ಬಿ. ನಾಗಭೂಷಣ
ಬಿ.ನಾಗಭೂಷಣರು, ಮಹಾರಾಷ್ಟ್ರದ ಡೊಂಬಿವಲಿಯಲ್ಲಿರುವ 'ದ ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ', ಶ್ರೀಮತಿ ಉಮಾ ನಾಗಭೂಷಣರ ಪತಿ. ವಿದ್ಯಾಲಯದ ಪೂರ್ಣ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಳನ್ನು ಸಮರ್ಪಣಾಭಾವಗಳಿಂದ ನೋಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಂಗೀತ ಪರೀಕ್ಷೆಗೆ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಅವರಿಗೆ, ವಸತಿ ಸೌಕರ್ಯಗಳನ್ನೂ ಕಲ್ಪಿಸುವುದು. ಪರೀಕ್ಷೆಯ ಬಳಿಕ ಅವರನ್ನು ಕ್ಷೇಮವಾಗಿ ಮುಂಬಯಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ವರ್ಷವರ್ಷ ನಡೆಸಿಕೊಂಡುಬಂದಿದ್ದಾರೆ. ನಾಅಭೂಷಣ ದಂಪತಿಗಳು ಶಾಸ್ತ್ರೀಯ ಸಂಗೀತ ಪ್ರಸಾರಕ್ಕೆ ತಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಬೆಂಗಳೂರು ಇಲ್ಲವೆ ಬೇರೆ ಪ್ರದೇಶಗಳಿಂದ ಹಿರಿಯ ಸಂಗೀತ ಶಾಸ್ತ್ರಜ್ಞರನ್ನು ಡೊಂಬಿವಲಿಯ ತಮ್ಮ ಸಂಗೀತ ವಿದ್ಯಾಲಯಕ್ಕೆ ಕರೆಸಿ ಅವರ ಸಮ್ಮುಖದಲ್ಲಿ ತ್ಯಾಗರಾಜರು ಮತ್ತು ಪುರುಂದರದಾಸರ ಆರಾಧನಾ ಮಹೋತ್ಸವಗಳನ್ನು ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ.[೧]
'ಮುಂಬಯಿಕನ್ನಡ ಸಂಘ, ಮಾಟುಂಗಾ'
[ಬದಲಾಯಿಸಿ]ಮಾಟುಂಗಾದ ಮುಂಬಯಿ ಕನ್ನಡ ಸಂಘದ ಬೆಳವಣಿಗೆಯಲ್ಲಿ 'ಶ್ರೀ.ನಾಗಭೂಷಣ' ಹಾಗೂ 'ಶ್ರೀ.ಗುರುರಾಜ ನಾಯಕ್' ರವರ ಪಾತ್ರ ಗಣನೀಯವಾಗಿದೆ. ಇಬ್ಬರೂ ಸಮಾನ ಮನಸ್ಸಿನ ಗೆಳೆಯರನ್ನು ಕಲೆಹಾಕಿಕೊಂಡು ಕನ್ನಡ ಸಂಘವನ್ನು ಬೆಳೆಸುವ ನಿಟ್ಟಿನಲ್ಲಿ ಅಪೂರ್ವ ಯೋಗದಾನಮಾಡುತ್ತಿದ್ದಾರೆ. ಹಾಗಾಗಿ ೨೦೧೨ ರಲ್ಲಿ ಮುಂಬಯಿಕನ್ನಡ ಸಂಘ, ತನ್ನ 'ಅಮೃತಮಹೋತ್ಸವ'ವನ್ನು ಕಂಡಿದೆ.
ನವದೆಹಲಿಯ ಕನ್ನಡ ಸಂಘದಲ್ಲಿ
[ಬದಲಾಯಿಸಿ]ಮೈಸೂರು ಸಂಗೀತ ವಿದ್ಯಾಲಯ ಬೆಂಗಳೂರಿಗೆ
[ಬದಲಾಯಿಸಿ]ಈಗ ಮಹಾರಾಷ್ಟ್ರದ ಡೊಂಬಿವಲಿ ಉಪನಗರದಲ್ಲಿಸ್ಥಾಪಿಸಲಾಗಿದ್ದ ವಿದ್ಯಾಲಯವನ್ನು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ. ಬೆಂಗಳೂರಿನ ಯುವಪ್ರತಿಭೆಗಳಿಗೆ ನಾಗಭೂಷಣ ದಂಪತಿಗಳ ಆಶೀರ್ವಾದ ದೊರೆಯುತ್ತಿದೆ.
ನಿಧನ
[ಬದಲಾಯಿಸಿ]ಶ್ರೀ.ನಾಗಭೂಷಣರು ಸ್ವಲ್ಪದಿನಗಳಿಂದ ಅಸ್ವಸ್ಥರಾಗಿದ್ದರು. ಅವರು ಬೆಂಗಳೂರಿನಲ್ಲಿ ೧೦, ಆಗಸ್ಟ್, ೨೦೧೭ ರಂದು ನಿಧನರಾದರು.[೨]