ಬಾಲ್ಯ ವಿವಾಹ ಹಾಗೂ ವಿಧವೆಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬಾಲ್ಯ ವಿವಾಹದ ರೂಢಿ ಹಾಗೂ ಆಚರಣೆ ಮಾನವೀಯತೆಯ ಘೋರ ಕಳಂಕ. ಆದರೆ ಅದು ಮೂಲತಃ ಧರ್ಮ ರಕ್ಷಣೆಯ ಹಲವಾರು ಮಾರ್ಗಗಳಲ್ಲಿ ಒಂದಾಗಿ ಆಚರಣೆಯಲ್ಲಿ ಬಂತು.ಹಾಗೂ ಕಾಲ-ಕ್ರಮೇಣ ಅನೇಕ ರೀತಿಯ ಅನಿಷ್ಠಗಳಿಗೆ ಕಾರಾಣವಾಗಿ ಬೃಹತ್ ಸಮಸ್ಯೆಯಾಗಿ ಬೆಳೆದದ್ದು ದುರಂತವೆಂದೇ ಹೇಳಬೇಕು. ವಿದೇಶೀಯ ಆಕ್ರಮಣದಿಂದ ಜರ್ಜಿರತವಾದ ಈ ದೇಶದ ಜನರು ಜಿಡ್ಡುಗಟ್ಟಿ ಹೋದ ತಮ್ಮ ಧರ್ಮಕ್ಕೆ ಹೊಸ ಚೈತನ್ಯವನ್ನು ನೀಡಲು ಮುಂದೆ ಬರುವ ಹೊತ್ತಿಗೆ ಎಷ್ಟೋ ಕಾಲ ಕಳೆದು ಹೋಗಿತ್ತು. ನಮ್ಮ ರಾಷ್ಟೀಯ ಆಂದೋಲನದಲ್ಲಿ ಸಕ್ರೀಯ ಪಾತ್ರವಹಿಸಿದ್ದ ಡಾ. ಕಮಲಾದೇವಿ ಚಟ್ಟೋಪಾಧ್ಯಾಯಯರವರ ಪ್ರಕಾರ, ``ಬಾಲ್ಯ ವಿವಾಹವು ಹಲವು ಕಾರಣಗಳಿಂದ ಸಮರ್ಥನೀಯವಾಯಿತು.ಆಂತರಿಕ ಹಾಗೂ ಬಾಹ್ಯ ಆಕ್ರಮಣಗಳಿಂದ ಕದಡಿ ಹೋದ ಪರಿಸ್ಥಿತಿ, ಅಂತರ್ಯುದ್ಧಗಳು, ಢಕಾಯಿತರ ಆಕ್ರಮಣಗಳು, ದುರ್ಬಲ ಕಾನೂನುಗಳು ಒಡ್ಡುವ ಅಭದ್ರತೆ ಇವೆಲ್ಲವೂ ಕಾರಣವಾಗಿದ್ದವು." ಈ ರೀತಿಯ ಕ್ಲಿಷ್ಟಕರವಾದ ಸಂದರ್ಭದಲ್ಲಿ ಹುಟ್ಟಿ ಬಂದ ಬಾಲ್ಯ ವಿವಾಹ ಪದ್ಧತಿ ಈ ಶತಮಾನದ ಪ್ರಾರಂಭದ ಹೊತ್ತಿಗೆ ಬೃಹತ್ ಪ್ರಮಾಣದಲ್ಲಿ ಬೆಳೆದು ಹೆಮ್ಮರವಾಗಿ ದೇಶಾದ್ಯಂತ ತನ್ನ ಕರಾಳವಾದ ನೆರಳನ್ನು ಹರಡಿ ನಿಂತಿತ್ತು. ವಿದ್ಯಾ ಬುದ್ಧಿ ಸಂಪನ್ನರಾಗಲು ಬಯಸುವ ಮುಗ್ಧ ಬಾಲ್ಯದಲ್ಲಿಯೇ ಬಾಲ-ಬಾಲೆಯರನ್ನು ವಿವಾಹ ಬಂಡನದಲ್ಲಿ ಸಿಲುಕಿಸಿ ಅವರ ಬದುಕನ್ನು ನರಕ ಸದೃಶ್ಯರನ್ನಾಗಿಸುತ್ತಿದ್ದ ಈ ಪದ್ಧತಿ ಅನುಕೂಲಕ್ಕಿಂತ ಹೆಚ್ಚು ಅನಿಷ್ಠಗಳನ್ನೇ ತುಂಬಿತ್ತೆಂಬ ಸಂಗತಿ ಸಮಾಜಕ್ಕೆ ಅರಿವಾಗಲು ಹಲವು ವರ್ಷಗಳು ಬೇಕಾದವು. ಒಂದು ಕಾಲದಲ್ಲಿ ಅಗತ್ಯವಿರಬಹುದಾದ ಅನಿವಾರ್ಯವೆನಿಸಿಕೊಳ್ಳಬಹುದಾದ ಸಾಮಾಜಿಕ ಧಾರ್ಮಿಕ ರೀತಿ-ರಿವಾಜುಗಳು ಕಾಲಕಳೆದಂತೆ ತನ್ನ ಮೌಲ್ಯವನ್ನು ಕಳೆದುಕೊಂಡುಬಿಡುತ್ತವೆ. ಪರಂಪರೆಯ ಧರ್ಮದ ಹೆಸರಿನಲ್ಲಿ ಹಳೆಯ ಸಂಪ್ರದಾಯಗಳನ್ನು ಕುರುಡುತನದಿಂದ ಆಚರಿಸಿಕೊಂಡು ಬರುವುದು ಮೂಢನಂಬಿಕೆಯಲ್ಲದೇ ಇನ್ನೇನೂ ಅಲ್ಲ. ಬಾಲ್ಯ ವಿವಾಹ ಪದ್ಧತಿ ಬೆಳೆದು ಬಂದ ಬಗೆಯೂ ಒಂದು ರೀತಿಯಿಂದ ನೋಡಿದರೆ ಕುರುಡು ಅನುಕರಣೆ ಎಂದೇ ಹೇಳಬಹುದು. ಮದುವೆಯೆಂದರೇನು? ಅದರ ಅಗತ್ಯತೆ ಏನು? ಎಂಬುದನ್ನು ತಿಳಿಯದ ಬಾಲೆಗೆ ಲಗ್ನ ಮಾಡಲಾಗುತ್ತಿತ್ತು. ವಧುವಿಗೆ ``ತೆರ" ಕೊಟ್ಟು ಮದುವೆಯಾಗುತ್ತಿದ್ದ ಕಾಲ ಅದು. `ತೆರ' ಅಥವಾ `ತಿರ' ಕೊಡುವುದು ಎಂದರೆ ವಧುವಿನ ತಂದೆಗೆ ಮದುವೆಯಾಗುವವನು ಹಣ ಹಾಗೂ ಧವಸ ಧಾನ್ಯ ಕೊಡುವ ಪದ್ಧತಿಯಿತ್ತು. ಯಾರು ಹೆಚ್ಚು ತೆರ ಕೊಡುವ ತಾಕತ್ತು ಹೊಂದಿರುತ್ತಿದ್ದನೋ ಅಂತವನಿಗೆ ಹೆಣ್ಣು ಕೊಡಲು ಕನ್ಯಾ ಪಿತೃಗಳು ಮುಂದಾಗುತ್ತಿದ್ದರು. ಆಥಿಕವಾಗಿ ಗಟ್ಟಿ ಇದ್ದವನು ಬಡವನ ಮನೆಯ ಹುಡುಗಿಯನ್ನು ಮದುವೆಯಾಗುತ್ತಿದ್ದ. ಹೆಣ್ಣಿಗೂ ಗಂಡಿಗೂ ನಡುವೆ ಕನಿಷ್ಠ ೧೦ ರಿಂದ ೧೫ ವರ್ಷಗಳವರೆಗಿನ ವಯಸ್ಸಿನ ಅಂತರವಿರುತ್ತಿತ್ತು. ಹಳ್ಳಿಗಳಲ್ಲಿ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳಿರುತ್ತಿರಲಿಲ್ಲ. ಏನಾದರೂ ಕಾಯಿಲೆ, ಕಸಾಲೆಗಳಾದರೆ ದೆವ್ವ, ಭೂತ, ಮಾಟ, ಮಂತ್ರಗಳಿಗೆ ಮೊರೆ ಹೋಗುತ್ತಿದ್ದವರೇ ಹೆಚ್ಚು. ಕೇವಲ ಶ್ರೀಮಂತರು, ತಿಳುವಳಿಕೆಯುಳ್ಳ ಕೆಲವೇ-ಕೆಲವು ಮಂದಿ ಮಾತ್ರ ವೈದ್ಯಕೀಯ ಉಪಚಾರಕ್ಕಾಗಿ ಆಯುರ್ವೇದ ಪಂಡಿತರನ್ನು ಆಶ್ರಯಿಸುತ್ತಿದ್ದರು. ಈ ರೀತಿ ಯಾವುದೇ ರೀತಿಯ ರೋಗಬಾಧೆಯುಂಟಾದಾಗ ಯೋಗ್ಯ ಉಪಚಾರವಿಲ್ಲದೇ ಸಾಯುವವರ ಸಂಖ್ಯೆ ಗಣನೀಯವಾಗಿತ್ತು. ಬಸಿರು, ಬಾಣಂತನಗಳಲ್ಲಿ ಸಾಯುತ್ತಿದ್ದ ಹೆಣ್ಣು ಮಕ್ಕಳ ಸಂಖ್ಯೆಯೂ ಕಡಿಮೆ ಇರಲಿಲ್ಲ. ೧೯೨೧ರಲ್ಲಿಯ ಒಂದು ವರದಿಯ ಪ್ರಕಾರ ೧೫ರಿಂದ ೪೦ ವಎಷ ಪ್ರಾಯದ ಸ್ತ್ರೀಯರ ಸಖ್ಯೆ ಹಿಂದೂಸ್ಥಾನದಲ್ಲಿ ೬,೧೧,೮೫,೦೦೦ ಇತ್ತು. ಇವರಲ್ಲಿ ೬೦,೭೧,೨೦೬ ಮಂದಿ ಮೇಲ್ಜಾತಿಯ ವಿಧವೆಯರಿದ್ದರು. ವಿಧವೆಯರ ಸಂಖ್ಯೆ ಮೇಲ್ಜಾತಿಯ ಜನರಲ್ಲಿಯೇ ಅಧಿಕವಾಗಲು ಕಾರಣ ಬಾಲ್ಯ ವಿವಾಹ ಪದ್ಧತಿಯನ್ನು ಅನೂಚಾನವಾಗಿ ಅನುಸರಿಸಿಕೊಂಡು ಬಂದವರೇ ಅವರಾಗಿದ್ದರು. ಕೆಳವರ್ಗದಲ್ಲಿ ಕ್ವಚಿತ್ತಾಗಿ ಕಂಡು ಬರುತ್ತಿತ್ತು. ಮೇಲೆ ಹೇಳಿದ ವಿಧವೆಯರಲ್ಲಿ ಬಹುತೇಕ ಮಂದಿ ೫-೧೦ ವರ್ಷದ ಬಾಲ ವಿಧವೆಯರಾಗಿದ್ದುದು ಕಂಡು ಬರುತ್ತದೆ. ೧೯೩೪ ರ ವರದಿಯ ಪ್ರಕಾರ ಹಿಂದೂಸ್ಥಾನದ ಬಾಲವಿಧವೆಯರ ಸಂಖ್ಯೆ ೧೪,೫೧,೫೧೫ರಷ್ಟಿತ್ತು. ಬಾಲ್ಯ ವಿವಾಹ ರೂಡಿಯಲ್ಲಿ ಬಂದ ಮೇಲೆ ಹೆಣ್ಣಿಗೆ ೫ರಿಂದ ೧೦ ವರ್ಷದೊಳಗಾಗಿ ಲಗ್ನ ಮಾಡುವುದೇ `ಧರ್ಮ' ಎನಿಸಿಬಿಟ್ಟಿತು. ರಜಸ್ವಲೆಯಾಗುವುದಕ್ಕಿಂತ ಮುನ್ನವೇ ಲಗ್ನ ಮಾಡುವುದು ತಂದೆ ತಾಯಿಗಳ ಕರ್ತವ್ಯವಾಯಿತು. ಯಾವಾಕೆ ಲಗ್ನಕ್ಕೆ ಮುನ್ನವೇ ಮೈನೆರೆಯುತ್ತಾಳೋ ಅಂತವಳಿಗೆ ವಿವಾಹ ನಿಷಿದ್ಧವಾಗುತ್ತಿತ್ತು. ಅಷ್ಟೇ ಅಲ್ಲ ಅಂತವಳ ಸ್ಥಿತಿ ನರಕ ಸದೃಶ್ಯವಾಗುತ್ತಿತ್ತು. ೯೫ರ ವೃದ್ಧೆ ಕಡವೆಯ ವರಮಹಾಲಕ್ಶ್ಮಮ್ಮ ಎನ್ನುವವರು ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. `ಹುಡುಗಿಯೊಬ್ಬಳಿಗೆ ಲಗ್ನ ಖಾಯ್ಂ ನಿಗದಿ ಪಡಿಸಿದ `ತಿರ'ವನ್ನು ಕೊಡಲು ವರನಿಗೆ ಸಾಧ್ಯವಾಗಲಿಲ್ಲ. ಆ ವೇಳೆಗೆ ಹುಡುಗಿ ಮೈ ನೆರೆದಳು. ನಿನ್ನ ತಿರ ದಕ್ಷಿಣೆ ಬಂತು' ಅಂತ ಆ ಹುಡುಗಿ ಅಪ್ಪನಿಗೆ ಹೇಳಿ ಬಾವಿಯಲ್ಲಿ ಹಾರಿಕೊಂಡು ಪ್ರಾಣ ಬಿಟ್ಟಳು. ಲಗ್ನಕ್ಕೆ ಮುನ್ನವೇ ಮೈ ನೆರೆದರೆ ಹುಡುಗಿ ಹಾಗೂ ಆಕೆಯ ತಂದೆ ತಾಯಿಗಳು ಸಮಾಜದಿಂದ ಬಹಿಷ್ಕೃತರಾಗುತ್ತಿದ್ದರು. ಮೈ ನೆರೆದ ಹುಡುಗಿ ಮನೆಯಲ್ಲಿದ್ದರೆ ತಾವು ಜಾತಿ ಬಾಹಿರರಾಗುತ್ತೇವೆಂಬ ಭೀತಿಯಿಂದ ಪಾಲಕರು ಆಕೆಯನ್ನು ಸೂಳೆಯರಿಗೆ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದರು. ಸೂಳೆಯರು ತಮ್ಮಂತೆ ಆಕೆಗೆ ನೃತ್ಯಗಳನ್ನು ಕಲಿಸುತ್ತಿದ್ದರು. ಬಹುಶಃ `ಬಸವಿ' ಬಿಡುವ ಪದ್ಧತಿ ಪ್ರಾರಣ್ಭವಾಗಲು ಬಾಲ್ಯ ವಿವಾಹವು ಒಂದು ಮುಖ್ಯ ಕಾರಣವಾಗೈರಲು ಸಾಧ್ಯವಿದೆ. ವಿವಾಹಕ್ಕೆ ಮುನ್ನ ಮುಟ್ಟಾದಳೆಂಬ ಹುಡುಗಿಯನ್ನು ಸಿರ್ಸಿಯ ಹತ್ತಿರ ನೇಗಾರ ಎಂಬ ಹಳ್ಳಿಯಲ್ಲಿ ಪಾಲಕರು ಕಣ್ಣು ಕಟ್ಟಿ ದಟ್ಟಡವಿಯಲ್ಲಿ ಬಿಟ್ಟು ಬಂದಿದ್ದರಂತೆ. ಆಕೆಗೆ ಲಗ್ನ ನಿಷ್ಚಯವಾಗಿತ್ತು. ಆ ಹುಡುಗಿಗೆ ಮತಿ ಭ್ರಮಣೆಯಾಗಿ ಊರಿಗೆ ಬಂದಿದ್ದಳು. ಕೆಲ ದಿನಗಳಲ್ಲಿಯೇ ಆಕೆ ಮರಣ ಹೊಂದಿದಳು ಎನ್ನುತ್ತಾರೆ. ಹರಿಜನರ `ಕನ್ನೆ' ಎಂಬಾಕೆ ಈ ರೀತಿ ಅಡವಿಯಲ್ಲಿ ಬಿಟ್ಟು ಬಂದ ಎಷ್ಟೋ ಹೆಣ್ಣುಮಕ್ಕಳು ಕಾಡು ಪ್ರಾಣಿಗಳ ಪಾಲಾಗುತ್ತಿದ್ದರೆಂದು `ಕನ್ನೆ' ಹೇಳುತ್ತಾಳೆ. ಈ ಮೇಲೆ ವಿವರಿಸಿದ ಘಟನೆಗಳಿಂದ ಬಾಲ್ಯ ವಿವಾಹ ಪದ್ಧತಿಯ ಭೀಕರತೆ ಅರಿವಿಗೆ ಬರುತ್ತದೆ. ಅಷ್ಟೇ ಅಲ್ಲ ಆ ಕಾಲದಲ್ಲಿ ಅದೆಷ್ಟು ಅನಿವಾರ್ಯವಾಗಿತ್ತು ಎನ್ನುವುದು ಮನೋವೇದ್ಯವಾಗುತ್ತದೆ. ಬಾಲ್ಯದಲ್ಲೇ ವಿವಾಹವಾಗಿ ವಿಧವೆಯ ಪಟ್ಟವನ್ನಾದರೂ ಏರಿ ಯಾತನೆಯ, ಅಸಹನೆಯ ಬದುಕನ್ನಾದರೂ ಹೊಂದಿರಬಹುದು, ಆದರೆ ವಿವಾಹವಾಗದೇ ಇನ್ನೂ ಭೀಭತ್ಸ ಹಾಗೂ ಅಮಾನವೀಯ ಸ್ಥಿತಿಯಲ್ಲಿ ಬದುಕುಳಿಯಲು ಯಾರೂ ಬಯಸುತ್ತಿರಲಿಲ್ಲ. ಬಾಲ್ಯ ವಿವಾಹವನ್ನು ಅನುಸರಿಸಿ ಬಂದ ಇನ್ನೊಂದು ಪದ್ಧತಿಯೇ `ತೊಟ್ಟಿಲೂ ಮದುವೆ' ತೊಟ್ಟಿಲು ಕೂಡಿಕೆ' ಎಂದೂ ಕರೆಯಲಾಗುತ್ತದೆ. ಅಥವಾ ತೊಟ್ಟಿಲಲ್ಲೇ ಕೂಸಿಗೆ ಮದುವೆ ಮಾಡುವ ಅತಿರೇಕ ಪದ್ಧತಿ. ಅಷ್ಟೇ ಅಲ್ಲ ಜ್ನ್ನೂ ಮುಂದುವರೆದು, ಇನ್ನು ಗರ್ಹ್ಬದಲ್ಲಿರುವ ಶಿಶುವನ್ನೇ ಹಲವು ವ್ಯವಹಾರಿಕ ಉದ್ದೇಶಗಳಿಗಾಗಿ ಮೀಸಲು ವಧುವಾಗಿ ಕಾಯ್ದಿರಿಸುವ ಪದ್ಧತಿಯೂ ಇತ್ತೆಂದು ಡಾ. ಕಮಲಾದೇವಿ ಚಟ್ಟೋಪಾಧ್ಯಾಯರು ಬರೆಯುತ್ತಾರೆ. ಈ ರೀತಿಯ ವಿವಾಹ ತಂದೆ-ತಾಯಿಗಳ್ಗೆ ಹೇಳಿಕೊಳ್ಳಲು ಹೆಗ್ಗಳಿಕೆಯ ವಿಷಯವಾಗಿರುತ್ತಿತ್ತು. ಬಾಲ್ಯದಲ್ಲೇ ವಿವಾಹ ಮಾಡಿಕೊಡುವ ಈ ಪದ್ಧತಿಯ ಹಿನ್ನೆಲೆಯಲ್ಲಿ ಪರಕೀಯರ ಆಕ್ರಮಣಗ್ಳು ಹೇಗೆ ಕಾರಣವೋ ಒಳಾಕ್ರಮಣಗಳು ಕಾರಣವಾಗಿದ್ದವು. ಗೋವಾದಲ್ಲಿ ಪೋರ್ಚುಗೀಸರ ಪ್ರಭಾವಕ್ಕೆ ಒಳಪಟ್ಟ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಒಳಾಕ್ರಮಣದಿಂದ ಈ ಪದ್ಧತಿಯು ರೂಢಿಯಲ್ಲಿ ಬಂತೆಂದು ಹೇಳಲಾಗುತ್ತಿದೆ.. ಗೋವಾದಲ್ಲಿದ್ದ ಗೌಡ ಸಾರಸ್ವತರ ಮೇಲೆ ಪೋರ್ಚುಗೀಸರಿಂದ ನಡೆದ ಮತೀಯ ದಬ್ಬಾಳಿಕೆ, ಮತಾಂತರ ಮೊದಲಾದವುಗಳಿಂದ ಬೇಸತ್ತ ಅವರಿಗೆ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ ಹಾಕುವುದೇ ಸುರಕ್ಷಿತವಲ್ಲವೆಂದು ಅನಿಸಿರಬೇಕು. ಪ್ರೌಢವಯಸ್ಕರಾದ ಹೆಣ್ಣು ಮಕ್ಕಳನ್ನು ರಕ್ಷಿಸುವುದು ತಂದೆಯ ಜವಾಬ್ದಾರಿಯಾದ್ದರಿಂದ ಆತ ಆದಷ್ಟು ಬೇಗ ತನ್ನ ಕರ್ತವ್ಯವನ್ನು ಪೂರೈಸಿ ತನ್ನ ಮೇಲಿನ ಭಾರವಿಳಿಸಿಕೊಳ್ಳಲು ಯತ್ನಿಸುತ್ತಿದ್ದುದೇ ಬಾಲ್ಯ ವಿವಾಹಕ್ಕೆ ನಾಂದಿಯಾಗಲು ಸಾಧ್ಯವಾಯಿತು. ಇದೇ ಪದ್ಧತಿ ಮುಂದೆ ಗೋವಾಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ನೆಲೆಸಿದ್ದ ಮೇಲ್ವರ್ಗದ ಬೆಳೆದು ಹವ್ಯಕ ಬ್ರಾಹ್ಮಣರಲ್ಲಿ ಕ್ರಮೇಣ ವೀರಶೈವರಲ್ಲಿ ಹಾಗೂ ಇನ್ನಿತರ ಹಲವು ಪಂಗಡದ ಜನರಲ್ಲಿ ಬೆಳೆದು ಬಂದಿರಬೇಕು. ಹೀಗೆ ಬಾಲ್ಯ ವಿವಾಹ ಪದ್ಧತಿ ಧಾರ್ಮಿಕವಾಗಿ ಹೊಣೆಯಾಗಿ ಬೆಳೆದಂತೆ ಬಾಲ ವಿಧವೆಯರೂ ಸಮಾಜದಲ್ಲಿ ಅನಿವಾರ್ಯವಾದರು. ಆದರೆ ಅವರ ಬದುಕಿನ ಸ್ಠಿತಿ-ಗತಿ, ಅವಸ್ಥೆ, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲುಯತ್ನಿಸಿದವರು ತೀರ ಕಡಿಮೆ. ಪತಿಯೇ ಪರದೈವವೆಂದು ಬಗೆದ ಸ್ತ್ರೀಗೆ ಪತಿಯೇ ಇಲ್ಲದೇ ಮೇಲೆ ಬದುಕಿನಲ್ಲಿ ಯಾವ ಅರ್ಥವೂ ಉಳಿಯಲಿಲ್ಲ. ಹಾಗಾಗಿ ಮುಂದೆ ಇದೇ `ಸತಿ ಪದ್ಧತಿ' ರೂಢಿಯಲ್ಲಿ ಬರಲು ಕಾರಣವಾಯಿತು. ಹೀಗೆ ಒಂದರ ಹಿಂದೆ ಮತ್ತೊಂದು ಅನಿಶ್ಠ ಪದ್ಧತಿಗಳು ಆನೂಚಾನವಾಗಿ ಬೆಳೆದು ಬಂದಿತ್ತು. ಅಚ್ಚರಿಯ ಸಂಗತಿಯೆಂದರೆ ಸ್ವಾತಂತ್ರ್ಯ ಬಂದು ಇಶ್ಟು ವರ್ಷಗಳು ಕಳೆದರೂ ಈ ಮೇಲೆ ಹೇಳಿದ ಪದ್ಧತಿಗಳು ಹಿಂದುಸ್ಥಾನದಲ್ಲಿ ಆಗೀಗ ಕೆಲವು ಕಡೆ ಇನ್ನೂ ನಡೆದು ಬರುತ್ತಿದೆಯೆಂಬುದು ಸೋಜಿಗವನ್ನುಂಟು ಮಾಡುತ್ತಿದೆ. ವಿಧವೆಯರ ಸ್ಥಿತಿ-ಗತಿ ಆ ಕಾಲದಲ್ಲಿ ವಿಧವೆಯರ ಸ್ಥಿತಿ-ಗತಿ ಅತ್ಯಂತ ಹೀನಾಯವಾಗಿತ್ತು. ಅವ್ಳೊಂದು ಸಾಮಾಜಿಕ ಅನಿಷ್ಠವೆಂದೇ ತಿಳಿಯಲಾಗಿತ್ತು. ಬಾಲ ವಿಧವೆಯರ ಬಗ್ಗೆ ತುಸು ಮಟ್ಟಿನ ಅನುಕಂಪ ತೋರಿಸುತ್ತಿದ್ದರೂ ಅವರ ಉದ್ಧಾರಕ್ಕೆ ಪ್ರಯತ್ನಿಸಿದವರು ತೀರ ವಿರಳ. ಯಾವುದೇ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಆಕೆ ಅಪ್ರಸ್ತುತಳಾಗಿದ್ದಳು. ಶುಭ ಕೆಲಸ ಹಾಗೂ ಮಂಗಲ ಕಾರ್ಯಗಳಿಗೆ ಹೊರಟ್ಗ ವಿಧವೆಯ ದರ್ಶನವಾದರೆ ಅದು ಅಪಶಕುನ ಹಾಗೂ ಅಮಂಗಲಕರ ವೆಂದು ಪರಿಗಣಿಸಲಾಗಿತ್ತು. ಕೇಶ ಮುಂಡನ ಮಾಡಿಸಿಕೊಂಡ ಬಿಳಿ ಹಾಗೂ ಕೆಂಪು ಸೀರೆಯ ವಿಧವೆಯರ ಸಂಖ್ಯೆ ಸಮಾಜದಲ್ಲಿ ಗಣನೀಯವಾಗಿತ್ತು. ಸಕೇಶಿಯರಾದ ವಿಧವೆಯರು ಹೆಚ್ಚು ಅಪವಾದಗಳಿಗೆ ಗುರಿಯಾಗಬೇಕಿತ್ತು. ಅಪರೂಪಕ್ಕಾದರೂ ಅವರು ಮುಟ್ಟಿದ ನೀರು ಸಹ ಉಪಯೋಗಕ್ಕೆ ಅನರ್ಹವಾಗಿತ್ತು. ಮನೆಗೆ ಬಂದ ಅತಿಥಿಗಳೆದುರು ಗಣ್ಯರ ಎದುರು ಅವರು ಕಾಣಿಸಿಕೊಳ್ಳಕೂಡದು. ಮನೆಯಲ್ಲಿ ಕತ್ತಲೆಯ ಮೂಲೆಯನ್ನಾದರೂ ಆಶ್ರಯಿಸಿ ಹೂಬತ್ತಿ ಹೊಸೆಯುತ್ತಲೋ, ಚಿಕ್ಕ ಮಕ್ಲ್ಕಳನ್ನಾಡಿಸುತ್ತಲೋ ಕಾಲ ಕಳೆಯುವ ಪ್ರಸಂಗವಿತ್ತು. ಈ ರೀತಿ ಬಾಆಳ ಮುಂಜಾವಿನಲ್ಲೇ, ಬದುಕಿನನ ಬಗ್ಗೆ ಇನ್ನೂ ಕನಸುಗಳನ್ನು ಕಾಣುವ ಎಳೆಯ ವಯಸ್ಸಿನಲ್ಲಿಯೇ ಬಾಲ ವಿಧವೆಯರು ವಿರಕ್ತರಂತೆ ವಯಸ್ಸಿಗೆ ಸಹಜವಾದ ಆಶೆ ಆಕಾಂಕ್ಷೆಗಳಿಂದ ವಂಚಿತರಾಗಿ ಕಾಲ ಕಳೆಅಯಬೇಕಿತ್ತು. ಎಷ್ಟೋ ಮುಗ್ಧೆಯರಿಗೆ ತಾವು ಬಾಲ ವಿಧವೆಯರೆಂಬ ಕಲ್ಪನೆಯೂ ಇರಲಿಲ್ಲ. ವಿಧವೆಯರ ಬಾಳನ್ನು ಬೆಳಗಿಸಲು ಯಾವುದೇ ಸುಧಾರಣೆಯನ್ನು ನಮ್ಮ ಹಿರಿಯರು ಸನಾತನಿಗಳು ಕೈ ಕೊಳ್ಳದೇ ಇದ್ದದ್ದು ನಮ್ಮ ದುರ್ದೈವವೆ ಸರಿ. ಕಮಲಾದೇವಿ ಚಟ್ಟೋಪಾಧ್ಯಾಯರು ಬಾಲ ವಿಧವೆಯ ಸ್ಥಿತಿಯನ್ನು ಈ ರೀತಿ ವಿವರಿಸುತ್ತಾರೆ. ``ಸದಾ ಬೈಗುಳನ್ನು ತಿನ್ನುತ್ತ ಬದುಕುವುದು ಬಾಲ ವಿಧವೆಯರ ಹಣೆಬರಹವಾಯಿತು. ಅದರಲ್ಲೂ ಕೆಲವರು ತೀರಾ ಎಳೆ ಹುಡುಗಿಯರು. ಅವರ ಇಡೀ ಬದುಕು ಮೂರಾ ಬಟ್ಟೆ. ಅವರು ಯಾವ ಮಂಗಳ ಕಾರ್ಯಕ್ಕೂ ಅನರ್ಹರು. ಅವರ ಮುಖದಎಶನವೂ ಯೋಗ್ಯವಲ್ಲವೆನಿಸಿತು. ಅಪಾರವಾದ ಅವಮಾನಗಳಿಗೆ ಈಡಾಗಬೇಕಾಯಿತು. ಸಮಾಜದಿಂದ ಬಹಿಷ್ಕ್ರತರಾಗುತ್ತಿದ್ದರು. ಇದು ಹೆತ್ತವರಿಗೆ ಇನ್ನಷ್ಟು ನೋವನ್ನುಂಟುಮಾಡುಂಥಹುದಾಗಿತ್ತು. ಇದೆಲ್ಲ ಕೊಟ್ಟ ಕೊನೆಗೆ ಎಲ್ಲಿಯವರೆಗೆ ಮುಟ್ಟಿತೆಂದರೆ ಹೆಣ್ಣು ಮಗು ಬೇಡ್ದ ಜೀವವಾಗಿ, ಹುಟ್ಟಿದ ಕೂಡಲೆ ಮುಗಿಸಿಬಿಡುವಂಥಹ ಹೇಯವಾದ ಶಿಶು ಹತ್ಯೆಯವರೆಗೂ." ಪ್ರಾಪ್ತ ವಯಸ್ಸಿಗೆ ಬಂದ ಬಾಲ ವಿಧವೆಯರು ನಿಸರ್ಗ ಸಹಜವಾದ ದೈಹಿಕ ಕಾಮನೆಗಳಿಗೆ ಬಲಿಯಾಗಿ ಅಥವಾ ಬಲಾತ್ಕಾರಕ್ಕೆ ಒಳಪಟ್ಟು ಗರ್ಭಿಣಿಯಾದರೆ ಆಕೆಯನ್ನು ಶ್ರೀಮಠದ ಸೀಮೆಯ ಪದಾಧಿಕಾರಿಗಳು ಸ್ವಾಮಿಗಳ ಸಮ್ಮುಳದಲ್ಲಿ ವಿಚಾರಣೆ ನಡೆಸಿ ಬಹಿಷ್ಕಾರ ವಿಧಿಸುತ್ತಿದ್ದರು. ವಿಧವೆ ಹಾಗೂ ಆಕೆಗೆ ಹುಟ್ಟಿದ ಮಗು ಆ ನಂತರದ ಪೀಳಿಗೆಯವರೆಲ್ಲ ಜಾತಿ ಭ್ರಷ್ಟರಾಗಿ ಯಾರದೋ ಊಳಿಗ ಮಾಡಿಕೊಂಡಿರಬೇಕಿತ್ತು. ಆಪಾದನೆಗೊಳಪಟ್ಟ ಗಂಡು ಮಾತ್ರ ಮಠಕ್ಕೆ ತಪ್ಪು ದಂಡ ಸಲ್ಲಿಸಿ ದೋಷ ಮುಕ್ತನಾಗುತ್ತಿದ್ದ. ಸಾಯಲು ಹೊರಟ ಮುದುಕನಿಗೆ ಮತ್ರೆ ಮದುವೆಯಾಗಲು ಅವಕಾಶ ನೀಡುತ್ತಿದ್ದ ಸಮಾಜ ಬಾಲ್ಯದಲ್ಲೇ ವಿಧವೆಯಾದ ಅಕ್ಷತ ಕನ್ಯೆಯಾಗಿರುವ ಹುಡುಗಿಗೆ ಮದುವೆಯ ಅವಕಾಶ ನೀಡಲಿಲ್ಲ. ಇದು ಪುರುಷ ಪ್ರಧಾನ ಸಮಾಜ ಸ್ತ್ರೀಯರ ಮೇಲೆ ನಡೆಸುತ್ತಿದ್ದ ಘೋರ ದೌರ್ಜನ್ಯವಾಗಿತ್ತು. ಮಾಲೇರು ಬಾಲ ವಿಧವೆಯರು ವಯಸ್ಸಿಗೆ ನಿಸರ್ಗ ಸಹಜವಾದ ದೈಹಿಕ ಕಾಮನಗೊಳಪಟ್ಟು ಅಥವಾ ಬಲಾತ್ಕಾರಕ್ಕೊಳಪಟ್ಟು ಗರ್ಭ ಧರಿಸಿ ಶ್ರೀ ಮಠದಿಂದ ಬಹಿಷ್ಕಾರ ಜಾತಿ ಭ್ರಷ್ಟತೆಯ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಈ ರೀತಿಯಿಂದಮೇಲ್ವರ್ಗದಲ್ಲಿ ಬಹಿಷ್ಕೃತರಾಗಿದ್ದವರದೇ ಸಂತತಿ ಬೆಳೆದು ಅದೊಂದು ವಿಭಿನ್ನ ಜಾತಿಯಾಗಿ `ಮಾಲೇರು' ಅಥವಾ `ಗೌಡೇರು' ಎಂದು ಕರೆಯಲ್ಪಟ್ಟಿತು. ಕೆಲ ಕಾಲ ಅವರು ಅಸ್ಪೃಶ್ಯರಂತೆ ಬಾಳ್ಬೇಕಾಯಿತು. ಬ್ರಾಹ್ಮಣ ವಿಧವೆಗೆ ಬ್ರಾಹ್ಮಣ್ರಿಂದಲೇ ಮಕ್ಕಳಾದರೆ ಅವರನ್ನು `ಗೋಲಕ್' ಎಂದು, ಉಳಿದ ಮೇಲ್ವರ್ಗದಿಂದಾದ ಸಂತತಿಗೆ `ಮಾಲೇರು' ಎಂದು, ಕೀಳು ಜನಾಂಗದವರಿಂದ ಆದ ಮಕ್ಕಳಿಗೆ `ಗೌಡ್ತಿ' ಎಂದು ಕರೆಯುತ್ತಾರೆಂದು ಸರಕಾರದ ಪರಿಪತ್ರ ತಿಳಿಸುತ್ತದೆ.