ವಿಷಯಕ್ಕೆ ಹೋಗು

ಬಕಿಂಗ್ ಹ್ಯಾಮ್ ಕರ್ನಾಟಕ್ ಮಿಲ್ಸ್, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಪ್ರತಿನಗರಗಳಲ್ಲೂ ಧನವಂತರಿಗೆ ಮತ್ತು ಜನಸಾಮಾನ್ಯರಿಗೂ ಪ್ರಿತಿಪಾತ್ರವಾದ 'ಸುಪ್ರಸಿದ್ಧ ಬಿನ್ನಿ ಮಿಲ್' ನ ಹಿಂದಿನ ಹೆಸರು, 'ಬಿ ಅಂಡ್ ಸಿ ಮಿಲ್ಸ್' ಅಥವಾ 'ಬಿನ್ನಿ ಅಂಡ್ ಕಂ' ಎಂದಿತ್ತು. ೧೯೧೪ ರಲ್ಲಿ ಆ ಕಾರ್ಖಾನೆಯ ಸ್ಪಿನ್ನಿಂಗ್ ರೂಂ ಶುರುವಾಗಿದ್ದು ಮದ್ರಾಸ್ ನಲ್ಲಿ. ಹೀಗೆ ಶುರುವಾದ ಹತ್ತಿ ಬಟ್ಟೆಯ ಕಾರ್ಖಾನೆ, ಸನ್, ೧೯೯೬ ರಲ್ಲಿ ಮುಚ್ಚಬೇಕಾಯಿತು. ಈಗ ಆ ಜಾಗವನ್ನು 'ಕಂಟೇನರ್ ಫ್ರೈಟ್ ಸ್ಟೇಶನ್', 'ಚಲನ ಚಿತ್ರಗಳ ಶೂಟಿಂಗ್ ಕೆಲಸ'ಗಳಿಗೆ ಉಪಯೋಗಿಸುತ್ತಿದ್ದಾರೆ.

ಬೆಂಗಳೂರಿನ ಹತ್ತಿ ಮಿಲ್ ನ (ಬಿನ್ನಿ ಮಿಲ್) ಇತಿಹಾಸ

[ಬದಲಾಯಿಸಿ]

೨೦ ನೆಯ ಶತಮಾನದ ಆದಿಯಲ್ಲಿ, 'ಮದ್ರಾಸ್' ನಲ್ಲಿ ಪ್ರಾರಂಭವಾದ 'ಬಿನ್ನಿ ಅಂಡ್ ಕಂ' ದೇಶದ ಅತಿ ದೊಡ್ಡ ಖಾಸಗೀ ಮಿಲ್ ಗಳಲ್ಲೊಂದಾಗಿತ್ತು. ಕಾರ್ಖಾನೆಯ ಹಲವು ಭಾಗಗಳು 'ಮದ್ರಾಸ್' ಮತ್ತು 'ಪೆರಂಬೂರ್' ಮಧ್ಯೆ, ಸ್ಥಾಪಿತವಾಗಿದ್ದವು. ಆಗಸ್ಟ್ ೧೭, ೧೮೭೬ ರಲ್ಲಿ ಮಿಲ್ ನ, 'ನೊಂದಣಿ ಕೆಲಸ' ಶುರುವಾಯಿತ್ತು. ಕಾರ್ಯಾರಂಭ ಮಾಡಲು ಪ್ರಾರಂಭವಾಗಿದ್ದು, ಜನವರಿ ೧೮೭೮. ಬೆಂಗಳೂರಿನ ಕಾರ್ಖಾನೆ, ಜೂನ್, ೩೦, ೧೮೮೧ ರಲ್ಲಿ ಸ್ಥಾಪನೆಯಾಯಿತು. ೧೯೨೦ ರಲ್ಲಿ ಎರಡೂ ಕಂಪೆನಿಗಳು ಒಂದಾದವು. ೧೮೮೪ ರಲ್ಲಿ, 'ಬೆಂಗಳೂರಿನಲ್ಲಿ ವುಲ್ಲನ್, ಕಾಟನ್, ಮತ್ತು ಸಿಲ್ಕ್ ಮಿಲ್' ಎಂಬ ಹೆಸರಿನ ಕಂಪೆನಿಯನ್ನು ಶುರುಮಾಡಲಾಯಿತು. ಈ ಸಂಸ್ಥೆ, ಸನ್, ೧೯೭೦ ರವರೆಗೆ ಅತ್ಯಂತ ಯಶಸ್ವಿಯಾಗಿ ಕೆಲಸಮಾಡುತ್ತಿತ್ತು.

ಹತ್ತಿ ಬಟ್ಟೆಯ ಫ್ಯಾಶನ್ ವಸ್ತ್ರಗಳಿಗೆ ಹೆಸರಾದದ್ದು

[ಬದಲಾಯಿಸಿ]

'ಬಿನ್ನಿ ಮಿಲ್' ನ ಬಟ್ಟೆಗಳಲ್ಲಿ ಹೆಚ್ಚಿನವು ಹತ್ತಿಗೆ ಸಂಬಂಧಿಸಿದವು. ಮಾರುಕಟ್ಟೆಯಲ್ಲಿ ಪ್ರದರ್ಶನಗೊಳ್ಳುವ ಜಾಹಿರಾತುಗಳಲ್ಲಿ ೧೦೦% ಶುದ್ಧ ಇಜಿಪ್ಷಿಯನ್ ಹತ್ತಿಯಿಂದ ತಯಾರಿಸಿದ್ದು ಎಂದು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದರು. 'ಬಿನ್ನಿ ಮಿಲ್ ನ ಡ್ರಿಲ್ ಬಟ್ಟೆ'ಗಳನ್ನು ಹೆಚ್ಚಾಗಿ ಸಮವಸ್ತ್ರದ ಉಡುಪುಗಳಿಗೆ ಬಳಸುತ್ತಿದ್ದರು. ಅದಲ್ಲದೆ ವರ್ಷದಲ್ಲಿ ಹಲವಾರು ಹೊಸಮಾದರಿಯ ವಿನ್ಯಾಸ ಇಲ್ಲವೇ 'ಫಿನಿಶಿಂಗ್' ನಲ್ಲಿ ನಾವೀನ್ಯತೆ ಇವೂ ಒಟ್ಟಾರೆ ಬಿನ್ನಿ ಮಿಲ್ ನ ಹಾಲ್ ಮಾರ್ಕ್ ಗಳಾಗಿದ್ದವು. ಭಾರತದಲ್ಲಿ ಮೊತ್ತಮೊದಲು 'ಕಾಟ್ಸ್ ವುಲ್' ಎಂಬ ಬಟ್ಟೆಯನ್ನು ಮಾರುಕಟ್ಟೆಗೆ ತಂದಾಗ ಅದರಿಂದ ತಯಾರಾದ 'ಶರ್ಟ್ಸ್' ಮತ್ತು 'ಬುಶ್ ಶರ್ಟ್ಸ್' ಗಳು 'ಯುವಕರೆಲ್ಲರ ಮನಪಸಂದ್ ಉಡುಪು'ಗಳಾಗಿ ಶೋಭಿಸಿದ್ದವು. ಈ ಬಟ್ಟೆಯ ವಿಶೇಷತೆಎಂದರೆ, 'ಆಸ್ಟ್ರೆಲಿಯಾದ ಉತ್ಕೃಷ್ಟ ಮೆರಿನೋ ಉಣ್ಣೆ'ಯನ್ನು ಮತ್ತು 'ಶುದ್ಧ ಅಪ್ಪಟ ಇಜಿಪ್ಷಿಯನ್ ಹತ್ತಿ'ಯನ್ನು ಸಮರ್ಪಕವಾದ ಮಟ್ಟದಲ್ಲಿ ಮಿಶ್ರಣಮಾಡಿ ಅವುಗಳಿಂದ ನೂತ ದಾರವನ್ನು ಬಳಸಿ ತಯಾರಿಸಿದ ವಸ್ತ್ರಗಳಿವು. 'ಹತ್ತಿ ಡ್ರೆಸ್ ಮೆಟೀರಿಯಲ್' ಗಳಿಗೆ 'ಸ್ಯಾನ್ಫೊರೈಸ್ಡ್ ಫಿನಿಶಿಂಗ್' ಕೊಡುವ ವ್ಯವಸ್ಥೆಯನ್ನು 'ಬಿನ್ನಿ ಮಿಲ್' ಮೊದಲು ರೂಪಿಸಿದ್ದು. 'ಬಕ್ಲಿನ್ ಫಿನಿಶ್' ನಿಂದ ಉತ್ಪಾದಿಸಲ್ಪಟ್ಟ 'ಹತ್ತಿ ಶರ್ಟಿಂಗ್' ಗಳು ಬಟ್ಟೆಒಗೆದಾದ ಮೇಲೂ 'ಕುಗ್ಗದೆ' ಮೊದಲಿನ ರೂಪದಲ್ಲೇ ಇರುವ ಕಾರಣಗಳಿಂದ ಅವು ಮಾರುಕಟ್ಟೆಯಲ್ಲಿ ಹೆಸರಾದವು. ಅಂದಿನ ದಿನಗಳಲ್ಲಿ ಈ ತರಹದ ಮಿಶ್ರಣಗಳು, 'ನೇಯ್ಗೆಯಲ್ಲಿ ಹೊಸವಿನ್ಯಾಸಗಳು' ಇವೆಲ್ಲಾ ಹೆಚ್ಚಾಗಿ ಯಾವ ಮಿಲ್ ಗಳೂ ಮಾಡಲು ಅಸಮರ್ಥವಾಗಿದ್ದವು. ಅದಕ್ಕೆಲ್ಲ 'ಬಿನ್ನಿ ಮಿಲ್' ಒಂದು ಆದರ್ಶವಾಗಿತ್ತು. ಇದಲ್ಲದೆ ರೇಷ್ಮೆ ವಸ್ತ್ರಗಳನ್ನು ತಯಾರುಮಾಡುವಾಲ್ಲಿ 'ಬಿನ್ನಿಮಿಲ್' ಒಂದು ಹೆಜ್ಜೆ ಮುಂದಿತ್ತು. ವಾಯುಯಾನದಲ್ಲಿ ಪರಿಚಾರಕಿಯರಾಗಿ ಕೆಲಸಮಾಡುವ 'ಗಗನ ಸಖಿಯರ ರೇಷ್ಮೆ ಸೀರೆ ಸಮವರ್ಸ್ತ್ರ' 'ಬಿನ್ನಿ ಮಿಲ್' ನಲ್ಲಿ ಉತ್ಪಾದಿಸಿದ್ದು. ಏಕೆಂದರೆ, 'ಧರ್ಮಾವರಂ', ಇಲ್ಲವೇ 'ಕಾಂಜೀವರಂ' ಸೀರೆಗಳು ಸುಂದರವಾಗಿದ್ದರು, ಭಾರವಾಗಿರುವ ಕಾರಣಕ್ಕಾಗಿ 'ಗಗನ ಸಖಿ'ಯರ ಕೆಲಸಕ್ಕೆ ಸರಿಹೊಗುತ್ತಿರಲಿಲ್ಲ. ಈಗ 'ಮೈಸೂರ್ ಸಿಲ್ಕ್ ನಿಗಮ'ದವರು ವಾಯುಯಾನಕ್ಕೆ ತಮ್ಮ ಅಪ್ಪಟ ಸಿಲ್ಕ್ ಸಿರೆಗಳನ್ನು ವಿಶೇಷವಾಗಿ ವಿನ್ಯಾಸಮಾಡಿ ಒದಗಿಸುತ್ತಿದ್ದಾರೆ.

'ಬಿನ್ನಿ ಮಿಲ್' ಮತ್ತು ಅಂದಿನ 'ಸ್ಪರ್ಧಾತ್ಮಕ ಮಾರುಕಟ್ಟೆಯ ಸ್ಪರ್ಧೆ'

[ಬದಲಾಯಿಸಿ]

'ಭಾರತದ ಮಾರುಕಟ್ಟೆಯಲ್ಲಿ ರಾಜನಂತೆ ಶೋಭಿಸಿದ ಬಿನ್ನಿ ಮಿಲ್ ನ ಬಟ್ಟೆಗಳು', ಹೆಚ್ಚಾಗಿ ಹತ್ತಿಯಿಂದ ತಯಾರಿಸಿದವು. ಗ್ವಾಲಿಯರ್ ರೆಯಾನ್, ರೇಮಂಡ್ ಉಣ್ಣೆ ಸೂಟಿಂಗ್ ಬಟ್ಟೆಗಳು ಹೆಚ್ಚಾಗಿ ಮಾನವ ನಿರ್ಮಿತ ಫೈಬರ್ ಗಳಿಂದ ತಯಾರಾದದ್ದು. ಇವುಗಳಿಂದ ತಯಾರಾದ ಉಡುಪುಗಳು ಹೆಚ್ಚಾಗಿ ಸುಕ್ಕುಬರುವುದಿಲ್ಲ. ನೋಡಲು ಆಕರ್ಷಕ, ಬಾಳಿಕೇಯು ಹೆಚ್ಚು. ಅವುಗಳ ಒಂದು ಅವಗುಣವೆಂದರೆ, 'ದುಬಾರಿ' ಎನ್ನುವುದು. ಈ ಹೊಸವಿನ್ಯಾಸದ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗ ಯುವಜನತೆ ಅವನ್ನು ಮುಕ್ತಹಸ್ತದಿಂದ ಸ್ವಾಗತಿಸಿದರು. ಇದಲ್ಲದೆ, ಹತ್ತಿ ಬಟ್ಟೆಯನ್ನು ಸುಂದರವಾದ ವಿನ್ಯಾಸಗಳಲ್ಲಿ ಕಡಿಮೆ ಬೆಲೆಗೆ ತಯಾರಿಸುವ 'ಹೊಸ ಮಿಲ್' ಗಳೂ ಅಸ್ತಿತ್ವಕ್ಕೆ ಬಂದದ್ದು,(ಮಫತ್ ಲಾಲ್ ಮಿಲ್ಸ್, ಕ್ಯಾಲಿಕೋ ಮಿಲ್ಸ್, ಡೆಲ್ಲಿ ಶ್ರೀರಾಂ ಮಿಲ್ಸ್, ಮುಂತಾದವು) 'ಬಿನ್ನಿ ಮಿಲ್' ಗೆ ಮಾರಕವಾಗಿ ಪರಿಣಮಿಸಿತು. ಹೀಗೆ ಆರಂಭವಾದ ಕಷ್ಟಗಳಿಂದ ಮಿಲ್ ಎಚ್ಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದು ತನ್ನ ಉತ್ಪಾದನೆಯಲ್ಲಿ ಮಾರ್ಪಾಟನ್ನು ಮಾಡಲಿಲ್ಲ. ಬಿ.ಪಿ ವಾಡಿಯ ಮತ್ತು ವಿ.ಕಲ್ಯಾಣಸುಂದರಂ ಮುದಲಿಯಾರ್, ಮೊದಲಾದ ಕಾರ್ಮಿಕ ಮುಖಂಡರಿಂದ 'ಬೆಂಗಳೂರಿನ ಬಕಿಂಗ್ ಹಾಮ್ ಕರ್ನಾಟಕ್ ಮಿಲ್' ನಲ್ಲಿ, ಆಪ್ರಿಲ್, ೨೭, ೧೯೧೮, ರಲ್ಲಿ 'ಕೆಲಸಗಾರರ ಯೂನಿಯನ್' ಆರಂಭವಾಯಿತು. ಹೀಗೆ 'ಭಾರತದ ಪ್ರಥಮ ಕಾರ್ಮಿಕರ ಸಂಘಟನೆ' ಅಸ್ತಿತ್ವಕ್ಕೆ ಬಂತು. ಮಿಲ್ ನ ಕೆಲಸಗಾರರ ಆದ್ಯತೆಗಳನ್ನು ಮುಟ್ಟುವಲ್ಲಿ ವಿಫಲತೆಯಾಯಿತು. ೧೯೯೬ ರಲ್ಲಿ ಅತಿಯಾಗಿ ನಷ್ಟ ಸಂಭವಿಸಿದ್ದರಿಂದ,ಮಿಲ್ ನ್ನು, ಮುಚ್ಚಲಾಯಿತು.