ಬಜರಂಗ್ ಪುನಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಜರಂಗ್ ಪುನಿಯಾ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಜರಂಗ್ ಪುನಿಯಾ ಅವರನ್ನು ಪದ್ಮಶ್ರೀ ಗೌರವಿಸಿದರು
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನ (1994-02-26) ೨೬ ಫೆಬ್ರವರಿ ೧೯೯೪ (ವಯಸ್ಸು ೩೦)
ಖುದಾನ, ಝಜ್ಜರ, ಹರಿಯಾಣ, ಭಾರತ
ಎತ್ತರ1.66 m (5 ft 5 in)
ತೂಕ65 kg (143 lb)
Sport
ದೇಶಭಾರತ
ಕ್ರೀಡೆಕುಸ್ತಿ

ಬಜರಂಗ್ ಪುನಿಯಾ ಒಬ್ಬ ಭಾರತೀಯ ಕುಸ್ತಿಪಟು, 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ೬೫ ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ವಿಜೇತರು.[೧][೨]

ಆರಂಭಿಕ ಜೀವನ[ಬದಲಾಯಿಸಿ]

ಪುನಿಯಾ ಭಾರತದ ಹರಿಯಾಣ ರಾಜ್ಯದ ಝಜ್ಜರ ಜಿಲ್ಲೆಯ ಖುದಾನ್ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಏಳನೇ ವಯಸ್ಸಿನಲ್ಲಿ ಕುಸ್ತಿ ಮಾಡಲು ಪ್ರಾರಂಭಿಸಿದರು ಮತ್ತು ಅವರ ತಂದೆಯಿಂದ ಕ್ರೀಡೆಯನ್ನು ಮುಂದುವರಿಸಲು ಪ್ರೋತ್ಸಾಹನೆ ಸಿಕಿತು.

ಸಾಧನೆಗಳು[ಬದಲಾಯಿಸಿ]

೨೦೨೦ ಟೋಕಿಯೊ ಒಲಿಂಪಿಕ್ಸ್‌[ಬದಲಾಯಿಸಿ]

6 ಆಗಸ್ಟ್ 2021 ರಂದು, ಪುನಿಯಾರವರು ಎರ್ನಾಜರ್ ಅಕ್ಮತಲೀವ್ ವಿರುದ್ಧ 2020 ಟೋಕಿಯೊ ಒಲಿಂಪಿಕ್ಸ್‌ನ 65 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದರು ಹಾಗೂ ಮೊರ್ಟೆಜಾ ಘಿಯಾಸಿ ಚೆಕಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಗೆದ್ದರು. ಅವರು ಸೆಮಿಫೈನಲ್ ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಹಾಜಿ ಅಲಿಯೆವ್ ಅವರ ವಿರುದ್ದ ಸೋತರು. ಕಂಚಿನ ಪದಕದ ಪಂದ್ಯದಲ್ಲಿ ಅವರು ತಮ್ಮ ಎದುರಾಳಿಯನ್ನು 8-0 ಅಂತರದಿಂದ ಗೆದ್ದರು.

ಉಲ್ಲೇಖಗಳು[ಬದಲಾಯಿಸಿ]