ಬುಗುರಿ ಆಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bambaram throwing top

ಬುಗುರಿ (ಕರ್ನಾಟಕದಲ್ಲಿ), ಬಂಬಾರಂ (ತಮಿಳುನಾಡಿನಲ್ಲಿ), ಪಂಬರಾಮ್ (ಕೇರಳದಲ್ಲಿ), ಲ್ಯಾಟು ಲಿಟ್ವೊ (ಉರ್ದುದಲ್ಲಿ), ಬೊಂಗರಾಮ್ ಬಾಂಗಾಮ್ (ತೆಲುಗು ಭಾಷೆಯಲ್ಲಿ), ಲತೀಮ್ ಲೋಟಿಮ್ (ಬೆಂಗಾಲಿ ಭಾಷೆಯಲ್ಲಿ) ಮತ್ತು ಬಾಂಗ್ಲಾದೇಶ.] ತೆಲಂಗಾಣದಲ್ಲಿ, ಅದರ ಹೆಸರು "ಬೊಂಗರಲು ಆಟಾ " ಆಗಿದೆ. ಈ ಆಟವನ್ನು ಕೂಡ ಮನರಂಜನೆಗಾಗಿ ವಯಸ್ಕರು ಆಡುತ್ತಾರೆ

ತುಂಬಾ ಹಳೆಯ ಇತಿಹಾಸವಿರುವ ಒಂದು ಸಾಂಪ್ರದಾಯಿಕ ಆಟವಾಗಿದೆ ಬುಗುರಿ ಆಟ. ಮಕ್ಕಳು ಬೆಳೆದವರೆನ್ನದೆ ಬೇರೆ ಬೇರೆ ವಯಸ್ಸಿಗರು ತಮ್ಮ ವಯಸಿಗೆ ತಕ್ಕಂತೆ ನಿಯಮಗಳನ್ನು ತಂದು ಆಡುವ ಆಟ. ಭಾರತ ಹಾಗೂ ಪಾಕಿಸ್ತಾನದಲ್ಲಿನ ಆಟವಾಗಿದ್ದರೂ ಈಗ ಬೇರೆ ಬೇರೆ ದೇಶಗಳಿಗೂ ಪಸರಿಸಿದೆ.ಮರದಿಂದ ತಯಾರಿಸಲ್ಪಡುವ ಬುಗುರಿ ಹಾಗು ಅದಕ್ಕೊಂದು ನೂಲು ಅಷ್ಟೇ ಸಾಕು ಆಡಲು. ಈಗ ಬಣ್ಣ ಬಣ್ಣದ ಪ್ಲಾಸ್ಟಿಕ್ ಬುಗುರಿಗಳಿದ್ದರೂ ಹಳ್ಳಿ ಕಡೆ ಮರದ ಬುಗುರಿ ಉಪಯೋಗಿಸುತ್ತಾರೆ.

ಬೇಕಾಗುವ ಸಲಕರಣಗಳು[ಬದಲಾಯಿಸಿ]

  • ಬುಗುರಿ .
  • ಉದ್ದನೆಯ ದಾರ .

ಘಟಕಗಳು[ಬದಲಾಯಿಸಿ]

ಮರದ ಕಟ್ಟಿಗೆ ಮೊಳೆ ತುದಿ ಸ್ಟ್ರಿಂಗ್ (ಮೇಲ್ಭಾಗದ ಕಿರೀಟವನ್ನು ಸುತ್ತಲೂ ಸುತ್ತುವಂತೆ, ಆಟಗಾರನು ಎಸೆಯಲ್ಪಟ್ಟಂತೆ ಮೇಲಕ್ಕೆ ತಿರುಗಲು ಅವಕಾಶ ನೀಡುತ್ತದೆ)

ಆಡುವ ವಿಧಾನ

ಈ ಆಟವನ್ನಾಡಲು ಕನಿಷ್ಟ 5 ಮಂದಿಯಾದರೂ ಬೇಕು.

ಆಟಗಾರರು ಮೊದಲಿಗೆ ಒಂದು ದೊಡ್ಡ ವೃತ್ತವನ್ನು ನೆಲದಲ್ಲಿ ಬರೆಯಬೇಕು

ಆನಂತರ ಎಲ್ಲರೂ ತಮ್ಮ ತಮ್ಮ ಬುಗುರಿಗಳಿಗೆ ಚಾಟಿಯನ್ನು ಸುತ್ತಿ, ಬುಗುರಿಯನ್ನು ವೃತ್ತದ ಒಳಗದೆ ಆಡಿಸಬೇಕು.

ನಂತರ ಚಾಟಿಯ ಸಹಾಯದಿಂದ ಬುಗುರಿಯನ್ನು ಮೇಲಕ್ಕೆತ್ತಬೇಕು, ಇದನ್ನು ಅಂತರ್ಚಾಟಿ ಎನ್ನುತ್ತಾರೆ.

ಕೊನೆಯದಾಗಿ ಉಳಿದವನ ಬುಗುರಿಯನ್ನು ಎಲ್ಲಾ ಆಟಗಾರರು ಸೇರಿ ತಮ್ಮ ತಮ್ಮ ಬುಗುರಿಯನ್ನುಪಯೋಗಿಸಿ ಹೊರ ತರಲು ಪ್ರಯತ್ನಿಸಬೆಕು, ಇದನ್ನು ಗುನ್ನಾ ಎನ್ನುತ್ತಾರೆ

ಆಟಗಾರರಿಗೆ 3 ಅವಕಾಶಗಳಿರುತ್ತವೆ, ಈ ಮೂರು ಅವಕಾಶಗಳಲ್ಲೂ ಆತನ ಬುಗುರಿಯನ್ನು ಹೊರತರಲಾಗದಿದ್ದಲ್ಲಿ ಆಟವನ್ನು ಮೊದಲಿಂದ ಪ್ರಾರಂಭಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]