ವಿಷಯಕ್ಕೆ ಹೋಗು

ಬಿದಿರಿನ ಅರಳುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೂಬಿಟ್ಟಿರುವ ಬಿದಿರಿನ ಚಿತ್ರ

ಬಿದಿರು ಅರಳುವುದು ಒಂದು ನೈಸರ್ಗಿಕ ವಿದ್ಯಮಾನವಾಗಿದ್ದು ಇದರಲ್ಲಿ ಒಂದು ಸ್ಥಳದಲ್ಲಿರುವ ಬಿದಿರುಗಳು ಅರಳಿ ಅವುಗಳಲ್ಲಿ ಬಿದಿರಿನ ಬೀಜಗಳು ತೂಗಾಡುತ್ತವೆ. ಇದು ಸಾಮಾನ್ಯವಾಗಿ ಚೀನಾ, ಮ್ಯಾನ್ಮಾರ್ ಮತ್ತು ಭಾರತದಲ್ಲಿ ಕಂಡುಬರುತ್ತದೆ.

ಪ್ರಕ್ರಿಯೆ[ಬದಲಾಯಿಸಿ]

ಬಿದಿರುಗಳು ಸಾಮಾನ್ಯವಾಗಿ ಸುಮಾರು ೪೦ ರಿಂದ ೮೦ ವರ್ಷಗಳವರೆಗಿನ ಜೀವನಚಕ್ರವನ್ನು ಹೊಂದಿರುತ್ತವೆ. ಇದು ಪ್ರಜಾತಿಗಳ ನಡುವೆ ಬದಲಾಗುತ್ತದೆ. ಸಾಮಾನ್ಯವಾಗಿ, ಹೊಸ ಬಿದಿರುಗಳು ಬೇರಿನ ಭಾಗದಲ್ಲಿನ ಚಿಗುರುಗಳಿಂದ ಬೆಳೆಯುತ್ತವೆ. ಅಪರೂಪದ ಅಂತರಗಳಲ್ಲಿ ಬಹುತೇಕ ಪ್ರಜಾತಿಗಳು ಅರಳಲು ಆರಂಭಿಸುತ್ತವೆ. ಅರಳುವಿಕೆಯ ನಂತರ, ಹೂವುಗಳು ಹಣ್ಣನ್ನು ಉತ್ಪಾದಿಸುತ್ತವೆ (ಇದನ್ನು ಭಾರತ ಮತ್ತು ಚೀನಾದ ಭಾಗಗಳಲ್ಲಿ ಬಿದಿರಕ್ಕಿ - ಬಂಬೂ ರೈಸ್ ಎಂದು ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಾಗಿದ್ದು ಅನೇಕ ಲಾಭಗಳನ್ನು ಹೊಂದಿದೆ). ಇದರ ನಂತರ, ಬಿದಿರಿನ ಕಾಡು ಸಾಯುತ್ತದೆ. ಸಾಮಾನ್ಯವಾಗಿ ಬಿದಿರಿನ ಕಾಡು ಒಂದೇ ಬಿದಿರಿನಿಂದ ಬೆಳೆಯುವುದರಿಂದ, ದೊಡ್ಡ ಪ್ರದೇಶದಲ್ಲಿ ಬಿದಿರುಗಳು ಸಾಯುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

???