ವಿಷಯಕ್ಕೆ ಹೋಗು

ಬೆನ್ ಸಿಲ್ಬರ್ಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನ್ ಸಿಲ್ಬರ್ಮನ್
ಮಾರ್ಚ್‌ ೨೦೧೨ ರಲ್ಲಿ, ಆಸ್ಟಿನ್, ಟೆಕ್ಸಾಸ್, ಯುನೈಟೆಡ್ ಸ್ಟೇಟ್ಸ್ ನ ಸೌತ್ ಬೈ ಸೌತ್‌ವೆಸ್ಟ್ ನಲ್ಲಿ ನಡೆದ ಸಂವಾದಾತ್ಮಕ ಸಮ್ಮೇಳನದಲ್ಲಿ ಸಿಲ್ಬರ್‌ಮನ್
ಜನನಜುಲೈ ೧೪,೧೯೮೨
ರಾಷ್ಟ್ರೀಯತೆಸಂಯುಕ್ತ ಸಂಸ್ಥಾನ ಅಮೆರಿಕ
ಶಿಕ್ಷಣ ಸಂಸ್ಥೆಯೇಲ್ ಯುನಿವರ್ಸಿಟಿ
ವೃತ್ತಿಪಿಂಟ್ರೆಸ್ಟ್ ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ(ಸಿ.ಇ.ಒ)
Known forಸಹ ಸಂಸ್ಥಾಪಕ, ಪಿಂಟ್ರೆಸ್ಟ್
ಸಂಗಾತಿದಿವ್ಯಾ ಭಾಸ್ಕರನ್

ಬೆನ್ ಸಿಲ್ಬರ್ಮನ್ (ಜನನ ಜುಲೈ ೧೪, ೧೯೮೨) ಒಬ್ಬ ಅಮೆರಿಕನ್ ಅಂತರ್ಜಾಲ ಉದ್ಯಮಿ.[೧] ಇವರು ಪಿಂಟರೆಸ್ಟ್ ನ ಸಹ-ಸಂಸ್ಥಾಪಕ ಮತ್ತು ಸಿ.ಇ.ಒ ಆಗಿದ್ದಾರೆ. ಪಿಂಟರೆಸ್ಟ್ ಎಂಬುದು ಒಂದು ಸಾಮಾಜಿಕ ಮಾಧ್ಯಮ ನೆಟ್‌ವರ್ಕ್ ಮತ್ತು ದೃಶ್ಯ ಅನ್ವೇಷಣೆ ಎಂಜಿನ್.[೨] ಇದು ಬಳಕೆದಾರರಿಗೆ ಚಿತ್ರಗಳು, ಲಿಂಕ್‌ಗಳು, ಪಾಕವಿಧಾನಗಳು ಮತ್ತು ಇತರ ವಿಷಯಗಳನ್ನು ಸಂಘಟಿಸಲು ಅನುವು ಮಾಡಿಕೊಡುತ್ತದೆ.

ಆರಂಭಿಕ ಜೀವನ[ಬದಲಾಯಿಸಿ]

ಸಿಲ್ಬರ್ಮನ್ ೧೯೮೨ ರಲ್ಲಿ ಜನಿಸಿದರು. ಅವರು ಅಯೋವಾದ ಡೆಸ್ ಮೊಯಿನ್ಸ್‌ನಲ್ಲಿ ಬೆಳೆದರು. ಅವರ ಪೋಷಕರು ನೇತ್ರಶಾಸ್ತ್ರಜ್ಞರಾದ ಜೇನ್ ವಾಂಗ್ ಮತ್ತು ನೀಲ್ ಸಿಲ್ಬರ್‌ಮನ್. ೧೯೯೮ ರಲ್ಲಿ, ಸಿಲ್ಬರ್ಮನ್ ಎಮ್.ಐ.ಟಿ ಯಲ್ಲಿನ ಸಂಶೋಧನಾ ವಿಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದರು. ತರುವಾಯ, ಅವರು ೧೯೯೯ ರ ತರಗತಿಯೊಂದಿಗೆ ಡೆಸ್ ಮೊಯಿನ್ಸ್ ಸೆಂಟ್ರಲ್ ಅಕಾಡೆಮಿ ಮತ್ತು ಡೆಸ್ ಮೊಯಿನ್ಸ್ ರೂಸ್‌ವೆಲ್ಟ್‌ನಿಂದ ಪದವಿ ಪಡೆದರು. ನಂತರ ಅವರು ೨೦೦೩ ರ ವಸಂತಕಾಲದಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು.

ವೃತ್ತಿ[ಬದಲಾಯಿಸಿ]

ಪಿಂಟರೆಸ್ಟ್ ಮೊದಲು ಮಾರ್ಚ್ ೨೦೧೦ ರಲ್ಲಿ ಪ್ರಾರಂಭವಾಯಿತು. ಸಿಲ್ಬರ್‌ಮನ್ ಗೂಗಲ್‌ನಲ್ಲಿ ಆನ್‌ಲೈನ್ ಜಾಹೀರಾತು ಗುಂಪಿನಲ್ಲಿ ಕೆಲಸ ಮಾಡುತ್ತಿದ್ದರು.[೩] ಆದಾಗ್ಯೂ, ಅವರು ಸ್ವಲ್ಪ ಸಮಯದ ನಂತರ ಕಂಪೆನಿಯನ್ನು ತೊರೆದರು ಮತ್ತು ಅವರ ಕಾಲೇಜು ಸ್ನೇಹಿತನಾದ ಪಾಲ್ ಸಿಯಾರಾ ಅವರೊಂದಿಗೆ ತಮ್ಮದೇ ಆದ ಐಫೋನ್ ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರು. ಅವರ ಆರಂಭಿಕ ಅಪ್ಲಿಕೇಶನ್ ಆದ ಟೊಟೆ ಗಮನಾರ್ಹವಾದ ಎಳೆತವನ್ನು ಪಡೆಯಲು ವಿಫಲವಾಯಿತು. ಸಹಸಂಸ್ಥಾಪಕರಾದ ಇವಾನ್ ಶಾರ್ಪ್‌ನೊಂದಿಗೆ ಸೇರಿಕೊಂಡು ಪಿನ್‌ಬೋರ್ಡ್ ಉತ್ಪನ್ನವನ್ನು ರಚಿಸಲು ಅನುವಾದರು.[೪] ಅದನ್ನು ಅಂತಿಮವಾಗಿ ಪಿಂಟ್ರೆಸ್ಟ್ ಎಂದು ಹೆಸರಿಸಲಾಯಿತು. ಸಿಲ್ಬರ್ಮನ್ ಹೇಳುವಂತೆ ಪಿಂಟ್ರೆಸ್ಟ್ ನ ಮೂಲವು ನಿಜವಾಗಿಯೂ ಬಾಲ್ಯದಲ್ಲಿ ಅವರಿಗಿದ್ದ ಸಂಗ್ರಹಿಸುವ ಆಸಕ್ತಿಯಿಂದ ಬಂದಿದೆ.[೫] ಸಿಲ್ಬರ್ಮನ್ ಹೇಳುವಂತೆ ಸಂಗ್ರಹಣೆಯು ನೀವು ಯಾರೆಂಬುದರ ಬಗ್ಗೆ ಬಹಳಷ್ಟು ಹೇಳುತ್ತದೆ ಮತ್ತು ಅವರು ವೆಬ್‌ನಲ್ಲಿ ನೋಡಿದಾಗ ನೀವು ಯಾರೆಂಬುದನ್ನು ಹಂಚಿಕೊಳ್ಳಲು ಅಲ್ಲಿ ಸ್ಥಳವಿಲ್ ಎಂದು ಅಭಿಪ್ರಾಯಪಟ್ಟರು. ಪಿಂಟರೆಸ್ಟ್ ಅನ್ನು ಪ್ರಾರಂಭಿಸಿದ ಒಂಬತ್ತು ವರ್ಷಗಳ ನಂತರ, ಕಂಪನಿಯು ತನ್ನ ಐ.ಪಿ.ಒ ಅನ್ನು ಏಪ್ರಿಲ್ ೨೦೧೯ ರಲ್ಲಿ ನಡೆಸಿತು. ಇದು ನಿರೀಕ್ಷೆಗೂ ಮೀರಿ ಕಂಪನಿಯ ಸುಮಾರು ೧೨ ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿತ್ತು.

ಜೂನ್ ೨೮, ೨೦೨೨ ರಂದು ಸಿಲ್ಬರ್‌ಮನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗುತ್ತಾರೆ ಮತ್ತು ಹೊಸದಾಗಿ ರಚಿಸಲಾದ ಕಾರ್ಯನಿರ್ವಾಹಕ ಅಧ್ಯಕ್ಷರಾಗುತ್ತಾರೆ. ಆನ್‌ಲೈನ್ ವಾಣಿಜ್ಯ ಪರಿಣಿತ ಬಿಲ್ ರೆಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರಾಗುತ್ತಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಸಿಲ್ಬರ್ಮನ್ ದಿವ್ಯಾ ಭಾಸ್ಕರನ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://www.forbes.com/profile/ben-silbermann/?sh=692c56b1644d
  2. https://help.pinterest.com/en/guide/all-about-pinterest
  3. https://web.archive.org/web/20120906092253/http://tech.fortune.cnn.com/2012/03/22/pinterest-silbermann-photo-sharing/
  4. https://www.elle.com/culture/celebrities/g2915/30-under-30-the-essential-names-to-know-655416/slide-28
  5. https://thenextweb.com/news/pinterests-ben-silbermann-on-turning-his-collection-hobby-into-a-product-and-not-making-money