ಫ್ರೈಡ್ ರೈಸ್
ಗೋಚರ
ಫ್ರೈಡ್ ರೈಸ್ ಬಾಣಲೆಯಲ್ಲಿ ಕಲಕುತ್ತಾ ಕರಿದ ಅನ್ನದ ಒಂದು ಖಾದ್ಯವಾಗಿದೆ. ಇದರೊಂದಿಗೆ ಮೊಟ್ಟೆಗಳು, ತರಕಾರಿಗಳು, ಸಮುದ್ರಾಹಾರ, ಅಥವಾ ಮಾಂಸದಂತಹ ಇತರ ಘಟಕಾಂಶಗಳನ್ನು ಬೆರೆಸಲಾಗುತ್ತದೆ. ಹಲವುವೇಳೆ ಇದನ್ನು ಹಾಗೆಯೇ ತಿನ್ನಲಾಗುತ್ತದೆ ಅಥವಾ ಮತ್ತೊಂದು ಖಾದ್ಯದೊಂದಿಗೆ ಪಕ್ಕ ಖಾದ್ಯವಾಗಿ ತಿನ್ನಲಾಗುತ್ತದೆ. ಫ಼್ರೈಡ್ ರೈಸ್ ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಕೆಲವು ದಕ್ಷಿಣ ಏಷ್ಯಾದ ಪಾಕಪದ್ಧತಿಗಳಲ್ಲಿ ಜನಪ್ರಿಯ ಘಟಕವಾಗಿದೆ. ಗೃಹ ತಯಾರಿಕೆಯ ಆಹಾರವಾಗಿ, ಫ಼್ರೈಡ್ ರೈಸ್‌ನ್ನು ಸಾಮಾನ್ಯವಾಗಿ ಇತರ ಖಾದ್ಯಗಳಿಂದ ಉಳಿದುಕೊಂಡ ಘಟಕಾಂಶಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಅಸಂಖ್ಯಾತ ಮಾರ್ಪಾಡುಗಳಿವೆ. ಫ಼್ರೈಡ್ ರೈಸ್ ಮೊದಲು ಚೀನಾದಲ್ಲಿನ ಸೂಯಿ ರಾಜವಂಶದ ವೇಳೆ ಅಭಿವೃದ್ಧಿಯಾಯಿತು ಮತ್ತು ವಸ್ತುತಃ ಎಲ್ಲ ಫ಼್ರೈಡ್ ರೈಸ್ ಖಾದ್ಯಗಳು ತಮ್ಮ ಮೂಲಗಳನ್ನು ಚೈನೀಸ್ ಫ಼್ರೈಡ್ ರೈಸ್‍ನೊಂದಿಗೆ ಗುರುತಿಸಬಲ್ಲವು.[೧]
ಉಲ್ಲೇಖಗಳು
[ಬದಲಾಯಿಸಿ]- ↑ Bruce Kraig; Colleen Taylor Sen (2013). Street Food Around the World: An Encyclopedia of Food and Culture. ABC-CLIO. p. 183. ISBN 9781598849554.