ಬೆಲಾರೂಸ್‌ನ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೆಲಾರುಸಿನ ಭಾಷೆ ಇಂದ ಪುನರ್ನಿರ್ದೇಶಿತ)
ಬೆಲಾರೂಸಿನ ಭಾಷೆ
беларуская мова
ಬ್ಯೆಲರುಸ್ಕಾಯ ಮೊವ
ಬಳಕೆಯಲ್ಲಿರುವ 
ಪ್ರದೇಶಗಳು:
ಬೆಲಾರೂಸ್, ಪೊಲೆಂಡ್, in 14 other countries
ಒಟ್ಟು 
ಮಾತನಾಡುವವರು:
೪-೯ ಮಿಲಿಯನ್ 
ಶ್ರೇಯಾಂಕ: 79
ಭಾಷಾ ಕುಟುಂಬ: Indo-European
 ಬಾಲ್ಟೊ-ಸ್ಲಾವ್
  ಸ್ಲಾವ್
   ಪೂರ್ವ ಸ್ಲಾವ್
    ಬೆಲಾರೂಸಿನ ಭಾಷೆ 
ಬರವಣಿಗೆ: ಸಿರಿಲಿಕ್, ಲಾಟಿನ್ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಯಾವುದೂ ಇಲ್ಲ
ನಿಯಂತ್ರಿಸುವ
ಪ್ರಾಧಿಕಾರ:
National Academy of Sciences of Belarus
ಭಾಷೆಯ ಸಂಕೇತಗಳು
ISO 639-1: be
ISO 639-2: bel
ISO/FDIS 639-3: bel 

ಬೆಲಾರುಸಿನ ಭಾಷೆ ಉಪಯೋಗದಲ್ಲಿರುವ ಪ್ರದೇಶಗಳು

ಬೆಲಾರೂಸ್‌ನ ಭಾಷೆಯು (беларуская мова) ಬೆಲಾರೂಸ್‌ನ ಜನರ ಭಾಷೆ ಮತ್ತು ಬೆಲಾರೂಸ್ ಹಾಗೂ ವಿದೇಶದಲ್ಲಿ, ಮುಖ್ಯವಾಗಿ ರಷ್ಯಾ, ಯುಕ್ರೇನ್ ಹಾಗೂ ಪೋಲಂಡ್‌ಗಳಲ್ಲಿ ಬಳಸಲ್ಪಡುತ್ತದೆ. ಬೆಲಾರೂಸ್ ೧೯೯೨ರಲ್ಲಿ ಸೋವಿಯಟ್ ಒಕ್ಕೂಟದಿಂದ ಸ್ವಾತಂತ್ರ್ಯವನ್ನು ಗಳಿಸುವುದಕ್ಕಿಂತ ಮುಂಚೆ, ಈ ಭಾಷೆಯು (ಜನಾಂಗೀಯತೆ ಮತ್ತು ದೇಶದ ಹೆಸರುಗಳಿಗೆ ಅನುಗುಣವಾಗಿ) "ಬಾಯಲೋರಷ್ಯನ್" ಅಥವಾ "ಬೆಲೋರಷ್ಯನ್" ಎಂದು ಕರೆಯಲ್ಪಡುತ್ತಿತ್ತು. ಅದು ಪೂರ್ವ ಸ್ಲಾವ್ ಭಾಷೆಗಳ ಗುಂಪಿಗೆ ಸೇರಿದೆ ಮತ್ತು ಆ ಗುಂಪಿನ ಇತರ ಅಂಗಗಳೊಂದಿಗೆ ಹಲವು ವ್ಯಾಕರಣ ಹಾಗೂ ಶಬ್ದ ಸಂಬಂಧಿತ ಲಕ್ಷಣಗಳನ್ನು ಹಂಚಿಕೊಳ್ಳುತ್ತದೆ.