ಬಿ .ಏನ್. ಕೆ. ಶರ್ಮ

ವಿಕಿಪೀಡಿಯ ಇಂದ
Jump to navigation Jump to search
ಡಾ. ಬಿ. ಎನ್. ಕೆ. ಶರ್ಮಾ
Born
ಭವಾನಿ ನಾರಾಯಣರಾವ್ ಕೃಷ್ಣಮೂರ್ತಿ ಶರ್ಮ. ಶರ್ಮರ ಅಜ್ಜ, 'ಕೊಚ್ಚಿ ರಂಗಪ್ಪಾ ಚಾರ್ಯ' ಕೊಚ್ಚಿನ್ ರಾಜದರ್ಬಾರಿನ ಆಸ್ಥಾನ ವಿದ್ವಾನ್ ಆಗಿದ್ದರು. . ರೂಪಾರೆಲ್ ಕಾಲೇಜ್ (1953-74)

೧೯೦೯ ಜೂನ್ ೯ ರಂದು ಜನಿಸಿದರು.
ಕರ್ನಾಟಕದಲ್ಲಿ ಜನಿಸಿದರೂ ಅವರ ಕಾರ್ಯಕ್ಷೇತ್ರವೆಲ್ಲಾ ಕರ್ನಾಟಕದಿಂದ ಹೊರೆಗೇ ನಡೆಯಿತು.
Occupation'ಮದ್ರಾಸ್ ನ ಚಿದಂಬರಂನ ಪ್ರಖ್ಯಾತ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ'ರಾಗಿ ಪಾದಾರ್ಪಣೆಮಾಡಿ, ಶರ್ಮರವರು 'ತಿರುವೈಯ್ಯಾರಿನ ಸಂಸ್ಕೃತ ಕಾಲೇಜ್' ನಲ್ಲಿ ಪ್ರಾಧ್ಯಾಪಕರಾದರು. * 'ಪಂಜಾಬಿನ ವಿಶ್ವೇಶ್ವರಾನಂದ ವೇದಿಕ್ ರಿಸರ್ಚ್ ಇನ್ಸ್ ಸ್ಟಿ ಟ್ಯೂಟ್ ನ ಸಂಶೋಧಕ ವಿದ್ವಾಂಸ'.* 'ಉಡಿಪಿ ಕುಂಟಾ ಕೆನರಾ ಕಾಲೇಜ್' ನ ಪ್ರಾಚಾರ್ಯರಾಗಿ ಸೇವಿಸಲ್ಲಿಸಿ, * 'ಬೊಂಬಾಯಿನ 'ಮಹೀಮ್ ಜಿಲ್ಲೆ'ಯ ಜಿ.ಜಿ ರೂಪರೇಲ್ ಕಾಲೇಜ್ ನ ಸಂಸ್ಕೃತ ವಿಭಾಗದ ಮುಖ್ಯಸ್ಥ' ರಾಗಿ ನೇಮಕಗೊಂಡರು. ೧೯೭೪ ರಲ್ಲಿ ನಿವೃತ್ತರಾದರು.
Years active(1953-74)ರ ವರೆಗೆ, ಉತ್ಕೃಷ್ಟ ಕೃತಿ ರಚನೆಗಳು : * ೧೯೬೩ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ. * ೧೯೯೨ ರಲ್ಲಿ ಭಾರತದ ರಾಷ್ಟ್ರಪತಿಗಳ ವತಿಯಿಂದ ಪ್ರಶಸ್ತಿ. * ೧೯೯೩ ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ’ಶ್ರೀ ವಿದ್ಯಾಮಾನ್ಯ’ ಪುರಸ್ಕಾರ. * ’ಮಹಾಮಹೋಪಾಧ್ಯಾಯ ಪ್ರಶಸ್ತಿ'. * ದ್ವೈತ ಸಿದ್ಧಾಂತ ವಿಶ್ಲೇಷಣೆ, ಅತ್ಯುತ್ತಮ ಹಾಗೂ ಮಹತ್ವದ ಸಂಶೋಧನ ಲೇಖಗಳಲ್ಲೊಂದು. * ೨೫ ಕ್ಕೂ ಮೇಲ್ಪಟ್ಟು ಕೃತಿ ರಚನೆ, * ೧೫೦ ಕ್ಕೂ ಮಿಗಿಲಾದ ಸಂಶೋಧನ ಲೇಖನಗಳು.
Known forಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರು. 'ದ್ವೈತ ಸಿದ್ಧಾಂತ'ದ ವಿಭಿನ್ನ ನೆಲೆಗಳನ್ನು ಕುರಿತು ಬೆಳಕು ಚೆಲ್ಲಲು ಪ್ರಯತ್ನಿಸಿದರು. * 'The Brahma sutras and the principle Commentaries' ಅವರ ಮೇರುಕೃತಿಗಳಲ್ಲಿ ಪ್ರಾಮುಖ್ಯವಾದದ್ದು. ಮತ್ತೊಂದು ಮಹತ್ವದ ಕೃತಿ : * 'Nyayasudha of Shri. Jayatirtha'. ಆಂಗ್ಲ ಭಾಷೆಯಲ್ಲೂ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ.
Websitewww.madhvaradio.org/bnk.asp

ತಮ್ಮ ಇಡೀ ಬದುಕನ್ನೇ ಭಾಷಾಶಾಸ್ತ್ರದ ಅಧ್ಯಯನ, ಬೋಧನೆ, ಸಂಶೋಧನೆ ಹಾಗೂ ಭಾರತೀಯ ತತ್ವಶಾಸ್ತ್ರಕ್ಕೆ ಮುಡುಪಾಗಿಟ್ಟ ಕರ್ಮಯೋಗಿಯೆಂದು ಪ್ರಸಿದ್ದರಾದ ಡಾ. ಬಿ. ಎನ್. ಕೆ. ಶರ್ಮ [೧] ರವರ ಬಾಲ್ಯದ ಹೆಸರು, 'ಭವಾನಿ ನಾರಾಯಣರಾವ್ ಶರ್ಮಾ', ಎಂದು. [೧]'ಮಧ್ವ ಸಿದ್ಧಾಂತ'ದ ಮಹತ್ವಗಳನ್ನು ಜಗತ್ತಿಗೆ ಪರಿಚಯಿಸಿದ ಪ್ರಕಾಂಡ ಪಂಡಿತ. ಶರ್ಮರವರು, ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಾದರೂ, ಹೆಚ್ಚು ಸಮಯ ಕಳೆದದ್ದು ಕರ್ನಾಟಕದಿಂದ ಹೊರಗಡೆಯಲ್ಲಿ. ಶರ್ಮರವರು,[೨] ಸಂಸ್ಕೃತ ವಿದ್ವಾಂಸ,ಮೇಧಾವಿ,ಹಾಗೂ ಸುಪ್ರಸಿದ್ಧ ಭಾರತಿಯ ತತ್ವಜ್ಞಾನದಲ್ಲಿ ಪ್ರಕಾಂಡ ಪಂಡಿತರಾಗಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ರ ಬಳಿ ಶಿಷ್ಯತ್ವವನ್ನು ಗಳಿಸಿ, ಅವರ ಮಾರ್ಗದರ್ಶನದಲ್ಲಿ ತಮ್ಮ 'ಪಿ.ಎಚ್.ಡಿ.ಪದವಿ'ಯನ್ನು ಗಳಿಸಿದರು. ಮಹತ್ವದ ಗ್ರಂಥಗಳ ಕರ್ತೃವಾಗಿದ್ದಾರೆ.[೩]

ವಿಧ್ಯಾಭ್ಯಾಸ, ವೃತ್ತಿಜೀವನ[ಬದಲಾಯಿಸಿ]

ಆಗಿನ ಮದ್ರಾಸ್ ನ ಚಿದಂಬರಂನ ಪ್ರಖ್ಯಾತ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಪಾದಾರ್ಪಣೆಮಾಡಿ, ವೃತ್ತಿಜೀವನವನ್ನು ಆರಂಭಿಸಿದ ಶರ್ಮರವರು,

ಸನ್ ೧೯೪೮ ರಲ್ಲಿ ದ. ಸರ್ವೇಪಲ್ಲಿ ರಾಧಾಕೃಷ್ಣರವರ ಮಾರ್ಗದರ್ಶನದಲ್ಲಿ, ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿ ಪಿ.ಎಚ್.ಡಿ. ಗಳಿಸಿದರು. ಮುಂಬಯಿ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯ ಭಾಜನರಾಗಿದ್ದಾರೆ. 'ದ್ವೈತ ಸಿದ್ಧಾಂತ'ದ ವಿಭಿನ್ನ ನೆಲೆಗಳನ್ನು ಕುರಿತು ಬೆಳಕು ಚೆಲ್ಲಲು ಪ್ರಯತ್ನಿಸಿದರು.

ಮೇರುಕೃತಿಗಳಲ್ಲಿ ಪ್ರಾಮುಖ್ಯವಾದದ್ದು[ಬದಲಾಯಿಸಿ]

ಸಂಸ್ಕೃತ ವಲ್ಲದೆ ಆಂಗ್ಲ ಭಾಷೆಯಲ್ಲೂ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಶರ್ಮರವರ ಸಂಸ್ಕೃತ ಪಾಂಡಿತ್ಯ ಪ್ರತಿಭೆ ಮತ್ತು ಸಾಧನೆಗಳನ್ನು ಹಲವಾರು ಶ್ರೇಷ್ಠ ವಿದ್ವಾಂಸರು ಮುಕ್ತ ಕಂಠದಿಂದ ಹೊಗಳಿದ್ದಾರೆ.[೨]

ಉತ್ಕೃಷ್ಟ ಕೃತಿ ರಚನೆಗಳು[ಬದಲಾಯಿಸಿ]

 • ದ್ವೈತ ಸಿದ್ಧಾಂತ ವಿಶ್ಲೇಷಣೆ, ಅತ್ಯುತ್ತಮ ಹಾಗೂ ಮಹತ್ವದ ಸಂಶೋಧನ ಲೇಖಗಳಲ್ಲೊಂದು.[೪]
 • ೨೫ ಕ್ಕೂ ಮೇಲ್ಪಟ್ಟು ಕೃತಿ ರಚನೆ,
 • ೧೫೦ ಕ್ಕೂ ಮಿಗಿಲಾದ ಸಂಶೋಧನ ಲೇಖನಗಳು

ಮಾನ ಸನ್ಮಾನಗಳು,ಮತ್ತು ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

 • ೧೯೬೩ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ
 • ೧೯೯೨ ರಲ್ಲಿ ಭಾರತದ ರಾಷ್ಟ್ರಪತಿಗಳ ವತಿಯಿಂದ ಪ್ರಶಸ್ತಿ
 • ೧೯೯೩ ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ’ಶ್ರೀ ವಿದ್ಯಾಮಾನ್ಯ’ ಪುರಸ್ಕಾರ.
 • ’ಮಹಾಮಹೋಪಾಧ್ಯಾಯ ಪ್ರಶಸ್ತಿ'.

ಉಲ್ಲೇಖಗಳು[ಬದಲಾಯಿಸಿ]

 1. http://www.hindu.com/fr/2005/07/15/stories/2005071500390300.htm
 2. http://www.shreevaartha.org/Current_events.html
 3. http://www.nyayamruta.org/
 4. http://www.shreevaartha.org/
 1. http://www.madhvaradio.org/bnk.asp