ವಿಷಯಕ್ಕೆ ಹೋಗು

ಬಸವೇಶ್ವರ ಜಯಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾ೦ತಿಗೆ ಕಾರಣಾರಾದ ಮಹಾನ್ ವ್ಯಕ್ತಿಗಳಲ್ಲಿ ಜಗಜ್ಯೊತಿ ಬಸವಣ್ಣನವರು ಒಬ್ಬರು.ಬಸವಣ್ಣನವರು ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ ಬಾಗೇವಾಡಿಯಲ್ಲಿ ಜನಿಸಿದರು. ಬಸವಣ್ಣನವರು ಮತ್ತು ಶಿವಶರಣರು ಸ್ವೀಕರಿಸಿ, ಆಚರಿಸಿದ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಯೋಗ, ಮಹಿಳಾ ಸಬಲೀಕರಣ, ದಲಿತೋದ್ದಾರ ಮತ್ತು ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಜನತೆಗೆ ನೀಡುವುದು ಶ್ರೀ ಬಸವೇಶ್ಡರ ಜಯಂತಿಯ ಮೂಲ ಉದ್ದೇಶವಾಗಿದೆ. ೧೨ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯು ಇಂದು ನಾವು ಎದುರಿಸುತ್ತಿರುವ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.