ಬಿ.ಎಂ.ಪಾಟೀಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿ.ಎಂ.ಪಾಟೀಲ(ಬಸನಗೌಡ ಮಲ್ಲನಗೌಡ ಪಾಟೀಲ)
ಜನನ1ನೇ ನವೆಂಬರ್, 1931
ತೊರವಿ, ವಿಜಯಪುರ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಬಿ.ಎಂ.ಪಾಟೀಲ(ಬಸನಗೌಡ ಮಲ್ಲನಗೌಡ ಪಾಟೀಲ)ರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿ.ಎಲ್.ಡಿ.ಈ.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.

ಜನನ[ಬದಲಾಯಿಸಿ]

ಬಿ.ಎಂ.ಪಾಟೀಲರು 1ನೇ ನವೆಂಬರ್, 1931ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

  • ಬೆಳಗಾವಿಯ ಪ್ರತಿಷ್ಟಿತ ಲಿಂಗರಾಜ ಮಹಾವಿದ್ಯಾಲಯದಿಂದ ಬಿ.ಎಸ್ಸಿ. ಪದವಿ ಹೊಂದಿದ್ದರು.

ರಾಜಕೀಯ[ಬದಲಾಯಿಸಿ]

  • 1962ರಲ್ಲಿ ಬಿ.ಎಂ.ಪಾಟೀಲರು ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾದರು.
  • 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು.
  • 1967 - 1971ವರೆಗೆ ಬಿ.ಎಂ.ಪಾಟೀಲರು ವಿರೇಂದ್ರ ಪಾಟೀಲ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು.
  • 1976 - 1982ವರೆಗೆ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
  • ಎಐಸಿಸಿ, ಕೆಪಿಸಿಸಿ ಸಮಿತಿಯ ಸದಸ್ಯರಾಗಿದ್ದರು.
  • ವಿಜಯಪುರದ ಪತಿಷ್ಟಿತ ಶಿಕ್ಷಣ ಸಂಸ್ಥೆಯಾದ ಬಿ.ಎಲ್.ಡಿ.ಈ. ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.

ಸಚಿವರು[ಬದಲಾಯಿಸಿ]

  • 1967 - 1971ವರೆಗೆ ಬಿ.ಎಂ.ಪಾಟೀಲರು ವಿರೇಂದ್ರ ಪಾಟೀಲ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು.

ನಿಧನ[ಬದಲಾಯಿಸಿ]

ಬಿ.ಎಂ.ಪಾಟೀಲರು 27ನೇ ಜುಲೈ 1990ರಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]