ಬೃಹತ್ ಸ್ನಾನಗೃಹ, ಮೊಹೆಂಜೊ-ದಾರೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೃಹತ್ ಸ್ನಾನಗೃಹ ಮೊಹೆಂಜೊ-ದಾರೋದಲ್ಲಿನ ಪ್ರಾಚೀನ ಸಿಂಧೂತಟದ ನಾಗರೀಕತೆಯ ಅವಶೇಷಗಳಲ್ಲಿ ಸುಪರಿಚಿತವಾಗಿರುವ ರಚನೆಗಳ ಪೈಕಿ ಒಂದು.[೧] ಬೃಹತ್ ಸ್ನಾನಗೃಹವನ್ನು ಕ್ರಿ.ಪೂ. ೩ನೇ ಸಹಸ್ರಮಾನದಲ್ಲಿ "ದುರ್ಗ"ದ ದಿಬ್ಬವನ್ನು ನಿಲ್ಲಿಸಿದ ನಂತರ ಶೀಘ್ರದಲ್ಲೇ ಕಟ್ಟಲಾಗಿತ್ತು ಎಂದು ಪುರಾತತ್ವ ಸಾಕ್ಷ್ಯಾಧಾರ ಸೂಚಿಸುತ್ತದೆ. ಬೃಹತ್ ಸ್ನಾನಗೃಹ ದುರ್ಗದಲ್ಲಿ ನೆಲೆಗೊಂಡಿದೆ.

ಮೊಹೆಂಜೊ-ದಾರೋದ ಬೃಹತ್ ಸ್ನಾನಗೃಹವನ್ನು ಪ್ರಾಚೀನ ವಿಶ್ವದ ಅತ್ಯಂತ ಮುಂಚಿನ ಸಾರ್ವಜನಿಕ ನೀರಿನ ಕೊಳ ಎಂದು ಕರೆಯಲಾಗಿದೆ. ಇದರ ಅಳತೆ 11.88 × 7.01 ಮೀಟರ್‍ಗಳು, ಮತ್ತು 2.43 ಮೀಟರ್ ಗರಿಷ್ಠ ಆಳವನ್ನು ಹೊಂದಿದೆ. ಎರಡು ಅಗಲ ಮೆಟ್ಟಿಲುಗಳು, ಉತ್ತರದಿಂದ ಒಂದು ಮತ್ತು ದಕ್ಷಿಣದಿಂದ ಒಂದು, ಈ ರಚನೆಗೆ ಪ್ರವೇಶವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಮೆಟ್ಟಿಲುಗಳ ಕೊನೆಗಳಲ್ಲಿ ೧ ಮೀಟರ್ ಅಗಲ ಹಾಗೂ ೪೦ ಸೆಂ.ಮಿ. ಎತ್ತರದ ದಿಬ್ಬವಿದೆ. ಸ್ನಾನಗೃಹದ ಒಂದು ಕೊನೆಯಲ್ಲಿ ಒಂದು ರಂಧ್ರವೂ ಸಿಕ್ಕಿದೆ, ಇದನ್ನು ನೀರನ್ನು ಬರಿದು ಮಾಡಲು ಬಳಸಲಾಗಿರಬಹುದು.

ಕೊಳದ ನೆಲ ನಯವಾಗಿ ಕೂಡಿಸಲಾದ ಇಟ್ಟಿಗೆಗಳು ಮತ್ತು ಅಂಚಿನಲ್ಲಿ ಹಾಸಲಾದ ಜಿಪ್ಸಮ್ ಪ್ಲಾಸ್ಟರ್‍ ಇರುವ ಮಣ್ಣಿನಿಂದ ಜಲನಿರೋಧಕವಾಗಿತ್ತು ಮತ್ತು ಮಗ್ಗಲಿನ ಗೋಡೆಗಳನ್ನು ಇದೇ ರೀತಿಯಲ್ಲಿ ಕಟ್ಟಲಾಗಿತ್ತು. ಕೊಳವನ್ನು ಇನ್ನೂ ಹೆಚ್ಚು ಜಲನಿರೋಧಕ ಮಾಡಲು, ಡಾಮರಿನ ದಪ್ಪ ಪದರವನ್ನು ಕೊಳದ ಬದಿಗಳ ಉದ್ದಕ್ಕೂ ಮತ್ತು ಸಂಭಾವ್ಯವಾಗಿ ನೆಲದ ಮೇಲೂ ಹಾಸಲಾಗಿತ್ತು. ಪೂರ್ವ, ಉತ್ತರ ಹಾಗೂ ದಕ್ಷಿಣ ಬದಿಗಳ ಮೇಲೆ ಇಟ್ಟೆಗೆ ಕಂಬಗಳ ಸಾಲುಗಳನ್ನು ಶೋಧಿಸಲಾಗಿತ್ತು. ಸಂರಕ್ಷಿತ ಕಂಬಗಳು ಮೆಟ್ಟಿಲುಗಳಿರುವ ಅಂಚು ಹೊಂದಿದ್ದವು, ಇವು ಕಟ್ಟಿಗೆಯ ಪರದೆಗಳು ಅಥವಾ ಕಿಟಕಿ ಚೌಕಟ್ಟುಗಳನ್ನು ಭಾರವನ್ನು ತಡೆದಿರಬಹುದು. ದಕ್ಷಿಣದಿಂದ ಸಂಕೀರ್ಣದೊಳಗೆ ಎರಡು ದೊಡ್ಡ ಬಾಗಿಲುಗಳು ದಾರಿಮಾಡಿಕೊಡುತ್ತಿದ್ದವು, ಮತ್ತು ಬೇರೆ ಪ್ರವೇಶ ಉತ್ತರ ಹಾಗೂ ಪೂರ್ವದಿಂದ ಇತ್ತು. ಕಟ್ಟಡದ ಪೂರ್ವ ಬದಿಯುದ್ದಕ್ಕೂ ಕೋಣೆಗಳ ಸರಣಿ ಸ್ಥಿತವಾಗಿತ್ತು ಮತ್ತು ಒಂದು ಕೋಣೆಯಲ್ಲಿ ಕೊಳ ತುಂಬಲು ಬೇಕಾದ ಸ್ವಲ್ಪ ನೀರನ್ನು ಒದಗಿಸುವ ಬಾವಿಯಿತ್ತು. ಈ ಉದ್ದೇಶಕ್ಕಾಗಿ ಮಳೆನೀರನ್ನೂ ಶೇಖರಿಸಲಾಗಿರಬಹುದು, ಆದರೆ ಯಾವುದೇ ಒಳಹರಿವಿನ ಕೊಳವೆಗಳು ಸಿಕ್ಕಿಲ್ಲ. ಇದು ಜಲಾಭೇದ್ಯ ಇಟ್ಟಿಗೆಗಳಿರುವ ಉದ್ದವಾದ ಸ್ನಾನಕೊಳವನ್ನು ಹೊಂದಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. "Great Bath." Encyclopædia Britannica. 2010. Encyclopædia Britannica Online. 9 June 2010.