ಫ್ರಾನ್ಸ್‌ನ ನೀಸ್ ನಗರದಲ್ಲಿ ಭಯೋತ್ಪಾದಕ ಧಾಳಿ2016

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜುಲೈ 14,2016[ಬದಲಾಯಿಸಿ]

*ವಾಯುವಿಹಾರ ಡೆಸ್ ಆಂಗಲಿಯಾಸ್-ಧಾಳಿಯ ಸ್ಥಳ;ಕೆಂಪು ಗೆರೆಯ ಮೇಲೆ ಗುರುತಿಸಲಾಗಿದೆ.ನೀಸ್ ದಾಳಿ-2016

ಜುಲೈ 2016, 14 ರ ಗುರುವಾರ ಸಂಜೆ, ಫ್ರ್ಯಾಂಕೋ-ಟುನೀಸಿಯದ ಮೊಹಮದ್ ಲಹೌಆಯೇಜ್ ಬಾಹ್ಲೇಲ್, ಉದ್ದೇಶಪೂರ್ವಕವಾಗಿ ಒಂದು ಸರಕು ಟ್ರಕ್’ನ್ನು ನೈಸ್, ಫ್ರಾನ್ಸ್ ವಾಯುವಿಹಾರ ಮಾರ್ಗವಾದ ಡೆಸ್ ಆಂಗ್ಲಯೀಸ್ ಮೇಲೆ ಬ್ಯಾಸ್ಟಿಲ್ ಡೇ ಆಚರಿಸುತ್ತಿರುವ ಜನಸಂದಣಿಯ ಒಳಗೆ ಓಡಿಸಿದ್ದಾನೆ ಕನಿಷ್ಠ 84 ಕೊಂದು ಅನೇಕರಿಗೆ ತೀವ್ರ ಗಾಯ ಮಾಡಿದ್ದಾನೆ. ಆಕ್ರಮಣಕಾರ ಗುಂಪಿನ ನಡುವೆ ಅಂಕುಡೊಂಕಗಿ ಟ್ರಕ್ ಓಡಿಸಿದ್ದಾನೆ. ಅವನನ್ನು ಪೊಲೀಸರು ಗುಂಡಿಕ್ಕಿ ಕೊಂದರು. ಜನವರಿ 2015 ನಂತರ ಫ್ರಾನ್ಸ್ ನಲ್ಲಿ ಇದು ಮೂರನೇ ಪ್ರಮುಖ ಭಯೋತ್ಪಾದಕ ಧಾಳಿ. ಇದೇ 7 ಜನವರಿ 2015 ಐಲ್ ಡೆ ಫ್ರಾನ್ಸ್ ದಾಳಿ ಮತ್ತು ನಂತರ 13 ನವೆಂಬರ್ 2015 ರಂದು ನಡೆದ ಸಂಘಟಿತ ಪ್ಯಾರಿಸ್‍ ಧಾಳಿ.[೧]

ಬ್ಯಾಸ್ಟಿಲ್ ಡೇ (ಬೇಸ್ಟಿಲ್‌ ಬಿಡುಗಡೆಯ ದಿನ)[ಬದಲಾಯಿಸಿ]

ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಬೇಸ್ಟಿಲ್‌ ಎಂಬ ಕೋಟೆಯಲ್ಲಿ ಫ್ರಾನ್ಸ್‌ ದೊರೆಗಳು ಕಾರಾಗೃಹ ನಿರ್ಮಿಸಿಕೊಂಡಿದ್ದರು. 1789ರ ಜು.14ರಂದು ಆ ಕೋಟೆಗೆ ನುಗ್ಗಿ, ಕೈದಿಗಳನ್ನು ಫ್ರಾನ್ಸ್‌ ನಾಗರಿಕರು ಬಿಡುಗಡೆ ಮಾಡಿಸಿದ್ದರು. ಈ ಕ್ರಾಂತಿಯ ಸ್ಮರಣಾರ್ಥ ಪ್ರತಿ ವರ್ಷ ಜು.14 ಅನ್ನು ಫ್ರಾನ್ಸ್‌ ಸರ್ಕಾರ ರಾಷ್ಟ್ರೀಯ ರಜಾ ದಿನವೆಂದು ಘೋಷಿಸಿದೆ. ಅಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಂತೆಯೇ ನೀಸ್‌ ಪಟ್ಟಣದಲ್ಲಿ ಗುರುವಾರ ರಾತ್ರಿ ಪಟಾಕಿ ಸುಡುವ ಪ್ರದರ್ಶನ ಆಯೋಜಿಸಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. [೨]

ವಿವರ[ಬದಲಾಯಿಸಿ]

ನೀಸ್ ನಗರ:Nice-001
  • ದಕ್ಷಿಣ ಫ್ರಾನ್ಸ್‌ನ ಕರಾವಳಿ ನಗರ ನೀಸ್‌ನ ಕಡಲ ಕಿನಾರೆಯಲ್ಲಿ ರಾಷ್ಟ್ರೀಯ ದಿನ (ಬ್ಯಾಸ್ಟೈಲ್‌ ಡೇ) ಆಚರಣೆಗಾಗಿ ಸೇರಿದ್ದ ಸಾವಿರಾರು ಜನರ ಮೇಲೆ ಮನಸೋ ಇಚ್ಛೆ ಲಾರಿ ಹರಿಸಿದ ವ್ಯಕ್ತಿಯೊಬ್ಬ ಕನಿಷ್ಠ 84 ಜನರ ಸಾವಿಗೆ ಕಾರಣನಾಗಿದ್ದಾನೆ. 202 ಮಂದಿ ಗಾಯಗೊಂಡಿದ್ದಾರೆ.
  • ರಾಷ್ಟ್ರೀಯ ದಿನದ ಪ್ರಯುಕ್ತ ಗುರುವಾರ ಏರ್ಪಡಿಸಲಾಗಿದ್ದ ಸುಡುಮದ್ದು ಪ್ರದರ್ಶನ ಇನ್ನೇನು ಕೊನೆಗೊಳ್ಳಬೇಕು ಎಂಬ ಹೊತ್ತಿಗೆ ಈ ದುಷ್ಕೃತ್ಯ ನಡೆದಿದೆ. ರಾತ್ರಿ 11 ಗಂಟೆ ಹೊತ್ತಿಗೆ (ಭಾರತೀಯ ಸಮಯ ಸುಮಾರು ಮಧ್ಯರಾತ್ರಿ 2.30) 2 ಕಿ.ಮೀ. ದೂರ ಅತಿ ವೇಗವಾಗಿ ಲಾರಿ ಚಲಾಯಿಸಿ ಜನರ ಮೇಲೆ ನುಗ್ಗಿಸಲಾಗಿತ್ತು. ಚಾಲಕನನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. 'ಟ್ರಕ್‌ನಲ್ಲಿ ಭಾರಿ ಪ್ರಮಾಣದ ಗ್ರೆನೇಡ್‌ ಹಾಗೂ ಶಸ್ರ್ತಾಸ್ತ್ರಗಳು ದೊರೆತಿವೆ', ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಹತ್ತು ಮಕ್ಕಳು, 50ಕ್ಕೂ ಹೆಚ್ಚು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಿಂದೆ ಪ್ಯಾರಿಸ್‌ನಲ್ಲಿ ಉಗ್ರರು ಆತ್ಮಹತ್ಯೆ ಬಾಂಬ್‌ ದಾಳಿ ನಡೆಸಿ 130 ಜನರು ಸಾವಿಗೀಡಾದ ಎಂಟು ತಿಂಗಳ ಬಳಿಕ ಮತ್ತೆ ಈ ಘಟನೆ ಜರುಗಿದೆ.
  • ವಿಹಾರತಾಣ ಡೆಸ್‌ ಆಂಗ್ಲಾಯ್ಸ್‌ ಎಂಬಲ್ಲಿ ಈ ಘಟನೆ ನಡೆದಾಗ ಅಲ್ಲಿ ಸೇರಿದ್ದ ಸಾವಿರಾರು ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಪ್ರದೇಶದಲ್ಲೆಲ್ಲ ಮೃತದೇಹಗಳು ತುಂಬಿ ಹೋದವು. ಲಾರಿ ಚಾಲಕ ಪೊಲೀಸರತ್ತ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ನಂತರ ಪೊಲೀಸರು ಆತನನ್ನು ಹೊಡೆದುರುಳಿಸಿದರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ‘ಇದು ಭಯೋತ್ಪಾದನೆಯ ಸ್ವರೂಪದ ಘಟನೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ’ ಎಂದು ಫ್ರಾನ್ಸ್‌ ಅಧ್ಯಕ್ಷ ದುಃಖತಪ್ತ ಫ್ರಾಂಸ್ವಾ ಒಲಾಂಡ್‌ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ದಿನಾಚರಣೆಗಾಗಿ ಅಲ್ಲಿ ಕುಟುಂಬಗಳು ಸೇರಿದ್ದವು. ಹಾಗಾಗಿ ಮೃತರಲ್ಲಿ ಹಲವು ಮಕ್ಕಳೂ ಸೇರಿದ್ದಾರೆ ಎಂದು ಒಲಾಂಡ್‌ ತಿಳಿಸಿದ್ದಾರೆ.
  • ಚಾಲಕನ ಗುರುತು ಪತ್ತೆ: ಲಾರಿಯಲ್ಲಿ 31 ವರ್ಷ ವಯಸ್ಸಿನ ವ್ಯಕ್ತಿಯ ಗುರುತು ಚೀಟಿ ಪತ್ತೆಯಾಗಿದೆ. ಆತನನ್ನು ಮೊಹಮ್ಮದ್‌ ಲಾಹವೈಜ್‌ ಬೊಹ್ಲೆಲ್‌ ಎಂದು ಗುರುತಿಸಲಾಗಿದೆ. ಟ್ಯುನೀಷಿಯಾ ಮೂಲದ ಫ್ರಾನ್ಸ್‌ ಪ್ರಜೆ ಎಂದು ಹೇಳಲಾಗಿದೆ. ಈತ ನೀಸ್‌ನ ನಿವಾಸಿ. 'ಸದಾ ಏಕಾಂಗಿಯಾಗಿಯೇ ಇರುತ್ತಿದ್ದ ಈತ ಯಾರೊಂದಿಗೂ ಬೆರೆಯುತ್ತಿರಲಿಲ್ಲ', ಎಂದು ಆತನ ನೆರೆಯವರು ತಿಳಿಸಿದ್ದಾರೆ.(ಚಿತ್ರ:ಮೊಹಮ್ಮದ್‌ ಲಾಹವೈಜ್‌ ಬೊಹ್ಲೆಲ್‌)

ಪತ್ರಕರ್ತ ಡೇಮಿಯನ್‌ ಆಲ್ಮಂಡ್‌ ವಿವರಣೆ[ಬದಲಾಯಿಸಿ]

ದಕ್ಷಿಣ ಸಮುದ್ರ ತೀರದಲ್ಲಿ ಪೂರ್ವದಲ್ಲಿರುವ ನಗರ ನೀಸ್
  • ರಸ್ತೆಯಲ್ಲಿ ಪ್ರತಿ ಐದು ಮೀಟರ್‌ ಅಂತರದಲ್ಲಿ ಬಿದ್ದಿದ್ದ ಮೃತದೇಹಗಳು. ಚದುರಿಬಿದ್ದ ಅಂಗಾಗಗಳು, ಹರಿದ ರಕ್ತದೋಕುಳಿ, ಗಾಯಗೊಂಡವರ ನರಳಾಟ...ಫ್ರಾನ್ಸ್‌ನ ನೀಸ್‌ನಲ್ಲಿ ಗುರುವಾರ ರಾತ್ರಿ ನಡೆದ ಟ್ರಕ್‌ ದಾಳಿಯ ಭಯಾನಕತೆಯನ್ನು ಸ್ಥಳೀಯ ಪತ್ರಕರ್ತ ಡೇಮಿಯನ್‌ ಆಲ್ಮಂಡ್‌ ಹೀಗೆ ವಿವರಿಸಿದರು.
  • ರಾಷ್ಟ್ರೀಯ ದಿನಾಚರಣೆಯ ಸಂಭ್ರಮದಲ್ಲಿ ಮುಳುಗಿದ್ದ ಜನರು ತಮ್ಮತ್ತ ಯಮನಂತೆ ಬರುತ್ತಿದ್ದ ಬಿಳಿ ಬಣ್ಣದ ಟ್ರಕ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೂ ಭಾರಿ ಗಾತ್ರದ ಟ್ರಕ್‌ ಅಡಿ ಸಿಲುಕಿ ಹಲವರು ಪ್ರಾಣ ಕಳೆದುಕೊಂಡರು’ ಎಂದು ಹೇಳಿದ್ದಾರೆ. ‘ಫ್ರಾನ್ಸ್‌ನ ರಾಷ್ಟ್ರೀಯ ರಜಾದಿನದಂದು ಬೀಚ್‌ ರೆಸಾರ್ಟ್‌ನಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಂದ ಭಾರಿ ಸಂಗೀತ ಕೇಳಿಬರುತ್ತಿತ್ತು.ಸುಡುಮದ್ದು ಪ್ರದರ್ಶನ ಕೊನೆಗೊಂಡು ಜನರು ಅಲ್ಲಿಂದ ಚದುರುತ್ತಿದ್ದ ಸಂದರ್ಭದಲ್ಲಿ ಟ್ರಕ್‌ ಎರಗಿ ಬಂದಿದೆ’ ಎಂದಿದ್ದಾರೆ. ‘ಆರಂಭದಲ್ಲಿ ಆತ ಟ್ರಕ್‌ಅನ್ನು ನಿಧಾನವಾಗಿ ಚಲಾಯಿಸಿದ್ದಾನೆ. ಒಬ್ಬ ದ್ವಿಚಕ್ರ ವಾಹನ ಸವಾರ ಟ್ರಕ್‌ಅನ್ನು ಬೆನ್ನಟ್ಟಿದ್ದನ್ನು ನೋಡಿದೆ. ಟ್ರಕ್‌ ಹಿಂದಿಕ್ಕಲು ಪ್ರಯತ್ನಿಸಿದನಲ್ಲದೆ, ಚಾಲಕನ ಬದಿಯ ಬಾಗಿಲು ತೆರೆಯಲು ಮುಂದಾಗಿದ್ದಾನೆ. ಆದರೆ ಆಯತಪ್ಪಿ ಕೆಳಕ್ಕೆ ಬಿದ್ದು ಟ್ರಕ್‌ ಅಡಿ ಸಿಲುಕಿದ’ ಎಂದು ಗಟ್ಜರ್‌ ವಿವರಿಸಿದ್ದಾರೆ.
  • ‘ಇಬ್ಬರು ಪೊಲೀಸ್‌ ಅಧಿಕಾರಿಗಳು ಟ್ರಕ್‌ನತ್ತ ಗುಂಡು ಹಾರಿಸುವುದನ್ನು ನೋಡಿದೆ. ಈ ವೇಳೆ ಚಾಲಕ ಟ್ರಕ್‌ನ ವೇಗ ಹೆಚ್ಚಿಸಿದನಲ್ಲದೆ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಿದ್ದಾನೆ. ಮುಂದಿನ 15 ರಿಂದ 20 ಸೆಕೆಂಡ್‌ಗಳ ಕಾಲ ಹಲವು ಸುತ್ತುಗಳ ಗುಂಡು ಹಾರಾಟ ನಡೆದಿದೆ. ಯಾರು ಯಾರ ಮೇಲೆ ಗುಂಡು ಹಾರಿಸಿದ್ದಾರೆ ಎಂಬುದು ತಿಳಿಯಲಿಲ್ಲ. ‘ಜನರು ದಿಗಿಲಿನಿಂದ ಓಡಿದ್ದಾರೆ. ಟ್ರಕ್‌ನಿಂದ ತಪ್ಪಿಸಿಕೊಳ್ಳಲು ರಸ್ತೆ ಬದಿಯಲ್ಲಿದ್ದ ಹೋಟೆಲ್‌ ಹಾಗೂ ಇತರ ಕಟ್ಟಡಗಳ ಒಳಗೆ ನುಗ್ಗಿದ್ದಾರೆ’ ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.
  • ಟ್ರಕ್‌ ಆರಂಭದಲ್ಲಿ ಗಂಟೆಗೆ 30 ರಿಂದ 40 ಕಿ. ಮೀ. ವೇಗದಲ್ಲಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಗುಂಡು ಹಾರಿಸಿದಾಗ ವೇಗವನ್ನು ಹೆಚ್ಚಿಸಿದ್ದಾನೆ.ಒಂದು ಹಂತದಲ್ಲಿ ಟ್ರಕ್‌ ಗಂಟೆಗೆ 90 ಕಿ. ಮೀ. ವೇಗದಲ್ಲಿತ್ತು ಎಂದು ಸ್ಥಳೀಯ ಸರ್ಕಾರದ ಮುಖ್ಯಸ್ಥ ಕ್ರಿಶ್ಚಿಯನ್‌ ಎಸ್ಟ್ರೊಸಿ ಹೇಳಿದ್ದಾರೆ.
  • ‘ಬೀಚ್‌ ಹಾಗೂ ಸಮೀಪದಲ್ಲಿ ಉತ್ಸವದ ವಾತಾವರಣವಿತ್ತು. ಬಿಳಿ ಬಣ್ಣದ ಟ್ರಕ್‌ ಜನರ ಮೇಲೆ ಎರಗಿದ ಬಳಿಕ ಎಲ್ಲವೂ ಬದಲಾಯಿತು’ ಎಂದಿದ್ದಾರೆ. ‘ರಜಾ ದಿನ ಕಳೆಯಲು ಕುಟುಂಬ ಸಮೇತ ಬಂದಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಟ್ರಕ್‌ ಬರುತ್ತಿರುವುದನ್ನು ಕಂಡು ರೆಸ್ಟೋರೆಂಟ್‌ ಒಳಗೆ ಓಡಿ ಜೀವ ಉಳಿಸಿಕೊಂಡೆ. ಭಯಭೀತ ಜನರು ತಮಗೆ ಕಂಡ ಹೋಟೆಲ್‌ಗಳ ಒಳಗೆ ಓಡಲು ಪ್ರಯತ್ನಿಸುತ್ತಿದ್ದರು’ ಎಂದು ಆಸ್ಟ್ರೇಲಿಯದ ಟಿ. ವಿ ಚಾನೆಲ್‌ನ ಡೇವಿಡ್‌ ಕೊವಾಡಿ ಹೇಳಿದ್ದಾರೆ.

ಉಗ್ರರ ಕರೆಯಂತೆ ದಾಳಿ[ಬದಲಾಯಿಸಿ]

  • ದಾಳಿಯ ಉದ್ದೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಇಸ್ಲಾಮಿಕ್‌ ಉಗ್ರರು ನಡೆಸಿರುವ ಕೃತ್ಯವೇ ಎಂಬ ಬಗ್ಗೆಯೂ ಖಚಿತತೆ ಇಲ್ಲ. ಯಾವುದೇ ಉಗ್ರಗಾಮಿ ಸಂಘಟನೆ ಈವರೆಗೆ ಹೊಣೆ ಹೊತ್ತುಕೊಂಡಿಲ್ಲ. ಎಂಟು ತಿಂಗಳಲ್ಲಿ ಎರಡನೇ ದಾಳಿ: ಕಳೆದ ನವೆಂಬರ್‌ನಲ್ಲಿ ಪ್ಯಾರಿಸ್‌ ನಗರದ ಒಂದು ಸಭಾಭವನ, ಒಂದು ಸ್ಟೇಡಿಯಂ ಮತ್ತು ಹೋಟೆಲ್ ಮೇಲೆ ಏಕಕಾಲದಲ್ಲಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ 130 ಮಂದಿ ಪ್ರಾಣ ಕಳೆದುಕೊಂಡಿದ್ದರು.
  • ಇಸ್ಲಾಂ ವಿರೋಧಿಗಳ ಹತ್ಯೆ ನಡೆಸುವಂತೆ ಜಿಹಾದಿಗಳು ನೀಡಿರುವ ಕರೆಗೆ ಅನುಗುಣವಾಗಿಯೇ ನೀಸ್‌ ಮೇಲೆ ಟ್ರಕ್‌ ದಾಳಿ ನಡೆದಿದೆ ಎಂದು ಫ್ರಾನ್ಸ್‌ನ ಭಯೋತ್ಪಾದನೆ ತಡೆ ತನಿಖಾಧಿಕಾರಿ ಫ್ರಾಂಸ್ವಾ ಮೋಲಿನ್ಸ್‌ ಹೇಳಿದ್ದಾರೆ. ವಿಡಿಯೊಗಳು ಮತ್ತು ಇತರ ಮಾಧ್ಯಮಗಳ ಮೂಲಕ ಉಗ್ರರು ಇಂತಹ ಕರೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ನೀಸ್‌ ಟ್ರಕ್‌ ದಾಳಿಯ ತನಿಖೆಯ ನೇತೃತ್ವವನ್ನು ಅವರು ವಹಿಸಿಕೊಂಡಿದ್ದಾರೆ.
ಈ ಅನಾಹುತ ತಡೆಯಲು ಹೋಗಿ ಜೀವ ತೆತ್ತರು: ದ್ವಿಚಕ್ರ ವಾಹನ ಸವಾರರೊಬ್ಬರು ಲಾರಿಯನ್ನು ತಡೆಯಲು ಯತ್ನಿಸಿದರು. ಲಾರಿಯ ಜತೆಗೇ ಸಾಗಿದ ಅವರು ಚಾಲಕನ ಬದಿಯ ಬಾಗಿಲು ತೆರೆದು ಚಾಲಕನನ್ನು ಹೊರಗೆಳೆಯಲು ಯತ್ನಿಸಿದರು. ಆದರೆ ಈ ಪ್ರಯತ್ನದಲ್ಲಿ ಲಾರಿ ಚಕ್ರದಡಿಗೆ ಸಿಲುಕಿ ಮೃತಪಟ್ಟರು.‘ನಾನು ಹೋಟೆಲ್‌ನ ಬಾಲ್ಕನಿಯಲ್ಲಿ ನಿಂತಿದ್ದೆ. ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದ ಜನರ ಮೇಲೆ ಟ್ರಕ್‌ ಸಾಗಿದ್ದನ್ನು ಕಣ್ಣಾರೆ ಕಂಡಿದ್ದೇನೆ’ ಎಂದಿದ್ದಾರೆ ಗಟ್ಜರ್‌. ‘ಆರಂಭದಲ್ಲಿ ಆತ ಟ್ರಕ್‌ಅನ್ನು ನಿಧಾನವಾಗಿ ಚಲಾಯಿಸಿದ್ದಾನೆ. ಒಬ್ಬ ದ್ವಿಚಕ್ರ ವಾಹನ ಸವಾರ ಟ್ರಕ್‌ಅನ್ನು ಬೆನ್ನಟ್ಟಿದ್ದನ್ನು ನೋಡಿದೆ. ಟ್ರಕ್‌ ಹಿಂದಿಕ್ಕಲು ಪ್ರಯತ್ನಿಸಿದನಲ್ಲದೆ, ಚಾಲಕನ ಬದಿಯ ಬಾಗಿಲು ತೆರೆಯಲು ಮುಂದಾಗಿದ್ದಾನೆ. ಆದರೆ ಆಯತಪ್ಪಿ ಕೆಳಕ್ಕೆ ಬಿದ್ದು ಟ್ರಕ್‌ ಅಡಿ ಸಿಲುಕಿದ’ ಎಂದು ಗಟ್ಜರ್‌ ವಿವರಿಸಿದ್ದಾರೆ.

[೩]

ದಾಳಿಯ ಹೊಣೆ[ಬದಲಾಯಿಸಿ]

  • ಇಸ್ಲಾಮಿಕ್ ಸ್ಟೇಟ್ (ಐಸಿಸ್) ನೈಸ್ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಐಸಿಸ್ ಬೆಂಬಲಿಗರಿಂದ ದಾಳಿಯ ಸಂಭ್ರಮಾವರಣೆ ಮಾಡಲಾಗಿದೆ. [೪]
  • ಮೊಹಮ್ಮದ್‌ ಲಾಹವೈಜ್‌ ಬೊಹ್ಲೆಲ್‌ ಧಾಳಿಕೋರ 2 ದಿನ ಮೊದಲು ನೀಸ್ ನಗರಕ್ಕೆ ಭೇಟಿ ಕೊಟ್ಟಿದ್ದ; ಅವನು (ಮೊಹಮ್ಮದ್‌ ಲಾಹವೈಜ್‌ ಬೊಹ್ಲೆಲ್‌} ಘಟನೆಗೆ ಎರಡು ದಿನ ಮೊದಲು ಬಾಡಿಗೆಗೆ ಪಡೆದಿದ್ದ ಲಾರಿ ಜತೆಗೆ ಈ ಸ್ಥಳಕ್ಕೆ ಭೇಟಿ ನೀಡಿದ್ದ ಎಂದು ತಿಳಿದಿದೆ. ಪೊಲೀಸರು ನೂರಾರು ಜನರ ಹೇಳಿಕೆ ಪಡೆದುಕೊಂಡಿದ್ದಾರೆ. ಅವನು ಐಸಿಸ್‍ನ ಸಂಪರ್ಕ ಪಡೆದ ಬಗೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಬೊಹ್ಲೆಲ್‌ ಯಾವತ್ತೂ ಧಾರ್ಮಿಕ ನಿಷ್ಠೆಯ ಅಂಶವನ್ನು ಪ್ರದರ್ಶಿಸಿದವನೇ ಅಲ್ಲ ಎಂದು ಅವರಲ್ಲಿ ಹಲವರು ಹೇಳಿದ್ದಾರೆ. ಈತ ‘ಹಠಾತ್‌’ ಮೂಲಭೂತವಾದಿಯಾಗಿ ಪರಿವರ್ತನೆ ಆಗಿರಬಹುದು ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಬೊಹ್ಲೆಲ್‌ಗೆ ನೆರವು ನೀಡಿರಬಹುದು ಎಂಬ ಶಂಕೆಯಲ್ಲಿ 22 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಡ್ಡಾದಿಡ್ಡಿಯಾಗಿ ಲಾರಿ ಹರಿಸಿ 84 ಜನರ ಸಾವಿಗೆ ಕಾರಣನಾದ ಮೊಹಮ್ಮದ್‌ ಲಾಹವೈಜ್‌ ಬೊಹ್ಲೆಲ್‌ನ ಉದ್ದೇಶದ ಬಗ್ಗೆ ತನಿಖಾಧಿಕಾರಿಗಳಿಗೆ ಕೆಲವು ಸುಳಿವುಗಳು ದೊರೆತಿವೆ. ಘಟನೆಗೆ ಸಂಬಂಧಿಸಿ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ.[೫]

ಪ್ರತಿಕ್ರಿಯೆಗಳು[ಬದಲಾಯಿಸಿ]

  • ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರು "ಇದು ಒಂದು ಭಯಾನಕ ಭಯೋತ್ಪಾದಕ ದಾಳಿಯಂತೆ ತೋರುತ್ತದೆ" ಎಂದು ಹೇಳಿದರು ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಅವರ ಜೊತೆಗೆ ಖಂಡಿಸವುದಕ್ಕೆ. ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್, ಪೋಪ್ ಫ್ರಾನ್ಸಿಸ್, ಸ್ಪೇನ್, ಸ್ಲಾವೇನಿಯಾ,ನ್ಯಾಟೊ (NATO) ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸೇರಿತ್ತು.
  • ಫ್ರಾನ್ಸ್ ಮೇಲೆ ನಡೆದ ಉಗ್ರರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಫ್ರಾನ್ಸ್ ಜನತೆಯ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದುಪ್ರಧಾನಿ ಮೋದಿ ಹೇಳಿದ್ದಾರೆ ಮತ್ತು ಘಟನೆಯಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ ದೇವರು ದುಖಃವನ್ನು ತಡೆಯುವಂತಹ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಭಾರತೀಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ

[೬] [೭]

ಹಿಂದಿನ ಧಾಳಿಗಳು[ಬದಲಾಯಿಸಿ]

  • ಜನವರಿ 7, 2015: ಅಲ್‌ ಕೈದಾ ಉಗ್ರಗಾಮಿ ಸಂಘಟನೆಯ ಇಬ್ಬರು ಉಗ್ರರು ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ಪತ್ರಿಕೆ ಕಚೇರಿ ಮೇಲೆ ನಡೆಸಿದ ದಾಳಿಯಲ್ಲಿ 20 ಜನರ ಹತ್ಯೆ.
  • ನವೆಂಬರ್ 13, 2015: ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಪ್ಯಾರಿಸ್‌ನ ವಿವಿಧ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ 130 ಜನ ಬಲಿ. ಇದು ಫ್ರಾನ್ಸ್‌ ಇತಿಹಾಸದಲ್ಲಿ ನಡೆದ ಅತ್ಯಂತ ಭಯಾನಕ ದಾಳಿ ಎನ್ನಲಾಗಿದೆ.
  • ಪ್ಯಾರಿಸ್,19-4-2015; ಕಾರಿನಲ್ಲಿದ್ದ ಮಹಿಳೆಯಕೊಲೆ , ಆಲಜೀರಿಯಾ ಐಟಿಯುವಕನ ಸೆರೆ - ಸಂಶಯದಮೇಲೆ.

ತುರ್ತುಸ್ಥಿತಿ ವಿಸ್ತರಣೆ[ಬದಲಾಯಿಸಿ]

  • ಪ್ಯಾರಿಸ್‌ ಮೇಲೆ ನಡೆದ ದಾಳಿಯ ನಂತರ ದೇಶದಲ್ಲಿ ತುರ್ತುಸ್ಥಿತಿ ಘೋಷಿಸಲಾಗಿತ್ತು. ಈ ತಿಂಗಳ ಕೊನೆಗೆ ತುರ್ತುಸ್ಥಿತಿ ಹಿಂದಕ್ಕೆ ಪಡೆಯಲಾಗುವುದು ಎಂದು ಅಧ್ಯಕ್ಷ ಒಲಾಂಡ್‌ ಹೇಳಿದ್ದರು. ಆದರೆ ಗುರುವಾರದ ದಾಳಿಯಿಂದ ಇನ್ನಷ್ಟು ಸಮಯ ತುರ್ತುಸ್ಥಿತಿ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

[೮][೯][೧೦]

ಈ ಧಾಳಿಯಲ್ಲಿ ಮೃತರ ವಿವರ[ಬದಲಾಯಿಸಿ]

  • ಮೃತರು+ಗಾಯಗೊಂಡವರು ಆವರಣದಲ್ಲಿ: ಆಲ್ಜೀರಿಯಾ 3;ಅರ್ಮೇನಿಯ 2; ಆಸ್ಟ್ರೇಲಿಯಾ (3); ಬೆಲ್ಜಿಯಂ 1 (1); ಬ್ರೆಜಿಲ್ 1;ಚೀನಾ 2; ಎಸ್ಟೋನಿಯ 3;ಫ್ರಾನ್ಸ್ 5; ಜರ್ಮನಿ 3 (2); ಐರ್ಲೆಂಡ್ 1 ; ಇಟಲಿ 3 ; ಕಝಾಕಿಸ್ತಾನ್ 1 ; ಮಲೇಷ್ಯಾ (1) ; ಮೊರಾಕೊ 3 ; ನೆದರ್ಲ್ಯಾಂಡ್ಸ್ (2); ಪೋಲೆಂಡ್ 2; ಪೋರ್ಚುಗಲ್ 1 ; ರೊಮೇನಿಯಾ (2); ರಶಿಯಾ 1೦ (1) ; ಸಿಂಗಪುರ (1); ಸ್ವಿಜರ್ಲ್ಯಾಂಡ್ 2 ; ಟುನೀಶಿಯ 3]; ಉಕ್ರೇನ್ 1 (2) ಯುನೈಟೆಡ್ ಕಿಂಗ್ಡಮ್ 1 ; ಯುನೈಟೆಡ್ ಸ್ಟೇಟ್ಸ್ 2; ಇನ್ನೂ 54 ಗುರುತು ಸಿಕ್ಕಿಲ್ಲ. ಓಟ್ಟು (84)
  • ಫ್ರಾನ್ಸ್‌ ದೇಶದ ನೈಸ್ ನಗರದಲ್ಲಿ ನಡೆದ ಉಗ್ರರ ದಾಳಿಯಲ್ಲಿ 84 ಜನರು ಸಾವನ್ನಪ್ಪಿದ್ದು ಈ ಪೈಕಿ 30 ಜನರು ಮುಸ್ಲಿಮರೇ ಎಂದು ಫ್ರೆಂಚ್ ಮಾಧ್ಯಮವೊಂದು ವರದಿ ಪ್ರಕಟಿಸಿದೆ. ದಾಳಿ ನಡೆಸಿದ ಟ್ಯುನೇಷಿಯಾ ಮೂಲದ ಉಗ್ರ ಮೊಹಮ್ಮದ್ ಲಾಹೌಯಾಜ್ ಬೌಲ್ಹೆಲ್‍ನ ದಾಳಿಯಲ್ಲಿ ಟ್ಯುನೇಷಿಯಾದ 20 ಜನರು ಮೃತಪಟ್ಟಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ನೈಸ್ ನಗರದ ಇಮಾಮ್ ಮೃತಪಟ್ಟವರ ಪೈಕಿ 30 ಜನರು ಮುಸ್ಲಿಮರು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಸಾವನ್ನಪ್ಪಿದ ಮುಸ್ಲಿಮರ ಪೈಕಿ 12 ವರ್ಷ, 4 ವರ್ಷಗಳ ಮಕ್ಕಳೂ ಸೇರಿದ್ದು, ಧರ್ಮವನ್ನು ಲೆಕ್ಕಿಸದೆ ಇಲ್ಲರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ನೈಸ್ ನಗರದ ಇಮಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.[೧೧]

ಸಂಶಯಾಸ್ಪದರ ಬಂಧನಗಳು[ಬದಲಾಯಿಸಿ]

  • 23/07/2016:ಪ್ಯಾರಿಸ್‌‍ನ ನೀಸ್‌ನಲ್ಲಿ ಲಾರಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದೆ. ವಶಕ್ಕೆ ಪಡೆದುಕೊಂಡಿರುವ ಶಂಕಿತರಲ್ಲಿ ಒಬ್ಬನಾದ ಟುನಿಸಿಯನ್‌ ಪ್ರಜೆ ಮೊಹಮ್ಮದ್‌ ಖಾಲಿದ್‌ ಹತ್ಯಾಕಾಂಡ ನಡೆದ ಮರುದಿನ ಪತ್ರಕರ್ತರು ಮತ್ತು ವೈದ್ಯಕೀಯ ತಂಡದ ಜತೆಗೆ ಘಟನೆ ನಡೆದ ಸ್ಥಳಕ್ಕೆ ತೆರಳಿ ಚಿತ್ರೀಕರಣ ನಡೆಸಿದ್ದ ಎಂದು ಸರ್ಕಾರಿ ವಕೀಲ ಫ್ರಾಂಕೋಯಿಸ್‌ ಮೋಲಿನ್‌ ತಿಳಿಸಿದ್ದಾರೆ. ಬಂಧಿತರಲ್ಲಿ ಅಲ್ಬೇನಿಯ ಮೂಲದ ದಂಪತಿಯೂ ಸೇರಿದ್ದಾರೆ. ಅವರಲ್ಲಿ ರಮ್ಜಿ ಎಂಬಾತ ಮಾತ್ರ ನೀಸ್‌ ನಿವಾಸಿಯಾಗಿದ್ದು, ಈತ ಅಪರಾಧ ಹಿನ್ನೆಲೆ ಉಳ್ಳವನಾಗಿದ್ದಾನೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ನೀಸ್‌: [೧೨]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "Attentat de Nice : ce que l'on sait du chauffeur, Mohamed Lahouaiej Bouhlel"[[೧]]
  2. nice-attack[[https://web.archive.org/web/20160717161223/http://www.udayavani.com/kannada/news/world-news/158863/nice-attack-truck-driver-named-as-france-mourns-84-killed-in-bastille-day-atrocity#0skOZOr6KRDLpqPt.99 Archived 2016-07-17 ವೇಬ್ಯಾಕ್ ಮೆಷಿನ್ ನಲ್ಲಿ.]]
  3. prajavani:07/16/2016: [[೨]]
  4. "Nice: Islamic State supporters rejoice Bastille Day attack on social media". International Business Times. 15 July 2016.
  5. ೧೮-೭-೨೦೧೬:www.prajavani.net/article/ನೀಸ್‌-ಲಾರಿ-ದಾಳಿ-ಪ್ರಕರಣ-ಮತ್ತಿಬ್ಬರ-ಬಂಧನ
  6. ಕನ್ನಡ ಪ್ರಭ;೧೬-೭-೨೦೧೬.
  7. nice-truck-attack[[೩]]
  8. http://www.hindustantimes.com/world-news/at-least-75-dead-in-nice-truck-attack-terror-link-suspected/story-H4cfniynDcgAYx9jjZYIjP.html
  9. www/article/ಫ್ರಾನ್ಸ್‌ನಲ್ಲಿ-ಉಗ್ರರಿಂದ-ಟ್ರಕ್-ದಾಳಿ-80-ಸಾವು
  10. 07/16/2016:www.prajavani.net/article/ಫ್ರಾನ್ಸ್‌-ಸಂಭ್ರಮಕ್ಕೆ-ಸಾವಿನ-ಸೂತಕ
  11. ನೈಸ್ ಉಗ್ರ ದಾಳಿಯಲ್ಲಿ ಮೃತಪಟ್ಟವರಲ್ಲಿ 30 ಜನರು ಮುಸ್ಲಿಮರೇ!20 Jul 2016 [[೪]]
  12. ಐವರು ಶಂಕಿತರು ವಶಕ್ಕೆ 23rd,Jul,2016[[೫]]