ಬೆಲೆ ನೀತಿ ಮತ್ತು ಆಚರಣೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಕು ಮತ್ತು ಸೇವೆಗಳ ಹಣರೂಪಿ ಮೌಲ್ಯವನ್ನು ಬೆಲೆ ಎಂದು ಕರೆಯಬಹುದು. ಅಂದರೆ ಇದು ಮಾರುಕಟ್ಟೆಯ ವ್ಯವಹಾರದಲ್ಲಿ ಒಪ್ಪಿಕೊಳ್ಳುವ ಹಣರೂಪಿ ಮೌಲ್ಯವಾವಾಗಿದೆ. ಉದ್ಯಮ ಬೆಲೆಯನ್ನು ನಿರ್ಧರಿಸುವಾಗ ಅನುಸರಿಸುವ ತತ್ವವೇ ಬೆಲೆ ನೀತಿಯಾಗಿದೆ.

ಬೆಲೆ ನೀತಿಯನ್ನು ರೂಪಿಸುವುದು ಹಾಗೂ ಬೆಲೆ ನಿರ್ಧರಿಸುವುದು ನಿರ್ವಹಣಾ ಅರ್ಥಾಶಾಸ್ತ್ರದ ಮುಖ್ಯ ಕಾರ್ಯಾವಾಗಿದೆ. ವಸ್ತುವಿನ ಬೆಲೆಯು ಉದ್ಯಮ ಸಂಸ್ಥೆಯ ಆದಾಯವಾಗಿದ್ದು ಪ್ರತಿ ಸಂಸ್ಥೆಯೂ ಅದರ ಮೂಲಕವೇ ಆದಾಯವನ್ನು ಪಡೆದುಕೊಳ್ಳುತ್ತದೆ.

ಉದ್ಯಮ ಸಂಸ್ಥೆ ತಾನು ಅನುಸರಿಸುವ ಬೆಲೆನೀತಿಯ ಸಹಾಯದಿಂದ ಗರಿಷ್ಠ ಲಾಭ ಗಳಿಸುವ ಹಾಗೂ ಮಾರುಕಟ್ಟೆ ವಿಸ್ತರಿಸುವ ಉದ್ದೇಶ ಹೊಂದಿರುತ್ತದೆ.

ಬೆಲೆ ನಿರ್ಧಾರಕ್ಕೆ ಸಂಬಂಧಿಸಿದ ಕರಾರು, ಕಟ್ಟುನಿಟ್ಟಿನ ಸೂತ್ರಗಳೇನೂ ಇಲ್ಲ. ಬೆಲೆಯನ್ನು ಕಡಿಮೆ ನಿಗದಿ ಮಾಡಬೇಕೆ ಅಥವಾ ಹೆಚ್ಚು ನಿಗದಿ ಮಾಡಬೇಕೇ? ಎನ್ನುವುದು ಅನೇಕ ವೈವಿಧ್ಯಮಯ ಅಂಶಗಳನ್ನು ಒಳಗೊಂಡಿದೆ. ಬೆಲೆ ನಿರ್ಧಾರದ ಸಮಸ್ಯೆಯು ಸರಕಿನ ಉತ್ಪಾದನೆಯ ಪ್ರಾರಂಭದಲ್ಲಿ ಮಾತ್ರವಲ್ಲದೆ ನಿರಂತರ ಸಮಸ್ಯೆಯಾಗಿದೆ. ಹೀಗಾಗಿ ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ಬೆಲೆಯನ್ನು ಸಮಯದಿಂದ ಸಮಯಕ್ಕೆ ಪರಿಷ್ಕರಿಸಿ ಪುನರ್ ರೂಪಿಸಬೇಕು.