ವಿಷಯಕ್ಕೆ ಹೋಗು

ಬಾಲ ಯೇಸುವಿನ ಪುಣ್ಯಕ್ಷೇತ್ರ ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ ಯೇಸುವಿನ ಪುಣ್ಯಕ್ಷೇತ್ರ

[ಬದಲಾಯಿಸಿ]
InfantJesus Church Blr2

ಬಾಲ ಯೇಸುವಿನ ಇಗರ್ಜಿಯು ಬೆಂಗಳೂರಿನ ರೋಮನ್ ಕಥೊಲಿಕರಿಗೆ ಸಮರ್ಪಿಸಲಾಗಿದೆ.೧೯೭೧ ರಲ್ಲಿ ಬೆಂಗಳೂರಿನ ವಿವೇಕನಗರ ಪ್ರದೇಶದಲ್ಲಿ ಈ ಇಗರ್ಜಿಯು ಸ್ಥಾಪನೆಯಾಗಿದೆ. ಈ ಇಗರ್ಜಿಯನ್ನು ಬಾಲ ಯೇಸುವಿನ ಪುಣ್ಯಕ್ಷೇತ್ರ ಎಂದು ಕರೆಯಲ್ಪಡುತ್ತದೆ ಮತ್ತು ಐತಿಹಾಸಿಕ ಬಾಲ ಯೇಸುವನ್ನು ಪ್ರಾಗದ ನೆನಪಿಗಾಗಿ ನಿರ್ಮಿಸಲಾಗಿದೆ.ಅದರ ನಂತರ ಹಲವಾರು ಪವಾಡಗಳು ಈ ದೇವಾಲಯಕ್ಕೆ ಕಾರಣವಾಗಿದ್ದು ಜನರ ಮನಸ್ಸಿನಲ್ಲಿ ಜನಪ್ರೀಯತೆ ಹೆಚ್ಚಾಗಿದೆ. ದೇವಾಲಯದ ಹಳೆಯ ಕಟ್ಟಡವನ್ನು ತೆಗೆದು ಸಮೀಪದಲ್ಲಿ ಹೊಸ ದೇವಾಲಯದ ನಿರ್ಮಣಕ್ಕೆ ೨೦೦೫ ರಲ್ಲಿ ಸೇರಿಸಲಾಯಿತು.[]

ಇತಿಹಾಸ

[ಬದಲಾಯಿಸಿ]

ಬಾಲ ಯೇಸುವಿನ Archived 2018-08-08 ವೇಬ್ಯಾಕ್ ಮೆಷಿನ್ ನಲ್ಲಿ. ದೇವಾಲಯ ಸ್ಥಾಪನೆಯು ಎಪ್ರಿಲ್ ೧೮,೧೯೬೯ ರಂದು ಬೆಂಗಳೂರಿನ ಆಗಿನ ಆರ್ಚ್ ಬಿಷಪ್ ಆಗಿದ್ದ ರೆ|ಫಾ|ಡ್ಯುರೈಸ್ವಾಮಿ ಸೈಮನ್ ಲೊರ್ಡ್‌ಸ್ವಾಮಿ ಇವರು ಸ್ಥಾಪನೆ ಮಾಡಿದರು.ನಂತರ ೧೯೭೧ ರಲ್ಲಿ ರೆ|ಫಾ|ಎಲ್ ಪೀಟರ್ ಗುರುಗಳಾಗಿ ನೇಮಕಗೊಂಡು ಬೆಂಗಳೂರಿನ ಸೇಕ್ರೆಡ್ ಹಾರ್ಟ್ ದೇವಾಲಯದಿಂದ ಬಾಲ ಯೇಸುವಿನ ಪ್ರತಿಮೆಯನ್ನು ತಂದರು. ಈ ದೇವಾಲಯಕ್ಕೆ ಮುಂದಿನ ಎಂಟು ವರ್ಷಗಳಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು.ಅಂತಿಮವಾಗಿ ಜೂನ್ ೨೯,೧೯೭೯ರಂದು ರೆ|ಫಾ|ಡ್ಯುರೈಸ್ವಾಮಿ ಸೈಮನ್ ಲೊರ್ಡ್‌ಸ್ವಾಮಿ ಬಿಷಪ್ ರವರು ದೇವಾಲಯವನ್ನು ಉದ್ಗಾಟಿಸಿದರು.[]
ಈಗಿನ ದೇವಾಲಯದ ಕಟ್ಟಡವನ್ನು ಜೂನ್ ೯,೨೦೦೫ ರಂದು ಆರ್ಚ್ ಬಿಷಪ್ ರೆ|ಫಾ|ಡಾ. ಬರ್ನಾಡ್ ಮೊರಾಸ್ ರವರು ಉದ್ಗಾಟಿಸಿದರು ಮತ್ತು ಭಾರತದ ಅಪೊಸ್ತೊಲಿಕ್ ನುನ್ಸಿಯೋದ ಬಿಷಪ್ ರೆ|ಫಾ|ಡಾ.ಪೆಡ್ರೊ ಲೋಪೆಜ್ ಕ್ವಿಂಟಾನಾ ಅವರಿಂದ ಅರ್ಪಿಸಲ್ಪಟ್ಟಿತು. ಇದು ಪ್ಯಾನ್ ಆಕಾರದ ಹಾಲ್ ಅನ್ನು ಹೊಂದಿದೆ. ಇದು ೨೫೦೦ ಜನರನ್ನು ಕುಳಿತುಕೊಳ್ಳುವ ಜಾಗವಿದೆ ಮತ್ತು ಅಸೋಸಿಯೆಟ್ಸ್,ಬೆಂಗಳೂರಿನವರು ವಿನ್ಯಾಸಗೊಳಿಸಿದರು.ದೇವಾಲಯದ ಮಧ್ಯೆ ಬೆತ್ಲೆಹೆಮ್‌ನ ಇಗರ್ಜಿಯ ದ್ರಶ್ಯವನ್ನು ಪುನರಾವರ್ತಿಸುತ್ತದೆ.

InfantJesus Shrine Blr1

ದೇವಾಲಯದ ಪವಾಡದ ನಂತರ ಜನರ ಸಂಖ್ಯೆಯು ತುಂಬಾ ಬೆಳೆಯಿತು.ಬಾಲ ಯೇಸುವಿನ ಪ್ರಾರ್ಥನೆಯು ನಮ್ಮ ಕಷ್ಟಗಳ ಸಮಯದಲ್ಲಿ ಬೇಡಿದ ಪ್ರಬಲ ಪ್ರಾರ್ಥನೆ. ಈ ದೇವಾಲಯದಲ್ಲಿ ತಮಿಳು ಚಿತ್ರ ಕುಳತೈಯಸು೧೯೮೪ ರಂದು ತೆಗೆದಿದ್ದಾರೆ. ಈ ಚಿತ್ರದಲ್ಲಿ ಸರಿತ,ರಾಜೇಶ್,ವಿಜಯಕಾಂತ್ ಮತ್ತು ಹಾಸ್ಯನಟ ಸೆಂಥಿಲ್ ನಟಿಸಿದ್ದಾರೆ. ಈ ದೇವಾಲಯದಲ್ಲಿ ವರ್ಷಗಳಲ್ಲಿ ಗುರುವಾರ ಜನಸಮೂಹವು ಪ್ರೇಕ್ಷಕರಲ್ಲಿ ಬೆಳೆದಿದೆ ಮತ್ತು ಇಂದು ವಿವಿಧ ಧರ್ಮಗಳ ಹತ್ತು ಸಾವಿರಕಿಂತಲೂ ಹೆಚ್ಚು ಜನರು ಆಗಾಗ್ಗೆ ಬರುತ್ತಾರೆ. ಗುರುವಾರದಂದು ಇಗರ್ಜಿಯಲ್ಲಿ ವಿವಿಧ ಬಾಷೆಯಲ್ಲಿ ಒಂಬತ್ತು ಬಲಿಪೂಜೆಗಳು ನಡೆಯುತ್ತವೆ.[]

ವಾರ್ಷಿಕ ಹಬ್ಬ

[ಬದಲಾಯಿಸಿ]
Kids playing outside of "Infant Jesus" shrine (3943675002)

ಪ್ರತಿ ವರ್ಷ ೧೯೭೧ ರಿಂದು ಇಗರ್ಜಿಯಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.ಸಾವಿರಾರು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ನೂರಾರು ಮಂದಿ ಈ ಹಬ್ಬವನ್ನು ಆಚರಿಸುತ್ತಾರೆ.

ಬಲಿಪೂಜೆಯ ವೇಳಾಪಟ್ಟಿ

[ಬದಲಾಯಿಸಿ]
  1. ಭಾನುವಾರ
  • 5:45 a.m -ತಮಿಳು
  • 7:00 a.m-ಇಂಗ್ಲೀಷ್
  • 8:30 a.m-ತಮಿಳು
  • 10:00 a.m-ಕನ್ನಡ
  • 11:15 a.m-ತಮಿಳು
  • 5:00 p.m-ಇಂಗ್ಲೀಷ್
  • 6:00 p.m-ತಮಿಳು

ವಾರಾದ ಬಲಿಪೂಜೆಯ ವೇಳಾಪಟ್ಟಿ

[ಬದಲಾಯಿಸಿ]
  1. ಸೋಮವಾರ,ಮಂಗಳವಾರ,ಶುಕ್ರವಾರ ಮತ್ತು ಶನಿವಾರ
  • 5:45 a.m-ಕನ್ನಡ
  • 6:30 a.m-ತಮಿಳು
  • 11:15 a.m-ತಮಿಳು
  • 6:00 p.m-ಇಂಗ್ಲೀಷ್
  1. ಬುಧವಾರ
  • 5:45 a.m-ಕನ್ನಡ
  • 6:30 a.m-ಇಂಗ್ಲೀಷ್
  • 11:15 a.m-ತಮಿಳು
  • 6:00 p.m-ತಮಿಳು
  1. ಗುರುವಾರ ನೊವೆನಾಂ ಬಲಿಪೂಜೆಯ ವೇಳಾಪಟ್ಟಿ
  • 5:45 a.m-ತಮಿಳು
  • 6:30 a.m-ಇಂಗ್ಲೀಷ್
  • 9:00 a.m-ತೆಲುಗು
  • 10:00 a.m-ಕನ್ನಡ
  • 11:15 a.m-ತಮಿಳು
  • 4:00 p.m-ಕೊಂಕಣಿ
  • 5:00 p.m-ಇಂಗ್ಲೀಷ್
  • 6:00 p.m-ತಮಿಳು
  • 7:30 p.m-ಮಲಯಾಳಂ

ವಾರ್ಷಿಕ ಹಬ್ಬದ ಬಲಿಪೂಜೆಗಳು

[ಬದಲಾಯಿಸಿ]
Church of the Infant Jesus

ಬಾಲ ಯೇಸುವಿನ ಪ್ರತಿ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಹಬ್ಬದ ೧೦ ದಿನ ಮುಂಚೆ,ಅಂದರೆ ಜನವರಿ ೪ ರಂದು ಧ್ವಜರೋಹಣ ಆರಿಸಿ ೧೦ ದಿನ ನೊವೆನಾ ಬಲಿಪೂಜೆಯನ್ನು ಮಾಡುತ್ತಾರೆ.ಜನವರಿ ೧೪ ರಂದು ವಾರ್ಷಿಕ ಹಬ್ಬವನ್ನು ವಿಭ್ರಂಜನೆಯಿಂದ ಆಚರಿಸುತ್ತಾರೆ.ಆ ದಿನ ವಿವಿಧ ಭಾಷೆಯಲ್ಲಿ ೧೨ ಬಲಿ ಪೂಜೆಗಳು ನಡೆಯುತ್ತವೆ.
೨೦೧೮ ರ ಈಗಿನ ಆರ್ಚ್‌ಬಿಷಪ್ ರವರ ಹೆಸರು ರೆ|ಫಾ|ಪೀಟರ್ ಮಚಾದೊ ಬೆಂಗಳೂರಿನ ಆರ್ಚ್‌ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಫಾ|ಮೈಕಲ್ ಅಂತೊನಿ ದೇವಾಲಯದ ಜವಾಬ್ದಾರಿಯನ್ನು ನಡೆಸುತ್ತಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. <https://www.justdial.com[permanent dead link] › ... › Infant Jesus Church And Shrine>
  2. <https://www.tripadvisor.in/Attraction_Review-g297628-d2734131-Reviews-Infant_Jes..>
  3. <http://www.trip2blr.com › Bangalore Tourist Places › Religious and Spiritual Places>