ವಿಷಯಕ್ಕೆ ಹೋಗು

ಬಜೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬಜೆಟ್ ಎಂದರೆ ಒಂದು ನಿರ್ದಿಷ್ಟ ಕಾಲಾವಧಿಗಾಗಿ, ಸಾಮಾನ್ಯವಾಗಿ ಒಂದು ವರ್ಷಕ್ಕಾಗಿ ಒಂದು ಹಣಕಾಸು ಯೋಜನೆ. ಇದು ಯೋಜಿತ ಮಾರಾಟದ ಪರಿಮಾಣಗಳು ಹಾಗೂ ಆದಾಯಗಳು, ಸಂಪನ್ಮೂಲ ಪ್ರಮಾಣಗಳು, ವೆಚ್ಚಗಳು ಮತ್ತು ಖರ್ಚುಗಳು, ಆಸ್ತಿಗಳು, ಹೊಣೆಗಳು ಮತ್ತು ನಗದು ಹರಿವುಗಳನ್ನೂ ಒಳಗೊಳ್ಳಬಹುದು. ಅಳೆಯಬಹುದಾದಂಥ ಪದಗಳಲ್ಲಿ ಚಟುವಟಿಕೆಗಳು ಅಥವಾ ಘಟನೆಗಳ ಕಾರ್ಯತಂತ್ರ ಯೋಜನೆಗಳನ್ನು ವ್ಯಕ್ತಪಡಿಸಲು ಕಂಪನಿಗಳು, ಸರ್ಕಾರಗಳು, ಕುಟುಂಬಗಳು ಮತ್ತು ಇತರ ಸಂಸ್ಥೆಗಳು ಇದನ್ನು ಬಳಸುತ್ತವೆ.

ಕಾರ್ಯಕ್ರಮ ನಿರ್ವಹಣೆ[ಬದಲಾಯಿಸಿ]

ಒಂದು ಕಾರ್ಯಕ್ರಮವು ಲಾಭವಾಗಿ, ನಷ್ಟವಾಗಿ, ಅಥವಾ ಲಾಭ-ಅಲಾಭ ಸ್ಥಿತಿಯಾಗಿ ಪರಿಣಮಿಸುವುದೇ ಎಂಬುದನ್ನು ಸಮಂಜಸವಾದ ನಿಖರತೆಯೊಂದಿಗೆ ಮುನ್ನುಡಿಯಲು ಒಬ್ಬ ಕಾರ್ಯಕ್ರಮ ವ್ಯವಸ್ಥಾಪಕನಿಗೆ ಬಜೆಟ್ ಒಂದು ಮೂಲಭೂತ ಸಾಧನವಾಗಿದೆ. ಬಜೆಟ್ಟನ್ನು ಒಂದು ಬೆಲೆನಿರ್ಧಾರಣ ಉಪಕರಣವಾಗಿಯೂ ಬಳಸಬಹುದು.

ಬಜೆಟ್ ರಚನೆಯಲ್ಲಿ ಎರಡು ಮೂಲಭೂತ ಕಾರ್ಯವಿಧಾನಗಳು ಅಥವಾ ತತ್ವಗಳು ಇವೆ. ಒಂದು ವಿಧಾನ ಗಣಿತಶಾಸ್ತ್ರ ವಿನ್ಯಾಸಗಳನ್ನು ಬಳಸಿದರೆ, ಮತ್ತೊಂದು ಜನರ ಮೇಲೆ ಕೇಂದ್ರೀಕರಿಸುತ್ತದೆ.

ಸರಿಯಾಗಿ ನಿರ್ಮಿಸಿದರೆ, ಆರ್ಥಿಕ ಮಾದರಿಗಳನ್ನು ಭವಿಷ್ಯವನ್ನು ಮುನ್ನುಡಿಯಲು ಬಳಸಬಹುದು ಎಂದು ಮೊದಲ ತತ್ವ ಸಿದ್ಧಾಂತವು ನಂಬುತ್ತದೆ. ಇದರಲ್ಲಿ ಒತ್ತು ಚರಾಂಕಗಳು, ಆದಾನಗಳು ಮತ್ತು ಉತ್ಪತ್ತಿಗಳು, ಚಾಲಕಗಳು ಮುಂತಾದವುಗಳ ಮೇಲೆ ಇರುತ್ತದೆ. ಈ ಮಾದರಿಗಳನ್ನು ಉತ್ತಮಗೊಳಿಸಲು ಸಮಯ ಮತ್ತು ಹಣವನ್ನು ಮೀಸಲಿಡಲಾಗುತ್ತದೆ. ಇವನ್ನು ಸಾಮಾನ್ಯವಾಗಿ ಯಾವುದೋ ಬಗೆಯ ಹಣಕಾಸು ಸ್ಪ್ರೆಡ್‍ಶೀಟ್ ಅಪ್ಲಿಕೇಶನ್‍ನಲ್ಲಿ ನಡೆಸಲಾಗುತ್ತದೆ.

ಇದು ಮಾದರಿಗಳು ಬಗ್ಗೆ ಅಲ್ಲ ಜನರ ಬಗ್ಗೆ ಎಂದು ಇನ್ನೊಂದು ತತ್ವ ಸಿದ್ಧಾಂತ ಅಭಿಪ್ರಾಯಪಡುತ್ತದೆ. ಮಾದರಿಗಳು ಎಷ್ಟೇ ಅತ್ಯಾಧುನಿಕವಾದರೂ, ಅತ್ಯುತ್ತಮ ಮಾಹಿತಿಯು ವ್ಯವಹಾರದಲ್ಲಿನ ಜನರಿಂದ ಬರುತ್ತದೆ. ಹಾಗಾಗಿ ಒತ್ತು ವ್ಯವಹಾರದಲ್ಲಿನ ವ್ಯವಸ್ಥಾಪಕರನ್ನು ಬಜೆಟ್ ಪ್ರಕ್ರಿಯೆಯಲ್ಲಿ ಹೆಚ್ಚು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೇಲಿರುತ್ತದೆ, ಮತ್ತು ಫಲಿತಾಂಶಗಳಿಗೆ ಹೊಣೆಗಾರಿಕೆಯನ್ನು ನಿರ್ಮಿಸುವುದರ ಮೇಲಿರುತ್ತದೆ. ಈ ವಿಧಾನವನ್ನು ಅವಲಂಬಿಸುವ ಕಂಪನಿಗಳು ತಮ್ಮ ವ್ಯವಸ್ಥಾಪಕರ ಕೈಯಲ್ಲಿ ತಮ್ಮ ಸ್ವಂತ ಬಜೆಟ್ಟನ್ನು ಅಭಿವೃದ್ಧಿಪಡಿಸುತ್ತವೆ. ಅನೇಕ ಕಂಪನಿಗಳು ಎರಡನ್ನೂ ಮಾಡುತ್ತೇವೆಂದು ಹೇಳುತ್ತಾವಾದರೂ, ವಾಸ್ತವದಲ್ಲಿ ಸಮಯ ಮತ್ತು ಹಣದ ಹೂಡಿಕೆಯು ಪೂರ್ಣವಾಗಿ ಒಂದೇ ಕಾರ್ಯವಿಧಾನದಲ್ಲಿ ಆಗುತ್ತದೆ.

"https://kn.wikipedia.org/w/index.php?title=ಬಜೆಟ್&oldid=823706" ಇಂದ ಪಡೆಯಲ್ಪಟ್ಟಿದೆ