ಬಹಾದುರ್ ಶಾಹ್ ಜಫರ್
ಗೋಚರ
| ಅಬು ಜಫರ್ ಸಿರಾಜುದ್ದೀನ್ ಮುಹಮ್ಮದ್ ಬಹಾದುರ್ ಶಾಹ್ ಜಫರ್ ابو ظفر سِراجُ الْدین محمد بُہادر شاہ ظفر | |
|---|---|
| ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ | |
| ರಾಜ್ಯಭಾರ | ೨೮ ಸೆಪ್ಟೆಂಬರ್ ೧೮೩೮ – ೧೪ ಸೆಪ್ಟೆಂಬರ್ ೧೮೫೭ |
| ಬಿರುದುಗಳು | ಉರ್ದು: بہادر شاہ دوم; ಮೊಘಲ್ ಚಕ್ರವರ್ತಿ |
| ಹುಟ್ಟು | ೨೪ ಅಕ್ಟೋಬರ್ ೧೭೭೫ |
| ಹುಟ್ಟುಸ್ಥಳ | ದೆಹಲಿ, ಮೊಘಲ್ ಸಾಮ್ರಾಜ್ಯ |
| ಸಾವು | 7 November 1862 (aged 87) |
| ಸಾವಿನ ಸ್ಥಳ | ರಂಗೂನ್, ಬರ್ಮಾ, ಬ್ರಿಟಿಷ್ ರಾಜ್ |
| ಸಮಾಧಿ ಸ್ಥಳ | ರಂಗೂನ್, ಬರ್ಮಾ, ಬ್ರಿಟಿಷ್ ರಾಜ್ |
| ಪೂರ್ವಾಧಿಕಾರಿ | ಅಕ್ಬರ್ ಶಾಹ್ ೨ |
| ಉತ್ತರಾಧಿಕಾರಿ | ಮೊಘಲ್ ಸಾಮ್ರಾಜ್ಯದ ಕೊನೆ ವಂಶಸ್ಥರು: ೨೨ ಪುತ್ರರು ಮತ್ತು ಸುಮಾರು ೩೨ ಪುತ್ರಿಯರು |
| ಪತ್ನಿಯರು | ಅಶ್ರಫ್ ಮಹಲ್ ಅಖ್ತರ್ ಮಹಲ್ ಜೀನತ್ ಮಹಲ್ ತಾಜ್ ಮಹಲ್ |
| ವಂಶ | ಮೊಘಲ್ ಸಾಮ್ರಾಜ್ಯ |
| ತಂದೆ | ಅಕ್ಬರ್ ಶಾಹ್ ೨ |
| ತಾಯಿ | ಲಾಲ್‌ಬಾಯಿ |
ಅಬು ಜಫರ್ ಸಿರಾಜುದ್ದೀನ್ ಮುಹಮ್ಮದ್ ಬಹಾದುರ್ ಶಾಹ್ ಜಫರ್ ( ಉರ್ದು: ابو ظفر سِراجُ الْدین محمد بُہادر شاہ ظفر ), ಅಥವಾ ಬಹಾದುರ್ ಶಾಹ್ ಮತ್ತು ಬಹಾದುರ್ ಶಾಹ್ ೨ ( ಉರ್ದು: بہادر شاہ دوم ) (೨೪ ಅಕ್ಟೋಬರ್ ೧೭೭೫ - ೭ ನವೆಂಬರ್ ೧೮೬೨) ಮೊಘಲ್ ಸಾಮ್ರಾಜ್ಯ ಮತ್ತು ತಿಮುರಿದ್ ರಾಜವಂಶದ ಕೊನೆಯ ಚಕ್ರವರ್ತಿ. ಇವನ ತಂದೆ ಅಕ್ಬರ್ ಶಾಹ್ ೨ ಮತ್ತು ತಾಯಿ ರಾಜಪೂತರ ಹಿಂದೂ ರಾಣಿಯಾದ ಲಾಲ್‌ಬಾಯಿ. ಇವನ ತಂದೆಯ ನಿಧನದ ನಂತರ ೨೮ ಸೆಪ್ಟೆಂಬರ್ ೧೮೩೮ರಂದು ಮೊಘಲ್ ಚಕ್ರವರ್ತಿಯಾದನು.