ವಿಷಯಕ್ಕೆ ಹೋಗು

ಬಿದ್ಕಲ್ಕಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೀರ್ಷಿಕೆ

[ಬದಲಾಯಿಸಿ]

ಕರ್ನಾಟಕಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಚಿಕ್ಕ ಹಳ್ಳಿ. ತಾಲೂಕಿನಿಂದ ೧೮ ಕಿ.ಮೀ. ದೂರದಲ್ಲಿರುವ ಈ ಹಳ್ಳಿಯ ಹೆಸರು ಬಿದ್ಕಲ್ಕಟ್ಟೆ. ಈ ಹೆಸರು ಬರಲು ಕಾರಣ ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಶಿಲೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ಈ ಪ್ರದೇಶದಲ್ಲಿ ಒಂದು ಕಲ್ಲು ಉರುಳಿ ಬಿದ್ದು ಅದೇ ಕಲ್ಲು ಮುಂದೆ ಕಟ್ಟೆಯಾಗಿ ಮಾರ್ಪಟ್ಟಿತೆಂದು ಪ್ರತೀತಿ. ಹಾಗಾಗಿ ಬಿದ್ದ ಕಲ್ಲು ಕಟ್ಟೆಯಾಗಿ ಮಾರ್ಪಟ್ಟಿತು ಎಂದು ಇಲ್ಲಿನ ಜನ ನಂಬಿದ್ದಾರೆ.