ಬಿ. ಆರ್. ಶೆಟ್ಟಿ

ವಿಕಿಪೀಡಿಯ ಇಂದ
Jump to navigation Jump to search
ಡಾ.ಬಾವಗುತ್ತು, ರಘುರಾಮ ಶೆಟ್ಟಿ
Bavaguthu Raghuram Shetty.JPG
ಡಾ. ಬಿ. ಆರ್. ಶೆಟ್ಟಿ
Born1942
NationalityIndian
OccupationFounder and C.E.O of NMC Health, M.D. and C.E.O of UAE Exchange, Founder, C.E.O and M.D. of Neopharma
Net worthdecreaseUS$ 540 million (2012)[೧]
Spouse(s)ಚಂದ್ರ ಕುಮಾರಿ ಶೆಟ್ಟಿ
ChildrenNeema Shetty,
Seema Shetty,
Reema Shetty,
Binay Shetty[೨]
AwardsPravasi Bharatiya Samman (2007)
Padmashri (2009)
ಟ್ರಾವನ್ಕೂರ್ ಮಹಾರಾಜ್,ಮತ್ತೆ ತಿರುನಾಲ್ ಮಾರ್ತಂಡ ವರ್ಮ ಯವರ ಜೊತೆಯಲ್ಲಿ

ಅಬುಧಾಬಿ ಗೆಳೆಯರಿಗೆ, ಮೀಡಿಯಾ ಮತ್ತು ನಾಗರಿಕರಿಗೆ 'ಡಾ. ಬಿ.ಆರ್.ಶೆಟ್ಟಿ', ಡಾ. ಬಾವಗುತ್ತು, ರಘುರಾಮ ಶೆಟ್ಟಿ,[೩] ಸಂಯುಕ್ತ ಅರಬ್ ಎಮಿರೇಟ್ಸ್ ರಾಷ್ಟ್ರದ, ಅಬುಧಾಬಿ ನಗರ'ದಲ್ಲಿ ನೆಲೆಸಿರುವ ಉಡುಪಿ ಮೂಲದ ತುಳುವ.ದುಬೈನಲ್ಲಿರುವ ವಿಶ್ವದ ಅತಿ ಎತ್ತರದ 'ಬುರ್ಜ್ ಖಲೀಫಾ' ಕಟ್ಟಡದ ೧೦೦ ನೆಯ ಮಹಡಿಯ ಮಾಲೀಕರಾಗಿದ್ದಾರೆ. ಇದಲ್ಲದೆ ಅದೇ ಕಟ್ಟಡದ ೧೪೧ ನೆಯ ಮಹಡಿಯಲ್ಲಿ ತಮ್ಮ ಸ್ವಂತ ಕಚೇರಿಯನ್ನೂ ತೆರೆದಿದ್ದಾರೆ. ಡಾ.ಶೆಟ್ಟಿಯವರು, ಉಡುಪಿ ಜಿಲ್ಲೆಯ ಕಾಪು ಗ್ರಾಮದ ಸಮೀಪದ 'ಬಾವ ಗುತ್ತಿ' ಯ ನಿವಾಸಿ. ಸನ್. ೧೯೭೨ ರಲ್ಲಿ 'ಕ್ಲಿನಿಕಲ್ ಫಾರ್ಮಸಿ' ಯಲ್ಲಿ ಪದವಿ ಗಳಿಸಿ, ಉದ್ಯೋಗವನ್ನು ಅರಸುತ್ತಾ 'ಅಬುಧಾಬಿ ನಗರ'ಕ್ಕೆ ತೆರಳಿದರು. ಅಲ್ಲಿ 'ನ್ಯೂ ಮೆಡಿಕಲ್ ಸೆಂಟರ್' ಎಂಬ ಆಸ್ಪತ್ರೆಯನ್ನು ಆರಂಭಿಸಿದರು. ಅದರಲ್ಲೇ ಅತಿ ಶ್ರದ್ಧೆ ಹಾಗೂ ಮನಸ್ಸಿಟ್ಟು ಕೆಲಸಮಾಡಿ, ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರು. ಈಗ ಡಾ ಶೆಟ್ಟಿಯವರು, ದುಬೈ ಸರಕಾರದ ವಿತ್ತ ಇಲಾಖೆಯ ಸಲಹಾ ಮಂಡಲಿಯ ಸದಸ್ಯರೂ ಆಗಿದ್ದಾರೆ.

ಜನನ[ಬದಲಾಯಿಸಿ]

ಬಾವಗುತ್ತು ರಘುರಾಮ ಶೆಟ್ಟಿಯವರು, ಉಡುಪಿಜಿಲ್ಲೆಯ 'ಕಾಪು' ಎಂಬ ಗ್ರಾಮದಲ್ಲಿ ಜನಿಸಿದರು.

ಪರಿವಾರ[ಬದಲಾಯಿಸಿ]

ಡಾ.ಶೆಟ್ಟಿಯವರು,[೪] ಪತ್ನಿ, ಚಂದ್ರ ಕುಮಾರಿ, ಒಬ್ಬ ಮಗ, ಮತ್ತು ಮೂವರು ಪುತ್ರಿಯರನ್ನೊಳಗೊಂಡ ಸುಖೀ ಪರಿವಾರವನ್ನು ಹೊಂದಿದ್ದಾರೆ.

ಪ್ರಶಸ್ತಿ, ಗೌರವಗಳು[ಬದಲಾಯಿಸಿ]

 • ಸನ್. ೨೦೦೯ ರಲ್ಲಿ ಪದ್ಮಶ್ರೀ ಪ್ರಶಸ್ತಿ
 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
 • ಮಂಗಳೂರು ವಿಶ್ವ ವಿದ್ಯಾಲಯದ ಡಾಕ್ಟರೇಟ್ ಪ್ರಶಸ್ತಿ
 • ಇನ್ನೂ ಹಲವಾರು ಪ್ರಶಸ್ತಿಗಳ ಒಡೆಯರಾಗಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿದ ಭಾರತೀಯ ವೈದ್ಯ[ಬದಲಾಯಿಸಿ]

ಯು.ಎ.ಇ.ರಾಷ್ಟ್ರದಲ್ಲಿ 'ಅತ್ಯಂತ ಪ್ರಭಾವೀ ೧೦೦ ಮಂದಿ ಭಾರತೀಯ ವಿವಿಧ ಉದ್ಯಮಿಗಳ ಪಟ್ಟಿ'ಯನ್ನು 'ಫೋರ್ಬ್ಸ್' ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸ್ಥಾನಗಳಿಸಿದ ಭಾರತೀಯ ಸಂಸ್ಥೆಗಳ ಹೆಸರುಗಳು ಹೀಗಿವೆ :

 • ಲುಲು ಸಮೂಹದ ಎಮ್.ಎ. ಯೂಸುಫ್
 • ಲ್ಯಾಂಡ್ ಮಾರ್ಕ್ ಸಮೂಹದ ಅಧ್ಯಕ್ಷ , ಮಿಕಿ ಜಗತ್ಯಾನಿ
 • ಏನ್. ಎಮ್. ಸಿ. ಉದ್ಯಮಗಳ ಒಡೆಯ, ಡಾ. ಬಿ. ಆರ್. ಶೆಟ್ಟಿ
 • ಪಿ.ಎನ್.ಸಿ.ಮೆನನ್
 • ಸನ್ನಿ ವಾರ್ಕೆ
 • ಆಝಾದ್ ಮೂಪನ್
 • ಜಾಯ್ ಆಲುಕ್ಕಾಸ್
 • ಸಯ್ಯಿದ್ ಸಲಾಹುದ್ದೀನ್
 • ಜಾಕೀ ಪಂಜಾಬಿ

ಫೋರ್ಬ್ಸ್ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ (೨೦೧೩)[ಬದಲಾಯಿಸಿ]

ಇತ್ತೀಚೆಗಷ್ಟೇ ಪ್ರಕಟಿಸಿದ ಫೋರ್ಬ್ಸ್ ಕೂಟ್ಯಾಧಿಪತಿಗಳ ಪಟ್ಟಿಯಲ್ಲೂ ೧.೫ ಶತಕೋಟಿ ಡಾಲರ್ ಆಸ್ತಿ ಹೊಂದಿರುವ ಯೂಸುಫ್ ಆಲಿ, ಸ್ಥಾನ ಗಳಿಸಿಕೊಂಡಿದ್ದಾರೆ. ಡಾ.ಶೆಟ್ಟಿಯವರು ಒಂದು ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ. [೫] 'ಟ್ರಾವೆಲ್ ಎಕ್ಸ್' [೬]ಎಂಬ ಕಂಪೆನಿಯನ್ನು ಖರೀದಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

 1. "India Rich List 2012 Newcomers". Forbes.com. Retrieved 2012-10-31.
 2. claude, fernandes. "B R Shetty mangalorean star 2005 Mangalorean.com".
 3. Biography II Time line, Dr. B . R. Shetty.'Dr. B . R. Shetty|250px
 4. ಡಾ.ಬಿ.ಆರ್.ಶೆಟ್ಟಿಯವರ ವೆಬ್ ಸೈಟ್,'
 5. 'ವೆಬ್ ದುನಿಯ' (ಕನ್ನಡ)'ಮಿ. ಬಿ.ಆರ್.ಶೆಟ್ಟಿಯಿಂದ ಆಸ್ಪತ್ರೆ ನಿರ್ಮಾಣ'
 6. praja 05/25/2014 ಬಿ.ಆರ್‌.ಶೆಟ್ಟಿ ತೆಕ್ಕೆಗೆ ‘ಟ್ರಾವೆಲ್‌ಎಕ್ಸ್‌’

ಬಾಹ್ಯ ಸಂಪರ್ಕಗಳು[ಬದಲಾಯಿಸಿ]