ಬನ್ನೇರುಘಟ್ಟ ಸೀಮೆಯ ಬೆಟ್ಟದಾಸಪುರದ ಕೋಟೆ
'ಬೆಂಗಳೂರು ನಗರ ಹತ್ತು ಹಲವು ಪ್ರಾಚೀನಹಾಗೂ ಅತಿ ಮಹತ್ವದ ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿದೆ. ಈ ನಗರಕ್ಕಿಂತಲೂ ಪ್ರಾಚೀನವಾದ ಆನೇಕ ಸಾರಕಗಳು ನಗರದ ಗಡಿಯಾಚೆಯ ಗ್ರಾಮ ಹೋಬಳಿಗಳಲ್ಲಿರುವುದನ್ನು ಕಾಣುತ್ತೇವೆ. ನಗರ ಮಧ್ಯಭಾಗದ ಕೆಲವು ಸ್ಮಾರಕಗಳಿಗೆ ಮಾತ್ರ ಹೆಚ್ಚಿ ಮಹತ್ವ ನೀಡುತ್ತಿದ್ದು, ಗಡಿಯಾಚೆಯ ಸ್ಮಾರಕಗಳ ಸಂಮರಕ್ಷಣೆ ಮಾಡಲಾಗುತ್ತಿದೆ ಅವುಗಳ ಚರಿತ್ರೆಯ ಸಾಕಷ್ಟು ಸಿಗದಂತಾಗಿದೆ. ನಗರದ ಆಗ್ನಿಯ ದಿಕ್ಕಿಗೆ ಸುಮಾರು 20 ಕಿ.ಮೀ. ದೂರದ ಬೆಟ್ಟದಾಸರ ಕೋಟೆ ನಿರ್ಲಕ್ಷಿತ ಐತಿಹಾಸಿಕ ಸ್ಮಾರಕ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಬೆಟ್ಟದಾಗಪುರ ಗ್ರಾಮವು ಎಲೆಕ್ಟ್ರಾನಿಕ್ ಸಿಟಿಯಿಂದ ಪಶ್ಚಿಮಕ್ಕೆ ಸುಮಾರು 2 ಕಿ.ಮೀ. ಅಂತರದಲ್ಲಿದೆ. ನಗರೀಕರಣದ ಭರಾಟೆಯಲ್ಲಿ ಸ್ಥಳೀಯ ಗ್ರಾಮೀಣ ಸೊಗಡನ್ನು ಕಳೆದುಕೊಂಡಿದೆ, ಬೇಗೂರು-ಜಿಗಣಿ ಮಾರ್ಗ ಮಧ್ಯೆ ಬೇಗೂರಿನಿಂದ ಈ ಬೆಟ್ಟ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿದೆ. ಬೆಟ್ಟದ ಪಾದದಲ್ಲಿ ಹರಡಿರುವ ಬೆಟ್ಟದಾಸರದ ಬನ್ನೇರುಘಟ್ಟ ಶ್ರೇಣಿಗಳ ಮಧ್ಯೆ ಇದ್ದು ಒಣ ಬೇಸಾಯ ಹಾಗು ಕೆರೆ ನೀರಾವರಿ ಬೇಸಾಯವನ್ನು ನಂಬಿದ ಗ್ರಾಮವಾಗಿದೆ.
Bannerugatta simeya bettadasapurada kote | |
---|---|
Native name ಕನ್ನಡ:ಬೆಟ್ಟದಾಸಪುರ | |
ಕೋಟೆ ರಚನೆ
[ಬದಲಾಯಿಸಿ]ಬನ್ನೇರುಘಟ್ಟ ಬೆಟ್ಟ ಶ್ರೇಣಿಗಳ ಬೆಟ್ಟದಾಸಪುರದ ಪಶ್ಚೀಮಕ್ಕಿರುವ ಬೆಟ್ಟದಲ್ಲಿ ನಿರ್ಮಿಸಿರುವ ಬೆಟ್ಟದಾಸಪುರ ಕೋಟೆ ಒಂದು ಇಂದು ಗಿರಿದುರ್ಗ ಕೋಟೆ ವಿಸ್ತಾರದಲ್ಲಿ ಚಿಕ್ಕದಾಗಿದ್ದು ರಚನೆ ದೃಷ್ಟಿಯಿಂದ ಒಂದು ಮಹತ್ವದ ಕೋಟೆ - Sad ಎರಡು ಆವರಣಗಳಿಂದ ಕೂಡಿದೆ. ಎರಡು ಜಗಲಿಗಳಂತಿರುವ ಧ್ವಾರ ಪ್ರಾರಂಭದಲ್ಲಿಯೇ ಚಪ್ಪಡಿಗಳ ಮೇಳಾವಣಿ ಹೊಂದಿದೆ, ದಪ್ಪಕಟ್ಟಿಗೆಯ ಹಾಗೂ ಎತ್ತರದ ಇವುಗಳ ಆವನ ಕಾಣಬಹುದು, ಇಕ್ಕೆಲಗಳಲ್ಲಿ ಅರ್ಧ ಮೀಟರ್ ಎತ್ತರದ ಜಗಲಿಗಳಿದ್ದು ಇವುಗಳ ಮೇಲೆ ನಾಲ್ಕು ಕಂಬ ಹಾಗೂ ಎಂಟು ಅರ್ಧಗಂಬಗಳನ್ನು ಕೋರಲಾಗಿದೆ. ಮೇಲೆ ಅಲಂಕಾರಿಕ ವಿನ್ಯಾಸಗಳಿಲ್ಲ, ಎಡ-ಬಲ ಜಗಲಿಗಳ ಮಧ್ಯೆ ಸುಮಾರು -2 ಮೀ., ಅಗಲವಾದ ದಾರಿಯಿದು, ಒಳಪ್ರವೇಶಿಸುತ್ತಿದ್ದಂತೆ ಕೋಟೆಯು ಆವರಣ ಎದುರುಗೊಳ್ಳುತ್ತವೆ. ಕೋಟೆ ಗೋಡೆಗಳ ನಿರ್ಮಾಣದಲ್ಲಿ ಹೆಚ್ಚಿನ ಆಸ್ಥೆ ಕಂಡುಬರುತ್ತಿಲ್ಲ ಅದರೆ ಲಭ್ಯವಿರುವ ಕಿರುಗಾತ್ರದ ಕಲ್ಲುಗಳನ್ನು ಬಳಸಿದಂತಿದೆ ಬಳಸಿದಂತಿದೆ ಗೋಡೆ ಸುಮಾರು 3.5 ಮೀ, ಎತ್ತರ ಹಾಗೂ 4 ಮೀ, ದಪ್ಪವಾಗಿದೆ. ಕಳಭಾಗದಲ್ಲಿ ದಪ್ಪವಾಗಿದ್ದು, ಮೇಲ್ಲಾಗಕ್ಕೆ ಹೋದಂತೆ ಈತ ತಿರುಗಿದೆ ಗೋಡೆ ಮೇಲಾಗದ ಕಂಬಿಕಟ್ಟುವಲ್ಲಿ ಇಟ್ಟಿಗೆ ಹಾಗೂ ಗಾರೆ ಬಳಸಲಾಗಿದೆ. ಅಥವಾ ಕೋವಿ ಇಡಲು ಕಿಂಡಿಗಳಿಲ್ಲ, ಆದರೆ, ಗೋಡೆಯ ಮೂಲೆ ಹಾಗೂ ಮಧ್ಯದಲ್ಲಿ ವೃತ್ತ ಹಾಗೂ ಚೌಕಾಕಾರದ ಕೊತ್ತಲಗಳನ್ನು (5 ಮೀ. ಉದ್ದ ಹಾಗೂ 4 ಮೀ ಅಗಲ ವೃತ್ತಾಕಾರದ ಕೊತ್ತಲಗಳು 3ಮೀಟರ್ ಸುತ್ತಳತೆ ಹಾಗು 7 ಮೀ ಎತ್ತರವಾಗಿದೆ. ಹೀಗೆ. ಒಟ್ಟು 10 ಕೊತ್ತಲಗಳಿದ್ದು ಆ ಪೈಕಿ 6 ಕೊತ್ತಲಗಳು ವೃತ್ತಾಕಾರದಲ್ಲಿವೆ. ಉಳಿದವು ಚೌಕಾಕಾರದಲ್ಲಿವೆ. ಇವು ವಿಭಿನ್ನ ಮಾದರಿ ಹಾಗೂ ವಿಭಿನ್ನ ಕಾರ್ಯಗಳಿಗೆ ಬಳಕೆಯಾಗುವಂತಿವೆ. ವೃತ್ತಾಕಾರದ ಕೊತ್ತಲಗಳು ಕೋಟೆಯ ಮೂಲೆಯಲ್ಲಿ ಮಾತ್ರ ಬಳಕೆಯಾಗಿದ್ದರೆ, ಚೌಕಾಕಾರದ ಕೊತ್ತಲಗಳು ಗೋಡೆ ಮಧ್ಯದಲ್ಲಿ ನಿರ್ಮಿಸಲಾಗಿದೆ. ಕೋಟೆಯ ಮೂಲೆಯಲ್ಲಿ ವೃತ್ತಾಕಾರದ ಕೊತ್ತಲ ನಿರ್ಮಿಸಿರುವುದರಿಂದ ದೂರದ ವೈರಿಗಳನ್ನು ಸುಲಭವಾಗಿ ಗಮನಿಸಬಹುದು ಹಾಗೂ 360 ಡಿಗ್ರಿ ವರ್ತುಲಾಕಾರದಲ್ಲಿ ಗ್ರಹಿಸಬಹುದಾಗಿದೆ. ಗೋಡೆ ಮಧ್ಯ ಹಾಗೂ ದ್ವಾರಗಳ ಪಕ್ಕದಲ್ಲಿ ಕಂಡುಬರುವ ಚೌಕಾಕಾರದ ಕೊತ್ತಲಗಳು ಕೇವಲ ಪಹರೆಯಲ್ಲಿರುವ ಸೈನಿಕರಿಗೆ ಸೀಮಿತ, ದ್ವಾರ ಪ್ರವೇಶಿಸುವವರ ಮೇಲೆ ನಿಗಾ ಇಡಲು ಬಳಸಲಾಗುತ್ತಿರುವಂತಿದೆ. ವರ್ತುಲಾಕಾರದ ಹಾಗೂ ಚೌಕಾಕಾರದ ಕೊತ್ತಲಗಳನ್ನು ಕೋಟೆ ನಿರ್ಮಾಣದಲ್ಲಿ ಏಕಕಾಲದಲ್ಲಿ ಪ್ರಯೋಗಿಸಿದ್ದು ಒಂದು ಉತ್ತಮ ಉದಾಹರಣೆಯಾಗಿದೆ.
ಹೊರ ಆವರಣ
[ಬದಲಾಯಿಸಿ]ಕೋಟೆಯನ್ನು ಹೊರ ಹಾಗೂ ಒಳ ಆವರಣಗಳೆಂದು ವಿಂಗಡಿಸಬಹುದು. ಬೆಟ್ಟದ ಮೇಲ್ಬಾಗಕ್ಕೆ ಕೋಟೆದ್ವಾರ ಪ್ರವೇಶಿಸುತ್ತಿದ್ದಂತೆ ವಿಶಾಲ ಆವರಣ ಕಾಣಿಸುತ್ತದೆ. ಇದನ್ನು ಕೋಟೆಯ 'ಹೊರ ಆವರಣ ಎನ್ನಬಹುದು, ಆವರಣವು ಆಯತಾಕಾರವಾಗಿದ್ದು ಬಹುತೇಕ ಬಯಲಾಗಿದೆ. ಬಲಬದಿಯ ಮೂಲೆಯಲ್ಲಿ ನೀರಿನ ಸಂಗ್ರಹಣೆಗೆ 'ಕೊಳ' ನಿರ್ಮಿಸಲಾಗಿತ್ತು. ಈಗ ಸಂಪೂರ್ಣ ಹೂಳು ತುಲಬಿ ಗಿಡ ಗಂಟೆಗಳು ದಟ್ಟವಾಗಿ ಬೆಳೆದಿವೆ. ಇದರ ಪಕ್ಕದಲ್ಲಿ ವೃತ್ತಾಕಾರದ ಎತ್ತರವಾದ ಕೊತ್ತಲವಿದೆ ಇಡೀ ಕೋಟೆಯಲ್ಲಇದು ಸುಭದ್ರವಾದ ಏಕೈಕ ಕೊತ್ತಲ,
ಒಳ ಆವರಣ
[ಬದಲಾಯಿಸಿ]ಈ ಕೋಟೆಯ ಮುಖ್ಯ ಭಾಗವೆಂದು ಗುರುತಿಸಬಹುದಾದ ಒಳ ಆವರಣ ಮುಖ್ಯವಾಗಿ ಅತಿ ಹೆಚ್ಚು ವ್ಯವಸ್ಥಿತ ಹಾಗೂ ವಿಶಾಲವಾದ ಪ್ರದೇಶವಾಗಿದೆ. ಈ ಆವರಣವು ಸುಬದ್ಧತೆಯನ್ನು ಹೊಂದಿರುವುದಕ್ಕಾಗಿ ಇದರ ಗೋಡೆಗಳನ್ನು ಎತ್ತರ ಹಾಗೂ ವ್ಯವಸ್ಥಿತವಾಗಿ ನಿರ್ಮಿಸಿಲ್ಲ. ನೀರಿನ ಕೊಳ, ಲಾಯಗಳು, ಉಗ್ರಾಣಗಳು ದೇವಸ್ಥಾನಗಳು ಇತ್ಯಾದಿಗಳನ್ನು ನಿರ್ಮಿಸಲಾಗಿದ್ದವು. ಇವುಗಳಲ್ಲಿ ತಿಮ್ಮರಾಯ ದೇವಸ್ಥಾನ ಸುಭದ್ರವಾಗಿದೆ
ಬೇಗೂರು ಪಂಚಲಿಂಗೇಶ್ವರದೇವಸ್ಥಾನ ಹೊರತುಪಡಿಸಿದರೆ ಬೆಟ್ಟದಾಸಪುರದ ತಿಮ್ಮರಾಯ ಸ್ವಾಮಿ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ಹೆಚ್ಚು ಪ್ರಸಿದ್ಧ ಒಳ ಆವರಣದಲ್ಲಿರುವ ಎರಡು ದೇವಸ್ಥಾನಗಳ ಪೈಕಿ ತಿಮ್ಮರಾಯ ದೇವಸ್ಥಾನ ಹೆಚ್ಚು ವಿಸ್ತಾರವಾಗಿದ್ದು, ಇತ್ತೀಚೆಗೆ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ. ಪಕ್ಕದಲ್ಲಿ ಕಾಶಿವಿಶ್ವನಾಥ ದೇವಸ್ಥಾನವಿದೆ. ಇದು ಕೂಡ ಸಂಪೂರ್ಣವಾಗಿ ಪುನರ್ ನಿರ್ಮಿಸಲಾಗಿದೆ. ದೇವಸ್ಥಾನಗಳ ನಿರ್ಮಾಣ ಶೈಲಿ ಆಧರಿಸಿ ಇವು ಕ್ರಿ.ಶ. 18ನೇ ಶತಮಾನದ ಮಧ್ಯಕಾಲವೆಂದು ಈ ಕೋಟೆಯ ಬಗ್ಗೆ ಅಧ್ಯಯನ ಕೈಗೊಂಡ ಡಾ. ಎಂ.ಜಿ. ಮಂಜುನಾಥ ಹಾಗೂ ವಿಶ್ವನಾಥ ಸಾಸಲು ಅಭಿಪ್ರಾಯಪಟ್ಟಿದ್ದಾರೆ. ಒಳ ಆವರಣದ ಮುಖ್ಯ ಆಕರ್ಷಣೆ- ಕಲ್ಯಾಣಿ. ಮಳೆಯ ನೀರನ್ನು ಸಂಗ್ರಹಿಸಲು ಇದನ್ನು ನಿರ್ಮಿಸಿದಂತಿದೆ. ಸುಮಾರು 20 ಮೀ. ಅಗಲ, 25 ಮೀ. ಉದ್ದ ಹಾಗೂ 15 ಮೀ. ಆಳವಾಗಿದೆ. ಬಲಬದಿಯಲ್ಲಿ 35 ಮೆಟ್ಟಿಲು ನಿರ್ಮಿಸಲಾಗಿದೆ. ಎಡಬದಿಯಲ್ಲಿ ಕಟ್ಟೆಯಂತೆ ಗೋಡೆ ಕಟ್ಟಲಾಗಿದೆ. ಕಲ್ಯಾಣಿಯ ಒಂದು ಬದಿಯಲ್ಲಿ ಬೆಟ್ಟದ ನೆಲಹಾಸು ಬಂಡೆಗಳಿದ್ದು ಇಳಿಜಾರಿನಿಂದ ಮಳೆ ನೀರನ್ನು ಸಂಗ್ರಹಿಸಲು ಅನುಕೂಲ ಒದಗಿಸಿದೆ. ಕಲ್ಯಾಣಿಯು ದೇವಸ್ಥಾನದ ಮುಂಭಾಗದಲ್ಲಿದ್ದು ಹೆಚ್ಚಿನ ಪಾವಿತ್ರತೆ ಪಡೆದಿದೆ. ಒಳಾಂಗಣದ ನಾಗರಿಕರಿಗೆ ನೀರಿನ ಅನುಕೂಲತೆ ಕಲ್ಪಿಸಿದೆ. ಮುಂಭಾಗದಲ್ಲಿ ದೊಡ್ಡ ಅರಳೀಮರವಿದ್ದು, ಸುತ್ತಲೂ ಕಟ್ಟೆ ಕಟ್ಟಲಾಗಿದೆ. ಇದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಆಶ್ರಯ ನೀಡುತ್ತದೆ. ಅರಳೀಕಟ್ಟೆಯ ಪಕ್ಕದಲ್ಲಿ ಏಕಶಿಲೆಯ ಗರುಡಗಂಭವಿದೆ. ಕೆಳಭಾಗದಲ್ಲಿ ಕಿರುಗಾತ್ರದ ಭಕ್ತನ ರೂಪದ ಒಂದು ಉಬ್ಬುಶಿಲ್ಪವಿದೆ. ಬಹುಶಃ ಈ ದೇವಾಲಯ ಅಥವಾ ಕೋಟೆ ನಿರ್ಮಿಸಿದ ಆಶ್ರಯದಾತನ ಶಿಲ್ಪವಾಗಿರಬಹುದು. ಈ ಶಿಲ್ಪದಲ್ಲಿ ಕಾಣುವ ಭಕ್ತನರೂಪದ ವ್ಯಕ್ತಿಯ ಉಡುಗೆ-ತೊಡುಗೆ ಗಮನಿಸಲಾಗಿ ಒಬ್ಬ ಸ್ಥಳೀಯ ನಾಡಪ್ರಭು ಅಥವಾ ಅಧಿಕಾರಿಯ ಶಿಲ್ಪ ಇದಾಗಿದೆ ಎಂದು ಸ್ಪಷ್ಟವಾಗಿ ಗುರುತಿಸಬಹುದು.
ಕೋಟೆ ನಿರ್ಮಾಣ ಕಾಲ
[ಬದಲಾಯಿಸಿ]ಐತಿಹಾಸಿಕ ಲಿಖಿತ ದಾಖಲೆಗಳು ಇಲ್ಲವಾಗಿದ್ದು, ಕೋಟೆಯ ನಿರ್ಮಾಣದ ಕಾಲವನ್ನು ಗುರುತಿಸುವುದು ಕಷ್ಟ ಸಾಧ್ಯ. ಆದರೆ ಕೋಟೆರಚನೆಯ ಶೈಲಿ, ದೇವಾಲಯದ ಶಿಲ್ಪ ಇತ್ಯಾದಿಗಳನ್ನು ಆಧರಿಸಿ ಈ ಕೋಟೆಯ ನಿರ್ಮಾಣದ ಕಾಲವನ್ನು ಗುರುತಿಸಬಹುದು. ಈ ಮಧ್ಯ ಇಲ್ಲಿಯೇ ಕಲ್ಯಾಣಿ ಬದಿಯ ಒಂದು ಹಾಸು ಬಂಡೆಯ ಮೇಲೆ 'ಶ್ರೀ' ಎಂದು ಕನ್ನಡದಲ್ಲಿ ಅಕ್ಷರವನ್ನು ಕೊರೆಯಲಾಗಿದೆ. ಈ ಎಲ್ಲಾ ಆಧಾರಗಳನ್ನು ಗಮನಿಸಿ ಈ ಕೋಟೆಯ ನಿರ್ಮಾಣವನ್ನು 18ನೇ ಶತಮಾನದ ಅವಧಿಯೆಂದು ಗುರುತಿಸಬಹುದು. ಕಲ್ಯಾಣಿ ಬದಿಯ ಹಾಸು ಬಂಡೆಯ ಮೇಲೆ ಕಮಲದ ರೇಖಾಚಿತ್ರ ಕೊರೆಯಲಾಗಿದ್ದು ಕೆಳಗೆ 'ಶ್ರೀ' ಎಂಬ ಕನ್ನಡ ಅಕ್ಷರ ಮಾತ್ರ ಕಾಣುತ್ತೇವೆ. ಉಳಿದ ಶಾಸನ ಪಠ್ಯ ನಾಶವಾಗಿದೆ.
ಕೋಟೆ ನಿರ್ಮಾಪಕರು
[ಬದಲಾಯಿಸಿ]ಬೆಟ್ಟದಾಸಪುರದ ಕೋಟೆಯನ್ನು ನಿರ್ಮಿಸಿದ ಅರಸ ಪ್ರಭುಗಳನ್ನು ಗುರುತಿಸಲು ಚರಿತ್ರೆಯ ದಾಖಲೆಗಳಿಲ್ಲ. ನಿರ್ಮಾಣ ಕಾರ್ಯದಲ್ಲಿ ಬಳಸಲಾದ ಚಿಕ್ಕ ಹಾಗೂ ಮಧ್ಯಮಗಾತ್ರದಕಲ್ಲು ಹಾಗೂ ರಚನೆಯಲ್ಲಿ ಬಳಕೆಯಾದ ತಂತ್ರಗಾರಿಕೆ ಆಧರಿಸಿ ಈ ಕೋಟೆ ನಿರ್ಮಾಪಕರು ಹೆಚ್ಚು ಪ್ರಸಿದ್ಧ ಹಾಗೂ ದೊಡ್ಡರಾಜ್ಯದ ಅರಸರಾಗಿರದೇ ಸ್ಥಳೀಯವಾಗಿ ಚಿಕ್ಕ ಪ್ರದೇಶವನ್ನು ತಮ್ಮ ಒಡೆತನಕ್ಕೆ ತೆಗೆದುಕೊಂಡ ಸ್ಥಳೀಯ ಅಥವಾ ಸಾಮಂತ ಅರಸರಾಗಿದ್ದರೆಂದು ಗುರುತಿಸಬಹುದು. ತಿಮ್ಮರಾಯ ದೇವಸ್ಥಾನದ ಮುಂಭಾಗದಲ್ಲಿನ ಗರುಡಗಂಭದ ತಳಭಾಗದಲ್ಲಿರುವ ಭಕ್ತರೂಪದ ಉಬ್ಬುಶಿಲ್ಪದ ವ್ಯಕ್ತಿಯೇ ಈ ಕೋಟೆ ಹಾಗೂ ದೇವಾಲಯ ನಿರ್ಮಾಪಕನೆಂದು ಗುರುತಿಸಬಹುದು. ಸ್ಥಳೀಯ ಜನರ ಪ್ರತಿನಿಧಿ ಹಾಗೂ ಒಡೆಯರಾಗಿದ್ದ ಇವರು ಮೂಲತಃ ಚಿಕ್ಕ ಕೋಟೆಗಳನ್ನು ನಿರ್ಮಿಸಿಕೊಂಡು ಸ್ಥಳೀಯರಿಗೆ ರಕ್ಷಣೆ ನೀಡುವುದರೊಂದಿಗೆ ಸ್ಥಳೀಯರಿಂದ ಕಂದಾಯ ಸಂಗ್ರಹಿಸಿ ದೊಡ್ಡ ಅರಸರಿಗೆ ಸಂದಾಯ ಮಾಡುವ ಸಂಪ್ರದಾಯವಿತ್ತು.
ಕೋಟೆ ನಿರ್ಮಾಣದ ಉದ್ದೇಶ
[ಬದಲಾಯಿಸಿ]ಕೋಟೆಯು ಗಾತ್ರದಲ್ಲಿ ಚಿಕ್ಕದಾಗಿದ್ದು ಎರಡು ಚಿಕ್ಕ ಆವರಣಗಳಿಂದ ಕೂಡಿದ ಮುಖ್ಯ ಆವರಣದ ಒಳಾಂಗಣದಲ್ಲಿ ಮುಖ್ಯವಾಗಿ ದೇವಾಲಯ ಹಾಗೂ ಕಲ್ಯಾಣಿಗಳಿವೆ. ಆದರೆ, ವಾಸಿಸಲು ಅಗತ್ಯವಿರುವ ಅರಮನೆ, ದರ್ಬಾರ್ ಇತ್ಯಾದಿ ನಿರ್ಮಿಸಿದಂತೆ ಕಾಣುತ್ತಿಲ್ಲ. ತಿಮ್ಮರಾಯ ದೇವಸ್ಥಾನ ಬಲಬದಿಯ ಮೂಲೆಯಲ್ಲಿ ಹೊಸದಾಗಿ ಕಚೇರಿ ಕಟ್ಟಡ ನಿರ್ಮಿಸಿದ್ದು ಈ ಸ್ಥಳದಲ್ಲಿ ಮಾತ್ರ ಒಂದು ಚಿಕ್ಕ ಅರಮನೆ ನಿರ್ಮಿಸಿರುವ ಸಾಧ್ಯತೆ ಇದೆ. ಕೋಟೆಯ ಹೊರ ಆವರಣದಲ್ಲಿಯೂ ಹಳೆಯ ಮನೆಗಳ ಯಾವುದೇ ಅವಶೇಷಗಳಿಲ್ಲ. ಇಡೀ ಕೋಟೆ ನಿರ್ಮಾಣದ ಹಿಂದಿನ ಉದ್ದೇಶ ದೇವಾಲಯಗಳ ರಕ್ಷಣೆಯಾಗಿತ್ತು ಎಂಬ ಅಭಿಪ್ರಾಯ ಮೂಡುತ್ತದೆ. ಮಧ್ಯಕಾಲೀನ ಪಾಳೆಯಗಾರರ ಕಾಲದಲ್ಲಿ ತಮ್ಮ ಅಧೀನ ಪ್ರದೇಶದಲ್ಲಿ ಆಯಕಟ್ಟಿನ ಸ್ಥಳ / ಬೆಟ್ಟಗಳಲ್ಲಿ ಚಿಕ್ಕಚಿಕ್ಕ ಕೋಟೆಗಳನ್ನು ನಿರ್ಮಿಸುವ ಸಂಪ್ರದಾಯ ರೂಢಿಗೆ ಬಂದಿರುವುದು ಚರಿತ್ರೆಯಿಂದ ಗುರುತಿಸಬಹುದು. ಈ ರೀತಿಯ ಕೋಟೆಗಳನ್ನು ನಿರ್ಮಿಸುವುದರೊಂದಿಗೆ ಸ್ಥಳೀಯರಿಂದ ಹಾಗೂ ದೊಡ್ಡ ಅರಸರಿಂದ ನಾಡಪ್ರಭು | ಸಾಮಂತ ಅರಸರು ತಮ್ಮ ಪ್ರಭಾವವನ್ನು ಗುರುತಿಸಿಕೊಳ್ಳಲು ಕೋಟೆ ನಿರ್ಮಾಣ ಒಂದು ಬಲಾಡ್ಯ / ಪ್ರಭಾವ ಬೆಳೆಸಿಕೊಳ್ಳುವ ಸಂಕೇತವಾಗಿ ಸಂಪ್ರದಾಯ ಬೆಳೆದು ಬಂದಿತು. ಕೋಟೆಗಳು ರಕ್ಷಣೆ ಒದಗಿಸುವ ಸ್ಥಳಗಳಾಗಿದ್ದರೂ ಇವುಗಳ ನಿರ್ಮಾಣವು ಸ್ಥಳೀಯ ಅರಸರಿಗೆ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು[೧]
ಉಲ್ಲೇಖ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ಅರುಣಿ, ಎಸ್.ಕೆ. ಬೆಂಗಳೂರು ಪರಂಪರೆ (2019 ed.). ISBN 978-81-930814-3-3.