ಬಸವಯ್ಯನವರ ಪುಣ್ಯಸ್ತ್ರೀ ಕಾಳವ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಸವಯ್ಯನವರ ಪುಣ್ಯಸ್ತ್ರೀ ಕಾಳವ್ವೆ
ಜನನ೧೧೬೦
ಅಂಕಿತನಾಮಕರ್ಮಹರ ಕಾಳೇಶ್ವರ


ಬಸವಯ್ಯನವರ ಪುಣ್ಯಸ್ತ್ರೀ ಕಾಳವ್ವೆ[ಬದಲಾಯಿಸಿ]

ಬಸವಯ್ಯನವರ ಧರ್ಮಪತ್ನಿ ಕಾಳವ್ವೆ, ಈ ದಂಪತಿಗಳಿಬ್ಬರೂ ಬಾಚಿ ಕಾಯಕ ಮಾಡಿ ಕೊಂಡಿರುತ್ತಾರೆ. ಕಾಳವ್ವೆ ಗಂಡನ ಕಾಯಕ ದೃಷ್ಟಾಂತದೊಂದಿಗೆ ತನ್ನ ಕಾಯಕ ನಿಷ್ಠೆ ಹಾಗೂ ವ್ರತಗಳ ಮಹತ್ವವನ್ನು ಈಕೆ ತನ್ನ ವಚನಗಳಲ್ಲಿ ಪ್ರತಿಪಾದಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಕರ್ಮಹರ ಕಾಳೇಶ್ವರ". ಈಕೆಯ ಪತಿ ಬಸವಯ್ಯ ಅಥವ ಬಸವಪ್ಪಯ್ಯ (ಬಸಣ್ಣ) ನೂ ವಚನಕಾರನಾಗಿದ್ದು, ‘ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ’ ಎಂಬ ಅಂಕಿತದಲ್ಲಿ ವಚನ ರಚಿಸಿದ್ದಾನೆ. ಈತನ ಕಾಲವನ್ನು 1160 ಎಂದು ಊಹಿಸಲಾಗಿದೆ. ಇದೇ ಕಾಳವ್ವೆಯ ಕಾಲವೂ ಆಗಿದೆ.

ಕಾಳ್ವವ್ವೆಯ ಎರಡು ವಚನಗಳು ದೊರೆತಿವೆ. ‘ಕರ್ಮಹರ ಕಾಳೇಶ್ವರ’ ಅವುಗಳ ಅಂಕಿತ. ಚಿಕ್ಕ ಚೊಕ್ಕ ನುಡಿಗಳಲ್ಲಿ, ಸರಳ ಅಷ್ಟೆ ಸುಂದರವಾಗಿ ರಚಿತವಾದ ಅವುಗಳಲ್ಲಿ ಕಾಯಕ, ವ್ರತ ಮತ್ತು ನುಡಿಯ ಮಹತಿಯನ್ನು ಎತ್ತಿ ಹೇಳಲಾಗಿದೆ. ಈಕೆಯ ವಚನದಲ್ಲಿ ಕಾಯಕಕ್ಕಿಂತಲೂ ವ್ರತಕ್ಕೆ ಹೆಚ್ಚು ಒತ್ತುಕೊಟ್ಟದು ಕಂಡು ಬರುತ್ತದೆ. ಕೈತಪ್ಪಿ ಕೆತ್ತಲು ಕಾಲಿಗೆ ಮೂಲ, ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ, ವ್ರತಹೀನನ ನೆರೆಯಲು ನರಕಕ್ಕೆ ಮೂಲ’ ಎನ್ನುವಲ್ಲಿ ಕಾಯಕ-ನುಡಿ-ವ್ರತ ಇವುಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು ಎಂಬುದನ್ನು ಒತ್ತಿ ಹೇಳಿದ್ದಾಳೆ.

ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತ ತಪ್ಪಿ ನುಡಿಯಲು ಬಾಯಿಗೆ ಮೂಲ
ವ್ರತಹೀನನ ನೆರೆವುದು ನರಕಕ್ಕೆ ಮೂಲ
ಕರ್ಮಹರ ಕಾಳೇಶ್ವರಾ!