ವಿಷಯಕ್ಕೆ ಹೋಗು

ಬಾಳ್ ಠಾಕ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಜನವರಿ, ೨೩, ೧೯೨೭-ನವೆಂಬರ್, ೧೭, ೨೦೧೨)

'ಬಾಳ್ ಠಾಕ್ರೆ-ಮಹಾರಾಷ್ಟ್ರದ ಮಣ್ಣಿನಮಕ್ಕಳಿಗೆ ನ್ಯಾಯ ದೊರಕಿಸಿದ, ಶಿವಸೇನೆಯ ವಿಶಿಷ್ಠ ವ್ಯಕ್ತಿ'

'ಬಾಳ್ ಠಾಕ್ರೆ.' ಅಪ್ಪಟ ಹಿಂದುತ್ವವಾದಿ, ಅವರ ಪ್ರಮುಖ ಅಜೆಂಡ, ಹಿಂದೂ ತತ್ತ್ವ ಮೌಲ್ಯಗಳು. ಹಿಂದೂಗಳಿಗೆ ಅನ್ಯಾಯವಾದಾಗ ಅದರ ವಿರುದ್ಧ ಪ್ರಪ್ರಥಮವಾಗಿ ದನಿಯೆತ್ತಿ ಹೋರಾಡುವವರಲ್ಲಿ ಅವರು ಮೊದಲಿಗರು. ಹಿಂದೂಗಳನ್ನು ಗುರಿಯಾಗಿರಿಸಿ, ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದಕ ದಾಳಿ ನಡೆಸಿದಾಗ ಠಾಕ್ರೆಯವರು ಸಿಡಿಮಿಡಿಗೊಳ್ಳುತ್ತಿದ್ದರು. ಇದರ ವಿರುದ್ಧ ತಕ್ಷಣ ಹೋರಾಡಲು ಭಾರತ ಸರ್ಕಾರವನ್ನು ಆಗ್ರಹಿಸಿದ ಸನ್ನಿವೇಶಗಳೂ ಹಲವಾರು ಇವೆ.

ಶಿವಸೇನೆ

[ಬದಲಾಯಿಸಿ]

'ಶಿವಸೇನೆ,' ಛತ್ರಪತಿ ಶಿವಾಜಿಮಹಾರಾಜ್ ಹೆಸರಿನಲ್ಲಿ ಹುಟ್ಟಿಕೊಂಡ ಮಹಾರಾಷ್ಟ್ರದ ಪ್ರಭಾವಿ ಸಂಘಟನೆ. ಮಹಾರಾಷ್ಟ್ರೀಯನ್ನರ ಬೆಂಬಲದೊಂದಿಗೆ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆದ ಶಿವಸೇನಾ ಸಂಸ್ಥೆಗೆ, ಬಾಳಾ ಸಾಹೇಬ್ ಠಾಕ್ರೆಯವರು ಪರಮೋಚ್ಚ ನಾಯಕರು. ಹೀಗೆ ಹುಟ್ಟು ಹಾಕಿದ ಶಿವಸೇನೆಯನ್ನು ಅವರು ಶಿವಸೈನಿಕರ ಪ್ರಬಲ ಶಕ್ತಿಯಾಗಿ ಬೆಳೆಸಿ, ಮುಂದೆತರುವಲ್ಲಿ ತಮ್ಮ ಪರಿಶ್ರಮವನ್ನೆಲ್ಲಾ ಧಾರೆಯೆರೆದರು. ಹೀಗೆ ಠಾಕರೆಯವರು ಒಮ್ಮೆ ಗುಡುಗಿದರೆ, ಅವರ ಮಾತಿಗೆ ಎದುರುತ್ತರ ಕೊಡುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ.

ವ್ಯಂಗ್ಯ ಚಿತ್ರಕಾರ

[ಬದಲಾಯಿಸಿ]

ಸಾಧಾರಣ ಎತ್ತರ. ಕೋಲುಮುಖ, ಅಗಲ ಹಣೆ,ನೀಳ ನಾಸಿಕ, ತೆಳ್ಳಗಿನ ದೇಹ, ಮೊದಲನೋಟಕ್ಕೆ ಆಕರ್ಶಿಸುವಂತಹ ವ್ಯಕ್ತಿತ್ವವಲ್ಲ. ಠಾಕ್ರೆಯವರು ಬರುತ್ತಾರೆ, ಮಾತಾಡುತ್ತಾರೆ ಎಂದರೆ ಶಿವಾಜಿಪಾರ್ಕ್ ಕಿಕ್ಕಿರಿದು ತುಂಬುತ್ತಿತ್ತು. ಆದೇಶನೀಡಿದರೆ ಮುಂಬಯಿ ಸ್ತಭ್ದವಾಗುತ್ತಿತ್ತು.ಮುಂಬಯಿನ ಇತಿಹಾಸದಲ್ಲಿ ಇಂತಹ ಪ್ರಭಾವಶಾಲಿ ಜನನಾಯಕ ಹುಟ್ಟಿರಲಿಲ್ಲ. ವಿಚಾರಧಾರೆ ಜನರಿಗೆ ಹಿಡಿಸಲಿ ಬಿಡಲಿ ಜನಸಾಮಾನ್ಯರಿಗೆ ಹಿಡಿತತ ಬಗ್ಗೆ ಎರಡುಮಾತಿಲ್ಲ. ಕಾರ್ಟೂನ್ ಗಳನ್ನು ರಚಿಸುವುದರಿಂದ ಹಿಡಿದು ಪ್ರಬಲ ಹಾಗೂ ತೀಕ್ಷ್ಣ ಸಂದೇಶಗಳನ್ನು ನೀಡುವ ಮೂಲಕ ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಕರಿಷ್ಮ, ವರ್ಚಸ್ಸನ್ನು ಸ್ಥಾಪಿಸಿಕೊಂಡಿದ್ದರು. ಬಾಳಾ ಸಾಹೇಬ್ ಠಾಕ್ರೆಯವರು ಮರಾಠಿ ಹಾಗೂ ಹಿಂದುತ್ವದ ಹೆಮ್ಮೆಗಾಗಿ ಗುರುತಿಸಲ್ಪಟ್ಟರು. ಸನ್ ೧೯೫೦ ರಲ್ಲಿ ವ್ಯಂಗ್ಯ ಚಿತ್ರಕಾರ, ಠಾಕ್ರೆಯವರು, ಆಗಿನ ಇಂಗ್ಲೀಷ್ ದೈನಿಕ, ಫ್ರೀಪ್ರೆಸ್ ಜರ್ನಲ್ ನಲ್ಲಿ ವೃತ್ತಿಯನ್ನು ಆರಂಭಿಸಿದರು. ’ಡೇವಿಡ್ ಲೊ’ ಮತ್ತು ’ವಾಲ್ಟ್ ಡಿಸ್ನೆ’, ಅವರ ಪ್ರಿಯ ವ್ಯಂಗ್ಯ ಚಿತ್ರಕಾರರು. ಬಾಲಾಸಾಹೇಬ್ ರವರ, ಚಿತ್ರಗಳು, ಜಪಾನಿನ ಅಸಾಹಿ ಶಿಂಬುನ್, ಹಾಗೂ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಗಳಲ್ಲಿ ಪ್ರಕಟವಾಗಿತ್ತು. ಸನ್. ೧೯೬೦ ರಲ್ಲಿ ತಮ್ಮದೆ ಆದ 'ಮಾರ್ಮಿಕ್' ಎಂಬ ವ್ಯಂಗ್ಯ ಚಿತ್ರ ಮಾಸಿಕವನ್ನು ಆರಂಭಿಸಿ, ಹೊಸ ದಾರಿಯೊಂದನ್ನು ಕಂಡುಕೊಂಡರು. ವಲಸಿಗರ ಸಂಖ್ಯೆ ಅತಿ ಹೆಚ್ಚಾಗುತ್ತಿರುವ ಬೊಂಬಾಯಿನಗರದಲ್ಲಿ ಸ್ಥಾನೀಯರು, ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಪ್ರೇರೇಪಣೆ ಮಾಡಿ ಹಲವಾರು ತೀಕ್ಷ್ಣ ಅಂಶಗಳನ್ನು ತಮ್ಮ ಮಾಸಿಕ ಪತ್ರಿಕೆ, 'ಮಾರ್ಮಿಕ್' ನಲ್ಲಿ ಪ್ರಕಟಿಸುತ್ತಿದ್ದರು. ಮಾರ್ಮಿಕ್ ಪತ್ರಿಕೆಯ ಮೂಲಕ ಮಹಾರಾಷ್ಟ್ರದವರಿಗೆ ಅವರ ರಾಜ್ಯದಲ್ಲಿ ಹಕ್ಕುಗಳನ್ನು ಕೊಡಿಸಿ ಜನಜಾಗೃತಿ ಹುಟ್ಟಿಸುವುದು ಅವರ ಪ್ರಯತ್ನವಾಗಿತ್ತು. 'ವಾಚಾ ಆಣಿ ಗಪ್ಪ ಬಸ', ಎಂಬ ಕಾಲಂ, ಮಹಾರಾಷ್ಟ್ರೀಯನ್ನರ ಆತ್ಮಾಭಿಮಾನವನ್ನು ಕೆರಳಿಸುವ ಕಾರ್ಯವನ್ನು ಸಮರ್ಥವಾಗಿ ನೆರೆವೇರಿಸಿತು. ಅವರು, ಅಧಿಕಾರದಲ್ಲಿರಲಿ, ಇಲ್ಲದಿರಲಿ ಒಮ್ಮೆ ಗರ್ಜಿಸಿದರೆಂದರೆ, ಮುಂಬಯಿಮಹಾನಗರ ಸ್ತಭ್ದವಾಗುತ್ತಿತ್ತು.

ಬಾಲ್ ಠಾಕ್ರೆಯವರ ಉಡುಗೆ

[ಬದಲಾಯಿಸಿ]

ಸಾರ್ವಜನಿಕ ಸಮಾರಂಭಗಳಿಗೆ ಹೋದಾಗ ಅವರು ಬಿಳಿ ಕುರ್ತಾ, ಬಿಗಿ ಪೈಜಾಮ ಧರಿಸಿ ಶಾಲು ಹೊದೆಯುತ್ತಿದ್ದರು. ರುದ್ರಾಕ್ಷಿ ಮಾಲೆಯ ಸಹಿತ ಹಲವು ಮಣಿಸರಗಳನ್ನು ಧರಿಸುತ್ತಾರೆ. ಸಾಕಷ್ಟು ಹಾವ-ಭಾವಗಳಿಂದ ಮಾತನಾಡಿ ಜನರನ್ನು ಮಂತ್ರಮುಘ್ದರನ್ನಾಗಿ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಮನೆಯಲ್ಲಿ ಸಿಲ್ಕ್ ಕುರ್ತ, ಲುಂಗಿ, ಅವರ ಸಮವಸ್ತ್ರ,ಥರ ಥರದ ಬಣ್ಣಗಳ ಉಡುಗೆ ಧರಿಸಿದರೂ 'ಕೇಸರಿ ಬಣ್ಣ' ಅವರಿಗೆ ಬಲು ಪ್ರಿಯ. ಕಂಚಿ ಕಾಮಕೋಟಿ ಸ್ವಾಮಿಗಳು ನೀಡಿದ ಸ್ಪಟಿಕವಿರುವ ರುದ್ರಾಕ್ಷಿಮಾಲೆ ಹೆಚ್ಚು ಪ್ರಿಯ. ಕೈಯಲ್ಲಿ ಯಾವಾಗಲೂ 'ಸಿಗಾರ್' ಇರುತ್ತಿತ್ತು.

ಮರಾಠಿ ಮಾಣೂಸ್ ಗೆ ನ್ಯಾಯ ದೊರಕಬೇಕು

[ಬದಲಾಯಿಸಿ]

೧೯೬೬ ರ ಜೂನ್ ೧೯ ರಂದು ಗುಜರಾತಿ ಮತ್ತು ದಕ್ಷಿಣ ಭಾರತೀಯರಿಂದ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗಿ ಬಂದ ಮಹಾರಾಷ್ಟ್ರೀಯನ್ನಿರಿಗೆ ಉದ್ಯೋಗ ದೊರಕಿಸಿಕೊಡಲು, ಮರಾಠಿ ಮಣ್ಣಿನ ಮಕ್ಕಳ ಶ್ರೇಯೋಭಿವೃದ್ಧಿಗೆ ಹೋರಾಡಲು, ಶಿವಸೇನೆ ರಾಜಕೀಯ ರಂಗವನ್ನು ಪ್ರವೇಶಿಸಿತು. ಅದ್ಭುತ ವಾಕ್ ಶೈಲಿ, ಮತ್ತು ಯುವ ಮಹಾರಾಷ್ಟ್ರೀಯರನ್ನು ಆಕರ್ಷಿಸುವ ವರ್ಚಸ್ಸಿನಿಂದ ಅವರು ಅತಿ ಬೇಗನೆ ಬಹು ಎತ್ತರಕ್ಕೆ ಬೆಳೆದರು.

ಜನನ, ಮನೆತನ

[ಬದಲಾಯಿಸಿ]

ಲೇಖಕ, ಕೇಶವ ಸೀತಾರಾಂ ಠಾಕ್ರೆ ಯವರ ೪ ಮಕ್ಕಳಲ್ಲಿ ಎರಡನೆಯ ಮಗನಾಗಿ, ಸನ್. ೧೯೨೭ ರ ಜನವರಿ, ೨೩ ರಂದು, ಜನಿಸಿದ, ಬಾಳಾ ಸಾಹೇಬ್ ಕೇಶವ ಸೀತಾರಾಂ ಠಾಕ್ರೆ,' ಯವರು, ಬೊಂಬಾಯಿಯನ್ನು ರಾಜಧಾನಿಯನ್ನಾಗಿರಿಸಿ, ಮರಾಠಿ ಭಾಷಾ ಜನರಿಗೆ ಪ್ರತ್ಯೇಕ ರಾಜ್ಯವೊಂದರ ನಿರ್ಮಾಣಕ್ಕಾಗಿ ನಡೆದ 'ಸಂಯುಕ್ತ ಮಹಾರಾಷ್ಟ್ರ ಆಂದೋಳನ'ದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 'ಹಿಟ್ಲರ್' ನ ಸರ್ವಾಧಿಕಾರವನ್ನು ಒಪ್ಪಿಕೊಂಡಿದ್ದ ಅವರು, ಜವಳಿ ಮತ್ತು ಇನ್ನಿತರ ಕೈಗಾರಿಕಾ ಘಟಕಗಳಲ್ಲಿ 'ಮರಾಠಿ ಮಣ್ಣಿನ ಮಕ್ಕಳಿಗೆ ಉದ್ಯೋಗ' ಕೊಡಿಸಲು ಬೀದಿಗಿಳಿದು ಹೋರಾಡಿದರು. ಈ ತರಹದ ಹೋರಾಟಗಳಿಂದ ಅವರು ಬಹಳ ಜನಪ್ರಿಯತೆಯನ್ನು ಸಂಪಾದಿಸಿದರು. 'ಹಿಂದು ಹೃದಯ ಸಾಮ್ರಾಟ ಎಂಬ ಹೆಸರು ಬಂದಿತು. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದರೂ. ಅವರ ಪ್ರೀತಿ, ಮರಾಠಿ ಭಾಷೆ ಮತ್ತು ಮಹಾರಾಷ್ಟ್ರೆಕ್ಕೆ ಸೀಮಿತವಾಗಿತ್ತು. ಪಾಕೀಸ್ತಾನದ ಬಗ್ಗೆ ಕಠಿಣ ನಿಲವನ್ನು ಹೊಂದಿದ್ದರು. ಸನ್. ೨೦೦೯ ರ ಚುನಾವಣೆಯಲ್ಲಿ 'ಬಿಜೆಪಿ'ಯನ್ನು ಹಿಂದಕ್ಕೆ ಹಾಕಿ ಶಿವಸೇನೆ ಮುಂದೆ ಸಾಗಿತು. ಬಾಳ್ ಠಾಕರೆಯವರು ಮೇರು ವ್ಯಕ್ತಿತ್ವದ ಅತಿ ತೀಕ್ಷ್ಣ ಮತ್ತು ಪ್ರಭಾವೀ ಭಾಷಣಕಾರರಾಗಿದ್ದರು. ಮುಂಬಯಿನಲ್ಲಿ ದೊಡ್ಡರೀತಿಯಲ್ಲಿ ಚಾಲ್ತಿಯಲ್ಲಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಕಡಿಮೆಮಾಡಲು, ಮತ್ತು ಶಿವಸೇನೆಯನ್ನು ಒಂದು ಸಧೃಢ ಪಕ್ಷವನ್ನಾಗಿಸಲು ಅವರ ’ಅಮ್ಚಿ ಮುಂಬಯಿ,’ ಹಾಗೂ ಮರಾಠಿ ಮಾಣೂಸ್’ ವಾದ ಯಶಸ್ವಿಯಾಗಿತ್ತು.

ಪರಿವಾರ

[ಬದಲಾಯಿಸಿ]

'ಬಾಳ್ ಠಾಕ್ರೆ', 'ಮೀನ ಠಾಕರೆ', ದಂಪತಿಗಳಿಗೆ, ಮೂರು ಜನ ಗಂಡುಮಕ್ಕಳಲ್ಲಿ ಹಿರಿಯ ಮಗ, 'ಬಿಂದು ಮಾಧವ ಠಾಕ್ರೆ'. ಎರಡನೆಯವರು, 'ಜೈದೇವ್ ಠಾಕ್ರೆ', ಮತ್ತು 'ಉದ್ಧವ್ ಠಾಕ್ರೆ', ಕೊನೆಯವರು. ೧೯೯೬ ರಲ್ಲಿ, ಪತ್ನಿ, 'ಮೀನಾತಾಯಿ', ಪಾರ್ಶ್ವವಾಯುವಿನಿಂದ' ಹಾಗೂ ಹಿರಿಯ ಮಗ, 'ಬಿಂದು ಮಾಧವ', ರಸ್ತೆ ಅಪಘಾತದಲ್ಲಿ ನಿಧನರಾದರು. 'ಬಿಂದು ಮಾಧವ ಠಾಕ್ರೆ,' ೧೯೯೬ ರಲ್ಲಿ ಅಗ್ನಿಸಾಕ್ಷಿ ಯೆಂಬ ಹಿಂದಿ ಚಿತ್ರವನ್ನು ನಿರ್ಮಿಸಿದರು. ಅದು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಹೆಸರುಮಾಡಿತು. ಬಿಂದು ಮಾಧವ ಠಾಕ್ರೆಯವರ ಮಗ, ನಿಹಾರ್ ಠಾಕ್ರೆ. ಉದ್ಧವ ಠಾಕ್ರೆಯವರ ಮಗ, ಆದಿತ್ಯ ಠಾಕ್ರೆ. ಬಾಳ್ ಠಾಕ್ರೆಯವರು ತಮ್ಮ ಮೊಮ್ಮಗ ಆದಿತ್ಯ ಠಾಕ್ರೆಯವರನ್ನು ದಸರ ಹಬ್ಬದ ದಿನದಂದು ಜರುಗುವ 'ದಸರಾ ರ‍್ಯಾಲಿ,'ಯಲ್ಲಿ ಶಿವಸೇನೆಯ 'ಯುವ ವಿಂಗ್ ನ ಲೀಡರ್', ಆಗಿ ಘೋಷಿಸಿದರು.

ಬಾಳ್ ಠಾಕ್ರೆಯವರ ಸಾಮಾಜಿಕ ಜೀವನದ ಮೈಲಿಗಲ್ಲುಗಳು

[ಬದಲಾಯಿಸಿ]

ಬಾಳ್ ಠಾಕ್ರೆಯವರ ಕಾರ್ಟೂನ್ ಗಳು ಪಂಡಿತ್ ನೆಹರೂ ರವರಿಗೆ ಪ್ರಿಯವಾಗಿ ಅವರಿಂದ ಶಭಾಶ್ ಗಿರಿ ಪಡೆದರು.

ಮಹಾರಾಷ್ಟ್ರ ಸಂಘಟನೆ :

[ಬದಲಾಯಿಸಿ]

ಸಂಘರ್ಷದಲ್ಲಿ ೧೦೫ ಜನರು ಸಾವನ್ನಪ್ಪಿದರು.

ಮಾರ್ಮಿಕ್

[ಬದಲಾಯಿಸಿ]

೧೯೬೦ ರಲ್ಲಿ ಶಿವಸೇನದ ಆಶೋತ್ತರಗಳ ಪ್ರತಿಧ್ವನಿಯಾಗಿ, ವಲಸೆಗಾರರ ವಿರುದ್ಧ,, ಪ್ರಮುಖವಾಗಿ ದಕ್ಷಿಣ ಭಾರತೀಯರ ವಿರುದ್ಧ.

ಶಿವಸೇನೆ,

[ಬದಲಾಯಿಸಿ]

೧೯೬೦ ರಲ್ಲಿ ಒಂದು ರಾಜಕೀಯ ಪಕ್ಷವಾಗಿ ಶಿವಸೇನೆ ಗುರುತಿಸಲ್ಪಟ್ಟಿತು. ಗುಜರಾತಿಗಳ, ಮಾರ್ವಾಡಿಗಳ ವಿರುದ್ಧ, ಶಿವಸೇನೆಯ ಕಾರ್ಯಾಚರಣೆಗಳು.

ಹುಲಿಯ ಲಾಂಛನ

[ಬದಲಾಯಿಸಿ]

ಭವಾನಿಯ ವಾಹನವಾದ ಹುಲಿಯನ್ನು ಅವರು ತಮ್ಮ ಪಕ್ಷದ ಲಾಂಛನವನ್ನಾಗಿ ಆರಿಸಿಕೊಂಡರು. ೧೯೬೬ ರ ಅಕ್ಟೋಬರ್, ೩೦ ರಂದು, 'ಮೊದಲ ರ‍್ಯಾಲಿ' ಯನ್ನು ಆಯೋಜಿಸಲಾಯಿತು. ಆದರೆ, ಇದರ ಬಗ್ಗೆ, 'ಮಾರ್ಮಿಕ್' ಬಿಟ್ಟು ಯಾವ ಪತ್ರಿಕೆಯೂ ವರದಿಮಾಡಲಿಲ್ಲ.

ಸ್ಪೋರ್ಟ್ಸ್ ಕ್ಲಬ್ ಗಳು

[ಬದಲಾಯಿಸಿ]

ಗಣಪತಿ ಮಂಡಲ್ ಗಳು, ಶಾಖೆಗಳು, ಮಬೊಂಬಾಯಿನ ಹಾಗೂ ಮಹಾರಾಷ್ಟ್ರದ ಪ್ರತಿಗಲ್ಲಿಗಳಲ್ಲೂ ತೆರೆದವು.

೧೯೬೯ ರ ಫೆಬ್ರವರಿಯಲ್ಲಿ ಬೊಂಬಾಯಿನ ಮೊಟ್ಟಮೊದಲ ಬಂದ್

[ಬದಲಾಯಿಸಿ]

ಮಹಾರಾಷ್ಟ್ರ ಕರ್ನಾಟಕ ಗಡಿಯ ಬಗ್ಗೆ, ಆದ ಒಂದು ವಾರದ ಆಂದೋಳನದಲ್ಲಿ, ಬೊಂಬಾಯಿನಲ್ಲಿ ಹಲವಾರು ಅಂಗಡಿಮುಂಗಟ್ಟುಗಳು ಬೆಂಕಿಯ ಆಘಾತಕ್ಕೆ ಗುರಿಯಾದವು. ಆ ಸಮಯದಲ್ಲಿ ಬಾಳ್ ಠಾಕ್ರೆಯವರನ್ನು ಪುಣೆಯ ಬಳಿಯ 'ಯರವಾಡ ಜೈಲಿ'ನಲ್ಲಿ ಬಂಧಿಸಲಾಯಿತು.

ಕಮ್ಯುನಿಸ್ಟ್ ಮತ್ತು ಕಾರ್ಮಿಕ ಸಂಘಟನೆಗಳ ಜೊತೆ ಚಕಾಮಕಿ

[ಬದಲಾಯಿಸಿ]

ಸಿಪಿಐ ಪಕ್ಷದ ನಾಯಕ, ಈ ಸಂದರ್ಭದಲ್ಲಿ ಶ್ರೀ. ಕೃಷ್ಣದೇಸಾಯಿಯವರ ಕೊಲೆಯಾಯಿತು.

ತುರ್ತು ಕಾಲ

[ಬದಲಾಯಿಸಿ]

೧೯೭೫ ರಲ್ಲಿ ತುರ್ತುಕಾಲವನ್ನು ನಮ್ಮ ಭಾರತದ ಪ್ರಧಾನಿ.ಶ್ರೀಮತಿ. ಇಂದಿರಾಗಾಂಧಿಯವರು, ಘೋಷಿಸಿದರು. ಶಿವಸೇನಾ ಪ್ರಮುಖ ಶ್ರೀ.ಬಾಳಾ ಸಾಹೇಬ್ ಠಾಕ್ರೆಯವರನ್ನು ಜೈಲಿನಲ್ಲಿ ಇಡಲಾಯಿತು.

ಬಿಜೆಪಿ

[ಬದಲಾಯಿಸಿ]

೧೯೮೪ ರಲ್ಲಿ ಬಿಜೆಪಿ ಜೊತೆಗೆ ಮೈತ್ರಿ.

ಬಿ.ಎಮ್.ಸಿ.

[ಬದಲಾಯಿಸಿ]

೧೯೮೫ ರ ಚುನಾವಣೆಯಲ್ಲಿ ಪ್ರಚಂಡ ವಿಜಯ. 'ಛಗನ್ ಭುಜ್ಬಲ್' ಮೇಯರ್ ಆಗಿ ನೇಮಿಸಲ್ಪಟ್ಟರು.

ಹಿಂದುತ್ವ :

[ಬದಲಾಯಿಸಿ]

ಮರಾಠಿಜನರಿಗೆ ನ್ಯಾಯ ಒದಗಿಸುವ ಜೊತೆಗೆ ಹಿಂದುತ್ವದ ಘೋಷಣೆಯಿಂದ ಪಕ್ಷದ ವ್ಯಾಪ್ತಿ ಹೆಚ್ಚಾಯಿತು.

ಸಾಮ್ನಾ ಪತ್ರಿಕೆ

[ಬದಲಾಯಿಸಿ]

೧೯೮೯ ರಲ್ಲಿ 'ಸಾಮ್ನಾ ಪತ್ರಿಕೆ,' ಲಾಂಚ್ ಮಾಡಲಾಯಿತು. 'ದೋಪಹರ್ ಕಾ ಸಾಮ್ನ' ಎಂಬ ಪತ್ರಿಕೆ, ಉತ್ತರ ಭಾರತೀಯರನ್ನು ಒಂದುಗೂಡಿಸುವ ಪ್ರಯತ್ನ.

ಕ್ರಿಕೆಟ್

[ಬದಲಾಯಿಸಿ]

೧೯೯೧ ಕ್ರಿಕೆಟ್ 'ವಾಂಖಡೆ ಸ್ಟೇಡಿಯಮ್' ನಲ್ಲಿ ಇಂಡಿಯ ಪಾಕಿಸ್ತಾನ್ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸಿದರು.

ಮುಂಬಯಿನಲ್ಲಿ ದಂಗೆ, ಹಿಂಸಾಚಾರ

[ಬದಲಾಯಿಸಿ]

೧೯೯೨ ಡಿಸೆಂಬರ್ ೬ ರಲ್ಲಿ 'ಬಾಬ್ರಿ ಮಸೀದಿ' ಯನ್ನು ಉರುಳಿಸಲಾಯಿತು. ಅದರ ವಿರುದ್ಧ ದೇಶಾದ್ಯಂತ ಹಿಂಸೆ, ದಂಗೆಗಳು ಜರುಗಿದವು. ಆಗ ಮುಂಬಯಿನಲ್ಲೂ ಬಹಳ ಪ್ರಾಣಹಾನಿ, ಆಸ್ತಿ-ಪಾಸ್ತಿಗಳಿಗೆ ಅಪಾರ ನಷ್ಟ ಸಂಭವಿಸಿತು.

ಶ್ರೀಕೃಷ್ಣ ಸಮಿತಿ ತೀರ್ಪು

[ಬದಲಾಯಿಸಿ]

ಮುಸಲ್ಮಾನರ ವಿರುದ್ಧ ಕೈಮಾಡಲು

ರಿಮೋಟ್ ಕಂಟ್ರೋಲ್

[ಬದಲಾಯಿಸಿ]

೧೯೯೫ ರಲ್ಲಿ ರಿಮೋಟ್ ಕಂಟ್ರೋಲ್ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನ ಮೈತ್ರಿ ಸರಕಾರ ಮನೋಹರ್ ಜೋಶಿ ಮುಖ್ಯಮಂತ್ರಿ.

ಮೀನಾತಾಯಿ, ಹಾಗೂ ಬಿಂದುಮಾಧವರ ನಿಧನ

[ಬದಲಾಯಿಸಿ]

ಸೆಪ್ಟೆಂಬರ್ ೧೯೯೫ ರಲ್ಲಿ, ಕರ್ಜತ್ ನಲ್ಲಿ ರಜದ ದಿನಗಳಲ್ಲಿ ರೆಸಾರ್ಟ್ ನಲ್ಲಿ ತಂಗಿದ್ದಾಗ, ಪವರ್ ಕಟ್ ಆಗಿತ್ತು. ಸರಿಯಾದ ವೇಳೆಯಲ್ಲಿ ಔಷಧಿಗಳು ಲಭ್ಯವಾಗದೆ, ಮೀನಾತಾಯಿಯವರು, 'ಪಾರ್ಷ್ವ ವಾಯು'ವಿನಿಂದ ಮರಣ ಹೊಂದಿದರು. ಏಪ್ರಿಲ್, ೧೯೯೬ ನಲ್ಲಿ, ಹಿರಿಯ ಮಗ, ಬಿಂದು ಮಾಧವ, ಪುಣೆ-ಮುಂಬಯಿ, ರಸ್ತೆ ಅಪಘಾತದಲ್ಲಿ ಮರಣಿಸಿದ.

ಮೈಖೇಲ್ ಜ್ಯಾಕ್ಸನ್

[ಬದಲಾಯಿಸಿ]

೧೯೯೬ ರಲ್ಲಿ, 'ಮೈಖೇಲ್ ಜ್ಯಾಕ್ಸನ್', ಜೊತೆ ಸ್ನೇಹ ಬೆಳೆಸಿದರು.

ಬೆಂಕಿ

[ಬದಲಾಯಿಸಿ]

೧೯೯೮ ರಲ್ಲಿ, 'ಚಲನ ಚಿತ್ರ ವಿರೋಧ' ದಲ್ಲಿ ಮುಂಬಯಿನ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ತಗುಲಿ, ಅಪಾರ ನಷ್ಟವಾಯಿತು.

೨೦೦೪ ರಲ್ಲಿ

[ಬದಲಾಯಿಸಿ]

ಉದ್ಧವ್ 'ಬಾಳಾ ಸಾಹೇಬ್ ಠಾಕ್ರೆ'ಯವರ, ಉತ್ತರಾಧಿಕಾರಿಯಾಗಿ ನೇಮಕಗೊಂಡರು. 'ನಾರಾಯಣ್ ರಾಣೆ' ಮತ್ತು 'ಉದ್ಧವ್' ಜೊತೆ ವಿರಸ. 'ರಾಣೆ'ಯವರು ಪಕ್ಷದಿಂದ ನಿರ್ಗಮಿಸಿದರು.

ಮಹಾರಾಷ್ಟ್ರ ನವ್ ನಿರ್ಮಾಣ್ ಸೇನಾ

[ಬದಲಾಯಿಸಿ]

೨೦೦೬ ರಲ್ಲಿ ರಾಜ್ ಜೊತೆ ಭಿನ್ನಾಭಿಪ್ರಾಯ. ರಾಜ್ ಠಾಕ್ರೆ ನಿರ್ಗಮನ.

ಬಿಹಾರಿಗಳ ವಿರುದ್ಧ

[ಬದಲಾಯಿಸಿ]

೨೦೦೮ ರಲ್ಲಿ ಬಿಹಾರಿಗಳ ವಿರುದ್ಧ ದಾಳಿ.

ಸನ್ಯಾಸ

[ಬದಲಾಯಿಸಿ]

ಅಕ್ಟೋಬರ್ ೨೦೦೮ ರಲ್ಲಿ ಬಳ್ ಠಾಕ್ರೆಯವರು, ರಾಜಕೀಯದಿಂದ ಹೊರಗಿರಲು ಪ್ರಯತ್ನ. ಶುರುಮಾಡಿದರು.

ಕೊನೆಯ ದಸರಾ ಸಮಾವೇಶ

[ಬದಲಾಯಿಸಿ]

ಮುಂಬಯಿನ ಶಿವಾಜಿ ಪಾರ್ಕ್ ನಲ್ಲಿ, ದಸರಾ ಹಬ್ಬದ ಸಮಯದಲ್ಲಿ ನಡೆಯುವ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗದೆ, ವೀಡಿಯೋ ಚಿತ್ರದಲ್ಲಿ ಸಂದೇಶ ಕೋರಿಕೆ. ಮಗ ಉದ್ಧವ್, ಹಾಗೂ ಅವರ ಮಗನನ್ನು ತಮ್ಮಂತೆಯೇ ಆದರ ವಿಶ್ವಾಸದಿಂದ ಹಾಗೂ ಸಹಕಾರದಿಂದ ಕಾಣಬೇಕೆಂದು, ಅಲ್ಲಿ ನೆರೆದಿದ್ದ ಜನತೆಯಲ್ಲಿ ಮನವಿ ಮಾಡಿಕೊಂಡರು.

೨೦೧೨ ರಲ್ಲಿ, ನಿಧನ

[ಬದಲಾಯಿಸಿ]

ಹಲವಾರು ವಾರಗಳಿಂದ ಅನಾರೋಗ್ಯ , ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಠಾಕ್ರೆಯವರು, ನವೆಂಬರ್ ೧೭ ಶನಿವಾರ, ಮಧ್ಯಾನ್ಹ, ೩-೩೦ ಕ್ಕೆ 'ಮಾತೋಶ್ರೀ'ಯಲ್ಲೇ ಹೃದಯಾಘಾತದಿಂದ ಮರಣಹೊಂದಿದರು.

ಅಂತಿಮ ಸಂಸ್ಕಾರ

[ಬದಲಾಯಿಸಿ]

'ಮುಂಬಯಿನ ಮರಾಠಿ ಮಾಣುಸ್' ರಿಗೆ ಸದಾ ಅಭಯಹಸ್ತವನ್ನು ನೀಡಿ ಅವರ ಏಳಿಗೆಗೆ, ಬಾಳ್ ಠಾಕ್ರೆಯವರು ಮಾಡಿದ ಸೇವೆಯನ್ನು ಗಮನಿಸಿ, ಸ್ಥಾನೀಯ ಶಿವಸೈನಿಕರು ಮತ್ತು ಠಾಕ್ರೆಯವರ ಇಷ್ಟ ಮಿತ್ರರು, ತಮ್ಮ ಪ್ರಚಂಡ ಕೃತಜ್ಞತೆಯನ್ನು ಸಲ್ಲಿಸಿದರು. ಮುಂಬಯಿನ ಶಿವಾಜಿಪಾರ್ಕ್ ನಲ್ಲಿ ನವೆಂಬರ್, ೧೮, ರವಿವಾರದ ಸಂಜೆ, ೬-೩೦ ಕ್ಕೆ, ಬಾಳಾಸಾಹೇಬ್ ರವರ ಅಂತಿಮ ಯಾತ್ರೆ, ಮತ್ತು ಅಂತಿಮ ಸಂಸ್ಕಾರ ವಿಧಿಯಲ್ಲಿ ಮುಂಬಯಿನಗರದ ಇತಿಹಾಸದಲ್ಲಿ ಈ ತರಹದ ಅಂತಿಮ ಸಂಸ್ಕಾರ ವಿಧಿಯಲ್ಲಿ, ಹಿಂದೆಂದೂ ಸೇರದಷ್ಟು ಜನಸಮೂಹ, ಲಕ್ಷಾಂತರ ಜನ ಆಗಮಿಸಿ, ತಮ್ಮ ಗೌರವ ಹಾಗೂ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.