ಬೂಟಾಟಿಕೆ
ಬೂಟಾಟಿಕೆ ಎಂದರೆ ನೈಜ ನಡತೆ ಅಥವಾ ಒಲವುಗಳನ್ನು ಮರೆಮಾಡಿ (ವಿಶೇಷವಾಗಿ ಧಾರ್ಮಿಕ ಹಾಗೂ ನೈತಿಕ ನಂಬಿಕೆಗಳಿಗೆ ಸಂಬಂಧಿಸಿದಂತೆ), ಸದ್ಗುಣ ಅಥವಾ ಒಳ್ಳೆಯತನದ ಹುಸಿ ತೋರಿಕೆಯ ಕೌಶಲ್ಯ; ಹಾಗಾಗಿ ಸಾಮಾನ್ಯ ಅರ್ಥದಲ್ಲಿ ಬೂಟಾಟಿಕೆಯು ಸೋಗು, ಡೋಂಗಿ ಅಥವಾ ಕಪಟವನ್ನು ಒಳಗೊಳ್ಳಬಹುದು. ಬೂಟಾಟಿಕೆಯು ಮತ್ತೊಬ್ಬರನ್ನು ಅದಕ್ಕಾಗಿ ಟೀಕಿಸಿ ಅದೇ ವರ್ತನೆ ಅಥವಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಅಭ್ಯಾಸ. ನೈತಿಕ ಮನಶ್ಶಾಸ್ತ್ರದಲ್ಲಿ, ಇದು ವ್ಯಕ್ತಪಡಿಸಲಾದ ತಮ್ಮ ಸ್ವಂತ ನೈತಿಕ ನಿಯಮಗಳು ಮತ್ತು ತತ್ತ್ವಗಳನ್ನು ಅನುಸರಿಸುವಲ್ಲಿನ ವೈಫಲ್ಯ.[೧] ಬ್ರಿಟಿಷ್ ತತ್ವಶಾಸ್ತ್ರಜ್ಞ ರಂಕೀಮ್ಯಾನ್‍ರ ಪ್ರಕಾರ, "ಇತರ ಪ್ರಕಾರಗಳ ಬೂಟಾಟಿಕೆಯ ವಂಚನೆಯಲ್ಲಿ ತಮ್ಮಲಿಲ್ಲದ ಜ್ಞಾನದ ಹಕ್ಕುಸಾಧನೆ, ತಾವು ಎತ್ತಿಹಿಡಿಯಲು ಸಾಧ್ಯವಿಲ್ಲದ ನಿಷ್ಠೆಯ ಹಕ್ಕುಸಾಧನೆ, ತಮ್ಮಲಿಲ್ಲದ ನಿಯತ್ತಿನ ಹಕ್ಕುಸಾಧನೆ, ತಾವು ಹೊಂದಿರದ ಗುರುತಿನ ಹಕ್ಕುಸಾಧನೆ ಸೇರಿವೆ." ರಾಜಕೀಯ ಬೂಟಾಟಿಕೆ ಎಂದರೆ "ಸಾರ್ವಜನಿಕರನ್ನು ಮರುಳುಮಾಡಲು ಮತ್ತು ರಾಜಕೀಯ ಲಾಭ ಪಡೆಯಲು ಒಂದು ಮುಖವಾಡದ ಪ್ರಜ್ಞಾಪೂರ್ವಕ ಬಳಕೆ" ಎಂದು ಅಮೇರಿಕನ್ ಪತ್ರಕರ್ತ ಗರ್ಸನ್ ಹೇಳುತ್ತಾರೆ.
ಬೂಟಾಟಿಕೆಯು ಮಾನವ ಇತಿಹಾಸದ ಆರಂಭದಿಂದಲೂ ಜಾನಪದ ಬುದ್ಧಿವಂತಿಕೆ ಮತ್ತು ಸೂಕ್ತಿ ಸಾಹಿತ್ಯದ ವಿಷಯವಾಗಿದೆ. ಹೆಚ್ಚಾಗಿ, ೧೯೮೦ರ ದಶಕದಿಂದ, ಇದು ವರ್ತನ ಅರ್ಥಶಾಸ್ತ್ರ, ಅರಿವಿನ ವಿಜ್ಞಾನ, ಸಾಂಸ್ಕೃತಿಕ ಮನಶ್ಶಾಸ್ತ್ರ, ತೀರ್ಮಾನ ಮಾಡುವಿಕೆ, ನೀತಿಶಾಸ್ತ್ರ ಮುಂತಾದವುಗಳಲ್ಲಿನ ಅಧ್ಯಯನಗಳಿಗೆ ಕೇಂದ್ರೀಯವಾಗಿದೆ.
ಬೂಟಾಟಿಕೆಯ ಅನೇಕ ನಕಾರಾತ್ಮಕ ಅಂಶಗಳಿವೆಯಾದರೂ, ಅದರಿಂದ ಪ್ರಯೋಜನಗಳಿರಬಹುದು. "ರಾಜಕೀಯ ಮತ್ತು ರಾಜತಾಂತ್ರಿಕ ಸಂಧಾನಗಳಲ್ಲಿ ಹಲವುವೇಳೆ ಬೂಟಾಟಿಕೆಯ ವಂಚನೆ ಸೇರಿರುತ್ತದೆ. ಇದು ಸಾಮಾನ್ಯವಾಗಿ ರಾಜಿಯನ್ನು ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಸಂಧಾನದಿಂದ ದೂರವಿಡಲಾದ ನೈತಿಕ, ಸಂಧಾನ ಸಾಧ್ಯವಿಲ್ಲದ ಬೇಡಿಕೆಗಳೊಂದಿಗೆ ಆರಂಭವಾಗುತ್ತದೆ", ಎಂದು ಪತ್ರಕರ್ತ ಗರ್ಸನ್ ಗಮನಿಸುತ್ತಾರೆ. "ಬೂಟಾಟಿಕೆಯು ಅನಿವಾರ್ಯ ಮತ್ತು ಅಗತ್ಯವಾಗಿದೆ. ಎಲ್ಲ ಸಮಯದಲ್ಲೂ ಜನರು, ಆ ಆದರ್ಶಗಳು ಅಸ್ತಿತ್ವದಲ್ಲಿರಬೇಕೆಂದು, ಪ್ರಾಮಾಣಿಕತೆ, ನಿಷ್ಠೆ ಮತ್ತು ಸಹಾನುಭೂತಿಯ ಆದರ್ಶಗಳನ್ನು ಪೂರೈಸಬೇಕಾಗಿದ್ದರೆ, ಯಾವುದೇ ಆದರ್ಶಗಳಿರುತ್ತಿರಲಿಲ್ಲ. ನೈತಿಕ ವ್ಯಕ್ತಿಯಾಗಿರುವುದು ಒಂದು ಹೋರಾಟವೇ ಸರಿ ಮತ್ತು ಇದರಲ್ಲಿ ಎಲ್ಲರೂ ಮತ್ತೆ ಮತ್ತೆ ವಿಫಲರಾಗುತ್ತಾರೆ, ಮತ್ತು ಆ ಪ್ರತಿಯೊಂದು ಕ್ಷಣದಲ್ಲಿ ಆಷಾಢಭೂತಿಗಳಾಗುತ್ತಾರೆ. ನ್ಯಾಯವಾದ ಮತ್ತು ಶಾಂತಿಯುತ ಸಮಾಜವು ಅಂತಿಮವಾಗಿ ತಾವು ದ್ರೋಹವೆಸಗುವ ಆದರ್ಶಗಳನ್ನು ತ್ಯಜಿಸಲು ನಿರಾಕರಿಸಿದ ಆಷಾಢಭೂತಿಗಳ ಮೇಲೆ ಅವಲಂಬಿಸಿದೆ." ಎಂದು ಗರ್ಸನ್ ತೀರ್ಮಾನಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Lammers, Joris (2011), "Power increases infidelity among men and women", Psychological Science, 22 (9): 1191–97, doi:10.1177/0956797611416252