ಬಾಬುಲ್ ನಾಥ್ ಮಂದಿರ್, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'Shri Babulnath Mandir',

ಬಾಬುಲ್ ನಾಥ್,' ಮುಂಬಯಿ ನಗರದ, ಅತಿ ಪುರಾತನ ಶಿವ-ಮಂದಿರಗಳಲ್ಲೊಂದು. ಇಲ್ಲಿ, ಶಿವನ ಆಕೃತಿ, ಬಾಬುಲ್ ಮರದ ಆಕಾರದಲ್ಲಿದೆ ; ಈ ದೇವಸ್ಥಾನದ ಪ್ರಧಾನ ದೇವರು, ಶಿವಲಿಂಗ. ಮಂದಿರ ರಸ್ತೆಯ ಮಟ್ಟದಿಂದ ಎತ್ತರದಲ್ಲಿದೆ. ಸುಮಾರು ಮೆಟ್ಟಿಲುಗಳನ್ನು ಏರಿಹೋಗಬೇಕು. ಪಕ್ಕದಲ್ಲೇ ಎಲಿವೇಟರ್ ಸೌಲಭ್ಯವಿದೆ. ವೃದ್ಧರು, ಹೆಂಗಸರು, ಮಕ್ಕಳು ಇದನ್ನು ಉಪಯೋಗಿಸಬಹುದು. 'ಬಾಬುಲ್ ನಾಥ್,' ದೇವಸ್ಥಾನದ ಎದುರಿಗೆ, 'ಇಂಟರ್ ನ್ಯಾಷನಲ್, ಸ್ಕೂಲ್,' ಇದೆ. 'ಬಾಬುಲ್ ನಾಥ್ ಮಂದಿರ', ಕ್ಕೆ, ಬಸ್ ಸೌಲಭ್ಯವಿದೆ. 'ಶ್ರೀ ಬಾಬುಲ್ ನಾಥ್ ಮಂದಿರ್', ಚೌಪಾತಿಯ ಹತ್ತಿರವಿದೆ. ಚೌಪಾತಿ ಬೀಚ್ ಪರ್ಯಟಕರಿಗೆ ಮುದನೀಡುವ ಸ್ಥಳ. ಪಕ್ಕದಲ್ಲೇ, "ಭಾರತೀಯ ವಿದ್ಯಾಭವನ," ದ ಕಟ್ಟಡವಿದೆ. ಮುಂದೆ ಹೋದರೆ, "ವಿಲ್ಸನ್ ಕಾಲೇಜ್," ಸಿಗುತ್ತದೆ. ’ಚರ್ನಿ ರೋಡ್ ರೈಲ್ವೆ ಸ್ಟೇಷನ್,’ ಗೆ ಹತ್ತಿರ.