ಬಾಂಬೆ ಹೈಕೋರ್ಟ್, ಮುಂಬಯಿ.
ಮುಂಬಯಿ ಹೈಕೋರ್ಟ್,[೧] ಕಟ್ಟಡದ ವಿನ್ಯಾಸಕಾರರು, 'ಕರ್ನಲ್ ಜಾನ್ ಅಗಸ್ಟಸ್ ಜನರಲ್ ಫುಲ್ಲರ್, ಆಫ್ ದ ರಾಯಲ್ ಎಂಜಿನಿಯರ್ಸ್.' ಗಾಥಿಕ್ ಶೈಲಿ ಯಪುನರಾವರ್ತನೆಯಲ್ಲಿ ಮೆರೆದ ವಾಸ್ತು ಶಿಲ್ಪ ಅನನ್ಯವಾದದ್ದು. ಈ ಭವ್ಯ ಸುಂದರ ಕಟ್ಟಡ, 'ಜನರಲ್ ಪುಲ್ಲರ್' ಬಹಳ ಅಸ್ತೆಯಿಂದ ನಿರ್ಮಿಸಿದ ಮಹತ್ವದ ಕಟ್ಟಡವಾಗಿದೆ.
'ಸ್ಥಳೀಯ ಜನ', ಹಾಗೂ 'ಸ್ಥಳೀಯ ಕಟ್ಟಡ ನಿರ್ಮಾಣದ ಪರಿಕರಗಳು'
[ಬದಲಾಯಿಸಿ]ಹೈಕೋರ್ಟ್ ಬರುವ ಮೊದಲು, 'ರೆಕಾರ್ಡರ್ಸ್ ಕೋರ್ಟ್,' ಎಂಬ ವ್ಯವಸ್ಥೆ ಜಾರಿಯಲ್ಲಿತ್ತು. ಇದು 'ಅಡ್ಮಿರಾಲಿಟಿ,' ಕಟ್ಟಡದಲ್ಲಿತ್ತು. ಈ ಭವನದಲ್ಲೇ ಅನೇಕ ಗಣ್ಯರು ವಾಸ್ತವ್ಯಹೂಡಿದ್ದರು. (ಮುಂಬಯಿನ ಗವರ್ನರ್, ಭಾರತೀಯ ನೌಕಾದಳದ ಮುಖ್ಯಸ್ಥ, ಮೊದಲಾದವರು) ಇಂದಿಗೂ ಶಹೀದ್ ಭಗತ್ ಸಿಂಗ್ ರಸ್ತೆಯಲ್ಲಿ 'ಗ್ರೇಟ್ ವೆಸ್ಟರ್ನ್ ಬಿಲ್ಡಿಂಗ್,' ಎಂಬ ಹೆಸರಿನ ಕಟ್ಟಡ ಹಿಂದಿನ ನೆನಪುಗಳನ್ನು ಸೂಚಿಸುತ್ತದೆ. ಮುಂಬಯಿ ಹೈಕೋರ್ಟ್ " ಕಟ್ಟಲು ಸಾಕಾದಷ್ಟು ಸ್ಥಳೀಯ ಜನರ ಸಹಾಯ, ಹಾಗೂ ಸ್ಥಳೀಯ ಕಟ್ಟಡ ನಿರ್ಮಾಣದ ಪರಿಕರಗಳನ್ನು ಪಡೆಯಲಾಯಿತು. ೧೯ ನೆಯ ಶತಮಾನದ ಕೊನೆಯಲ್ಲಿ ಬೊಂಬಾಯಿನ ಪರಿಸರದಲ್ಲೇ ಸಿಗುವ ಕಪ್ಪು ಬಾಸಾಲ್ಟ್ ಕಲ್ಲನ್ನು ಉಪಯೋಗಿಸಿ, ನಿರ್ಮಿಸಿದ ಹೈ ಕೋರ್ಟ್ ಕಟ್ಟಡದ ಮೆರುಗು ಪರ್ಯಟಕರನ್ನು ಆಕರ್ಶಿಸುತ್ತದೆ. ಜನರಲ್ ಫುಲ್ಲರ್, ರ ಗೆಳೆಯರು, ಹೈಕೋರ್ಟ್ ಕಟ್ಟಡದ ಕೆಲಸ, "ಕ್ಯಾಪ್ಟನ್ ರ ಫಾಲಿ" ಎಂದು ತಮಾಷೆಮಾಡುತ್ತಿದ್ದರು. (ಬಹುಶಃ ಅವರ ಮಾಡಿದ ಓಂದೇ-ಒಂದು ಪ್ರಮುಖ ಕಟ್ಟಡ-ವಿನ್ಯಾಸ ), ಸುತ್ತಲೂ 'ವೆನಿಟಿಯನ್ ಶೈಲಿಯ ಗ್ಯಾಲರಿಗಳು,' 'ಛೇಂಬರ್,' ನಲ್ಲಿ ವಿರಾಜಿಸುತ್ತಿವೆ. ಒಂದು ವಿಶೇಷತೆಯೆಂದರೆ, 'ವಾನರಗಳನ್ನು ಬಳಸಿಕೊಂಡು ಮಾಡಿದ ಕಲಾವಿನ್ಯಾಸ'. 'ಪಶು, 'ಪಕ್ಷಿ, ಹಾಗೂ 'ವನ್ಯ-ಮೃಗಗಳ ಚಿತ್ರಗಳನ್ನು,' ಹೇರಳವಾಗಿ ಬಳಸಿಕೊಂಡು ನಿರ್ಮಿಸಿದ ವಾಸ್ತುಶಿಲ್ಪ ಅನನ್ಯವಾದದ್ದು.
'ಮುಂಬಯಿ ಹೈಕೋರ್ಟ್ ಭವನ,’ ದ ಅನನ್ಯತೆ
[ಬದಲಾಯಿಸಿ]ನಾಲ್ಕಂತಸ್ತಿನ ಈ ಕಟ್ಟಡದ ಉದ್ದ, ೫೬೨ ಅಡಿ, ಅಗಲ, ೧೮೭ ಅಡಿ, ಉಪ್ಪಾರಿನ ಎತ್ತರ, ೯೦ ಅಡಿ, ಮಧ್ಯ ಭಾಗದಲ್ಲಿ ೧೭೮ ಅಡಿ,ಎತ್ತರ, ಒಟ್ಟಾರೆ ಬಳಸಲು ದೊರೆಯುವ ಜಾಗ [ಬಿಲ್ಟ್ ಅಪ್] ೮೦,೦೪೩ ಚ.ಅಡಿಗಳು. ಮುಖ್ಯ ದ್ವಾರದ ಇಬ್ಬದಿಯಲ್ಲಿ, ನಿರ್ಮಿಸಿರುವ ಗೋಪುರಗಳ ಮೇಲೆ 'ನ್ಯಾಯ ದೇವತೆ,' ಹಾಗೂ 'ಕರುಣಾ ದೇವತೆ,' ಯರ ಭವ್ಯ ಪ್ರತಿಮೆಗಳಿವೆ. ಕಟ್ಟಡದಲ್ಲಿ ಅಳವಡಿಸಲಾಗಿದ ಶಿಲ್ಪ ಕಲೆಯ ವಿಕ್ಷಿಪ್ತತೆ ಎಂತಹವರನ್ನೂ ಮೂಕರನ್ನಾಗಿ ಮಾಡುತ್ತದೆ. ಮುಂಬಯಿ ಹೈಕೋರ್ಟ್ ನ ಅನನ್ಯತೆಯೆಂದರೆ, ಪ್ರಾಣಿಗಳನ್ನು ಉಪಯೋಗಿಸಿಕೊಂಡು, ಅವುಗಳ ಚಿತ್ರಗಳನ್ನು ಭವನದ ಒಳ ವಲಯದಲ್ಲಿ ನಿರ್ಮಿಸುವುದರ ಮೂಲಕ, ಒಂದು ಹೊಸತನವನ್ನು ತಂದುಕೊಟ್ಟಿದ್ದು. ಇದೊಂದು ಕಟ್ಟಡ ಕಲಾಪ್ರಾಕಾರದ ಅನನ್ಯತೆ ಎಂದು ಹೇಳಿದರೆ ತಪ್ಪಾಗಲಾರದು. ಮಂಗಣ್ಣಗಳು, ನ್ಯಾಯಾಲಯದ ತಕ್ಕಡಿಯನ್ನು ಹಿಡಿದು, ನ್ಯಾಯ ತೀರ್ಮಾನಮಾಡುವ ಸನ್ನದ್ಧತೆಯಲ್ಲಿರುವ ಭವ್ಯ ಚಿತ್ರಕಲಾರಚನೆಗಳು. ಬ್ಯಾರಿಸ್ಟರ್ ಉಡುಪಿನಲ್ಲಿ ನರಿಗಳು, ವಿಜೃಂಭಿಸುತ್ತಿವೆ. ಹಂದಿಗಳು, ಹುಲಿಗಳು, ಹಾಗೂ ಪಕ್ಷಿಗಳು ಸ್ವಚ್ಛಂದವಾಗಿ ಕಾಡಿನ ಮೌನದ ಸ್ಥಬ್ದತೆಯಲ್ಲಿ ಮೈಮರೆತ ದೃಷ್ಯಗಳನ್ನು ನಾವು ಕಾಣುತ್ತೇವೆ. ನಮ್ಮದೇಶದ ದೇಸೀಪ್ರತಿಭೆಗಳಿಗೆ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟು, ಅವರಿಂದ ಅಮೂಲ್ಯ ಕಲಾಕೊಡುಗೆಯನ್ನು ಹೊರಹೊಮ್ಮಿಸಿದ ಜಾಣ್ಮೆಯನ್ನು ನಾವು ’ಜನರಲ್ ಫುಲ್ಲರ್’, ರವರ ಕಾರ್ಯವಿಧಾನಗಳಲ್ಲಿ ಮನಗಾಣುತ್ತೇವೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೆಲವು ಕಾನೂನು-ಧುರೀಣರು ಈ ಕಟ್ಟಡದಲ್ಲಿ ಕೆಲಸಮಾಡಿದ್ದರು. 'ಮೊಹಮ್ಮದಾಲಿ ಜಿನ್ನ', 'ಗಾಂಧೀಜಿ', 'ಡಾ. ಅಂಬೇಡ್ಕರ್', ಇಲ್ಲಿಯ ಸದಸ್ಯ-ವಕೀಲರಾಗಿದ್ದರು.
ಟಿಳಕರ ಅಮರವಾಣಿ
[ಬದಲಾಯಿಸಿ]ಭಾರತೀಯ ರಾಜಕೀಯದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ, ಬಾಲಗಂಗಾಧರ ತಿಳಕ್ ರವರ ಮೇಲೆ ೧೯೦೮ ರಲ್ಲಿ ಮೊಕದ್ದಮೆ ಮಾಡಿ, ಅವರಿಗೆ ೬ ವರ್ಷ ಜೈಲುವಾಸದ ತೀರ್ಪನ್ನು ಜಾರಿಮಾಡಿದ್ದು ಈ ಕಟ್ಟಡದಲ್ಲೆ. ಈ ಭವನದ ಪ್ರಮುಖ ತೀರ್ಪುನೀಡುವ ಛೇಂಬರ್ ನ ಗೋಡೆಯಮೇಲೆ ಕೆತ್ತಿರುವ ವಾಕ್ಯಗಳು, ಎಂದೆಂದಿಗೂ ಭಾರತೀಯರಿಗೆಲ್ಲಾ ಮಾರ್ಗದರ್ಶಿಯಾದದ್ದು. 'ನ್ಯಾಯಮಂಡಳಿ ಏನೇ ಹೇಳಲಿ, ನಾನು ದೋಷಿಯಲ್ಲ ಎಂಬ ವಿಶ್ವಾಸ ನನಗಿದೆ. 'ನಾನು ಶಿಕ್ಷೆ ಅನುಭವಿಸುವುದರಿಂದ ನನ್ನ ಧ್ಯೇಯ ಸಾಧನೆಗೆ ಸಹಾಯವಾದೀತು ಎಂದು ಆ ಜಗನ್ನಿಯಾಮಕನ ಇಚ್ಛೆಯಾದರೆ ಹಾಗೆಯೇ ಆಗಲಿ,'