ಬಾಲ್‍ಪಕ್ರಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್‍ಪಕ್ರಮ್ ಭಾರತದ ಮೇಘಾಲಯ ರಾಜ್ಯದಲ್ಲಿನ ದಕ್ಷಿಣ ಗಾರೊ ಗುಡ್ಡಗಳ ಜಿಲ್ಲೆಯಲ್ಲಿ ಸ್ಥಿತವಾಗಿದೆ.

ಬಾಲ್‍ಪಕ್ರಮ್ ತನ್ನ ಅರಣ್ಯಾಚ್ಛಾದಿತ ಕಮರಿ ಮತ್ತು ಕಂದರಕ್ಕೆ ಪ್ರಸಿದ್ಧವಾಗಿದೆ. ಈಗ್ ಇದು ರಾಷ್ಟ್ರೀಯ ಉದ್ಯಾನದ ಭಾಗವಾಗಿದೆ. ಈ ಉದ್ಯಾನವು ಬಾಲ್‍ಪಕ್ರಮ್ ಪ್ರಸ್ಥಭೂಮಿ ಮತ್ತು ಪಕ್ಕದ ಕಾಡುಗಳನ್ನು ಕೂಡ ಒಳಗೊಳ್ಳುತ್ತದೆ.[೧] ಈ ಪ್ರದೇಶವು ಮೇಘಾಲಯದ ದಕ್ಷಿಣ ಭಾಗದಲ್ಲಿದೆ.[೨] ಈ ಪ್ರದೇಶದಲ್ಲಿ ವಾಸಿಸುತ್ತಿರುವ ಸ್ಥಳೀಯ ಬುಡಕಟ್ಟಾದ ಗಾರೋಗಳು ಈ ಗುಡ್ಡವು ಮೃತ ಆತ್ಮಗಳಿಗೆ ಒಂದು ಬಗೆಯ ವಿಶ್ರಾಂತಿ ಸ್ಥಳವಾಗಿದೆ ಎಂದು ನಂಬುತ್ತಾರೆ. ಈ ನಂಬಿಕೆಯು ಈ ಪ್ರದೇಶದಲ್ಲಿ ಕಂಡುಬರುವ ಅನೇಕ ವಿಚಿತ್ರ ಆದರೆ ನೈಸರ್ಗಿಕ ರಚನೆಗಳು, ಭೌತಿಕ ಹಾಗೂ ಜೈವಿಕ, ಇವುಗಳ ಕಾರಣದಿಂದಿದೆ. ಈ ಸ್ಥಳವು ಅಪರೂಪದ ಸಸ್ಯ ಹಾಗೂ ಪ್ರಾಣಿ ಜಾತಿಗಳು ಮತ್ತು ಕಡಲ ಪಳೆಯುಳಿಕೆಗಳಿಗೆ ಕೂಡ ಪರಿಚಿತವಾಗಿದೆ. ಬಾಲ್‍ಪಕ್ರಮ್ ಮೇಘಾಲಯದಲ್ಲಿ ಜೀವವೈವಿಧ್ಯದ ಅಪಾಯದ ಸ್ಥಳವಾಗಿದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. Choudhury, A.U. (2009). Balpakram –Meghalaya’s heritage IBA. Mistnet 10 (4): 11-13.
  2. "ಆರ್ಕೈವ್ ನಕಲು". Archived from the original on 2009-03-28. Retrieved 2020-11-01.
  3. Choudhury, A.U. (2003). Meghalaya's vanishing wilderness. Sanctuary Asia 23(5): 30-35.