ನೇ ಇಸವಿಯಲ್ಲಿ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು, ಆಗ ಹೊಸದಾಗಿ ಸ್ಥಾಪಿಸಲಾಗಿದ್ದ ಮೈಸೂರು ರಾಜ್ಯದೊಂದಿಗೆ ವಿಲೀನ ಗೊಳಿಸಲಾಯಿತು. ಮಹಾರಾಷ್ಟ್ರ ಸರ್ಕಾರವು ಇದನ್ನು ವಿರೋಧಿಸಿತು.
ನಾಲ್ಕು ಸದಸ್ಯರ ಆಯೋಗ
[ಬದಲಾಯಿಸಿ]ಮಹಾರಾಷ್ಟ್ರ ಸರಕಾರದ ಒತ್ತಾಯಕ್ಕೆ ಮಣಿದು, ಭಾರತ ಸರ್ಕಾರವು ಜೂನ್ ೫, ೧೯೬೦ರಲ್ಲಿ ೪ ಸದಸ್ಯರ ಆಯೋಗವನ್ನು ರಚಿಸಿತು.ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮಹಾಜನ್ ಹಾಗೂ ಇತರೆ ಪರಿಣಿತರ ತಂಡ ಗಡಿ ಭಾಗದ ಅಧ್ಯಯನ ನಡೆಸಿ ಬೆಳಗಾವಿಯು ಕರ್ನಾಟಕದಲ್ಲೇ ಉಳಿಯಬೇಕೆಂಬ ತೀರ್ಪನ್ನು ನೀಡಿತು [೧] Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.
ಇದಾದ ನಂತರ, ಮಹಾರಾಷ್ಟ್ರ ಸರ್ಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರ್ಕಾರವು ಜಸ್ಟಿಸ್ ಮೆಹರ್‌ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಮಹಾಜನ್ ಆಯೋಗವನ್ನು ಸ್ಥಾಪಿಸಿತು. ಆಯೋಗವು, ಕರ್ನಾಟಕ ಹಾಗು ಮಹಾರಾಷ್ಟ್ರದ ವಾದಗಳನ್ನು ಆಲಿಸಿ. ಗಡಿ ಪ್ರದೇಶದ ೨೫೭೨ ಜನರನ್ನು ಸಂದರ್ಶಿಸಿ ಅವರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದ ಆಯೋಗವು ತನ್ನ ತೀರ್ಪನ್ನು ಪ್ರಕಟಿಸಿತು. ಇದರನ್ವಯ ಮಹಾರಾಷ್ಟ್ರವು ಬೇಡಿಕೆ ಸಲ್ಲಿಸಿದ್ದ ೮೧೪ ಹಳ್ಳಿಗಳ ಪೈಕಿ ಅದಕ್ಕೆ ನಿಪ್ಪಾಣಿ, ಖಾನಾಪುರ ಹಾಗೂ ನಂದಗಢ ಒಳಗೊಂಡಂತೆ ೨೬೨ ಹಳ್ಳಿಗಳನ್ನು ಅದಕ್ಕೆ ನೀಡಲಾಯಿತು. ಕರ್ನಾಟಕದ ಪಾಲಿಗೆ ಸೊಲ್ಲಾಪುರವೂ ಸೇರಿದಂತೆ ೨೪೭ ಹಳ್ಳಿಗಳನ್ನು ನೀಡಲಾಯಿತು. ಇದಲ್ಲದೇ, ಮಹಾರಾಷ್ಟ್ರವು ೨೬೦ ಹಳ್ಳಿಗಳು ಕನ್ನಡ ಬಹುಸಂಖ್ಯಾತವೆಂದು ಒಪ್ಪಿ ಅದನ್ನೂ ಕರ್ನಾಟಕಕ್ಕೆ ನೀಡಲೊಪ್ಪಿತು. ಆದರೆ ಗಣ್ಯರ ಸಮಿತಿಯ ತೀರ್ಪನ್ನೊಪ್ಪದ ಮಹಾರಾಷ್ತ್ರ ಸರಕಾರ ತನ್ನ ಪಾಲಿಗೆ ಬಂದ ಪ್ರಾಂತ್ಯಗಳನ್ನು ತಿರಸ್ಕರಿಸಿ ಏಕೀಕೃತ ಭಾರತದ ಸಂಸೃತಿಯ ವಿರುದ್ಧ ಬೆಳಗಾವಿಯ ಬೇಡಿಕೆಯನ್ನು ಇಂದಿಗೂ ಮುಂದುವರೆಸುತ್ತಿದೆ .[೨] [೩] Archived 2007-03-11 ವೇಬ್ಯಾಕ್ ಮೆಷಿನ್ ನಲ್ಲಿ.
ಮಹಾಜನ್ ವರದಿಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ.
“ | ಬೆಳಗಾವಿಯ ಮೇಲಿನ ಮಹಾರಾಷ್ಟ್ರದ ಹಕ್ಕು ಚಲಾವಣೆ ಇತ್ತೀಚಿನದಾಗಿದೆ. ಸಂಸತ್ತಿನಲ್ಲಿ ಇದರ ಬಗ್ಗೆ ನಿಳುವಳಿಗಳನ್ನು ಮಂಡಿಸಿದಾಗ,ಸರ್ಕಾರದ ಕಡೆಯಿದ್ದ ಯಾವ ಮಹಾರಾಷ್ಟ್ರದ ಸದಸ್ಯರು ಬೆಳಗಾವಿಯ ಪುನರ್ವಿಂಗಡಣೆಯ ವಿರುದ್ಧ ಮತ ಚಲಾಯಿಸಲಿಲ್ಲ. ಐತಿಹಾಸಿಕವಾಗಿ ಬೆಳಗಾವಿಯು ಓಂದು ಕಾಸ್ಮೋಪಾಲಿಟನ್ ನಗರವಾಗಿದ್ದು, ಅಲ್ಲಿ ೧೯೨೦ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗಲೂ ಸಹ ಎನ್.ಸಿ ಕೇಲ್ಕರ್ ಒಳಗೊಂಡು ಯಾವ ಸದಸ್ಯರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಬೇಡಿಕೆ ಮುಂದಿಡಲಿಲ್ಲ. ಭೌಗೋಳಿಕವಾಗಿ ಬೆಳಗಾವಿಯು ೩ ಕಡೆಗಳಿಂದ ಕನ್ನಡ ಪ್ರಾಧಾನ್ಯಗಳಿರುವ ಹಳ್ಳಿಗಳಿಂದ ಕೂಡಿದೆ. ಇನ್ನೊಂದೆಡೆ ಮಹಾರಾಷ್ಟ್ರವಿದೆ. ಇದರ ಮರುವಿಂಗಡಣೆ ಮಾಡುವುದರಿಂದ ಸುತ್ತ ಮುತ್ತ ಇರುವವರಿಗ ತುಂಬ ಕಷ್ಟವಾಗುತ್ತದೆ. ಆದ್ದರಿಂದ ಅದನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಬೇಕು. ಐತಿಹಾಸಿಕ ದಾಖಲೆಗಳಿಂದಲೂ ಬೆಳಗಾವಿಯು ಕನ್ನಡಿಗರ ನಾಡಾಗಿತ್ತೆಂದು ತಿಳಿದು ಬರುತ್ತದೆ. ಬೆಳಗಾವಿಯ ಮಾಮಲ್ತದಾರ್ ಹಾಗು ಕಲಕ್ಟರರ ಕಚೇರಿಯಲ್ಲರುವ ಎಲ್ಲಾ ದಾಖಲೆಗಳು ಕನ್ನಡದಲ್ಲೇ ಇವೆ. ಈ ಎಲ್ಲಾ ವಿಷಯಗಳನ್ನು ಪರಿಗಣನೆಗೆ ಮಾಡಿ ಬೆಳಗಾವಿ ನಗರವನ್ನು ಮಹಾರಾಷ್ಟ್ರದೊಡನೆ ವಿಲೀನಗೊಳಿಸುವುದು ಸಾಧ್ಯವಿಲ್ಲವೆಂದು ನಾನು ಶಿಫಾರಸ್ಸು ಮಾಡುತಿದ್ದೇನೆ. | ” |
ಇತ್ತೀಚೆಗಿನ ಘಟನಾವಳಿಗಳು
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]ಮೂಲಗಳು
[ಬದಲಾಯಿಸಿ]- ಬೆಳಗಾವಿ ಗಡಿ ವಿವಾದ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.
- ಮಹಾಜನ್ ವರದಿ Archived 2007-03-11 ವೇಬ್ಯಾಕ್ ಮೆಷಿನ್ ನಲ್ಲಿ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ವಿವಾದದ ಬಗಿಗಿನ ಸುದ್ದಿ