ಬಿ ಎಮ್ ಟಿ ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಕ್ಷೇಪಿಸಿ ಬಿಎಂಟಿಸಿ ಎಂದು ಕರೆಯಲಾಗುತ್ತದೆ. ಭಾರತದ ಕರ್ನಾಟಕ ರಾಜ್ಯಾದ ರಾಜಧಾನಿಯಾದ ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕ ಸಾರಿಗೆ ಬಸ್ ಸೇವೆಯನ್ನು ಕಾರ್ಯನಿರ್ವಹಿಸುವ ಒಂದು ಸರ್ಕಾರಿ ಸಂಸ್ಥೆಯಾಗಿದೆ . ಈ ಸ೦ಸ್ಥೆಯು ಭಾರತದಲ್ಲೆ ಆತಿ ಹೆಚ್ಚು ವೊಲ್ವೋ ಬಸ್ಗಳನ್ನು ತನ್ನ ಸಾರ್ವಜನಿಕ ಸೇವೆಗೆ ಒದಗಿಸುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಒಂದು ಒಡಕು ಪರಿಣಾಮವಾಗಿ, ೧೯೯೭ ರಲ್ಲಿ ಬೆಂಗಳೂರು ಸಾರಿಗೆ ಸೇವೆಯನ್ನು ರಚಿಸಲಾಯಿತು. ನಂತರ ಬೆಂಗಳೂರು ನಗರ ಮಹಾನಗರವಾಗಿ ಪರಿವರ್ತನೆಗೊ೦ಡಾಗ ಬೆಂಗಳೂರು ಸಾರಿಗೆ ಸೇವೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯಾಯಿತು . ಬಿಎಂಟಿಸಿ ಕೆಎಸ್ಆರ್ಟಿಸಿಯ ಒಂದು ವಿಭಾಗವಾಗಿಯೆ ಉಳಿದಿದೆ. ಪ್ರಮುಖ ಬಸ್ ನಿಲ್ದಾಣಗಳು: ಬಿಎಂಟಿಸಿ ನಗರದಲ್ಲಿ ಒಟ್ಟು ೩೪ ನಿಲ್ದಾಣಗಳನ್ನು ಹೊಂದಿದೆ, ಅದರಲ್ಲಿ ಪ್ರಮುಖ ೩ ನಿಲ್ದಾಣಗಳೆ೦ದರೆ ೧.ಕೆ೦ಪೇಗೌಡ ಬಸ್ ನಿಲ್ದಾಣ ೨.ಕೃಷ್ಣರಾಜ ಮಾರುಕಟ್ಟೆ ನಿಲ್ದಾಣ ೩.ಶಿವಾಜಿನಗರ ಬಿಎಂಟಿಸಿ ಶಾ೦ತಿನಗರ, ಬನಶ೦ಕರಿ, ಜಯನಗರ ೪ನೆಬ್ಲ್ಲಾಕ್, ಕೊರಮ೦ಗಳ, ಕೆ೦ಗೇರಿ, ಯಶವ೦ತಪುರ, ವಿಜಯನಗರ, ದೊಮ್ಮಲೂರು ಗಳಲ್ಲಿ ಒಟ್ಟು ೧೦ ಪ್ರಯಾಣ ಮತ್ತು ಸಾಗಣೆ ನಿರ್ವಹಣಾ ಕೇಂದ್ರಗಳನ್ನು ಹೊಂದಿದೆ. ಬಸ್ ಡೇ: ಫೆಬ್ರವರಿ ೪ ೨೦೧೦ ರಂದು ಬಸ್ ಡೇಯನ್ನು ಜಾರಿಗೆ ಪರಿಚಯಿಸಲಾಯಿತು, ಈ ದಿನ ನಗರದ ಪ್ರತಿಯೊಬ್ಬರು ಬಸ್ ನಲ್ಲಿ ಪ್ರಯಾಣಿಸಿ ಪರಿಸರದ ಬಗ್ಗೆ ಇರುವ ಗೌರವ ಮತ್ತು ಮಾಲಿನ್ಯ ತಡೆಯನ್ನು ಪ್ರೊತ್ಸಾಹಿಸುವುದಾಗಿದೆ. ಬಸ್ ಡೇ ಪ್ರತಿ ತಿ೦ಗಳಿನ ೪ನೆ ತಾರಿಖಿ ನ೦ದು ನೆಡೆಯುತ್ತದೆ. ಬಿಎಂಟಿಸಿಯ ಮುಖ್ಯ ಕಛೇರಿಯು ಶಾ೦ತಿನಗರದಲ್ಲಿದೆ. ಪ್ರಸ್ತುತ ಶ್ರಿ.ರಾಮಲಿ೦ಗ ರೆಡ್ಡಿ ಯವರು ರಾಜ್ಯ ಸಾರಿಗೆ ಸಚಿವರಾಗಿರುತ್ತಾರೆ.