ಬಾಳೆ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಳೆ ಮೀನು ನದಿ, ಜಲಾಶಯ, ದೊಡ್ಡ ಕೆರೆಗಳಲ್ಲಿ ವಾಸಿಸುವ ಸಿಹಿನೀರು ಮೀನು. ಕೆಲವೊಮ್ಮೆ ಅಳಿವೆಗಳಲ್ಲಿ ಕಾಣಿಸುವುದುಂಟು. ಸೈಲ್ಯೂರಿಡೆ ಕುಟುಂಬಕ್ಕೆ ಸೇರಿದ ಈ ಮೀನಿನ ಶಾಸ್ತ್ರೀಯ ನಾಮ ವಲ್ಲಾಗೊ ಅಟ್ಟು. ಇದನ್ನು ಸಿಹಿನೀರಿನ ಶಾರ್ಕ್ ಎಂದು ಕರೆಯುತ್ತಾರೆ. ಕಾರಣ ಇದು ಬೇರೆ ಜಾತಿಯ ಮೀನುಗಳನ್ನು (ಉದಾ: ಗೆಂಡೆ ಮೀನುಗಳು) ಬೇಟೆಯಾಡಿ ತಿನ್ನುತ್ತದೆ. ಇದೊಂದು ಸಿಹಿ ನೀರು ಪ್ರದೇಶಗಳಲ್ಲಿ ಕಾಣಸಿಗುವ ದೊಡ್ಡ ಮೀನುಗಳಲ್ಲೊಂದು. ಸುಮಾರು 183 ಸೆಂ.ಮೀ. ಹಾಗೂ 20-25 ಕೆ.ಜಿ. ವರೆಗೆ ಬೆಳೆಯುತ್ತದೆ.

ಇದರ ದೇಹ ಉದ್ದವಾಗಿದ್ದು ಚಪ್ಪಟೆಯಾಗಿರುತ್ತದೆ. ಸಣ್ಣ ಕಣ್ಣುಗಳು, ಅಗಲವಾದ ಬಾಯಿ, ಕಣ್ಣಿನ ಹಿಂಬದಿಯವರೆಗೂ ಇರುತ್ತದೆ. ಕೆಳ ದವಡೆ ಮೇಲ್ದವಡೆಗಿಂತ ಉದ್ದ. ಎರಡು ಜೊತೆ ಮೀಸೆ (ಬಾರ್ಬಲ್ಸ್) ಗಳಿವೆ. ಬಾಲದ ರೆಕ್ಕೆ ಆಳವಾಗಿ ಕವಲೊಡೆದಿದೆ. ಮೈ ಬೆಳ್ಳಿ ಬಣ್ಣದ್ದು, ಈಜು ರೆಕ್ಕೆಗಳ ಮೇಲೆ ಸೂಕ್ಷ್ಮವಾದ ಚುಕ್ಕೆಗಳುಂಟು.

ಕೃಷ್ಣ, ಕಾವೇರಿ, ಗೊದಾವರಿ ಮತ್ತು ಇತರೆ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಇವು ಹೇರಳವಾಗಿ ದೊರೆಯತ್ತವೆ. ಬಾಳೆ ಮೀನು ತುಂಬ ರುಚಿಕರವಾದ ಮೀನೆಂದು ಹೆಸರಾಗಿದೆ. ಇದರಿಂದ ಇದಕ್ಕೆ ಹೆಚ್ಚು ಬೇಡಿಕೆ ಮತ್ತು ಬೆಲೆಯಿದೆ. ಇದು ಮಾಂಸಾಹಾರಿಯಾದ್ದರಿಂದ ಇದನ್ನು ಕೆರೆ ಕಟ್ಟೆಗಳಲ್ಲಿ ಗೆಂಡೆ ಮೀನುಗಳೊಂದಿಗೆ ಸಾಕುವುದಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: