ಬಳಪ
Jump to navigation
Jump to search
ಬಳಪ ಎಂದರೆ ಸುಣ್ಣದಿಂದ ತಯಾರಿಸಿದ ಕಡ್ಡಿಯಂತಹ ವಸ್ತು. ಇದನ್ನು ಕಪ್ಪು ಹಲಗೆಯ ಮೇಲೆ ಅಥವಾ ಸ್ಲೇಟಿನ ಮೇಲೆ ಬರೆಯಲು ಉಪಯೋಗಿಸಲಾಗುವುದು.
ಪೆನ್ನು, ಪೇಪರ್ರು ಬಳಸುವ ಈ ಕಾಲದಲ್ಲಿ ಬಳಪ ಎನ್ನುವುದು ಮರೆತು ಹೋಗಿದ್ದರೂ ಸಹ ಶಾಲೆಗಳಲ್ಲಿ ಕೆಲವೊಮ್ಮೆ ಬಳಸುವುದೂ ಉಂಟು. ಬಳಪವನ್ನು ಬಳಪದ ಕಲ್ಲಿನಿಂದಲೂ ಸಹ ತಯಾರಿಸುತ್ತಾರೆ. ಆದರೆ ಬಹಳ ಮೆದುವಾದ ಈ ಬಳಪದ ಕಲ್ಲನ್ನು ಹೆಚ್ಚಾಗಿ ಶಿಲ್ಪಕಲೆಯಲ್ಲಿ ವಿಗ್ರಹಗಳನ್ನು ಕೆತ್ತಲು ಸಹ ಬಳಸುತ್ತಾರೆ.ಸರಂಧ್ರ ಸಂಚಿತ ಕಾರ್ಬೋನೇಟ್ ಕಲ್ಲಿನಿಂದ ಮೂಲವಾಗಿ ಬಳಪವನ್ನು ತಯಾರಿಸುತ್ತಾರೆ.ಸುಣ್ಣದಕಲ್ಲಿನ ರೂಪವನ್ನುಳ್ಳ, ಖನಿಜವಾಗಿರುವ ಬಳಪ ಕ್ಯಾಲ್ಸೈಟ್ ನಿಂದ ಕೂಡಿದೆ.ಕ್ಯಾಲ್ಸೈಟ್ ಅನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಎಂದು ಕರೆಯಲಾಗುತ್ತದೆ.ಬಳ್ಪದ ಕ್ರಿಟೇಷಿಯಸ್ ಠೇವಣಿಯು ಪಶ್ಚಿಮ ಯುರೋಪ್ ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಳಪದ ರಾಸಾಯನಿಕ ಸಂಯೋಜನೆ, ಕ್ಯಾಲ್ಸಿಯಂ ಕಾರ್ಬೋನೇಟ್ ಆಗಿದೆ.
ಉಲ್ಲೇಖಗಳು [೧]