ವಿಷಯಕ್ಕೆ ಹೋಗು

ಬಿ ಆರ್‌ ಭಾಸ್ಕರ್‌ ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ.ಆರ್.ಭಾಸ್ಕರ್ ಪ್ರಸಾದ್ ಕಳೆದ 25 ವರ್ಷಕ್ಕೂ ಹೆಚ್ಚಿನ ಕಾಲದಿಂದ ಕರ್ನಾಟಕದ ದಲಿತ, ಪ್ರಗತಿಪರ ಚಳುವಳಿಯ ಮುಂಚೂಣಿಯಲ್ಲಿ ಗುರುತಿಸಿಕೊಂಡ ನಾಯಕ.

ಬಾಲ್ಯ ಮತ್ತು ಶಿಕ್ಷಣ

[ಬದಲಾಯಿಸಿ]

ಹುಟ್ಟಿದ್ದು 14/09/1975, ತಂದೆ ಪಿ ರಾಮಪ್ರಸಾದ್, ತಾಯಿ ನಾಗರತ್ನಮ್ಮ. ಹುಟ್ಟಿದ ಸ್ಥಳ- ಗೋಪಾಲಪುರ ಮಾಗಡಿ ರಸ್ತೆ, ಬೆಂಗಳೂರು. ಪ್ರಾಥಮಿಕ ಶಾಲೆ ವಿಧ್ಯಾಭ್ಯಾಸ ಸರ್ಕಾರಿ ಪ್ರಾಥಮಿಕ ಶಾಲೆ, ಪೋಲಿಸ್ ಕ್ವಾಟ್ರಸ್, ಮಾಗಡಿ ರಸ್ತೆ, ಪ್ರೌಡ ಶಾಲಾಭ್ಯಾಸ - ಉದಯ ಎಜುಕೇಷನ್ ಸೊಸೈಟಿ, ವಿಜಯನಗರ, ಬೆಂಗಳೂರು. ತಾಂತ್ರಿಕ ಶಿಕ್ಷಣ - ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ @ ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಮತ್ತು ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಬೆಂಗಳೂರು. ಡಿಪ್ಲೊಮಾ ಇನ್ ಪರ್ಫಾರ್ಮಿಂಗ್ ಆರ್ಟ್ಸ್, ರಂಗ ಶಿಕ್ಷಣ ಕೇಂದ್ರ, ನೆಲಮಂಗಲ.

ಸಾಮಾಜಿಕ ಜೀವನ

[ಬದಲಾಯಿಸಿ]

ಕರ್ನಾಟಕದ ಯಾವುದೇ ಮೂಲೆಯಲ್ಲಿ ಜರುಗುವ ಸಾಮಾಜಿಕ ಅಸಮಾನತೆಯ ಶೋಷಣೆಯ ವಿರುದ್ಧ ಮೊದಲಿಗೆ ದನಿ ಎತ್ತುವವರೇ ಭಾಸ್ಕರ್ ಪ್ರಸಾದ್. ದಲಿತಪರ ಸಂಘಟನೆಗಳನ್ನು ಒಗ್ಗೂಡಿಸುವ ಸಲುವಾಗಿ 'ಕರ್ನಾಟಕ ದಲಿತ ಸಂಘನೆಗಳ ಒಕ್ಕೂಟ' ರಚಿಸಿ, ನಾಡಿನಾದ್ಯಂತ ಜಾಗೃತಿ ಜಾಥಾ ಮಾಡಿದವರು. ನಂತರ ಬಾಬಾಸಾಹೇಬ್ ಸರ್ವೀಸ್ ಫೋರ್ಸ್ ಎಂಬ ಮತ್ತೊಂದು ಸಂಘಟನೆ ರಚಿಸಿ, ಹೋರಾಟಗಾರರನ್ನು ರೂಪಿಸುವ ಕೆಲಸವನ್ನು ಸಹ ಮಾಡಿದ್ದಾರೆ. ಅಂತೆಯೇ, 'ಉಡುಪಿ ಚಲೋ' ಎಂಬ ಬೃಹತ್ ಚಳುವಳಿಯನ್ನು ಸಂಘಟಿಸಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಭಾಸ್ಕರ್ ಪ್ರಸಾದ್ ಕೂಡಾ ಒಬ್ಬರು. ಇದಷ್ಟೇ ಅಲ್ಲದೆ, ಬಿಜಾಪುರದ ದಾನಮ್ಮ ಹತ್ಯಾಚಾರ ಪ್ರಕರಣದ ವಿರುದ್ಧ ಹೋರಾಟ, ಗುಡಿಬಂಡೆ ಚಲೋ, ತುಮಕೂರು ಚಲೋ ಹೋರಾಟ, ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ನಡೆಸಿದ ಹೋರಾಟಗಳಲ್ಲಿ ಭಾಸ್ಕರ್ ಪ್ರಸಾದ್ ಅವರ ಪ್ರಮುಖ ಹೆಜ್ಜೆಗುರುತುಗಳಿವೆ. ಸಮಾಜದಲ್ಲಿ ನಡೆಯುತ್ತಿದ್ದ ದೌರ್ಜನ್ಯ, ಹಗರಣಗಳನ್ನು ಹೊರಗೆಳೆಯುವ ಸಲುವಾಗಿ 'ಬೆಂಗಳೂರು ಸೆಲೆ' ಎಂಬ ಪತ್ರಿಕೆಯನ್ನು ಹುಟ್ಟುಹಾಕಿ, ತನಿಖಾ ಪತ್ರಿಕೋದ್ಯಮದ ಮೂಲಕ ಹತ್ತು ಹಲವು ಹಗರಣ, ಪ್ರಕರಣಗಳನ್ನು ಭೇದಿಸಿದ ಶ್ರೇಯ ಭಾಸ್ಕರ್ ಪ್ರಸಾದ್ ಅವರಿಗೆ ಸಲ್ಲುತ್ತದೆ.

ದಲಿತ, ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಕರ್ನಾಟಕದ ಮುಖ್ಯವಾಹಿನಿಯ ಮಾಧ್ಯಮಗಳು ನಿರ್ಲಕ್ಷಿಸುತ್ತಿರುವ ಹೊತ್ತಿನಲ್ಲಿ ನ್ಯೂಸ್ 14 ಎಂಬ ವೆಬ್ ಚಾನಲ್ ಸ್ಥಾಪಿಸಿ, ಅದರ ಮೂಲಕ ಮಾಧ್ಯಮಗಳ ನಿರ್ಲಜ್ಜತವನ್ನು, ಮನುವಾದಿತನವನ್ನು ದಿಟ್ಟತನದಿಂದ ಬಯಲು ಮಾಡುತ್ತಿದ್ದಾರೆ. ಅಲ್ಲದೇ, ಅದೇ ಮನುವಾದಿ ಚಾನೆಲ್ಗಳ ಡಿಬೆಟ್ಗಳಲ್ಲಿ ಭಾಗವಹಿಸಿ ಮನುಷ್ಯಪರವಾಗಿ ವಾದಿಸಿದ ವಾಗ್ಮಿ ಕೂಡಾ.

2004ರಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ. ಆನಂತರ ಯಡಿಯೂರಪ್ಪ ಅವರ ನಿಕಟ ಒಡನಾಟದ ಸಲುವಾಗಿ 2008ರಲ್ಲಿ ನೆಲಮಂಗಲ ತಾಲ್ಲೂಕಿನ ಅರಿಶಿಣಕುಂಟೆ ಜಿಲ್ಲಾಪಂಚಾಯ್ತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ದೆ. 2018ರಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿರುವ ಭಾಸ್ಕರ್ ಪ್ರಸಾದ್ ರಾಜಕೀಯ ಪಟ್ಟುಗಳಲ್ಲಿ ಪಳಗಿದವರು.

ಮಾನವಶಾಸ್ತ್ರೀಯ ಅಧ್ಯಯನದ ಮೂಲಕ ಕರ್ನಾಟಕದ ಆಸಾದಿ ಜನಾಂಗದ ಸಂಸ್ಕೃತಿ, ಪರಂಪರೆ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನದ ಕೃತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಬರೆದುಕೊಟ್ಟಿದ್ದಾರೆ. ಅದಕ್ಕೂ ಹಿಂದೆ ಬೆವರ ದನಿಗಳು ಎಂಬ ಕವನ ಸಂಕಲನ ಮತ್ತು ಗೋವಿಸಂ ಎಂಬ ಸಾಮಾಜಿಕ ಬರಹಗಳ ಕೃತಿಯನ್ನು ಹೊರತಂದಿದ್ದಾರೆ.

ಸಾಧನೆ ಮತ್ತು ಪ್ರಶಸ್ತಿಗಳು

[ಬದಲಾಯಿಸಿ]

1. ಪ್ರಶಸ್ತಿಗಳು - ಅತ್ಯುತ್ತಮ ನಿರ್ದೇಶಕ (ರಂಗಭೂಮಿ) ರಾಜ್ಯ ಪ್ರಶಸ್ತಿ 1998

2. ಅತ್ಯುತ್ತಮ ಗಾಯಕ ರಾಜ್ಯ ಪ್ರಶಸ್ತಿ (ರಂಗ ಗೀತೆಗಳು) 1998

3. ಅತ್ಯುತ್ತಮ ಅಭಿನಯ (ರಂಗಭೂಮಿ) ರಾಷ್ಟ್ರ ಪ್ರಶಸ್ತಿ - ನವದೆಹಲಿ 1999

4. ಅತ್ಯುತ್ತಮ ಸಾಹಿತಿ ರಾಷ್ಟ್ರ ಪ್ರಶಸ್ತಿ ದಲಿತ ಸಾಹಿತ್ಯ ಪರಿಷತ್ತು ನವ ದೆಹಲಿ - 2013

ಸಂಘ - ಸಂಸ್ಥೆಗಳ ಸ್ಥಾಪನೆ ಮತ್ತು ಒಡನಾಟ

[ಬದಲಾಯಿಸಿ]

ಸ್ಥಾಪಕರು:

[ಬದಲಾಯಿಸಿ]

ಸಂಸ್ಥಾಪಕ ಅಧ್ಯಕ್ಷರು: ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ. 2003

ಬಾಬಾ ಸಾಹೇಬ್ ಸರ್ವೀಸ್ ಫೋರ್ಸ್ 2008

ಅಧ್ಯಕ್ಷರು: ಜಾಗೃತಿ ಟ್ರಸ್ಟ್, ಸಾಮಾಜಿಕ, ಶೈಕ್ಷಣಿಕಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ.

ಸಂಪಾದಕರು ಮತ್ತು ಮಾಲಿಕರು: ಬೆಂಗಳೂರು ಸೆಲೆ ಕನ್ನಡ ಪಾಕ್ಷಿಕ

ಮಾಲೀಕರು ಮತ್ತು ಪ್ರಧಾನ ಸಂಪಾದಕರು: ನ್ಯೂಸ್14 ಇಂಡಿಯಾ

ಅಧ್ಯಕ್ಷರು: ಮಾದಿಗ ಕುಲಾಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ

ಮಾಲಿಕರು: ಅನನ್ಯ ಸೆಕ್ಯುರಿಟಿ ಅಂಡ್ ಸರ್ವಿಸಸ್

ಒಡನಾಟ:

[ಬದಲಾಯಿಸಿ]

ರಾಜ್ಯ ಗೌರವಾಧ್ಯಕ್ಷರು, ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ

ರಾಜ್ಯ ಸಂಚಾಲಕರು: ಬಾಬಾ ಸಾಹೇಬ್ ಸರ್ವೀಸ್ ಫೋರ್ಸ್ 2008

ನಿಕಟಪೂರ್ವ ಅಧ್ಯಕ್ಷರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ನೆಲಮಂಗಲ ತಾಲ್ಲೂಕು.

ಸದಸ್ಯರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್

ನಿಕಟಪೂರ್ವ ಅಧ್ಯಕ್ಷರು - ಆದಿಜಾಂಭವ ಯುವಕರ ಸಂಘ

ರಾಜಕೀಯ ಜೀವನ

[ಬದಲಾಯಿಸಿ]

ನಿಕಟಪೂರ್ವ ಅಧ್ಯಕ್ಷರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, SC/ST ವಿಭಾಗ ನೆಲಮಂಗಲ ತಾಲ್ಲೂಕು, ಕಸಬಾ ಹೋಬಳಿ

2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನೆಲಮಂಗಲ ವಿಧಾನಸಭಾ ಚುನಾವಣೆ ಸ್ಪರ್ಧೆ

2008ರಲ್ಲಿ BJP ಅಭ್ಯರ್ಥಿಯಾಗಿ ಅರಿಶಿನಕುಂಟೆ ಜಿಲ್ಲಾ ಪಂಚಾಯಿತಿ, ನೆಲಮಂಗಲ ತಾಲ್ಲೂಕಿನಿಂದ ಸ್ಫರ್ಧೆ

2018ರಲ್ಲಿ AAP ಪಕ್ಷದಿಂದ ಮಹದೇವಪುರ ವಿಧಾನಸಭಾ ಕ್ಷೇತ್ರ, ಬೆಂಗಳೂರಿನಿಂದ ಸ್ಫರ್ಧೆ

ಪ್ರಸ್ತುತ: ರಾಜ್ಯ ಪ್ರಧಾನ ಕಾರ್ಯದರ್ಶಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)

ಹೋರಾಟದ ಜೀವನ

[ಬದಲಾಯಿಸಿ]

ಚಲೋ ಉಡುಪಿ ಚಳುವಳಿ, ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಪ್ರತಿಪಾದನೆ

ಕೊಡಗಿನ ದಿಡ್ಡಳ್ಳಿ ಚಲೋ ಚಳುವಳಿ - ಆದಿವಾಸಿಗಳ ವಸತಿ ಹಕ್ಕಿನ ಪ್ರತಿಪಾದನೆ

ಚಿಕ್ಕಬಳ್ಳಾಪುರದ ಚಲೋ ಗುಡಿಬಂಡೆ ಚಳುವಳಿ - ಮುರಳಿ ವಯಸ್ಸು 13 ವರ್ಷ ಕೊಲೆಗೆ ನ್ಯಾಯ ಕೇಳಿ ನಡೆದ ಬೃಹತ್ ಆಂದೋಲನ.

ತುಮಕೂರು ಚಲೋ - ಅಭಿಷೇಕ್ ವಯಸ್ಸು ಇಪ್ಪತ್ತೊಂದು ವರ್ಷ. ಬೆತ್ತಲೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದ ವಿರುದ್ದ ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನಾ ಸಮಾವೇಶ.

ಚಲೋ ಬಿಜಾಪುರ – ದಾನಮ್ಮ ಹೆಣ್ಣು ಮಗುವಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ನ್ಯಾಯಕ್ಕಾಗಿ ಒತ್ತಾಯ.