ಬಜಗೋಳಿ

ವಿಕಿಪೀಡಿಯ ಇಂದ
Jump to navigation Jump to search

ಬಜಗೋಳಿ (Bajagoli) ಕಾರ್ಕಳದಿಂದ ಹತ್ತು ಕಿಲೋಮೀಟರ್ ದೂರ ಇರುವ ಒಂದು ಚಿಕ್ಕ ಊರು. ಕಾರ್ಕಳದಿಂದ ಬರುವ ರಸ್ತೆ ಬಜಗೋಳಿಯಲ್ಲಿ ಕವಲೊಡೆದು ಶೃಂಗೇರಿ-ಕುದುರೆಮುಖದತ್ತ ಹೋದರೆ ಇನ್ನೊಂದು ನಾರಾವಿ-ಗುರುವಾಯನಕೆರೆ-ಬೆಳ್ತಂಗಡಿ,ಧರ್ಮಸ್ಥಳದತ್ತ ಹೋಗುತ್ತದೆ. ಹಾಗೆ ಬಜಗೋಳಿ ಒಂದು ಜಂಕ್ಷನ್‌. ಕರಾವಳಿಯ, ಮಲೆನಾಡಿನ ತಪ್ಪಲಿನ ಇತರ ಸಣ್ಣಪುಟ್ಟ ಊರುಗಳಂತೆಯೇ ಇದೂ ಕೂಡ. ಹತ್ತಾರು ಅಂಗಡಿಮುಂಗಟ್ಟುಗಳು, ನಾಲ್ಕೈದು ಹೊಟೆಲ್‌ಗಳು, ಗೂಡಂಗಡಿಗಳು, ಸಲೂನ್‌, ಬಸ್ಸು ತಂಗುದಾಣ, ಬ್ಯಾಂಕ್‌ ಶಾಖೆ, ಪ್ರೌಢಶಾಲೆ,ಜೂನಿಯರ್ ಕಾಲೇಜ್, ಪ್ರಾಥಮಿಕ ಆರೋಗ್ಯ ಕೇಂದ್ರ, ಸಂತೆಕಟ್ಟೆ ಮತ್ತು ಅಫ್‌ಕೋರ್ಸ್‌ ಒಂದೆರಡು ವೈನ್‌ಶಾಪ್‌.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ (ರಿ.)ಧರ್ಮಸ್ಥಳ ಇದರ ವತಿಯಿಂದ ನಡೆದ 31 ನೇ ರಾಜ್ಯ ಮಟ್ಟದ ಕೃಷಿಮೇಳ 2011 04 -02 -2011 ನೇ ಶುಕ್ರವಾರ 05 -02 -2011 ನೇ ಶನಿವಾರ 06 -02 -2011 ನೇ ಆದಿತ್ಯವಾರ ಬಜಗೋಳಿ ಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದಿತ್ತು.

Wikmi.jpg

"https://kn.wikipedia.org/w/index.php?title=ಬಜಗೋಳಿ&oldid=637382" ಇಂದ ಪಡೆಯಲ್ಪಟ್ಟಿದೆ