ವಿಷಯಕ್ಕೆ ಹೋಗು

ಬೂಮ್‍ರಾಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೂಮ್‍ರಾಂಗ್ - ಇದು ಮರದಿಂದ ಮಾಡಿದಂತಹ ಒಂದು ಪ್ರಾಚೀನ ಸಾಧನ.

ಇದನ್ನು ಬೇಟೆಗಾಗಿ, ಸಂಗೀತಕ್ಕಾಗಿ, ಬೆಂಕಿ ಹಚ್ಚುವ ಸಾಧನವಾಗಿ ಮತ್ತು ಆಟದ ವಸ್ತುವಾಗಿಯೂ ಬಳಸುತ್ತಾರೆ. ಇಂಗ್ಲೀಷಿನ ವಿ ಆಕಾರದಲ್ಲಿ ಕಾಣುವ ಇವು ಒಂದು ತುದಿಯಿಂದ ಮತ್ತೊಂದು ತುದಿಗೆ ೧೦ ಸೆ.ಮಿ. ನಿಂದ ೨ ಮೀಟರ್ ವರೆಗೂ ಇರುತ್ತವೆ. ಹಿಂದೆ ಆಸ್ಟ್ರೇಲಿಯಾದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಿದ್ದರು. ಆಫ್ರಿಕಾ, ಭಾರತದಲ್ಲೂ ಇದರ ಬಳಕೆ ಇತ್ತೆಂದು ತಿಳಿದು ಬಂದಿದೆ. ಆಯಾ ಪ್ರದೇಶ, ಬುಡಕಟ್ಟುಗಳಿಗೆ ಅನುಗುಣವಾಗಿ ವಿವಿಧ ಆಕಾರ ಹಾಗು ಗಾತ್ರಗಳಲ್ಲಿ ಇವೆ. ಆಯುಧವಾಗಿಯೇ ಹೆಚ್ಚು ಬಳಕೆಯಾಗುತ್ತಿದ್ದ ಇದರ ವಿಶೇಷವೆಂದರೆ ಅದನ್ನು ಎಸೆದಾಗ ಗುರಿಗೆ ತಾಗದೇ ಹೋದರೆ ಎಸೆದ ಸ್ಥಳಕ್ಕೇ ಮತ್ತೆ ಹಿಂದಿರುಗಿ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಮುಖ ಪ್ರವಾಸೀ ತಾಣಗಳಲ್ಲಿ ಇವುಗಳ ಮಾರಾಟ ಹೆಚ್ಚು ಕಂಡು ಬರುತ್ತದೆ.

ಅಧುನಿಕ ಬೂಮ್‍ರಾಂಗ್ ಮಾದರಿಯ ಆಟಿಕೆಗಳು