ಬಿ.ಆರ್.ವಿ. ಇನ್ಸ್ಟಿ ಟ್ಯೂಟ್ ಹಾಗೂ ಥಿಯೇಟರ್, ಬೆಂಗಳೂರು
'ಬಿ.ಆರ್.ವಿ.ಇನ್ಸ್ಟಿ ಟ್ಯೂಟ್ ಹಾಗೂ ಥಿಯೇಟರ್', ಬೆಂಗಳೂರಿನ ಕಂಟೋನ್ಮೆಂಟ್ ನಲ್ಲಿರುವ ಕಬ್ಬನ್ ರಸ್ತೆಯಲ್ಲಿ ಇವೆ. ಥಿಯೇಟರ್ ಪೆರೇಡ್ ಮೈದಾನದ ಉತ್ತರ ಭಾಗದಲ್ಲಿವೆ. ಮೊದಲು, ಇದು ಬೆಂಗಳೂರಿನ ಬೆಟಾಲಿಯನ್ (Auxiliary Force, India) ಪ್ರಧಾನ ಕಚೇರಿಯಾಗಿತ್ತು.[೧] ಮೊದಲು, ಕಟ್ಟಿದಾಗ ಪೂರ್ತಿ ಕಟ್ಟಡವನ್ನು ಅದೇ ಕಾರಣಕ್ಕಾಗಿ ಬಳಸಲಾಯಿತು. ೧೯೦೫ ರಲ್ಲಿ ಭವನವನ್ನು ಕೆಲವು ಕಾರಣಗಳಿಂದ ಉರುಳಿಸಲಾಯಿತು. ಈಗಿರುವ ಕಟ್ಟಡವನ್ನು ಕಟ್ಟಿದ್ದು, ೧೯೧೨ ರಲ್ಲಿ, ಅದನ್ನು ಸಾರ್ವಜನಿಕರ ಉಪಯೋಗಕ್ಕಾಗಿ, ಬಿಡುಗಡೆ ಮಾಡಲಾಯಿತು. ಟ್ಯೂಡಾರ್ ವಿನ್ಯಾಸ ನಿರ್ಮಾಣದ ಶೈಲಿಯಲ್ಲಿ ಕಟ್ಟಿದ ಬಿ.ಆರ್.ವಿ. ಇನ್ಸ್ಟಿ ಟ್ಯೂಟ್, ಬೆಂಗಳೂರಿನ ಅತ್ಯಂತ ಸೊಗಸಾದ ಕಟ್ಟಡವೆಂದು ಪ್ರಸಿದ್ಧಿಪಡೆದಿತ್ತು.[೨]
ಸೇನೆಯ ರೆಜಿಮೆಂಟ್ ನ ಕಚೇರಿ ಈ ಭವನದಲ್ಲಿತ್ತು
[ಬದಲಾಯಿಸಿ]ಸೇನೆಯ ರೆಜಿಮೆಂಟ್ ಕಚೇರಿ ಗ್ರೌಂಡ್ ಭಾಗದಲ್ಲಿತ್ತು. ಅಲ್ಲೇ ಬಿಲಿಯರ್ಡ್ ಆಟದ ಕೊಠಡಿ ಇತ್ತು. ರೀಡಿಂಗ್ ರೂಮ್, ಲೇಡೀಸ್ ರೂಂ ಹಾಗೂ ಒಂದು ಬಾರ್ ನಿರ್ಮಿಸಲಾಗಿತ್ತು. ಸೇನೆಯ ಎಲ್ಲಾ ವರ್ಗದ ಅಧಿಕಾರಿಗಣದ ಸದಸ್ಯರಿಗೆ, ಸ್ವಲ್ಪ ಹಣದಲ್ಲಿ ಸದಸ್ಯತ್ವದ ಸೇವೆ ದೊರೆಯುತ್ತಿತ್ತು.[೩]
ವಿಶಾಲ ಶಸ್ತ್ರಗಳ ವಸ್ತುಸಂಗ್ರಹದ, ಶಸ್ತ್ರಾಗಾರವಿತ್ತು
[ಬದಲಾಯಿಸಿ]ಮೇಲಿನ ಅಂತಸ್ತಿನಲ್ಲಿ ರೆಜಿಮೆಂಟ್ ಕಚೇರಿಗಳು, ಸ್ಟೋರ್ ಗಳು, ಬ್ಯಾಂಡ್ ರೂಂ, ಮತ್ತು ಲೆಕ್ಚರ್ ರೂಂ.ಗಳನ್ನು ನಿರ್ಮಿಸಲಗಿತ್ತು. ಭವನದ ಪೂರ್ವದಿಕ್ಕಿನ ಭಾಗದಲ್ಲಿ, ಶಸ್ತ್ರಾಗಾರವಿತ್ತು. ಅದರಲ್ಲಿ ತಯಾರುಮಾಡಿದ ಎಲ್ಲ ವಿಧದ ಶಸ್ತ್ರಗಳನ್ನು ಇಟ್ಟಿದ್ದರು. ಕಟ್ಟಡ ಹೊರಭಾಗ್ದ ಕಲ್ಲಿನ ಗೋಡೆಯಮೇಲೆ ಈಗಲೂ ಬಿ.ಆರ್.ವಿ.ಸ್ಟೋರ್ಸ್ ಮತ್ತು ಬಿ.ಆರ್.ವಿ.ಆರ್ಮರಿ ಎಂಬಹೆಸರಿನ ಕೆತ್ತಿರುವ ಅಕ್ಷರಗಳನ್ನು ಕಾಣಬಹುದು. ಥಿಯೇಟರ್ ನ ಸಭಾಂಗಣದ ವಿಸ್ತೀರ್ಣ, ೧೨೦ ಅಡಿ ಉದ್ದ, ಮತ್ತು ೬೦ ಅಡಿ ಅಗಲ, ಮತ್ತು ಸುಮಾರು ೮೦೦ ಜನ ಕುಳಿತುಕೊಳ್ಳುಅ ಆಸನ ವ್ಯವಸ್ಥೆಇದೆ. ರಂಗಮಂದಿರದ ಸ್ಟೇಜ್ [ಸಿನಿಮಾಕ್ಕೆ ಅಳವಡಿಸುವ ಮೊದಲು] ಪೂರ್ವ ದಿಕ್ಕಿನ ಕೊನೆಯಲ್ಲಿತ್ತು. ಅದರ ಹಿಂದೆ, ದ್ರೆಸಿಂಗ್ ರೂಂ ಗಳು, ಗ್ರೀನ್ ರೂಂ ಗಳು, ಮತ್ತು ಶೌಚಾಲಯಗಳಿದ್ದವು. ಸ್ಟೇಜಿನ ಮುಂದಿನ ಭಾಗದಲ್ಲಿ ಸ್ವಲ್ಪ ನೆಲವನ್ನು ಕೆಳಮಟ್ಟದಲ್ಲಿ ನಿರ್ಮಿಸಿ, ಅಲ್ಲಿ ಆರ್ಕೆಸ್ಟ್ರಾ ದವರಿಗೆ ಕುಳಿತುಕೊಂಡು ವಾದ್ಯಗಳನ್ನು ನುಡಿಸಲು ಅನುವುಮಾಡಿಕೊಟ್ಟಿದ್ದರು. ಸ್ಟೇಜಿನಿಂದ ಅಲ್ಲಿಗೆ ಹೋಗಲು, ಮೆಟ್ಟಿಲಿನ ಮಾರ್ಗವಿತ್ತು.
ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುವ ವ್ಯವಸ್ಥೆ
[ಬದಲಾಯಿಸಿ]ಹಾಲ್ ನ ಹಿಂಭಾಗ ಅಂದರೆ, ಪಶ್ಚಿಮ ದಿಕ್ಕಿನ ಕಡೆ, ನಿರ್ಮಿಸಿದ್ದ ಗ್ಯಾಲರಿಯಲ್ಲಿ, ೩೦೦ ಕ್ಕೂ ಹೆಚ್ಚು ಜನರಿಗೆ, ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕಟ್ಟಡಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಹೆಚ್ಚಾಗಿ ಈ ಸಭಾಂಗಣವನ್ನು ಸಂಗೀತ ಕಚೇರಿಗಳಿಗೆ, ಭಾಷಣಗಳಿಗೆ, ಡಾನ್ಸ್ ಕಾರ್ಯಕ್ರಮಗಳಿಗೆ, ಬಾಡಿಗೆಗೆ ಕೊಡುತ್ತಿದ್ದರು.
ಹಾಲಿನಲ್ಲಿ ಸುಂದರವಾದ ಶ್ಯಾಂಡ್ಲಿಯರ್ ಗಳಿದ್ದು ಶೋಭೆಕೊಡುತ್ತಿದ್ದವು
[ಬದಲಾಯಿಸಿ](the floor of the Theatre was one level, and had beautiful chandeliers till a few years back) 'ಥಿಯೆಟ್ರಿಕಲ್ ಕಂಪೆನಿ'ಗಳಿಗೆ, ಮತ್ತು ಬಯಾಸ್ಕೋಪ್ ವಸ್ತುಸಂಗ್ರಹಾಲಯಗಳಿಗೆ ಬಾಡಿಗೆಗೆ ಲಭ್ಯಮಾಡಿಕೊಡುತ್ತಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ City’s cinemas have many firsts, Hindu daily
- ↑ The heydays of Bangalore's movie halls citizen matters, Palahalli Vishwanath , 19 Sep 2009
- ↑ churu muri
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- 'ಟ್ರಾವೆಲ್ ಅಂಡ್ ರೈಡ್', ಬೆಂಗಳೂರು Archived 2014-10-03 ವೇಬ್ಯಾಕ್ ಮೆಷಿನ್ ನಲ್ಲಿ.
- 'ಬೆಂಗಳೂರು ನಗರದ ಒಂದು ಸುತ್ತು'
- '೧೯೨೦ ರಲ್ಲಿ ಬೆಂಗಳೂರಿನಲ್ಲಿ ಒಂದು ಸುತ್ತು' Archived 2015-01-05 ವೇಬ್ಯಾಕ್ ಮೆಷಿನ್ ನಲ್ಲಿ.