ಬಾಬಾ ಕಲ್ಯಾಣಿ

ವಿಕಿಪೀಡಿಯ ಇಂದ
Jump to navigation Jump to search
'ಬಾಬಾ ಕಲ್ಯಾಣಿ

ಬಾಬಾ ಕಲ್ಯಾಣಿ (ಹುಟ್ಟು: ಜನವರಿ ೭, ೧೯೪೯) ಒಬ್ಬ ಭಾರತೀಯ ಉದ್ಯಮಿ. ಭಾರತ್ ಫೋರ್ಜ್ ಸಂಸ್ಥೆಯನ್ನು ಒಳಗೊಂಡಿರುವ "ಕಲ್ಯಾಣಿ ಉದ್ಯಮ ಸಮೂಹ ಸಂಸ್ಥೆ"ಯನ್ನು ಪ್ರಾರಂಭಿಸಿ, ಯಶಸ್ವಿಯಾಗಿರುವ ಇವರು, ಪುಣೆ ನಿವಾಸಿಯಾದರೂ, ಮೂಲತ: ಕನ್ನಡಿಗರು. ಹೊಸಪೇಟೆಯ ಹತ್ತಿರ ಕಲ್ಯಾಣಿ ಸ್ವೀಲ್ಸ್ಹೆಸರಿನಲ್ಲಿ ಉಕ್ಕು ಉದ್ಯಮ ಸ್ಥಾಪಿಸಿದರು. ಹುಬ್ಬಳ್ಳಿ ಬೈಪಾಸ್ ರಸ್ತೆ, ಬೆಂಗಳೂರು-ಮೈಸೂರು ಕಾರಿಡಾರ್, ನೈಸ್ ಸಂಸ್ಥೆ ಯೋಜನೆ, ಹೀಗೆ ಸಾವಿರಾರು ಕೋಟಿ ಬಂಡವಾಳದ ಯೋಜನೆಗಳನ್ನು ರಾಜ್ಯದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಕೈಗೊಂಡಿದ್ದಾರೆ.