ಫೆವಿಕಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫೆವಿಕಾಲ್ ಪಿಡಿಲೈಟ್ ಎಂಬ ಭಾರತೀಯ ಕಂಪನಿಯ ಒಡೆತನದ ಗಮ್ ಅಥವಾ ಅಂಟು ಪದಾರ್ಥದ ಬ್ರ್ಯಾಂಡ್ಆಗಿದೆ.

ಇತಿಹಾಸ[ಬದಲಾಯಿಸಿ]

ಫೆವಿಕಾಲನ್ನು ಭಾರತದಲ್ಲಿ ಮೊದಲು ಮತ್ತು ೧೯೫೯ ಮೊದಲು ಮಾರಾಟಮಾಡಲಾಯಿತು. ಬಡಗಿಗಳ ಕೆಲಸವನ್ನು ಸುಲಭಗೊಳಿಸಲು ಹಾಗು ಕಾಲಜನ್ ಮತ್ತು ಕೊಬ್ಬು ಆಧಾರಿತ ಅಂಟಿನ ಬಳಕೆಯನ್ನು ಕಡಿಮೆಗೊಳಿಸಲು ಇದನ್ನು ಬಿಡುಗಡೆ ಮಾಡಲಾಯಿತು , ಬಡಗಿಗಳಿಗೆ ಮಾತ್ತರವಲ್ಲದೆ ಗ್ರಾಹಕ, ಕುಶಲಕರ್ಮಿಗಳು ಹಾಗು ಎಂಜಿನಿಯರಿಂಗ್ ಕೆಲಸಕ್ಕು ಕೋಡ ಇದು ಉಪಯೋಗವಾಗುತ್ತದೆ. ಇದರ ಕೈಗಾರಿಕಾ ಅಂಟು ಪದಾರ್ಥವು ವ್ಯಾಪಕ ಶ್ರೇಣಿಯನ್ನು ತಲುಪಿದ್ದು ಸೇರಿದಂತೆ ಭಾರತದ ೫೦,೦೦೦ ಕ್ಕೂ ಮಿಕ್ಕಿ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ೫೪ ದೇಶಗಳಲ್ಲಿ ಮಾರಾಟವಾಗುತ್ತದೆ.

ಉತ್ಪನ್ನಗಳ ವಿವರಣೆ[ಬದಲಾಯಿಸಿ]

ಫೆವಿಕಾಲ್ ಬ್ರಾಂಡಿನ ಅಂಟು ಬಿಳಿಯ ಅಂಟು ಆಗಿದೆ.[೧] ಶ್ವೇತ ಸ್ನಿಗ್ಧತೆಯ ಪೇಸ್ಟಿನಹಾಗೆ ಕಾಣಿಸಿಕೊಳ್ಳುತ್ತದೆ. ಶಕ್ತಿ , ಪರಿಣಾಮ ಪ್ರತಿರೋಧ , ಹೊಂದಿಸಲು ಸಮಯ , ಕುಸಿಯುವಿಕೆ , ಕುಗ್ಗುವಿಕೆ , ಅಗ್ನಿ ನಿರೋಧಕ , ಆಘಾತ ಮತ್ತು ಕಂಪನ ಪ್ರತಿರೋಧ ಬಂಧ, ಅಲ್ಲದ ಬಿಡಿಸುವುದು ಹೀಗೆ ಮುಂತಾದ ಕೆಲವು ಗುಣಲಕ್ಷಣಗಳನ್ನು ಬಳಸಿ ಬೇರೆ ಬೇರೆ ರೀತಿಯ ಅಂಟನ್ನು ತಯಾರಿಸುತ್ತಾರೆ. "ಫೆವಿಕಾಲ್ ಎಂಆರ್"[೨] ಎಂಬ ಅಂಟನ್ನು ಕಾಗದ, ಕಾರ್ಡ್ಬೋರ್ಡ್, ಥರ್ಮಾಕೋಲ್, ಬಟ್ಟೆ, ಮರ, ಮತ್ತು ಪ್ಲೈವುಡ್ ಗಳನ್ನು ಅಂಟಿಸಲು ಉಪಯೋಗೆಸಿತ್ತಾರೆ. "ಫೆವಿಕಾಲ್ ಎಸ್ ಹೆಚ್" ಎಂಬ ಅಂಟನ್ನು ಮರದ ಕೆಲಸಕ್ಕೆ ಉಪಯೊಗಿಸುತ್ತಾರೆ.

ಜನಪ್ರಿಯ ಸಂಸ್ಕೃತಿಯಲ್ಲಿ ಫೆವಿಕಾಲ್[ಬದಲಾಯಿಸಿ]

ಭಾರತದಲ್ಲಿ, "ಫೆವಿಕಾಲನ್ನು " ಸಾಮಾನ್ಯವಾಗಿ ಹಠಮಾರಿ ಹಾಗಿ ಜಿಗುಟುತನಕ್ಕೆ ಒಂದು ರೂಪಕವಾಗಿ ಬಳಸಲಾಗುತ್ತದೆ.[೩] ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ನಿದರ್ಶನಗಳನ್ನು ಕಾಣಬಹುದು. ಉದಾಹರಣೆಗೆ ದಬಂಗ್ 2 ಚಿತ್ರದ " ಫೆವಿಕಾಲ್ ಸೆ" ಎಂಬ ಹಾಡಿನ್ನಲ್ಲಿ.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು" (PDF). Archived from the original (PDF) on 2014-02-11. Retrieved 2016-05-04.
  2. "ಆರ್ಕೈವ್ ನಕಲು". Archived from the original on 2016-11-30. Retrieved 2016-05-04.
  3. https://lyricstaal.com/lyrics/fevicol-se-lyrics-dabangg-2-2012/