ಬೃಹಸ್ಪತಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಬೃಹಸ್ಪತಿ, ೨೦೧೮ರ ಕನ್ನಡ ಭಾಷೆಯ ಚಿತ್ರ. ನಂದ ಕಿಶೋರ್ ಚಿತ್ರವನ್ನು ನಿರ್ದೇಶಿಸಿದ್ದು, ರಾಕ್ಲೈನ್ ವೆಂಕಟೇಶ್ ಅವರು ತಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.[೧] ಪ್ರಮುಖ ಪಾತ್ರಗಳಲ್ಲಿ ಮನೋರಂಜನ್ ರವಿಚಂದ್ರನ್, ಮಿಷ್ಟಿ ಚಕ್ರವರ್ತಿ, ಸಾಯಿಕುಮಾರ್, ಸಿತಾರ, ಸಾಧು ಕೋಕಿಲ, ಅವಿನಾಶ್ ಮತ್ತು ತಾರಕ್ ಪೊನ್ನಪ್ಪ ನಟಿಸಿದ್ದಾರೆ.[೨]

ಚಿತ್ರಕ್ಕೆ ಹಾಡುಗಳು ಮತ್ತು ಸಂಗೀತವನ್ನು ವಿ. ಹರಿಕೃಷ್ಣ ಅವರು ಸಂಯೋಜಿಸಿದ್ದಾರೆ. ಸತ್ಯಾ ಹೆಗ್ಡೆ ಅವರ ಛಾಯಾಗ್ರಹಣ ಮತ್ತು ಕೆ. ಎಮ್. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. ವೃತ್ತಿ ಇಲ್ಲದ ಪದವಿದರ ಮತ್ತು ಸನ್ ಆಫ್ ರವಿಚಂದ್ರನ್ ಎಂಬ ಹೆಸರುಗಳನ್ನು ಮೊದಲು ಇಡಲಾಗಿತ್ತು. [೩][೪] ೫ ಜನವರಿ ೨೦೧೮ ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು, ಈ ಚಿತ್ರ ೨೦೧೮ ರಲ್ಲಿ ಬಿಡುಗಡೆಯಾದ ಮೊದಲ ಚಿತ್ರ.[೫]

References[ಬದಲಾಯಿಸಿ]

  1. Nanda Kishore on a roll with Pogaru and Bruhaspati. The New Indian Express.com (14 December 2017). Retrieved on 2017-12-19.
  2. Manoranjan Ravichandran Signs His Next With Nanda Kishore. Filmibeat.com (5 August 2016)
  3. VIP is vrutti illada padavidhara in kannada. The New Indian Express (20 April 2017)
  4. Manoranjan’s next gets a new title S/o of Ravichandran. The New Indian Express (20 September 2017)
  5. Brihaspathi To Be The First Film Of 2018. Chitraloka.com (19 December 2018)