ಬಿ.ಎನ್.ಸುಮಿತ್ರಾಬಾಯಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಡಾ.ಬಿ.ಎನ್.ಸುಮಿತ್ರಾಬಾಯಿ ಕನ್ನಡದ ಖ್ಯಾತ ಲೇಖಕಿಯಾಗಿ, ಸಾಹಿತಿ, ವಿಮರ್ಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಆಧುನಿಕೋತ್ತರ (ನವ್ಯೋತ್ತರ) ಕಾಲದ ಕನ್ನಡ ಸಾಹಿತ್ಯ ವಿಮರ್ಶೆ ಕ್ಷೇತ್ರದಲ್ಲಿ ಸ್ತೀವಾದಿ ವಿಮರ್ಶೆ ಹಾಗೂ ಮಹಿಳಾ ಸಾಹಿತ್ಯ ಅಧ್ಯಯನಗಳ ಹಾದಿ ನಿರ್ಮಿಸಿದ ಮೊದಲಿಗರಲ್ಲಿ ಒಬ್ಬರು.
ಜನನ:-15 ಅಕ್ಟೋಬರ್ 1950 ರಂದು ಮೈಸೂರಿನಲ್ಲಿ ಜನಿಸಿದರು. ಬಿ.ನರಸಿಂಹ ಮೂರ್ತಿ ಆಚಾರ್ ಹಾಗೂ ಬಿಎಸ್ ರುಕ್ಮಿಣಿ ಬಾಯಿ ದಂಪತಿಯ 3ನೇ ಮಗಳಾಗಿ ಜನನ.
ಬಿ ಎಸ್ ಸಿ ಪದವಿ ಪಡೆದು ಇವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದೂರ ಶಿಕ್ಷಣದ ಮೂಲಕ ಎಂ.ಎ(ಇಂಗ್ಲೀಷ್) ಪದವಿಯನ್ನೂ ಪಡೆದುಕೊಂಡಿದ್ದಾರೆ. ಅಲ್ಲದೇ, ಸಂಸ್ಕೃತ ವಿಷಯದಲ್ಲಿಯೇ ಪಿ ಎಚ್ ಡಿ ಪದವಿ ಪಡೆದಿದ್ದಾರೆ. ಈ ಸಮುದಲ್ಲಿಯೇ ಇವರು ಕನ್ನಡ ಸಾಹಿತ್ಯಿಕ ವಲಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಹಾಸನದ ಎವಿ ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಸಂಸ್ಕೃತಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬಿ.ಎನ್.ಸುಮಿತ್ರಾಬಾಯಿ ಇವರ ಕೆಲವು ಕೃತಿಗಳು:
- ಸಾರ್ವತ್ರಿಕದೆಡೆಗೆ (ಮೊದಲ ಕೃತಿ)
- ಸರಹದ್ದುಗಳ ಆಚೆ ಈಚೆ
- ವಿಚಯ
- ಮರೆಯಲಾಗದ ಕಥೆಗಳು(ತ್ರಿಚಿಲುಮೆ
- ಅಕ್ಕಮಹಾದೇವಿ
- ಶ್ರೀರಂಗ
- ಕಲ್ಯಾಣ ಸರಸ್ವತಿ
- ಸ್ತ್ರೀ ದರ್ಪಣದಲ್ಲಿ ನಾಟ್ಯಶಾಸ್ತ್ರ
- ಬೊಗಸೆಯಲ್ಲಿ ಹೊಳೆನೀರು
- ಸ್ತ್ರೀವಾದ
- ಕಾತ್ಯಾಯಿನಿ
- ಮರೆಯಲಾಗದ ಕತೆಗಳು
- ನಂಜನಗೂಡು ತಿರುಮಲಾಂಬ
- ಸುವರ್ಣ ಸಾಹಿತ್ಯ ವಿಮರ್ಶೆ
- ಚಿಲುಮೆ
- ಪ್ರವೇಶಿಕೆ
- ಪಶ್ಚಿಮದ ವಿಮರ್ಶಾ ಪಂಥಗಳು
- ಕಥಾಸರಿತ್ಸಾಗರ
- ಮಾತೃ ಆರಾಧನಾ
- ಅಯನ
- ಕಾತ್ಯಾಯನಿ ಪ್ರವೇಶಿಕೆ
ಈ ಮೇಲಿನ ಪುಸ್ತಕಗಳಲ್ಲದೇ ಒಟ್ಟಾರೆಯಾಗಿ 27 ಪುಸ್ತಕಗಳನ್ನು ಬರೆದಿದ್ದಾರೆ.
ಇವರಿಗೆ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಉಲ್ಲೇಖ : ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕರ್ನಾಟಕ ಸರ್ಕಾರದ ದೂರದರ್ಶನ ವಾಹಿನಿಯ ಸಾಕ್ಷ್ಯಚಿತ್ರ.