ಬಿ.ವಿ.ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ
| ಬಿ.ವಿ.ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ | |
|---|---|
| ಬಿವಿಬಿಸಿಈಟಿ | |
| ಸ್ಥಾಪನೆ | ೧೯೪೭ |
| ಪ್ರಾಚಾರ್ಯರು | ಡಾ. ಅಶೋಕ ಶೆಟ್ಟರ |
| ಸ್ಥಳ | ವಿದ್ಯಾನಗರ, ಹುಬ್ಬಳ್ಳಿ |
| ವಿದ್ಯಾರ್ಥಿಗಳ ಸಂಖ್ಯೆ | ೨೦೦೦ |
| ಪದವಿ ಶಿಕ್ಷಣ | ೭೪೦ |
| ಸ್ನಾತಕೋತ್ತರ ಶಿಕ್ಷಣ | ೧೨೦ |
| ಅಂತರಜಾಲ ತಾಣ | http://www.bvb.edu/ |
ಬಿ.ವಿ.ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯವು ಹುಬ್ಬಳ್ಳಿ ನಗರದ ವಿದ್ಯಾನಗರದಲ್ಲಿದೆ. ಇದು ೧೯೪೭ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ೨೦೦೭ದಲ್ಲಿ ಸ್ವಾಯತ್ತತೆ ಹೊಂದಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ.ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ. ಪ್ರಸ್ತುತ ೧೨ ಪದವಿ ಹಾಗೂ ೮ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.
ಚರಿತ್ರೆ
[ಬದಲಾಯಿಸಿ]ಬಿ.ವಿ.ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯವು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ೧೯೪೭ರಲ್ಲಿ ಪ್ರಾರಂಭವಾಯಿತು.
ವಿಭಾಗಗಳು
[ಬದಲಾಯಿಸಿ]ಪದವಿ ವಿಭಾಗಗಳು
- ವಾಹನ ಎಂಜಿನಿಯರಿಂಗ್
- ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
- ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್
- ಕೈಗಾರಿಕಾ ಮತ್ತು ನಿರ್ಮಾಣ ಎಂಜಿನಿಯರಿಂಗ್
- ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
- ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಯಾಂತ್ರಿಕ ಎಂಜಿನಿಯರಿಂಗ್
ಸ್ನಾತಕೋತ್ತರ ಪದವಿ ವಿಭಾಗಗಳು
ಸಿವಿಲ್ ಎಂಜಿನಿಯರಿಂಗ್
- ಪರಿಸರ ಎಂಜಿನಿಯರಿಂಗ್
- ಭೂತಾಂತ್ರಿಕ ಎಂಜಿನಿಯರಿಂಗ್
- ರಚನಾಶಾಸ್ತ್ರ ಎಂಜಿನಿಯರಿಂಗ್
ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ಎಮ್. ಎಸ್ಸಿ. ಎಂಜಿನಿಯರಿಂಗ್ (ಸಂಶೋಧನೆ)
- ಪಿ. ಎಚ್. ಡಿ
ಯಾಂತ್ರಿಕ ಎಂಜಿನಿಯರಿಂಗ್
- ಯಂತ್ರ ವಿನ್ಯಾಸ
- ನಿರ್ಮಾಣ ತಂತ್ರಜ್ಞಾನ
ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಡಿಜಿಟಲ್ ಸಂವಹನ
ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
- ವಿದ್ಯುತ್ ಮತ್ತು ಶಕ್ತಿ ವ್ಯವಸ್ಥೆ
ಅರೆಕಾಲಿಕ ಸ್ನಾತಕೋತ್ತರ ಪದವಿ ವಿಭಾಗಗಳು
- ಡಿಜಿಟಲ್ ವಿದುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
ಎಮ್. ಎಸ್. ಎಂಜಿನಿಯರಿಂಗ್ (ಸಂಶೋಧನೆ) ಮತ್ತು ಪಿ. ಎಚ್. ಡಿ
- ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ಕೈಗಾರಿಕಾ ಮತ್ತು ನಿರ್ಮಾಣ ಎಂಜಿನಿಯರಿಂಗ್
- ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
- ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಯಾಂತ್ರಿಕ ಎಂಜಿನಿಯರಿಂಗ್
- ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ವಿಜ್ಞಾನ (ಎಮ್. ಸಿ. ಎ.)
- ಸ್ನಾತಕೋತ್ತರ ವ್ಯವಹಾರ ಆಡಳಿತ (ಎಮ್. ಬಿ. ಎ.)
ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ, ಬೆಳಗಾವಿ
[ಬದಲಾಯಿಸಿ]ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿವು ೧೯೧೦ದಲ್ಲಿ ಸ್ಥಾಪಿಸಲ್ಪಟ್ಟಿದೆ.
ಆಡಳಿತ
[ಬದಲಾಯಿಸಿ]ಪ್ರಸ್ತುತ ಶ್ರೀ ಪ್ರಭಾಕರ ಕೋರೆರು ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿದ್ದಾರೆ.
ಆವರಣ
[ಬದಲಾಯಿಸಿ]ಮಹಾವಿದ್ಯಾಲಯವು ೧೦೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.
ಗ್ರಂಥಾಲಯ
[ಬದಲಾಯಿಸಿ]ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.
ಪ್ರವೇಶ
[ಬದಲಾಯಿಸಿ]ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ, ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.
ವಿದ್ಯಾರ್ಥಿವೇತನ
[ಬದಲಾಯಿಸಿ]- ಅರ್ಹತೆ ವಿದ್ಯಾರ್ಥಿವೇತನ
- ರಕ್ಷಣಾ ವಿದ್ಯಾರ್ಥಿವೇತನ
- ಜಿಂದಾಲ ವಿದ್ಯಾರ್ಥಿವೇತನ
- ಇನ್ಪೊಸಿಸ್ ವಿದ್ಯಾರ್ಥಿವೇತನ
- ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
- ಯೋಜನೆ ವಿದ್ಯಾರ್ಥಿವೇತನ
- ಆಯಾ ರಾಜ್ಯ ಸರ್ಕಾರದ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
- ಮೆಟ್ರಿಕ್ ವಿದ್ಯಾರ್ಥಿ ವಿದ್ಯಾರ್ಥಿವೇತನ
- ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿವೇತನ
- ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ
- ಇಂಜಿನಿಯರಿಂಗ್ ಕಾಲೇಜ್ ಸಿಬ್ಬಂದಿ ವಿದ್ಯಾರ್ಥಿವೇತನ
- ಮಾಜಿ ರಕ್ಷಣಾ ವಿದ್ಯಾರ್ಥಿವೇತನ
- ಅಂಗವಿಕಲರ ವಿದ್ಯಾರ್ಥಿವೇತನ
ವಿದ್ಯಾರ್ಥಿ ನಿಲಯಗಳು
[ಬದಲಾಯಿಸಿ]- ವಿದ್ಯಾರ್ಥಿ ನಿಲಯ
- ವಿದ್ಯಾರ್ಥಿನಿಯರ ಹಾಸ್ಟೆಲ್
ಜೀವನ ಮಾರ್ಗದರ್ಶನ ಕೇಂದ್ರ
[ಬದಲಾಯಿಸಿ]ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಮಹಾವಿದ್ಯಾಲಯದ ಅಧಿಕೃತ ಅಂತರಜಾಲ ತಾಣ Archived 2013-12-02 ವೇಬ್ಯಾಕ್ ಮೆಷಿನ್ ನಲ್ಲಿ.