ಫ್ರೆಡರಿಕ್ ಟ್ವೋರ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರೆಡರಿಕ್ ವಿಲಿಯಮ್ ಟ್ವೋರ್ಟ್ (1877-1950). ಇಂಗ್ಲೆಂಡಿನ ಏಕಾಣುಜೀವಿಶಾಸ್ತ್ರಜ್ಞ.

ಬದುಕು ಮತ್ತು ಸಾಧನೆ[ಬದಲಾಯಿಸಿ]

ಸರ್ರಿಯ ಕೇಂಬರ್ಲಿ ಎಂಬಲ್ಲಿ 1877ನೆಯ ಅಕ್ಟೋಬರ್ 22ರಂದು ಜನನ. ಲಂಡನ್ನಿನ ಸೇಂಟ್ ಥಾಮಸ್ ಆಸ್ಪತ್ರೆಯ ರೋಗಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತ (1901-02) ವೈದ್ಯಕೀಯದಲ್ಲಿ ತರಬೇತಿ ಹೊಂದಿದ. ಮುಂದೆ ಲಂಡನ್ ಆಸ್ಪತ್ರೆಯಲ್ಲಿ ಸಹಾಯಕ ಏಕಾಣುಜೀವಿಶಾಸ್ತ್ರಜ್ಞನಾಗಿ (1902-09) ಕೆಲಸ ಮಾಡುತ್ತಿದ್ದ. 1909ರಲ್ಲಿ ಬ್ರೌನ್ ಇನ್‍ಸ್ಟಿಟ್ಯೂಟಿನ ಮೇಲಧಿಕಾರಿಯಾಗಿಯೂ ಲಂಡನ್ ವಿಶ್ವವಿದ್ಯಾಲಯದಲ್ಲಿ ಏಕಾಣುಜೀವಿಶಾಸ್ತ್ರದ ಪ್ರಾಧ್ಯಾಪಕನಾಗಿಯೂ ನೇಮಕಗೊಂಡ. ಮೆಲಕುಹಾಕುವ ಪ್ರಾಣಿಗಳ ಒಂದು ರೋಗವಾದ ಜೋಹ್ನ್ಸನ ರೋಗವನ್ನು ವ್ಯಾಸಂಗಿಸಿದ. ಜೊತೆಗೆ ಆಮ್ಲ ಮಾಧ್ಯಮದಲ್ಲೂ ಬಣ್ಣ ತೆಗೆದುಕೊಳ್ಳಬಲ್ಲ ಕುಷ್ಠ ರೋಗಾಣುವನ್ನು ಪ್ರಯೋಗಾಲಯದಲ್ಲಿ ಕೃಷಿಮಾಡುವ ವಿಧಾನವನ್ನು ವಿವರಿಸಿದ(1910). ಕೆಲವು ಏಕಾಣುಜೀವಿಗಳಲ್ಲಿ ಪರಾವಲಂಬಿಯಾಗಿದ್ದು ಅವನ್ನು ಅಂತಿಮವಾಗಿ ನಾಶಪಡಿಸುವ ಹಾಗೂ ವೈರಸ್‍ಗಳ ಗುಂಪಿಗೆ ಸೇರಿದ್ದು ಎನ್ನಿಸುವ ಅತಿಸೂಕ್ಷ್ಮಾಣುಗಳನ್ನು ತಾನು ಆವಿಷ್ಕರಿಸಿರುವ ವಿಚಾರವನ್ನು ಪ್ರಸಿದ್ಧ ಲಾನ್ಸೆಟ್ ವೈದ್ಯಕೀಯ ವಾರಪತ್ರಿಕೆಯಲ್ಲಿ ಪ್ರಚುರಪಡಿಸಿದ(1915). ಈ ವಿಷಯ ತಿಳಿಯದೆ ಮತ್ತು ಪ್ರತ್ಯೇಕವಾಗಿಯೇ, ಎರಡು ವರ್ಷಗಳ ಬಳಿಕ ಇದೇ ಸೂಕ್ಷ್ಮಾಣುಗಳನ್ನು ಕೆನಡಾದ ಏಕಾಣುಶಾಸ್ತ್ರಜ್ಞ ಫೆಲಿಕ್ಸ್ ಡಿ ಹೆರೆಲ್ ಎಂಬುವನು ಆವಿಷ್ಕರಿಸಿ ಅದಕ್ಕೆ ಬ್ಯಾಕ್ಟೀರಿಯೋಫೇಜ್ ಎಂದು ಹೆಸರಿಸಿ ಪ್ರಚುರಪಡಿಸಿದ ಮೇಲೆ, ಬ್ಯಾಕ್ಟೀರಿಯೋಫೇಜನ್ನು ಮೊದಲು ಶೋಧಿಸಿದ ಗೌರವ ಯಾರಿಗೆ ಸಲ್ಲಬೇಕು ಎನ್ನುವ ವಿಚಾರದಲ್ಲಿ ಸ್ವಲ್ಪ ಕಹಿಪ್ರಸಂಗ ಸಂಭವಿಸಿತು. ಆದರೆ ಅದು ಮಿತಿಮೀರಿ ಗುಲ್ಲಾಗದೆ ಸಮಾಧಾನವಾಯಿತು. ಟ್ವೋರ್ಟನು ಕೇಂಬರ್ಲಿಯಲ್ಲೇ 1950ರ ಮಾರ್ಚ್ 20ರಂದು ಮರಣಹೊಂದಿದ.

1877-1950. ಇಂಗ್ಲೆಂಡಿನ ಏಕಾಣುಜೀವಿಶಾಸ್ತ್ರಜ್ಞ. ಸರ್ರಿಯ ಕೇಂಬರ್ಲಿ ಎಂಬಲ್ಲಿ 1877ನೆಯ ಅಕ್ಟೋಬರ್ 22ರಂದು ಜನನ. ಲಂಡನ್ನಿನ ಸೇಂಟ್ ಥಾಮಸ್ ಆಸ್ಪತ್ರೆಯ ರೋಗಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತ (1901-02) ವೈದ್ಯಕೀಯದಲ್ಲಿ ತರಬೇತಿ ಹೊಂದಿದ. ಮುಂದೆ ಲಂಡನ್ ಆಸ್ಪತ್ರೆಯಲ್ಲಿ ಸಹಾಯಕ ಏಕಾಣುಜೀವಿಶಾಸ್ತ್ರಜ್ಞನಾಗಿ (1902-09) ಕೆಲಸ ಮಾಡುತ್ತಿದ್ದ. 1909ರಲ್ಲಿ ಬ್ರೌನ್ ಇನ್‍ಸ್ಟಿಟ್ಯೂಟಿನ ಮೇಲಧಿಕಾರಿಯಾಗಿಯೂ ಲಂಡನ್ ವಿಶ್ವವಿದ್ಯಾಲಯದಲ್ಲಿ ಏಕಾಣುಜೀವಿಶಾಸ್ತ್ರದ ಪ್ರಾಧ್ಯಾಪಕನಾಗಿಯೂ ನೇಮಕಗೊಂಡ. ಮೆಲಕುಹಾಕುವ ಪ್ರಾಣಿಗಳ ಒಂದು ರೋಗವಾದ ಜೋಹ್ನ್ಸನ ರೋಗವನ್ನು ವ್ಯಾಸಂಗಿಸಿದ. ಜೊತೆಗೆ ಆಮ್ಲ ಮಾಧ್ಯಮದಲ್ಲೂ ಬಣ್ಣ ತೆಗೆದುಕೊಳ್ಳಬಲ್ಲ ಕುಷ್ಠ ರೋಗಾಣುವನ್ನು ಪ್ರಯೋಗಾಲಯದಲ್ಲಿ ಕೃಷಿಮಾಡುವ ವಿಧಾನವನ್ನು ವಿವರಿಸಿದ(1910). ಕೆಲವು ಏಕಾಣುಜೀವಿಗಳಲ್ಲಿ ಪರಾವಲಂಬಿಯಾಗಿದ್ದು ಅವನ್ನು ಅಂತಿಮವಾಗಿ ನಾಶಪಡಿಸುವ ಹಾಗೂ ವೈರಸ್‍ಗಳ ಗುಂಪಿಗೆ ಸೇರಿದ್ದು ಎನ್ನಿಸುವ ಅತಿಸೂಕ್ಷ್ಮಾಣುಗಳನ್ನು ತಾನು ಆವಿಷ್ಕರಿಸಿರುವ ವಿಚಾರವನ್ನು ಪ್ರಸಿದ್ಧ ಲಾನ್ಸೆಟ್ ವೈದ್ಯಕೀಯ ವಾರಪತ್ರಿಕೆಯಲ್ಲಿ ಪ್ರಚುರಪಡಿಸಿದ(1915). ಈ ವಿಷಯ ತಿಳಿಯದೆ ಮತ್ತು ಪ್ರತ್ಯೇಕವಾಗಿಯೇ, ಎರಡು ವರ್ಷಗಳ ಬಳಿಕ ಇದೇ ಸೂಕ್ಷ್ಮಾಣುಗಳನ್ನು ಕೆನಡಾದ ಏಕಾಣುಶಾಸ್ತ್ರಜ್ಞ ಫೆಲಿಕ್ಸ್ ಡಿ ಹೆರೆಲ್ ಎಂಬುವನು ಆವಿಷ್ಕರಿಸಿ ಅದಕ್ಕೆ ಬ್ಯಾಕ್ಟೀರಿಯೋಫೇಜ್ ಎಂದು ಹೆಸರಿಸಿ ಪ್ರಚುರಪಡಿಸಿದ ಮೇಲೆ, ಬ್ಯಾಕ್ಟೀರಿಯೋಫೇಜನ್ನು ಮೊದಲು ಶೋಧಿಸಿದ ಗೌರವ ಯಾರಿಗೆ ಸಲ್ಲಬೇಕು ಎನ್ನುವ ವಿಚಾರದಲ್ಲಿ ಸ್ವಲ್ಪ ಕಹಿಪ್ರಸಂಗ ಸಂಭವಿಸಿತು. ಆದರೆ ಅದು ಮಿತಿಮೀರಿ ಗುಲ್ಲಾಗದೆ ಸಮಾಧಾನವಾಯಿತು. ಟ್ವೋರ್ಟನು ಕೇಂಬರ್ಲಿಯಲ್ಲೇ 1950ರ ಮಾರ್ಚ್ 20ರಂದು ಮರಣಹೊಂದಿದ.