ವಿಷಯಕ್ಕೆ ಹೋಗು

ಬಾನಾಜಿ ಲಿಮ್ಜಿ ಪಾರ್ಸಿ ಅಘಿಯಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಂಬಯಿ ನಗರದ ದಕ್ಷಿಣ ಮುಂಬಯಿ ಜಿಲ್ಲೆಯ ಪುರಾತನ ಕೋಟೆಯನ್ನು ಹೋಲುವ, 'ಬಾನಾಜಿ ಲಿಮ್ಜಿ ಪಾರ್ಸಿ ಆಘಿಯಾರಿ/ಅಗಿಯಾರಿ,[]' ೩೦೦ ವರ್ಷಗಳ ಹಬ್ಬವನ್ನು ಆಚರಿಸುತ್ತಿದೆ.[] ಇದು ದಕ್ಷಿಣ ಮುಂಬಯಿ ನ ಹಾರ್ನಿಮನ್ ಸರ್ಕಲ್ ನ ಹತ್ತಿರದ ಚಿಕ್ಕಗಲ್ಲಿಯಲ್ಲಿದೆ. ೧೭೦೯ ರಲ್ಲಿ ಆಗಿನ ಬೊಂಬಾಯಿನ ಒಬ್ಬ ಪ್ರಗತಿಶೀಲ ಪಾರ್ಸಿ ವ್ಯಾಪರಸ್ತ ಇದರ ಸ್ಥಾಪನೆ ಮಾಡಿದನು. ಈ ಇಲಾಖೆಯಲ್ಲಿ ಆದ ಬೆಂಕಿಯ ಅನಾಹುತವನ್ನು ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆ ಸಮಯದಲ್ಲಿ ಹಲವಾರು ಪಾರ್ಸಿ ಎನ್ಕ್ಲೇವ್ ಗಳು ಫೋರ್ಟ್ ಜಿಲ್ಲೆಯ ಅಕ್ಕ-ಪಕ್ಕಗಳಲ್ಲಿ ಸ್ಥಾಪಿಸಲ್ಪಟ್ಟವು. ಹತ್ತಿರದಲ್ಲೇ ಒಟ್ಟು ೭ ದೇವಾಲಯಗಳು ಹುಟ್ಟಿಕೊಂಡವು. ೧೮೦೩ ರಲ್ಲಿ ಆದ ಬೆಂಕಿ ಅಪಘಾತದಿಂದ ಫೈರ್ ಟೆಂಪಲ್ ಕಟ್ಟಡಕ್ಕೆ ಹಾನಿ ತಗುಲಿ ಕಟ್ಟದ ನೆಲಸಮವಾಯಿತು. ಆಗ ದೇವಾಲಯದ ಪವಿತ್ರಅಗ್ನಿಯನ್ನು, ಗೊವಾಲಿಯ ಟ್ಯಾಂಕ್,ಹತ್ತಿರದ 'ಸೂನ್ ಐಜಿ ಆಘಿಯಾರಿ' ಗೆ ವರ್ಗಾಯಿಸಲಾಗಿತ್ತು. 'ಗ್ಲೋಬಲ್ ಡೈರೆಕ್ಟೊರಿ ಆಫ್ ಫೈರ್ ಟೆಂಪಲ್ಸ್' ಪುಸ್ತಕದ ಕೃತಿಕಾರ, 'ಮರ್ಜ್ ಬಾನ್ ಗಿ'ಯರ ರವರ ಪ್ರಕಾರ, ಬೊಂಬಾಯಿನ ಶ್ರೀಮಂತ ಪಾರ್ಸಿ ಸಮುದಾಯದ ವ್ಯಾಪಾರಗಾರರು ಬಹಳವಾಗಿ ಧನ ಸಹಾಯ ಮಾಡಿದರು. ಹೊಸ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಅತಿ ಬಡವರು ಸಹಿತ, ಮೊಟ್ಟೆಗಳನ್ನೂ, ನೂರಾರು 'ಟಾಡಿ ಮಗ್ಸ್' ಗಳನ್ನೂ ದಾನವಾಗಿ ಕೊಟ್ಟರು. ಈ ದಾನ ಕಾಣಿಕೆಗಳನ್ನು ಗಾರೆ ಅರೆಯುವ ಯಂತ್ರದ ಒಳಗೆ ಹಾಕಿ,ಚೆನ್ನಾಗಿ ಬೆರೆಸಿ ಕಟ್ಟಡ ಕಟ್ಟುವಲ್ಲಿ ಬಳಸಿಕೊಂಡರು. ಈ ಎಲ್ಲ ವರ್ಗದ ಜನರ ಪ್ರೀತಿ,ವಿಶ್ವಾಸ, ಮತ್ತು ನಂಬಿಕೆಯ ಆಧಾರದ ಮೇಲೆ ಕಟ್ಟಡ ತಲೆಯೆತ್ತಿ ನಿಂತಿತು. ೧೮೪೫ ರಲ್ಲಿ ಅಗ್ನಿಯನ್ನು ಪುನರ್ಸ್ ಸ್ಥಾಪಿಸಲಾಯಿತು. ಈಗಿನ ಹೊಸಕಟ್ಟಡ, ಪಾರ್ಸಿ ಪಂಚಾಯತ್ ಬಳಿಯ ಸಿ.ಎಸ್.ಟಿ. ಹತ್ತಿರದ 'ಪೆರಿನ್ ನಾರಿಮನ್ ಸ್ಟ್ರೀಟ್' ನ ಬಳಿಯ (೧ ಕಿ.ಮೀ. ದೂರದ) ಪಾರ್ಸಿ ದೇವಾಲಯ,ಶುಕ್ರವಾರದಂದು ೨೭೬ ವರ್ಷ ಮುಗಿಸಲಿದೆ.

ಮುಂಬಯಿನ ಪಾರ್ಸಿ ದೇವಾಲಯಗಳು

[ಬದಲಾಯಿಸಿ]

ಮುಂಬಯಿನಲ್ಲಿ ಒಟ್ಟು ೪೭ ಟೆಂಪಲ್ಸ್ ಗಲಿವೆ. ಬಂಗಲೆಯನ್ನು ಹೋಲುವ ಮ್ಯಾನ್ಶನ್, ದೊಡ್ಡ ಎಡಿಫೈಸ್ ಶಿಲ್ಪಿಗಳು ಅತಿ ಸುಂದರವೆಂದು ಹೊಗಳಿದ್ದಾರೆ. ಗ್ರೇಟರ್ ಮುಂಬಯಿ ವಿಶ್ವದ ಪ್ರಮುಖ ಜೋರಾಸ್ತ್ರಿಯನ್ ದೇವಸ್ಥಾನ ಗಳನ್ನೂ ಹೊಂದಿದೆ.(೪೦%) ಅವುಗಳಲ್ಲಿ ೧೦ ರಲ್ಲಿ ೪ ಗ್ರೇಡ್ ದೇವಾಲಯಗಳೆಂದು ಪರಿಗಣಿಸಲಾಗಿದೆ.(Atash Behram) in the world are housed in fire temples in Mumbai.

ಉಲ್ಲೇಖಗಳು

[ಬದಲಾಯಿಸಿ]
  1. "#MumbaiList: The Revered Fire Burns Bright In Mumbai's Heritage Agiaries, Mumbai mag, Jan 3, 2014". Archived from the original on ಜುಲೈ 9, 2014. Retrieved ಆಗಸ್ಟ್ 5, 2014.
  2. Banaji Limji Agiary, Fort Mumbai'ಯೂ ಟ್ಯೂಬ್'[ಶಾಶ್ವತವಾಗಿ ಮಡಿದ ಕೊಂಡಿ]