ಬಹುಳಾ ಕೋಟೆ
ಗೋಚರ
ಬಹುಳಾ ಕೋಟೆ | |
---|---|
ನಾಸಿಕ್, ಮಹಾರಾಷ್ಟ್ರ | |
ನಿರ್ದೇಶಾಂಕಗಳು | 19°52′06.4″N 73°42′14.7″E / 19.868444°N 73.704083°E |
ಶೈಲಿ | ಬೆಟ್ಟದ ಕೋಟೆ |
ಎತ್ತರ | ೩೧೬೫ ಅಡಿ |
ಸ್ಥಳದ ಮಾಹಿತಿ | |
ಒಡೆಯ | ಭಾರತ ಸರಕಾರ |
ಇವರಿಗೆ ಮುಕ್ತವಾಗಿದೆ ಸಾರ್ವಜನಿಕರಿಗೆ | ಹೌದು |
ಪರಿಸ್ಥಿತಿ | ಅವಶೇಷ |
ಸ್ಥಳದ ಇತಿಹಾಸ | |
ಸಾಮಗ್ರಿಗಳು | ಕಲ್ಲು |
ಕೆಡವಲಾಗಿದ್ದು | ೧೮೧೮ |
ಬಹುಳಾ ಕೋಟೆಯು ನಾಸಿಕ್ ಜಿಲ್ಲೆಯ ಇಗತ್ಪುರಿ ತಾಲೂಕಿನಲ್ಲಿದೆ. ಇದು ಥಾಲ್ ಘಾಟ್ ಮೂಲಕ ಹಾದುಹೋಗುವ ಪ್ರಾಚೀನ ವ್ಯಾಪಾರ ಮಾರ್ಗದಲ್ಲಿದೆ. ಕೋಟೆಯು ಗುಲಾನೆ ಗ್ರಾಮದ ಬಳಿ ಇದೆ. [೧]
ತಲುಪುವ ವಿಧಾನ
[ಬದಲಾಯಿಸಿ]ಗುಲಾನೆ ಗ್ರಾಮವು ಇಗತ್ಪುರಿಯಿಂದ ೩೭ ಕಿಮೀ ದೂರದಲ್ಲಿದೆ. ಇಗತ್‌ಪುರಿಯು ಮುಂಬೈ-ನಾಸಿಕ್ ರೈಲ್ವೆ ಮಾರ್ಗದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ NH160 ರಲ್ಲಿದೆ. ಕೋಟೆಯು ಗುಲಾನೆ ಗ್ರಾಮದಿಂದ ಸುಮಾರು ೪ ಕಿಮೀ ದೂರದಲ್ಲಿದೆ. ಬೆಟ್ಟದ ತುದಿ ತಲುಪಲು ಸುಮಾರು ಒಂದು ಗಂಟೆ ಸಮಯ ಹಿಡಯುತ್ತದೆ. ಬೆಟ್ಟವನ್ನು ಸುತ್ತುವರೆದಿರುವ ಮತ್ತು ಕೋಟೆಯ ತುದಿಗೆ ಕೊಂಡೊಯ್ಯುವ ೭೦ ಕಲ್ಲಿನ ಮೆಟ್ಟಿಲುಗಳಿವೆ. ಕೆಲವು ಕಟ್ಟಡಗಳ ಅವಶೇಷಗಳು ಮತ್ತು ಮೇಲ್ಭಾಗದಲ್ಲಿ ನೀರಿನ ತೊಟ್ಟಿಗಳಿವೆ. [೨]
ಇತಿಹಾಸ
[ಬದಲಾಯಿಸಿ]೧೮೧೮ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಕ್ಯಾಪ್ಟನ್ ಬ್ರಿಗ್ಸ್ ಕೋಟೆಯನ್ನು ವಶಪಡಿಸಿಕೊಂಡರು. ೧೯೪೪ ರಲ್ಲಿ ಪಕ್ಕದ ಪ್ರದೇಶದೊಂದಿಗೆ ಈ ಕೋಟೆಯನ್ನು ಭಾರತೀಯ ಮಿಲಿಟರಿಗೆ ಹಸ್ತಾಂತರಿಸಲಾಯಿತು. ಇದನ್ನು ಅವರು ನಿಯಮಿತವಾಗಿ ಫೈರಿಂಗ್ ರೇಂಜ್ ಆಗಿ ಬಳಸುತ್ತಾರೆ. [೨]
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Pathak, Arunchandra S. (1975). Nashik District Gazetteer (Second ed.). Bombay: Govt. of Maharashtra. Retrieved 21 May 2021.
- ↑ ೨.೦ ೨.೧ Padwal, Ramesh (28 May 2017). "Maharashtra Times". No. Nashik. The Times Group. Retrieved 21 May 2021.