ಫೆವಾ ಸರೋವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರೋವರ

ಫೆವಾ ಸರೋವರವು Phewa Lake ನೇಪಾಳದ ಸಿಹಿನೀರಿನ ಸರೋವರವಾಗಿದೆ, ಇದು ಪೊಖಾರಾ ಕಣಿವೆಯ ದಕ್ಷಿಣದಲ್ಲಿ ನೆಲೆಗೊಂಡಿದೆ.ಇದು ಹರಿಯುವ ನಿರಾಗಿದ್ದರೂ ಸಹ ಇದರ ನೀರಿನ ಮೀಸಲನ್ನು ಅಣೆಕಟ್ಟು ನಿಯಂತ್ರಿಸುವುದರಿಂದ ಇದನ್ನು ಅರೆ ನೈಸರ್ಗಿಕ ಸಿಹಿ ನೀರಿನ ಸರೋವರವನ್ನಾಗಿ ವಿಂಗಡಿಸಲಾಗಿದೆ. ಗಂಡಕಿ ವಲಯದಲ್ಲಿನ ಬೆಗ್ನಾಸ್ ಸರೋವರದ ನಂತರ ಇದು ನೇಪಾಳದ ಎರಡನೇ ಅತಿ ದೊಡ್ಡ ಸರೋವರವಾಗಿದೆ.ಫೆವಾ ಸರೋವರವು ೭೪೨ಮೀ(೨೪೩೪ ಅಡಿ) ಎತ್ತರದಲ್ಲಿದೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ೫.೨೩ ಕಿಮಿ (೨.೦ ಚದರ ಮೈಲಿ) ನಷ್ಟು ಪ್ರದೇಶವನ್ನು ಒಳಗೊಂಡಿದೆ. ಇದು ೮.೬ ಮೀ (೨೮ ಅಡಿ) ಸರಾಸರಿ ಆಳ ಮತ್ತು ೨೪ ಮೀ (೭೯ ಅಡಿ) ಗರಿಷ್ಠ ಆಳವನ್ನು ಹೊಂದಿದೆ.ಸರೋವರದ ಗರಿಷ್ಠ ನೀರಿನ ಸಾಮರ್ಥ್ಯವು ಸರಿಸುಮಾರು ೪೩.000.000 ಘನ ಮೀಟರ್ ಆಗಿದೆ.[೧]

ಸರೋವರದ ದ್ವೀಪದಲ್ಲಿ ತಾಲ್ ದೇವಾಲಯವು ನೆಲೆಗೊಂಡಿದೆ.

ಸರೋವರದ ಹಾಳಿತ ಬಳಕೆ[ಬದಲಾಯಿಸಿ]

ಫೆವಾ ಸರೋವರ ಮತ್ತು ಇಲ್ಲಿನ ಜಲ ಕ್ರೀಡೆಗಳು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ಸರೋವರದ ಉತ್ತರ ದಂಡೆಯನ್ನು ಲೇಕ್ ಸೈಡ್ ಎನ್ನುತ್ತಾರೆ ಇಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲು ಹೋಟೆಲ್ ಗಳು,ರೆಸ್ಟೋರೆಂಟ್ ಗಳು ಮತ್ತು ಬಾರ್ ಗಳನ್ನು ಪ್ರಾರಂಭಿಸಿದ್ದಾರೆ. ಫೆವಾ ಸರೋವರದಿಂದ ಕೋಡಿ ಹೋಗುವ ನೀರಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ.ಸರೋವರದ ಒಂದು ಭಾಗವನ್ನು ಮೀನುಗಾರಿಕೆಗೆ ಬಳಸುತ್ತಾರೆ.[೨]

ಪ್ರಮುಖ ಆಕರ್ಷಣೆ[ಬದಲಾಯಿಸಿ]

೧.ತಾಲ್ ದೇವಾಲಯ - ಇದು ಸರೋವರದ ಮಧ್ಯದಲ್ಲಿದೆ, ಪೊಖಾರಾದ ಪ್ರಮುಖ ಧಾರ್ಮಿಕ ಸ್ಮಾರಕವಾಗಿದೆ. ಇಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ.ಹೆಚ್ಚಾಗಿ ಶನಿವಾರದಂದು ಸನ ಇಲ್ಲಿ ಕಿಕ್ಕಿರಿದು ಸೇರುತ್ತಾರೆ.[೩]

೨.ಬೈದಾಮ್ - ಇದು ಸರೋವರದ ಪೂರ್ವ ದಂಡೆಯಾಗಿದೆ ಇದನ್ನು ಲೇಕ್ ಸೈಡ್ ಎಂದೂ ಸಹ ಕರೆಯುತ್ತಾರೆ.ಈ ಭಾಗದಲ್ಲಿ ಹೋಟೆಲ್ಗಳು, ವಸತಿಗೃಹಗಳು, ರೆಸ್ಟೋರೆಂಟ್, ಪುಸ್ತಕದ ಮಳಿಗೆ ಮತ್ತು ಸ್ಮರಣೆಯ ವಸ್ತುಗಳ ಅಂಗಡಿಗಳು ಇವೆ.ಇದು ಪೊಖಾರಾ ಪ್ರವಾಸದ ಆರಂಭದ ಹಂತವಾಗಿದೆ

ಚಿತ್ರಗಳು[ಬದಲಾಯಿಸಿ]

ದೋಣಿಗಳು
ಸರೋವರ
ತಾಲ್ ದೇವಾಲಯ

ಉಲ್ಲೇಖಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://lifetoreset.wordpress.com/2013/10/23/phewa-tal-pokhara-nepal/
  2. https://en.wikipedia.org/wiki/Phewa_Lakee[ಶಾಶ್ವತವಾಗಿ ಮಡಿದ ಕೊಂಡಿ]
  3. "ಆರ್ಕೈವ್ ನಕಲು". Archived from the original on 2015-03-17. Retrieved 2016-11-10.