ಬುಂದೇಲಿ ಉತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬುಂಡೇಲಿ ಉತ್ಸವ (ಬುಂಡೇಲಿ ಉತ್ಸವ) ಬುಂಡೇಲಿ (ಬುಂದೇಲ್ಖಂಡಿ ) ಜಾನಪದ ಕಲೆಗಳನ್ನು ಉತ್ತೇಜಿಸುವ ಒಂದು ಸಾಂಸ್ಕೃತಿಕ ಹಬ್ಬವಾಗಿದ್ದು, ಬಸರಿ, ತಹಸೀಲ್ ರಾಜನಗರ, ಛತ್ತರ್‌ಪುರ್ ಜಿಲ್ಲೆ, ಮಧ್ಯಪ್ರದೇಶ, ಭಾರತದಲ್ಲಿ ಪ್ರತಿ ವರ್ಷ ವಸಂತ ಋತುವಿನಲ್ಲಿ ವಸಂತ ಪಂಚಮಿಯಿಂದ ಆರಂಭವಾಗಿ ಏಳು ದಿನಗಳವರೆಗೆ ನಡೆಯುತ್ತದೆ. ಸರಕಾರೇತರ ಸಂಸ್ಥೆಯಾದ ಬುಂದೇಲಿ ವಿಕಾಸ ಸಂಸ್ಥಾನ, ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸುವ ಮತ್ತು ಬುಂದೇಲಿ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಮಧ್ಯಪ್ರದೇಶದ ಸಂಸ್ಕೃತಿ ಇಲಾಖೆ ಮತ್ತು ಮಧ್ಯ ಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಾಯದೊಂದಿಗೆ. ಈ ಹಬ್ಬದಲ್ಲಿ ಜಾನಪದ ಕಲೆಗಳು, ಜಾನಪದ ನೃತ್ಯಗಳು, ಜಾನಪದ ಹಾಡುಗಳು, ಆಹಾರ ಹಬ್ಬ, ಸಾಂಪ್ರದಾಯಿಕ ಆಟಗಳು ಮತ್ತು ಬಿಲ್ಲುಗಾರಿಕೆ ಕಾರ್ಯಕ್ರಮಗಳ ಕುರಿತು ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಈ ಸ್ಪರ್ಧೆಗಳಲ್ಲಿಮಧ್ಯಪ್ರದೇಶದ ಎಂಟು ಜಿಲ್ಲೆಗಳಿಂದ ( ಛತರ್‌ಪುರ್, ಡಾಟಿಯಾ, ದಾಮೋಹ್, ಕಟ್ನಿ, ನರಸಿಂಗ್‌ಪುರ್, ಪನ್ನಾ, ಸಾಗರ್, ಶಿವಪುರಿ ಮತ್ತು ಟಿಕಮಾರ್ಗ್ ) ಮತ್ತು ಉತ್ತರ ಪ್ರದೇಶದ ಐದು ಜಿಲ್ಲೆಗಳು ( ಬಂಡಾ, ಹಮೀರ್‌ಪುರ, ಜಲಾನ್, ಝಾನ್ಸಿ ಮತ್ತು ಲಲಿತ್‌ಪುರ್ ) ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಬುಂದೇಲಿ ಉತ್ಸವದಲ್ಲಿ ಪ್ರದರ್ಶಿಸಿದ ಕೆಲವು ಪ್ರಸಿದ್ಧ ಜಾನಪದ ಕಲೆಗಳನ್ನು ಕೆಳಗೆ ವಿವರಿಸಲಾಗಿದೆ.

ಜಾನಪದ ನೃತ್ಯಗಳು[ಬದಲಾಯಿಸಿ]

  • ಬುಂದೇಲ್‌ಖಂಡ್‌[೧]ಲ್ಲಿರುವ ದಿವಾರಿ ನೃತ್ಯವನ್ನು ಪ್ರತಿವರ್ಷ ಬೆಳಕಿನ ಹಬ್ಬ/ದೀಪಾವಳಿ ಸಮಯದಲ್ಲಿ ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಚಂದ್ರನ ಕ್ಯಾಲೆಂಡರ್ ಪ್ರಕಾರ ನಡೆಸಲಾಗುತ್ತದೆ. . "ಗೋಕುಲದಲ್ಲಿ" ಶ್ರೀಕೃಷ್ಣನು ತನ್ನ ಸಹಚರರನ್ನು (ಹಾಲಿನವರನ್ನು) ರಕ್ಷಿಸಲು ತನ್ನ ಬೆರಳಿನ ಮೇಲೆ ಗೋವರ್ಧನ ಪರ್ವತವನ್ನು ಎತ್ತಿದಾಗ, ಸಹಚರರು ಸಂತೋಷದಿಂದ ನೃತ್ಯ ಮಾಡಿದರು. ಈ ಪುರಾಣ ಕಥೆಯ ಪ್ರತೀಕವಾಗಿ ನೃತ್ಯಮಾಡುವರು. ನರ್ತಕರು ಬಹು ಬಣ್ಣದ ಉಡುಪುಗಳನ್ನು ಧರಿಸುವರು, ಮುಖ್ಯ ನರ್ತಕ ನವಿಲಿನ ಗರಿಗಳನ್ನು ಕೈಯಲ್ಲಿ ಹಿಡಿಯುವರು, ಉಳಿದ ನರ್ತಕರು ಗರಿಗಳನ್ನು ತಮ್ಮ ಕಾಲಿಗೆ ಅಂಟಿಸಿಕೊಳ್ಳುವರು. ಈ ನೃತ್ಯದಲ್ಲಿ ಬಳಸುವ ಪ್ರಮುಖ ವಾದ್ಯಗಳೆಂದರೆ 'ಧೋಲಕ್' ಮತ್ತು 'ನಗರಿಯಾ'. ವಾದ್ಯಗಳ ಬಡಿತಗಳು ತಮ್ಮ ಶಕ್ತಿ ಮತ್ತು ಭಾವನೆಗಳಿಗೆ ಸ್ಫೂರ್ತಿ ನೀಡಿದಾಗ ಉದ್ದನೆಯ ಕೋಲುಗಳನ್ನು ಹೊಂದಿರುವ ಪುರುಷ ನರ್ತಕರು ಮಾರ್ಷಲ್ ಕಲೆಗಳನ್ನು ತೋರಿಸುತ್ತಾರೆ. ಕೊಯ್ಲು ಮಾಡಿದ ನಂತರ ಈ ನೃತ್ಯವನ್ನು ವಂದನಾರ್ಪಣೆಯ ಸಂಕೇತವಾಗಿ ಪ್ರದರ್ಶಿಸಲಾಗುತ್ತದೆ.
  • ಬುಂದೇಲ್‌ಖಂಡ್‌ನಲ್ಲಿ ರಾವಲಾ ನೃತ್ಯವು ಮೂಲತಃ ನೃತ್ಯ ನಾಟಕವಾಗಿದೆ. ಬುಂದೇಲ್‌ಖಂಡ್‌ನ ಕೃಷಿ ಕಾರ್ಮಿಕ ಸಮುದಾಯವು ವಿವಾಹದ ಸಮಯದಲ್ಲಿ ರವಾಲವನ್ನು ಅತ್ಯಂತ ತಮಾಷೆಯ ಅಭಿವ್ಯಕ್ತಿ ಹಾಗೂ ಹಾಸ್ಯಮಯ ಸಂಭಾಷಣೆಗಳೊಂದಿಗೆ ಪ್ರದರ್ಶಿಸಲಾಗುತ್ತದೆ. ನೃತ್ಯದ ಅಭಿವ್ಯಕ್ತಿ ಹಾಗೂ ನಾಟಕದ ಸಂಭಾಷಣೆಗಳಿಂದ ಪ್ರೇಕ್ಷಕರು ಮನರಂಜನೆ ಪಡೆಯುತ್ತಾರೆ.
  • ಬದಯ್ಯ ಒಂದು ಔಪಚಾರಿಕ ನೃತ್ಯ. ಇದನ್ನು ಮಗುವಿನ ಜನನ, ಮದುವೆಗಳು ಅಥವಾ ಯಾವುದೇ ಇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒಟ್ಟುಗೂಡಿದ ಸಂಧರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಮೂಲಕವಾಗಿ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡುತ್ತಾರೆ.
  • ರಾಯ್ - ಶತಮಾನಗಳಿಂದಲೂ ರಾಯ್ ಜಾನಪದ ನೃತ್ಯವಾಗಿದ್ದು ಅದು ಶಾಸ್ತ್ರೀಯ ನೃತ್ಯವಾಗಿ ಉತ್ತುಂಗಕ್ಕೂ ಏರಿತ್ತು. ನಂತರ ರಾಯ್ ನೃತ್ಯದ ಸೌಂದರ್ಯದ ಮೌಲ್ಯಗಳು ಕುಸಿಯಿತು ಮತ್ತು ಅದರ ಶಾಸ್ತ್ರೀಯ ಅಭಿವ್ಯಕ್ತಿಗಳನ್ನು ಕಳೆದುಕೊಂಡಿತು. ಇಂದು ರಾಯ್ ಸರಳವಾಗದ ಜಾನಪದ ನೃತ್ಯವಾಗಿ ಮಾತ್ರ ಉಳಿದಿದೆ.

ರಾಯ್ ಎಂದರೆ ಸಾಸಿವೆ ಕಾಳು. ಸಾಸಿವೆ ಬೀಜವನ್ನು ತಟ್ಟೆಗೆ ಹಾಕಿದಾಗ, ಬೀಜವು ಸುತ್ತಲೂ ತಿರುಗಲು ಪ್ರಾರಂಭಿಸುತ್ತದೆ. ಸಾಸರ್‌ನಲ್ಲಿ ಸಾಸಿವೆ ಬೀಜವು ಹೇಗೆ ಚಲಿಸುತ್ತದೆ, ನೃತ್ಯಗಾರರು ಸಹ ಹಾಗೆಯೇ ಹಾಡುಗಾರರ ಹಾಡಿನ ತಾಳಕ್ಕೆ ಹೆಜ್ಜೆ ಹಾಕುವರು.ಇದು ಯುಗಳಗೀತೆ (ಜೋಡಿಗೀತೆ) ವಾದ್ಯಗಳ ತಾಳ ಮತ್ತು ನರ್ತಕರ ನಡುವೆ ಸ್ಪರ್ಧೆಯೋಪಾದಿಯಲ್ಲಿ ರಾಯ ನೃತ್ಯವು ಪ್ರದರ್ಶಿತಗೊಳ್ಳುತ್ತದೆ. ಸ್ಪರ್ಧೆಯು ಆನಂದದ ಕಡೆಗೆ ಕಾರಣವಾಗುತ್ತದೆ.

  • ಕುದುರೆ ನೃತ್ಯವು ತರಬೇತಿ ಪಡೆದ ಕುದುರೆ ಹಾಗೂ ರಬ್ಬಿ ಎಂದು ಕರೆಯಲ್ಪಡುವ ಭವ್ಯವಾದ ಡ್ರಮ್‌ಗಳ ಜೋರಾಗಿ ತಾಳಗಳೊಂದಿಗೆ ನಡೆಸುವ ಔಪಚಾರಿಕ ನೃತ್ಯವಾಗಿದೆ. ಕುದುರೆಯು ಆಕರ್ಷಕ ಚಲನೆಗಳೊಂದಿಗೆಡ್ರಮ್‌ನ ಬಡಿತಗಳನ್ನು ಅನುಸರಿಸುತ್ತದೆ. ಹಾಗೂ ಕುದುರೆ ಸವಾರ ಜಿಮ್ನಾಸ್ಟಿಕ್ಸ್ ಭಂಗಿಗಳನ್ನು ಪ್ರದರ್ಶಿಸುತ್ತಾನೆ. .

ಜಾನಪದ ಸಂಗೀತ[ಬದಲಾಯಿಸಿ]

  • ಫಾಗ್ ಹಾಡುಗಳು ಮತ್ತು ಅದರ ಲಯಬದ್ಧ ಸಂಗೀತವನ್ನು ಇಡೀ ಬುಂದೇಲ್‌ಖಂಡ್ ಪ್ರದೇಶದಲ್ಲಿ ವಸಂತ ಋತುವಿನಲ್ಲಿ ಬೆಳೆಗಳು ಕೊಯ್ಲಿಗೆ ಸಿದ್ಧವಾದಾಗ ಕೇಳಬಹುದು. ಮಾರ್ಚ್ -ಏಪ್ರಿಲ್ ನ ವಸಂತ ಋತುವಿನಲ್ಲಿ ಯುವಕರ ನವಿರಾದ ಹೃದಯಗಳಲ್ಲಿ ಅಡಗಿರುವ ರೋಮಾಂಚಕ ಭಾವನೆಗಳನ್ನು ವ್ಯಕ್ತಪಡಿಸಲಾಗುತ್ತದೆ. ಅಂತಿಮವಾಗಿ ವಿದ್ಯುಕ್ತ ಭಾವನೆಗಳು ಭಕ್ತಿಯಾಗಿ ಪರಿವರ್ತನೆಯಾಗುತ್ತವೆ.
  • ಮಳೆಗಾಲದಲ್ಲಿ ರೈತರ ಮನರಂಜನೆಗಾಗಿ ಅಲ್ಹಾ ಪಠಣವನ್ನು ಯಾವಾಗಲೂ ಆಯೋಜಿಸಲಾಗುತ್ತದೆ. ಭಾರೀ ಮಳೆಗಾಲದಲ್ಲಿ ರೈತರು ತಮ್ಮ ಕೃಷಿ ಕೆಲಸಗಳಿಂದ ಮುಕ್ತರಾದಾಗ ಮತ್ತು ಅವರು ಎಲ್ಲಿಗೂ ಹೋಗಲು ಸಾಧ್ಯವಾಗದಿದ್ದಾಗ, ಒಂದು ಸ್ಥಳದಲ್ಲಿ ಕುಳಿತುಕೊಳ್ಳುವರು. ಅಲ್ಹಾ ಪಠಣವು ಅವರ ಐತಿಹಾಸಿಕ ವೀರರ ವೀರೋಚಿತ ಸಾಧನೆಗಳನ್ನು ಜಾಗೃತಗೊಳಿಸುತ್ತದೆ.
  • 'ದಾದ್ರೆ 'ಮತ್ತು 'ಗರಿ' ಬುಂದೇಲ್‌ಖಂಡ್‌ನ ಪ್ರಮುಖ ಜಾನಪದ ಕಥೆಯಾಗಿದೆ. 'ಗರಿ'ಯಾಗಿ ಅವರು ಮಂಗಳಕರವಾದ ಮದುವೆ ನಡೆಯುತ್ತಿರುವಾಗ ಆನಂದಮಯ ಭಾವನೆಯನ್ನು ವ್ಯಕ್ತಪಡಿಸುವರು. ಗರಿ ಹಾಡಿನ ಮೂಲಕ ವಧು-ವರನ ಹೃದಯದಲ್ಲಿ ಪ್ರೀತಿ ಮತ್ತು ಪ್ರಣಯದ ಭಾವನೆಗಳನ್ನು ಹುಟ್ಟುಹಾಕುತ್ತಾರೆ. ನವ ದಂಪತಿಗಳನ್ನು ಆಶೀರ್ವದಿಸಲು 'ದಾದ್ರೆ' ಹಾಡನ್ನು ಹೆಂಗಸರ ಗುಂಪಿನಲ್ಲಿ ಹಾಡುವರು.
  • ಲ್ಯಾಮ್ಟೆರಾ - (ದೇವರ ಕರೆ) ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಚಳಿಗಾಲದ ರಬಿ ಬೆಳೆಯ ನಂತರ ಬುಂದೇಲ್‌ಖಂಡ್‌ನ ಭಕ್ತಿ ಉತ್ಸವಗಳಲ್ಲಿ ಬುಂಡೇಲಿ ಯಾತ್ರಾರ್ಥಿಗಳಿಂದ ಲ್ಯಾಮ್ಟೆರಾ ಹಾಡುಗಳನ್ನು ಹಾಡಲಾಗುತ್ತದೆ. ರೈತರು ತಮ್ಮ ಬೆಳೆ ಹೂಬಿಡುವುದನ್ನು ನೋಡಿದ ನಂತರ, ಅವರ ಹೃದಯ ಮತ್ತು ಮನಸ್ಸು ಕೂಡ ಹೂವಿನಂತೆ ಅರಳುತ್ತವೆ. ದೇವರಿಗೆ ತಮ್ಮ ಕೃತಜ್ಞತೆಯನ್ನು ತೋರಿಸಲು ಭಕ್ತರು ಬೆಳೆಯ ಹೂವುಗಳನ್ನು ದೇವರ ಪಾದಗಳಿಗೆ ಅರ್ಪಿಸುತ್ತಾರೆ. ಇಡೀ ವರ್ಷವು ದಿನನಿತ್ಯದ ಜೀವನದಲ್ಲಿ ಹಾದುಹೋಯಿತು ಎಂದು ಅವರು ಅರಿತುಕೊಂಡರು ಮತ್ತು ವಸಂತ ಋತುವಿನಲ್ಲಿ ತೀರ್ಥಕ್ಷೇತ್ರಗಳು, ದೇವಸ್ಥಾನಗಳಿಗೆ ಹೋಗಿ ನದಿಗಳಲ್ಲಿ ಪವಿತ್ರ ಸ್ನಾನವನ್ನು ಮಾಡುವ ಮೂಲಕ ಆಶೀರ್ವಾದ ಪಡೆಯುವರು.
  • ಖ್ಯಾಲ್ - 'ಖ್ಯಾಲ್ ಗಾಯಕಿ'ಯಲ್ಲಿ, ಗಾಯಕನು ಪೌರಾಣಿಕ ಕಥೆಗಳು, ವೀರರ ಕಾರ್ಯಗಳು, ಸಾಮಾಜಿಕ ಘಟನೆಗಳು ಮತ್ತು ಕುಟುಂಬದ ಆಳವಾದ ಸಂಬಂಧಗಳನ್ನು ಪಠಿಸುತ್ತಾನೆ. ಈ ಹಾಡುಗಳ ಅಭಿವ್ಯಕ್ತಿಯಲ್ಲಿ, ಅತ್ಯಂತ ವಿಶೇಷವಾದ ಡ್ರಮ್ 'ಧಪ್ಲಿ'ಮೂಲಕ ಹಾಡುವ ಹಾಡುಗಳು ಭಾವನೆಗಳನ್ನು ಅಭಿವ್ಯಕ್ತಗೊಳಿಸಿ ವಿಶೇಷ ಮುದವನ್ನು ನೀಡುತ್ತದೆ.
  • ಕಹರ್ವಾ - ಜಾನಪದ ಕಥೆಯ ಅಭಿವ್ಯಕ್ತಿ, ಹೃದಯದ ಭಾವನೆಗಳು ರೋಮ್ಯಾಂಟಿಕ್ ಅಭಿವ್ಯಕ್ತಿಯಲ್ಲಿ ಕೊನೆಗೊಳ್ಳುತ್ತದೆ. ಈ ಹಾಡನ್ನು ಯಾವಾಗಲೂ ಡ್ರಮ್ಮರ್ ಹಾಡುತ್ತಾರೆ, ಅವರು ರಾಯ್ ನರ್ತಕಿಯನ್ನು ಅನುಸರಿಸುತ್ತಾರೆ, ಅದಕ್ಕಾಗಿಯೇ ಈ ನೃತ್ಯವನ್ನು ರಾಯ್-ಕಹರ್ವಾ ಎಂದೂ ಸಹ ಕರೆಯುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]