ಬಾಲ್ ಮೋಹನ್ ವಿದ್ಯಾಮಂದಿರ್, ದಾದರ್, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೊಂಬಾಯಿನ ಅತಿ ಹಳೆಯ ವಿದ್ಯಾಸಂಸ್ಥೆಯೆಂದು ಹೆಸರಾದ, 'ಬಾಲ್ ಮೋಹನ್ ವಿದ್ಯಾ ಮಂದಿರ್’ ೧೯೪೦ ರಲ್ಲಿ ಸ್ಥಾಪಿಸಲ್ಪಟ್ಟಿತು. ಈ ಶಿಕ್ಷಣ ಸಂಸ್ಥೆಯನ್ನು 'ನ್ಯಾಶನಲ್ ಟೀಚರ್ಸ್ ಅವಾರ್ಡ್ ವಿಜೇತ','ಶ್ರೀ. ದಾದಾಸಾಹೇಬ್ ರಿಗೆ,ಯವರು, ಸ್ಥಾಪಿಸಿದರು. ವಿದ್ಯಾಸಂಸ್ಥೆಗೆ 'ಮಹಾರಾಷ್ಟ್ರ ಸರಕಾರದ ಕಮ್ಯುನಿಟಿ ವೆಲ್ಫೇರ್ ಪ್ರಶಸ್ತಿ'ಯೂ ಲಭಿಸಿದೆ. ಇಲ್ಲಿ, ಸುಮಾರು ೬,೦೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಾಲಕ-ಬಾಲಕಿಯರು ಜೊತೆಗೂಡಿ, ಸಹ-ಶಿಕ್ಷಣ ಪಡೆಯುತ್ತಿರುವ ಶಾಲೆ, 'ಮಹಾರಾಷ್ಟ್ರ ಶಿಕ್ಷಣ ಬೋರ್ಡ್' ನ ಅಧಿಕಾರದಡಿಯಲ್ಲಿ ಕೆಲಸಮಾಡುತ್ತಿದೆ. ಈ ವಿದ್ಯಾಸಂಸ್ಥೆ ಪ್ರಾರಂಭವಾದ ಸಮಯದಲ್ಲಿ ಕೇವಲ 'ಮರಾಠಿ ಮಾಧ್ಯಮ'ದಲ್ಲಿ 'ಪಾಠಕ್ರಮ'ಗಳು ಜರುಗುತ್ತಿದ್ದವು. 'ಇಂಗ್ಲೀಷ್ ಮೀಡಿಯಮ್ ಶಾಲೆ' ೧೯೯೯ ರಲ್ಲಿ ಅಸ್ತಿತ್ವಕ್ಕೆ ಬಂತು.

’ಬಾಲಮೋಹನ್ ವಿದ್ಯಾಸಂಸ್ಥೆ’ಯಲ್ಲಿ ಉಪಲಭ್ದವಿರುವ ಸೌಲಭ್ಯಗಳು[ಬದಲಾಯಿಸಿ]

ಸಂಸ್ಥೆಯ ಪುಸ್ತಕ ಭಂಡಾರದಲ್ಲಿ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ, ೮೦,೦೦೦ ಪುಸ್ತಕಗಳು ಉಪಲಭ್ದವಿವೆ. 'ವಿಜ್ಞಾನದ ಕಾರ್ಯಾಲಯ' ಜೊತೆಗೆ 'ಕಂಪ್ಯೂಟರ್ ಕಾರ್ಯಾಲಯ'ವೂ(Laboratory) ಇದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶಾಲವಾದ, ಸುವ್ಯವಸ್ಥಿತ, ಸಭಾಂಗಣವಿದೆ. ವಿದ್ಯಾರ್ಥಿಗಳಿಗೆ ಸಲಹೆ ಮುಂತಾದ ಉಪಯುಕ್ತ ವಿಷಯಗಳಿಗೆ 'ತರಪೇತಿಹೊಂದಿದ ಕೌನ್ಸಿಲರ್ಸ್' ಇದ್ದಾರೆ. ಶಾಲೆಗೆ ತಗುಲಿದಂತೆ, ಒಂದು ವ್ಯವಸ್ಥಿತ 'ಮೆಡಿಕಲ್ ಸೆಂಟರ್' ಸಹ ಇದೆ. ಮನಸ್ಸಿನ ಉದ್ವೇಗ, ಹಾಗೂ ಮನೆಯ ಸಮಸ್ಯೆಗಳ ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯಮಾಡಲು, ಆ ವಲಯದಲ್ಲಿ ಪ್ರಶಿಕ್ಷಣ ಪಡೆದ, 'ಮನೋವಿಜ್ಞಾನದ ಚಿಕಿತ್ಸಕ'ರಿದ್ದಾರೆ.

ಕ್ರೀಡೆಗಳಿಗೂ ವಿಶೇಷ ಆದ್ಯತೆಯಿದೆ[ಬದಲಾಯಿಸಿ]

ಕ್ರೀಡೆಗಳಿಗಾಗಿ ಅತ್ಯುತ್ತಮ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳಿಗಾಗಿ ಹಲವಾರು ಕ್ರೀಡೆಗಳನ್ನು ಆಯ್ದುಕೊಳ್ಳಬಹುದು. ಶಾಲೆಯ ಪಕ್ಕದಲ್ಲೇ ದೊಡ್ಡ ಆಟದ ಮೈದಾನವಿದೆ. ಅಲ್ಲಿ ಶಿಕ್ಷಣಕೊಡಲು ಅನೇಕ ತರಪೇತಿತ ಶಿಕ್ಷಕರಿದ್ದಾರೆ. ವರ್ಷದಲ್ಲಿ ಹಲವಾರು 'ಸ್ಪರ್ಧೆ'ಗಳನ್ನು ಆಯೋಜಿಸಲಾಗುತ್ತದೆ. ನಾಟಕ ಸಂಗೀತ ಮೊದಲಾದ ಸಾಂಸ್ಕೃತ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಬಹುದು. 'ಬಾಲ ದಿವಸ್', 'ಶಿಕ್ಷಕರ ದಿನ', 'ವಾರ್ಷಿಕ ಸಮಾರಂಭ', ಮುಂತಾದ ಶಿಕ್ಷಣಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳ ಜೊತೆಗೆ, ಆಟಗಳಿಗೂ ವಿಶೇಷ ಮಹತ್ವವನ್ನು ಕೊಟ್ಟಿದ್ದಾರೆ.

ವಿದ್ಯರ್ಥಿಗಳು[ಬದಲಾಯಿಸಿ]

  1. ರಾಜ್ ಠಾಕ್ರೆ[೧]

ಉಲ್ಲೆಖಗಳು[ಬದಲಾಯಿಸಿ]

ಸಂಪರ್ಕಿಸಿ[ಬದಲಾಯಿಸಿ]

Balmohan Vidya Mandir,

42,59-65, Shivaji Park,

Dadar, Mumbai-400028

Email-balmohan@vsnl.com